Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!

Facebook
Twitter
Telegram
WhatsApp

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(IHMCL) ವಾಹನ ಸವಾರರಿಗೆ ಟೋಲ್ ನಲ್ಲಿ ಶುಲ್ಕ ಪಾವತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಾಸ್ಟ್ ಟ್ಯಾಗ್(FASTag) ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.

ಈಗ ಈ ವ್ಯವಸ್ಥೆಯನ್ನು ಇನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು “ಒನ್ ವೆಹಿಕಲ್ ಒನ್ ಫಾಸ್ಟ್ ಟ್ಯಾಗ್” ಎನ್ನುವ ನೂತನ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬ ವಾಹನ ಬಳಕೆದಾರರು ತಮ್ಮ ಪಾಸ್ಟ್ ಟ್ಯಾಗ್(FASTag)ಗೆ ಕೆವೈಸಿ ಮಾಡಿಕೊಳ್ಳಲು 29 ಫೆಬ್ರವರಿ 2024 ಕೊನೆಯ ದಿನಾಂಕ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಇಂದು ಈ ಅಂಕಣದಲ್ಲಿ ಪಾಸ್ಟ್ ಟ್ಯಾಗ್(FASTag) ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?   ವಾಹನ ಬಳಕೆದಾರರು ತಮ್ಮ ಮೊಬೈಲ್ ನಲ್ಲೇ ಕೆವೈಸಿ ಹೇಗೆ ಮಾಡುವುದು? ಎನ್ನುವ ಸಂಫೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Marriage registration- ವಿವಾಹ ನೋಂದಣಿ ಇನ್ನು ಭಾರೀ ಸುಲಭ!

What is FASTag and how it works- ಪಾಸ್ಟ್ ಟ್ಯಾಗ್(FASTag) ಎಂದರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?  

ಪಾಸ್ಟ್ ಟ್ಯಾಗ್ ಒಂದು ಬಹು ಉಪಯೋಗಿ ಶುಲ್ಕ ಪಾವತಿ ವಿಧಾನವಾಗಿದ್ದು ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯಿಂದ ಈ ಪಾಸ್ಟ್ ಟ್ಯಾಗ್(FASTag) ಅನ್ನು ಸಿದ್ದಪಡಿಸಲಾಗುತ್ತಿದ್ದು ರೇಡಿಯೋ ಫೀಕ್ವೇನ್ಸಿ ಐಡೆಂಟಿಫಿಕೇಶನ್(RFID) ತಂತ್ರಜ್ನಾನವನ್ನು ಹೊಂಡಿರುವ ಸ್ಟಿಕರ್ ಇವಾಗಿವೆ. ಇದನ್ನು ವಾಹನದ ಮುಂದಿನ ಭಾಗಕ್ಕೆ ಅಂಟಿಸಿದ ಬಳಿಕ ವಾಹನವು ಹೆದ್ದಾರಿಯ ಟೋಲ್ ಮೂಲಕ ಸಾಗುವಾಗ ಸ್ವಯಂ ಚಾಲಿತವಾಗಿ ನಿಮ್ಮ ವಾಹನದ ಗುರುತನ್ನು ಪತ್ತೆ ಮಾಡಿ ನಿಮ್ಮ ವಾಹನದ ಟೋಲ್ ಶುಲ್ಕ ಪಾವತಿ ಅಗುತ್ತದೆ.

ನೀವು ನಿಮ್ಮ ಪಾಸ್ಟ್ ಟ್ಯಾಗ್(FASTag)ಗೆ ಮುಂಚಿತವಾಗಿ ಆನ್ಲೈನ್ ಮೂಲಕ  ಹಣ ಹಾಕಿ ರೀಚಾರ್ಜ್ ಮಾಡಿಟ್ಟುಕೊಳ್ಳಬೇಕು.

ಇದನ್ನೂ ಓದಿ: Cancelled ration card-2024: ಜನವರಿ-2024 ತಿಂಗಳ ಜಿಲ್ಲಾವಾರು ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!

Fastag benefits- ಪಾಸ್ಟ್ ಟ್ಯಾಗ್(FASTag) ಪ್ರಯೋಜನಗಳು:

ಪಾಸ್ಟ್ ಟ್ಯಾಗ್(FASTag) ಬಳಕೆಯಿಂದ ವಾಹನ ಸವಾರರು ಟೋಲ್ ಬಳಿಯಲ್ಲಿ ಸರದಿಯಲ್ಲಿ ನಿಂತು ಕಾಯುವುದು ತಪ್ಪುತ್ತದೆ ಮತ್ತು ಟೋಲ್ ಬಳಿ ಉಂಟಾಗುವ ಟ್ರಾಪಿಕ್ ಸಮಸ್ಯೆಯನ್ನು ಸಹ ತಪ್ಪಿಸಿದಂತಾಗುತ್ತದೆ.

ಫಾಸ್ಟ್ ಟ್ಯಾಗ್ ಗೆ ಕೆವೈಸಿ ಏಕೆ ಮಾಡಿಸಬೇಕು?

ವಾಹನ ಮಾಲೀಕರು ಫಾಸ್ಟ್ ಟ್ಯಾಗ್ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು ಇದನ್ನು ಕಡ್ಡಾಯಗೊಳಿಸಲು ಮೂಲ ಕಾರಣ ನಕಲಿ ಫಾಸ್ಟ್ ಟ್ಯಾಗ್ ಅನ್ನು ಪತ್ತೆ ಮಾಡುವುದು ಮತ್ತು ಫಾಸ್ಟ್ ಟ್ಯಾಗ್ ಬಳಕೆದಾರರ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಕೆವೈಸಿ ಮಾಡಿಸಲಾಗುತ್ತಿದೆ.

ಫಾಸ್ಟ್ ಟ್ಯಾಗ್ ಕೆವೈಸಿಗೆ ಕೊನೆಯ ದಿನಾಂಕ: 29 ಫೆಬ್ರವರಿ 2024

ಇದನ್ನೂ ಓದಿ: Budget highlights-2024: ಕೇಂದ್ರ ಸರಕಾರದ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಸಂಪೂರ್ಣ ಮಾಹಿತಿ!

Fastag kyc- ನಿಮ್ಮ ಮೊಬೈಲ್ ನಲ್ಲೇ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಿಕೊಳ್ಳುವ ವಿಧಾನ:

ವಾಹನ ಮಾಲೀಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಫಾಸ್ಟ್ ಟ್ಯಾಗ್ ಕೆವೈಸಿ(Fastag kyc) ಅನ್ನು ಮಾಡಿಕೊಳ್ಳಬಹುದಾಗಿದೆ.

Step-1: ಮೊದಲಿಗೆ ಈ Fastag kyc link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಾಸ್ಟ್ ಟ್ಯಾಗ್ ವೆಬ್ಸೈಟ್ ಅನ್ನು ಭೇಟಿ ಮಾಡಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು. 

Step-2: ಇದಾದ ಬಳಿಕ ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “GET OTP” ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ “Login” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: village administrative officer- ಕಂದಾಯ ಇಲಾಖೆಯಿಂದ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ನೇಮಕಾತಿ!

Step-3: ಲಾಗಿನ್ ಅದ ಬಳಿಕ ಡ್ಯಾಶ್ ಬೋರ್ಡ ನಲ್ಲಿ ಮೈ ಪ್ರೊಪೈಲ್ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೆವೈಸಿ ಬಟನ್ ಮೇಲೆ ಕ್ಲಿಕ್ ಮಾಡಿ ಕಸ್ಟಮರ್ ಟೈಪ್ ಅನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಆಧಾರ್ ಮತ್ತಿ ವಿಳಾಶ ಪೂರಾವೆ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ Submit ಮಾಡಬೇಕು.

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ