Farm Pond-ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

February 7, 2025 | Siddesh
Farm Pond-ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ!
Share Now:

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ವಿವಿಧ ಜಿಲ್ಲೆಗಳಲ್ಲಿ ಅರ್ಹ ರೈತರಿಂದ ಅರ್ಜಿಯನ್ನು ಸ್ವೀಕರಿಸಿ ಕೃಷಿ ಹೊಂಡವನ್ನು(Krishi Honda)ಶೇ 80% ರಿಂದ ಶೇ 90% ಸಹಾಯಧನದಲ್ಲಿ ನಿರ್ಮಾಣ ಮಾಡಿಕೊಳ್ಳಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.

ಅನುದಾನದ ಲಭ್ಯತೆಯ ಆಧಾರದ ಮೇಲೆ ರೈತರು ಕೃಷಿ ಹೊಂಡವನ್ನು ಸಬ್ಸಿಡಿಯಲ್ಲಿ(Farm Pond Subsidy amount)ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಘಟಕವಾರು ನಿಗದಿಪಡಿಸಿರುವ ಸಹಾಯಧನ ಎಷ್ಟು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಕೃಷಿ ಭಾಗ್ಯ(Krishi Bhagya) ಯೋಜನೆಯನ್ನು ಕೃಷಿ ಇಲಾಖೆಯಿಂದ ಕಳೆದ ವರ್ಷದಿಂದ ಪುನಃ ಮರು ಜಾರಿಗೊಳಿಸಲಾಗಿದ್ದು ಮಳೆಯಾಶ್ರಿತ ರೈತರಿಗೆ ಕೃಷಿ ಬಳಕೆಗೆ ನೀರಿನ ಅಭಾವನ್ನು ತಗ್ಗಿಸಲು ಈ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: Pouthi Khata-ಕಂದಾಯ ಇಲಾಖೆಯಿಂದ ಪೌತಿ ಖಾತೆ ಅಭಿಯಾನ! ಇಲ್ಲಿದೆ ಸಂಪೂರ್ಣ ಮಾಹಿತಿ!

Krishi Bhagya Yojana-ಕೃಷಿ ಭಾಗ್ಯ ಯೋಜನೆಯಡಿ ಯಾವೆಲ್ಲ ಘಟಕಗಳಿಗೆ ಸಬ್ಸಿಡಿ ನೀಡಲಾಗುತ್ತದೆ?

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಮತ್ತು ಇದಕ್ಕೆ ಪೂರಕ ಘಟಕಗಳಾದ ಕ್ಷೇತ್ರ ಬದು, ಹೊಂಡಕ್ಕೆ ಪಾಲಿಥೀನ್ ಹೊದಿಕೆ, ಹೊಂಡದಿಂದ ನೀರನ್ನು ಜಮೀನಿಗೆ ಪೂರೈಕೆ ಮಾಡಲು ಡೀಸಲ್ ಪಂಪ್ ಸೆಟ್, ಲಘು ನೀರಾವರಿ ಘಟಕ ಮತ್ತು ಕೃಷಿ ಹೊಂಡಕ್ಕೆ ತಂತಿ ಬೇಲಿಯನ್ನು ಹಾಕಿಕೊಳ್ಳಲು ಸಹ ಸಬ್ಸಿಡಿಯನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ 6 ಘಟಕಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.

Agriculture Deparment Farm Pond Size-ಸಬ್ಸಿಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಬಹುದಾದ ಅಳತೆಗಳು(ಮೀಟರ್ ಗಳಲ್ಲಿ):

1) 10 x 10 x 3 ಮೀ
2) 12 x 12 x 3 ಮೀ
3) 15 x 15 x 3 ಮೀ
4) 18 x 18 x 3 ಮೀ
5) 21 x 21 x 3 ಮೀ

ಇದನ್ನೂ ಓದಿ: Ration Card-ಆಹಾರ ಇಲಾಖೆಯಿಂದ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಗೆ ಸಿಹಿ ಸುದ್ದಿ!

Krishi Honda

Farm Pond Subsidy-ಎಷ್ಟು ಸಹಾಯಧನ ನೀಡಲಾಗುತ್ತದೆ:

ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ಸಾಮಾನ್ಯ ವರ್ಗಕ್ಕೆ ಸೇರಿದ ರೈತರಿಗೆ ಶೇ 80% ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಶೇ 90% ರಷ್ಟು ಸಹಾಯಧನವನ್ನು ನೀಡಲಾಗುತ್ತದೆ.

How To Apply- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಪ್ರಸ್ತುತ ಕೃಷಿ ಭಾಗ್ಯ ಯೋಜನೆಯನ್ನು ಆಯ್ದ ಜಿಲ್ಲೆಗಳಲ್ಲಿ ಅನುಷ್ಥಾನ ಮಾಡಲಾಗುತ್ತಿದ್ದು, ಅರ್ಹ ಅರ್ಜಿದಾರರು ನಿಮ್ಮ ಹೋಬಳಿ ವ್ಯಾಪ್ತಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Aadhar card correction- ಆಧಾರ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರಿಗೆ ಭರ್ಜರಿ ಸಿಹಿ ಸುದ್ದಿ!

Documents For Krishi Honda Scheme- ಅರ್ಜಿ ಸಲ್ಲಿಸಲು ದಾಖಲಾತಿಗಳು:

1) ಅರ್ಜಿದಾರ ರೈತರ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಪಹಣಿ/ಊತಾರ್/RTC
4) ಬ್ಯಾಂಕ್ ಪಾಸ್ ಬುಕ್ ಪ್ರತಿ
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಅನ್ವಯಿಸಿದ್ದಲ್ಲಿ ಮಾತ್ರ ಸಲ್ಲಿಸಬೇಕು)
6) ರೇಶನ್ ಕಾರ್ಡ ಪ್ರತಿ
7) ಮೊಬೈಲ್ ನಂಬರ್

Who Can Apply For Krishi Honda- ಅರ್ಜಿ ಸಲ್ಲಿಸಲು ಅರ್ಹತೆಗಳು:

1) ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.
2) ಕಳೆದ ಹಿಂದಿನ ವರ್ಷಗಳಲ್ಲಿ ಈ ಯೋಜನೆಯಡಿ ಕೃಷಿ ಹೊಂಡವನ್ನು ಸಹಾಯಧನದಲ್ಲಿ ನಿರ್ಮಾಣ ಮಾಡಿಕೊಂಡಿರಬಾರದು.
3) ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
4) ಸಣ್ಣ ಮತ್ತು ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರಾಗಿರಬೇಕು.

ಇದನ್ನೂ ಓದಿ: PM-Kisan App: ಇ-ಕೆವೈಸಿ ಸ್ಟೇಟಸ್ ಮತ್ತು ಹಣ ಜಮಾ ವಿವರ ತಿಳಿಯಲು! ಪಿ ಎಂ ಕಿಸಾನ್ ಮೊಬೈಲ್ ಆಪ್!

ಕೃಷಿ ಹೊಂಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಫಲಾನುಭವಿಗಳ ಆಯ್ಕೆ ನಂತರದ ಪ್ರಕ್ರಿಯೆಗಳು:

ರೈತ ಸಂಪರ್ಕ ಕೇಂದ್ರದ ಕ್ಷೇತ್ರ ಪರಿಶೀಲನಾ ವರದಿಯಲ್ಲಿ ಆಯ್ಕೆ ಮಾಡಿದ ಅರ್ಹ ಅರ್ಜಿದಾರರಿಗೆ ಒಂದು ವಾರದೊಳಗೆ ತಾಂತ್ರಿಕ ಮಂಜೂರಾತಿ (Work Sanction Order) ಹಾಗೂ ಕೃಷಿಹೊಂಡದ ಅಂದಾಜು ಪಟ್ಟಿ (Estimate) ಯನ್ನು K-KISAN ತಂತ್ರಾಂಶದಲ್ಲಿ ನೀಡಲಾಗುತ್ತದೆ.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು K-KISAN ತಂತ್ರಾಂಶದಲ್ಲಿ ರೈತರ ಅರ್ಜಿಯನ್ನು ಪರಿಶೀಲಿಸಿ ನಂತರ ಕಾರ್ಯಾದೇಶವನ್ನು (Work Sanction Order) ನೀಡಲಾಗುತ್ತದೆ.

ಕಾರ್ಯಾದೇಶವನ್ನು ನೀಡಿದ ನಂತರ, ಕೃಷಿ ಭಾಗ್ಯ ಪ್ಯಾಕೇಜ್ ಮಾದರಿ ಕುರಿತು ರೈತರಿಗೆ ಮಾಹಿತಿ ನೀಡಿ, ಅದರಂತೆ ಘಟಕಗಳಾದ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ತಂತಿ ಬೇಲಿ, ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್ ಹಾಗೂ ಸೂಕ್ಷ್ಮ (ತುಂತುರು/ಹನಿ) ನೀರಾವರಿ ಅಳವಡಿಕೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತದೆ.

ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!

ಸದರಿ ಘಟಕಗಳ ಅನುಷ್ಠಾನಕ್ಕೆ ತಂತ್ರಾಂಶದಲ್ಲಿ ನೀಡಿರುವ Flow Chart ವೇಳಾಪಟ್ಟಿಯನ್ವಯ ಕ್ಷೇತ್ರದ GPS ಫೋಟೊ ಹಾಗೂ ಅಳತೆ ಪುಸ್ತಕದಲ್ಲಿ ದಾಖಲೀಕರಣ ಮಾಡಲಾಗುತ್ತದೆ.

ಎಲ್ಲಾ ಘಟಕಗಳನ್ನು ಅನುಷ್ಠಾನಗೊಳಿಸಿ ಅದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳನ್ನು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ.

ಸಹಾಯಕ ಕೃಷಿ ನಿರ್ದೇಶಕರು ಹಾಗೂ ಉಪ ಕೃಷಿ ನಿರ್ದೇಶಕರು, ಪ್ರತಿ ಘಟಕದ ಅನುಷ್ಠಾನದ ನಂತರ ನಿಯಮಾನುಸಾರ ಪರಿಶೀಲಿಸಿ ವೆಚ್ಚ ಭರಿಸಲು ಅಗತ್ಯ ಕ್ರಮ ವಹಿಸಲಾಗುತ್ತದೆ.

ತಂತ್ರಾಂಶದಲ್ಲಿ ನೊಂದಾಯಿಸಿದ ಅರ್ಹ ಅರ್ಜಿಗಳನ್ನು ಪ್ರಸಕ್ತ ಸಾಲಿನಲ್ಲಿ ಜಿಲ್ಲಾವಾರು ನಿಗದಿಪಡಿಸಿದ ವಾರ್ಷಿಕ ಕಾರ್ಯಕ್ರಮದನ್ವಯ ಜೇಷ್ಠತೆಯನುಸಾರ ಆಯ್ಕೆ ಮಾಡಿ (Selection/ Acceptance stage) ನಂತರ ಕ್ಷೇತ್ರ ಪರಿಶೀಲನೆ ಕೈಗೊಂಡು ಅರ್ಹ ರೈತರಿಗೆ ತಂತ್ರಾಂಶದ ಮೂಲಕವೇ ಕಾರ್ಯಾದೇಶವನ್ನು ನೀಡಲಾಗುತ್ತದೆ.

ಘಟಕ ಅನುಷ್ಠಾನದ ಪ್ರತಿ ಹಂತವನ್ನು ಗಣಕೀಕರಿಸಿದ ನಂತರ ವೆಚ್ಚ ಭರಿಸಲಾಗುತ್ತದೆ.

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ಇಲಾಖೆಯ ಜಾಲತಾಣ- CLICK HERE

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: