ಇಂದಿನ ಈ ಲೇಖನದಲ್ಲಿ ಬೆಳೆ ವಿಮೆ ಕಟ್ಟಿದರು ಮತ್ತು ತಮ್ಮ ಅಕ್ಕ-ಪಕ್ಕದ ರೈತರಿಗೆ ವಿಮೆ ಹಣ(Insurance amount) ಜಮಾ ಅಗಿದರು ತಮ್ಮ ಖಾತೆಗೆ ಬೆಳೆ ವಿಮೆ ಪರಿಹಾರದ(bele vime hana) ಹಣ ಜಮಾ ಅಗಿಲ್ಲ ಎಂದು ಅನೇಕ ರೈತರು ತಿಳಿಸಿದ್ದು ಈ ಸಮಸ್ಯೆಗೆ ಮುಖ್ಯ ಕಾರಣವೇನು? ಮತ್ತು ಇದಕ್ಕೆ ಸೂಕ್ತ ಪರಿಹಾರ ಕ್ರಮದ ಕುರಿತು ಈ ಕೆಳಗೆ ವಿವರಿಸಲಾಗಿದೆ.
ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ ಬಳಿಕ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಿ ಒಂದೆರಡು ತಿಂಗಳಿಗೊಮ್ಮೆ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುತ್ತಿರಬೇಕು, ಏಕೆಂದರೆ ಯಾವುದಾದರು ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಅರ್ಜಿ ತಿರಸ್ಕಾರವಾದಲ್ಲಿ ಅದನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಅಕ್ಕ-ಪಕ್ಕದ ಜಮೀನಿನ ರೈತರಿಗೆ ಬೆಳೆ ವಿಮೆ ಬಂದು ಅದೇ ಬೆಳೆ ಬೆಳೆದಿರುವ ನಮಗೆ ಬೆಳೆ ವಿಮೆ ಜಮಾ ಅಗಿಲ್ಲದ ರೈತರು ಯಾವ ಕ್ರಮ ಅನುಸರಿಸಿ ಬೆಳೆ ವಿಮೆ(crop insurance-2023) ಪರಿಹಾರವನ್ನು ಪಡೆಯಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: SBI Bank Recruitment-2024: SBI ಬ್ಯಾಂಕ್ ನಿಂದ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ! ವೇತನ ₹69,810!
ಕಾರಣ-1) Crop details mismatch-ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆಯ ಬೆಳೆ ವಿವರ ತಾಳೆ ಅಗದಿರುವುದು:
ಮುಖ್ಯವಾಗಿ ರೈತರು ಈ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ ತಾವು ಯಾವ ಬೆಳೆಗೆ ವಿಮೆ ಕಟ್ಟಿರುತ್ತಿರೋ ಆ ಬೆಳೆಯ ವಿವರವು ಬೆಳೆ ಸಮೀಕ್ಷೆಯಲ್ಲಿ ಸೇರ್ಪಡೆ ಅಗಿರಬೇಕು ಇಲ್ಲವಾದಲ್ಲಿ ಬೆಳೆ ವಿಮೆ-ಬೆಳೆ ಸಮೀಕ್ಷೆಯ ಬೆಳೆ ವಿವರ ತಾಳೆಯಾಗದೆ ಬೆಳೆ ವಿಮೆ ಪರಿಹಾರ ರೈತರಿಗೆ ಜಮಾ ಅಗುವುದಿಲ್ಲ.
ಉದಾಹರಣೆಗೆ: ನೀವು ಮೆಕ್ಕೆಜೋಳ ಬೆಳೆದಿದ್ದೇವೆ ಎಂದು ಬೆಳೆ ವಿಮೆ “ಮೆಕ್ಕೆಜೋಳಕ್ಕೆ” ಕಟ್ಟಿರುತ್ತಿರಿ ಅದರೆ ಬೆಳೆ ಸಮೀಕ್ಷೆ ಮಾಡುವ ವ್ಯಕ್ತಿಯು ನಿಮ್ಮ ಜಮೀನಿನ ಸರ್ವೆ ಮಾಡುವಾಗ ತಪ್ಪಾಗಿ “ರಾಗಿ” ಬೆಳೆ ಬೆಳೆದಿದ್ದಾರೆ ಎಂದು ದಾಖಲೆ ಮಾಡಿದ್ದಲ್ಲಿ ಬೆಳೆ ವಿವರ ತಾಳೆಯಾಗದೆ ಬೆಳೆ ವಿಮೆ ಪಡೆಯಲು ತಾಂತ್ರಿಕ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: PM-kisan 17th installment-ರೈತರ ಖಾತೆಗೆ ಪಿ ಎಂ ಕಿಸಾನ್ 16ನೇ ಕಂತಿನ ಹಣ! ಈ ರೈತರಿಗೆ ಮಾತ್ರ ಸಿಗಲಿದೆ ರೂ 2,000!
ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿರುವ ಕ್ರಮ:
ಈ ರೀತಿಯ ಸಮಸ್ಯೆಯಿಂದ ಬೆಳೆ ವಿಮೆ ಪಡೆಯಲು ಸಾಧ್ಯವಾಗದ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲಾತಿ(ಪಹಣಿ/RTC, ಆಧಾರ್ ಕಾರ್ಡ)ಗಳ ಸಮೇತ ಭೇಟಿ ಮಾಡಿ ಬೆಳೆ ಸಮೀಕ್ಷೆಯ ವಿವರವನ್ನು ಬೆಳೆ ವಿಮೆಯ ಅರ್ಜಿಯಲ್ಲಿ ಇರುವ ಬೆಳೆ ಹೆಸರು ಬರುವ ಹಾಗೆ ತಿದ್ದುಪಡಿ ಮಾಡಿಸಬೇಕು.
ಈ ಸಮಸ್ಯೆಯಿಂದ ಬೆಳೆ ವಿಮೆ ಬಂದಿರುವುದಿಲ್ಲ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ:
Step-1: ಮೊದಲಿಗೆ ಈ Crop insurance details ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಬೇಕು. ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ ವಿಮೆ ಋತು ಮತ್ತು ವರ್ಷದ ಆಯ್ಕೆ / Select Insurance Season and Year ಕಾಲಂ ನಲ್ಲಿ ವರ್ಷದ ಆಯ್ಕೆ/Insurance Year : “2023-2024” ಮತ್ತು “ಋತು: Kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟಲ್ ಮೇಲೆ ಕ್ಲಿಕ್ ಮಾಡಬೇಕು.
Step-2: ಈ ಪೇಜ್ ನಲ್ಲಿ “Farmers” ಕಾಲಂ ನಲ್ಲಿ ಕೆಳಗೆ ಕಾಣುವ “Crop Insurance Details On Survey No” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Bele vime-2024: ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ತಿಳಿಯುವುದು ಹೇಗೆ?
Step-3: ಇದಾದ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಅಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಹೆಸರು ಕಾಣುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ ಅರ್ಜಿಯ ಸಂಖ್ಯೆಯನ್ನು ಒಂದು ಕಡೆ ಬರೆದುಕೊಳ್ಳಬೇಕು.
Step-4: ಮೇಲಿನ ಹಂತ ಅನುಸರಿಸಿ ವಿಮೆ ಅರ್ಜಿಯ ಸಂಕ್ಯೆಯನ್ನು ತೆಗೆದುಕೊಂಡ ಬಳಿಕ ಬಟನ್ ಮೇಲೆ ಕ್ಲಿಕ್ ಮಾಡಿ ಈ ಪೇಜ್ ನಲ್ಲಿ ಕೆಳಗೆ “Check Status” ಬಟನ್ ಮೇಲೆ ಕ್ಲಿಕ್ ಮಾಡಿ ವಿಮೆ ಅರ್ಜಿ ಸಂಖ್ಯೆ/Application on ಅನ್ನು ಹಾಕಿ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಅಗ Status ಕಾಲಂ ನಲ್ಲಿ “Crop Survey Data Mismatch Verification from Taluk Agri. Dept/Crop Survey Data Mismatch Verification from Taluk Agri. Dept/ Proposal Marked For verification” ಈ ರೀತಿ ತೋರಿಸಿದರೆ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ-ಬೆಳೆ ವಿಮೆ ವಿವರ ತಾಳೆಯಾಗಿರುವುದಿಲ್ಲ ಎಂದು ನೀವು ತಿಳಿದುಕೊಳ್ಳಬೇಕು.
ಇದನ್ನೂ ಓದಿ: adhar update-2024: ಇನ್ನು ಮುಂದೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಹಣ ಪಡೆಯಲು ಈ ಕೆಲಸ ತಪ್ಪದೇ ಮಾಡಿ!
ಕಾರಣ-2) Name mismatch-ಬ್ಯಾಂಕ್ ಖಾತೆ ಹೆಸರು-ಆಧಾರ್ ಕಾರ್ಡ ಹೆಸರು ತಾಳೆಯಾಗದಿರುವುದು:
ನೇರ ನಗದು ವರ್ಗಾವಣೆ ಮೂಲಕ ವಿವಿಧ ಸರಕಾರಿ ಯೋಜನೆಗಳ ಹಣವನ್ನು ಪಡೆಯಲು ಆಧಾರ್ ಕಾರ್ಡನಲ್ಲಿರುವಂತೆಯೆ ಹೆಸರು ಬ್ಯಾಂಕ್ ಖಾತೆಯಲ್ಲಿ ಇರಬೇಕು ಒಂದೊಮ್ಮೆ ಆಧಾರ್ ಕಾರ್ಡನಲ್ಲಿ ಒಂದು ರೀತಿ ಬ್ಯಾಂಕ್ ಖಾತೆಯಲ್ಲಿ ಒಂದು ರೀತಿ ಹೆಸರು ಇದ್ದಲ್ಲಿ ಪರಿಹಾರದ ಹಣ ವರ್ಗಾವಣೆ ವಿಫಲವಾಗಿ ನಿಮಗೆ ಹಣ ಸಂದಾಯವಾಗುವುದಿಲ್ಲ.
ಇದಕ್ಕಾಗಿ ರೈತರು ಒಮ್ಮೆ ಬ್ಯಾಂಕ್ ಪಾಸ್ ಬುಕ್ ನಲ್ಲಿ ನಿಮ್ಮ ಆಧಾರ್ ಕಾರ್ಡನಲ್ಲಿರುವಂತೆಯೇ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಳ್ಳಿ ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಶಾಖೆಯನ್ನು ಆಧಾರ್ ಕಾರ್ಡ ಸಮೇತ ಭೇಟಿ ಮಾಡಿ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಿ.