- Advertisment -
HomeGovt SchemesE-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಗ್ರಾಮೀಣ ಭಾಗದ ಸಾರ್ವಜನಿಕರು ತಮ್ಮ ಆಸ್ತಿಯ ಇ-ಸ್ವತ್ತಿನ(E-Swathu) ವಿವರವನ್ನು ತಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯಿಂದ(Grama Panchayat) ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದ್ದು ಇದರ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಗ್ರಾಮೀಣ ಪ್ರದೇಶದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಸಾರ್ವಜನಿಕರು ತಮ್ಮ ಆಸ್ತಿಯ(E-Swathu Online Status) ಅಧಿಕೃತ ವಿವರವನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು ಈ ಅಂಕಣದಲ್ಲಿ ಗ್ರಾಮೀಣ ಭಾಗದ ಆಸ್ತಿಗಳಿಗೆ ನೀಡುವ ಇ-ಸ್ವತ್ತು ದಾಖಲೆಯ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಮನೆ/ನಿವೇಶನ/ಖಾಲಿ ಜಾಗವನ್ನು ಹೊಂದಿರುವ ನಾಗರಿಕರು ಕಡ್ಡಾಯವಾಗಿ ಇ-ಸ್ವತ್ತು ಪ್ರಮಾಣ ಪತ್ರE-Swathu Document) ದಾಖಲೆಯನ್ನು ಹೊಂದುವುದು ಅತೀ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಈಗಾಗಲೇ ಇ-ಸ್ವತ್ತು ದಾಖಲೆಯನ್ನು ಪಡೆದಿರುವವರು ಮತ್ತು ತಮ್ಮ ಆಸ್ತಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಜಿಟಲ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ಆನ್ಲೈನ್ ನಲ್ಲಿ ಚೆಕ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Annabhagya status- ಫೆಬ್ರವರಿ-2025 ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!

Property Status Check-ಉಚಿತವಾಗಿ ಆಸ್ತಿಯ ಇ-ಸ್ವತ್ತಿನ ವಿವರವನ್ನು ಪಡೆಯುವ ವಿಧಾನ:

ಪಂಚಾಯತ್ ರಾಜ್ ಇಲಾಖೆಯ ಅಧಿಕೃತ e-swathu ಜಾಲತಾಣವನ್ನು ಪ್ರವೇಶ ಮಾಡಿ ನಾಗರಿಕರು ತಮ್ಮ ಆಸ್ತಿಯ ಮಾಲೀಕತ್ವದ ವಿವರವನ್ನು ಮನೆಯಲ್ಲೇ ಕುಳಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಾಗರಿಕರು ತಮ್ಮ ಮನೆ/ಖಾಲಿ ಜಾಗದ ಇ-ಸ್ವತ್ತು ದಾಖಲೆಯಲ್ಲಿನ ಮಾಲೀಕರ ವಿವರವನ್ನು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು.

Step-1: ಮೊಟ್ಟ ಮೊದಲಿಗೆ Property Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಇ-ಸ್ವತ್ತು ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Waqf Bill-2025: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ತಿದ್ದುಪಡಿಗೆ ಒಪ್ಪಿಗೆ!

E-Swathu download

Step-2: ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “ಆಸ್ತಿಗಳ ಶೋಧನೆ/Search Your Propert” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ “ಆಸ್ತಿಗಳ ಶೋಧನೆ” ಪುಟ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ “Select Property Form” ಕಾಲಂ ನಲ್ಲಿ Form-9/Form-11B/Survey No ಆಯ್ಕೆಯಗಳ ಮೇಲೆ ಟಿಕ್ ಮಾಡಿ ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಮತ್ತು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಗೋಚರಿಸುವ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿರುವ ಎಲ್ಲಾ ಇ-ಸ್ವತ್ತಿನ ಐಡಿ, ಆಸ್ತಿ ಮಾಲೀಕರ ಹೆಸರುಗಳ ವಿವರ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Microfinance Helpline-ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ದೂರು ಸಲ್ಲಿಸಲು ಸಹಾಯವಾಣಿ!

Online Property Status-ತಮ್ಮ ಆಸ್ತಿಯ ವಿವರವನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳುವ ವಿಧಾನ:

ಗ್ರಾಮೀಣ ಭಾಗದಲ್ಲಿ ವಾಸವಿದ್ದು ಗ್ರಾಮೀಣ ಭಾಗದಲ್ಲಿ ಖಾಲಿ ಜಾಗ ಅಥವಾ ಮನೆ/ನಿವೇಶನವನ್ನು ಹೊಂದಿರುವವರು ಗ್ರಾಮ ಪಂಚಾಯತಿಯಲ್ಲಿ ತಮ್ಮ ಆಸ್ತಿಯನ್ನು ನೋಂದಣಿಯನ್ನು ಮಾಡಿಕೊಂಡು ಡಿಜಿಟಲ್ ದಾಖಲೆಯನ್ನು ಪಡೆಯಬೇಕು.

ಇದಕ್ಕಾಗಿ ಪಂಚಾಯತ್ ರಾಜ್ ಇಲಾಖೆಯಿಂದ “e-swathu” ಎನ್ನುವ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು ಇದೇ ಜಾಲತಾಣದ ಮೂಲಕ ಎಲ್ಲಾ ಆಸ್ತಿಗಳ ವಿವರವನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಆಸ್ತಿಯ ಡಿಜಿಟಲ್ ದಾಖಲೆಯ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

Step-1: ಮೊದಲಿಗೆ ಈ E-swathu Status ತಂತ್ರಾಂಶದ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಬಂಧಪಟ್ಟ ಇ-ಸ್ವತ್ತು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: MSP Price List-ಬೆಂಬಲ ಬೆಲೆಯಲ್ಲಿ ಕುಸುಬೆ ಖರೀದಿ!ದರ ಎಷ್ಟು?

E-Swathu

Step-2: ಇದಾದ ನಂತರ ಈ ಪೇಜ್ ನಲ್ಲಿ “Citizen Corner/ನಾಗರಿಕರಿಗಾಗಿ” ಬಟನ್ ಮೇಲೆ ಕ್ಲಿಕ್ ಮಾಡಿ “Check Property Status” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಇ-ಸ್ವತ್ತಿನ ಅಧಿಕೃತ ವಿವರವನ್ನು ಪಡೆಯಬಹುದು.

ಗಮನಿಸಿ: ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಆಸ್ತಿಯ ವಿವರವನ್ನು ಚೆಕ್ ಮಾಡಿದಾಗ ಆಸ್ತಿಯ ಡಿಜಿಟಲ್ ವಿವರ ಲಭ್ಯವಾಗದೇ ಇದ್ದರೆ ನಿಮ್ಮ ಆಸ್ತಿಯ ಇ-ಸ್ವತ್ತು ಅಗಿರುವುದಿಲ್ಲ ಎಂದು ಇದನ್ನು ಪಡೆಯಲು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಅರ್ಜಿಯನ್ನು ಸಲ್ಲಿಸಿ ಈ ದಾಖಲೆಯನ್ನು ಪಡೆಯಬೇಕು.

ಇದನ್ನೂ ಓದಿ: Land Rights Cases-ಕೃಷಿ ಜಮೀನಿನ ಪ್ರಕರಣಗಳಲ್ಲಿ ಪೊಲೀಸರು ಈ ನಿಯಮ ಪಾಲಿಸುವುದು ಕಡ್ಡಾಯ!

Documents For e-swathu-ಇ-ಸ್ವತ್ತು ಪಡೆಯಲು ಅವಶ್ಯವಿರುವ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಆಸ್ತಿಯೊಂದಿಗೆ ಅರ್ಜಿದಾರರ ಪೋಟೋ
4) ಜಂಟಿ ಮಾಲೀಕರ ಆಧಾರ್ ಕಾರ್ಡ ಪ್ರತಿ ಮತ್ತು ಪೋಟೋ
5) ಆಸ್ತಿ ತೆರಿಗೆ ಪಾವತಿ ರಶೀದಿ
6) ಮನೆ ವಿದ್ಯುತ್ ಬಿಲ್

- Advertisment -
LATEST ARTICLES

Related Articles

- Advertisment -

Most Popular

- Advertisment -