Best farmer award-ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ!

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆಯಿಂದ(horticulture university bagalkot) ಈ ವರ್ಷದ ತೋಟಗಾರಿಕೆ ಮೇಳದ(Horticulture mela) ಕಾರಣದಿಂದಾಗಿ ಪ್ರತಿ ವರ್ಷದಂತೆ ರೈತ ಮತ್ತು ರೈತ ಮಹಿಳೆಯರಿಗೆ ಉತೇಜನ ನೀಡಲು ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆಯಿಂದ(horticulture university bagalkot) ಈ ವರ್ಷದ ತೋಟಗಾರಿಕೆ ಮೇಳದ(Horticulture mela) ಕಾರಣದಿಂದಾಗಿ ಪ್ರತಿ ವರ್ಷದಂತೆ ರೈತ ಮತ್ತು ರೈತ ಮಹಿಳೆಯರಿಗೆ ಉತೇಜನ ನೀಡಲು ಶ್ರೇಷ್ಠ ತೋಟಗಾರಿಕೆ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ಅರ್ಜಿ ಸಲ್ಲಿಸಬವುದು ಎಂದು ವಿಶ್ವವಿದ್ಯಾಲಯದಿಂದ ಪ್ರಕಟಣೆ ಹೊರಡಿಸಲಾಗಿದೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2023-24 ಸಾಲಿನ ಫೆಬ್ರವರಿ 10 ರಿಂದ 12 ರವರೆಗೆ "ಬರ ಸಹಿಷ್ಣುತೆಗಾಗಿ ತೋಟಗಾರಿಕೆ" ಎಂಬ ಧೈಯದೊಂದಿಗೆ ಬಾಗಲಕೋಟೆಯ ಉದ್ಯಾನಗಿರಿ ಆವರಣದಲ್ಲಿ ತೋಟಗಾರಿಕೆ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಈ ತೋಟಗಾರಿಕೆ ಮೇಳದಲ್ಲಿ, ತೋಟಗಾರಿಕೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿಕರಿಗೆ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಲ್ಲಿ ಪ್ರತಿಯೊಂದು ಜಿಲ್ಲೆಗೆ ಶ್ರೇಷ್ಠ ತೋಟಗಾರಿಕೆ ರೈತ ಅಥವಾ ರೈತ ಮಹಿಳೆಯನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Farm Pond application-ಶೇ 90 ಸಹಾಯಧನದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನ!

Best farmer award-ಅರ್ಜಿ ನಮೂನೆ ಎಲ್ಲಿ ಪಡೆಯಬೇಕು?

ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ  ರೈತರು ಅರ್ಜಿ ನಮೂನೆಯನ್ನು ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ, ಬೆಂಗಳೂರು ಅಥವಾ ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆ ಕಚೇರಿ ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ Horticulture university bagalkot ಮೂಲಕ ಅರ್ಜಿ ನಮೂನೆ ಪಡೆದುಕೊಳ್ಳಬಹುದು.

farmer award last date-ಅರ್ಜಿ ಸಲ್ಲಿಸಲು ಕೊನೆಯ ದಿನ:

ಭರ್ತಿ ಮಾಡಿದ ಅರ್ಜಿಯನ್ನು 2024 ನೇ ಜನವರಿ 10 ರೊಳಗಾಗಿ ಬೆಂಗಳೂರು ಜಿಲ್ಲೆಯವರು ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ, ಬೆಂಗಳೂರು 56006 ಈ ವಿಳಾಸಕ್ಕೆ ಸಲ್ಲಿಸಬೇಕು ಇತರೆ ಜಿಲ್ಲೆಯವರು ಈ ಲಿಂಕ್ Best farmer award application ನಿಮ್ಮ ಜಿಲ್ಲೆಯ ಹೆಸರು ಇರುವ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Self Employment Loan: ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ 5 ಕೋಟಿ ನೇರ ನಗದು ವರ್ಗಾವಣೆ- ಸಚಿವ ಕೃಷ್ಣಬೈರೇಗೌಡ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 

08354-230101, 6364064901, 9448344103, 9972159613, 8867574561 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೆಬ್ಸೈಟ್ ಲಿಂಕ್: click here

Bagalkot Horticulture mela-2023: ಈ ಬಾರಿ ಮೇಳದ ವಿಶೇಷತೆಗಳು:

ಈ ವರ್ಷ ರಾಜ್ಯದ್ಯಂತ ಮುಂಗಾರು ಮಳೆ ಕೊರತೆಯಿಂದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬರ ಉಂಟಾಗಿರುವುದರಿಂದ "ಬರ ಸಹಿಷ್ಣುತೆಗಾಗಿ ತೋಟಗಾರಿಕೆ" ಎನ್ನುವ ಶೀರ್ಷಿಕೆಯಡಿ ತೋಟಗಾರಿಕೆ ಮೇಳವನ್ನು ಆಯೋಜನೆ ಮಾಡಲಾಗುತ್ತಿದ್ದು ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಯಾವೆಲ್ಲ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು ಎನ್ನುವ ವಿಷಯದ ಕುರಿತು ಹೆಚ್ಚಿನ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವ ಕೆಲಸವನ್ನು ವಿಶ್ವವಿದ್ಯಾಲಯ ಕೈಗೊಳ್ಳುತ್ತಿದೆ.

ಇದನ್ನೂ ಓದಿ: Gruhalakshmi camp date-ಗೃಹಲಕ್ಷ್ಮಿ ಕ್ಯಾಂಪ್ ನಿಮ್ಮ ಅರ್ಜಿ ಸರಿಪಡಿಸಲು ನಾಳೆ ಕೊನೆಯ ದಿನ!

ಇದರ ಜೊತೆಗೆ ಈ ಕೆಳಗಿನ ಚಿತ್ರದಲ್ಲಿರುವ ತಾಂತ್ರಿಕತೆಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: LPG e-KYC status- ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ?

ಇದನ್ನೂ ಓದಿ: LPG E-KYC: ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ  ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕವಲ್ಲ!

ಇದನ್ನೂ ಓದಿ: Yuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!