ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವತಿಯಿಂದ FASTag ಬಳಕೆದಾರರಿಗೆ ನೂತನ ನಿಯಮವನ್ನು ಜಾರಿಗೆ ತರಲಾಗಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದಲ್ಲದೇ FASTag ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? FASTag ಕುರಿತು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳೇನು? ವಾಹನ ಸವಾರರು/ಮಾಲೀಕರು(Vehicle toll charges) FASTag ಬಳಕೆ ಕುರಿತು ಯಾವೆಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಮಗ್ರ ಮಾಹಿತಿಯನ್ನು ಸಹ ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ನಮ್ಮ ದೇಶದ ಬಹುತೇಕ ಎಲ್ಲಾ ಹೆದ್ದಾರಿಗಳಲ್ಲಿ ವಾಹನ ಮಾಲೀಕರಿಂದ ರಸ್ತೆ ಸುಂಕವನ್ನು ಸಂಗ್ರಹಣೆ ಮಾಡಲು ಡಿಜಿಟಲ್ ಮಾದರಿಯನ್ನು ಅನುಸರಿಸಿ ಕಡಿಮೆ ಸಮಯದಲ್ಲಿ ಸುಂಕವನ್ನು ಪಾವತಿ ಮಾಡಿಸಿಕೊಳ್ಳಲು FASTag ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: Sprinkler pipes Subsidy- ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
What Is FASTag-ಫಾಸ್ಟ್ಯಾಗ್ (FASTag) ಎಂದರೇನು?
ಫಾಸ್ಟ್ಯಾಗ್ (FASTag) ಇದು ಒಂದೊಂದು ವಾಹನಕ್ಕೆ ಸಂಬಂಧಿಸಿದಂತೆ ಹಾಕುವ RFID (Radio Frequency Identification) ಸ್ಟಿಕರ್ ಆಗಿದ್ದು, ಈ ಟ್ಯಾಗ್ ಟೋಲ್ ಗೇಟುಗಳಲ್ಲಿ ರಸ್ತೆ ಸುಂಕವನ್ನು ಕಟ್ಟಲು ಡಿಜಿಟಲ್ ಪಾವತಿ ಸೌಲಭ್ಯವನ್ನು ಒದಗಿಸುವ ಸಹಕಾರಿಯಾಗಿದೆ.
FASTag Benefits-ಫಾಸ್ಟ್ಯಾಗ್/FASTag ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಪ್ರಯೋಜನಗಳೇನು?
ನಮ್ಮ ದೇಶದ ವಿವಿಧ ಸ್ಥಳಗಳಲ್ಲಿರುವ ಟೋಲ್ ಗೇಟುಗಳಲ್ಲಿ ವಾಹನ ಸವಾರರು/ಮಾಲೀಕರು ರಸ್ತೆ ಸುಂಕವನ್ನು ಪಾವತಿ ಮಾಡಲು ಈ ಟ್ಯಾಗ್ ಅನ್ನು ತಮ್ಮ ವಾಹನದ ಮುಂಭಾಗದ ಗ್ಲ್ಯಾಸ್ ಮೇಲೆ ಅಂಟಿಸಿಕೊಳ್ಳಬೇಕು ಇದರಲ್ಲಿರುವ ಬಾರ್ ಕೋಡ್ ಅನ್ನು ಟೋಲ್ ಗೇಟುಗಳಲ್ಲಿನ ಸ್ಕಾನರ್ ಮೂಲಕ ಸ್ಕಾನ್ ಮಾಡಿ ರಸ್ತೆ ಸುಂಕವನ್ನು ಪಾವತಿ ಮಾಡಲಾಗುತ್ತದೆ.
ಇದನ್ನೂ ಓದಿ: Birth Certificate-ಹೈಕೋರ್ಟ್ ನಿಂದ ಜನನ ಪ್ರಮಾಣ ಪತ್ರದ ಕುರಿತು ಮಹತ್ವದ ತೀರ್ಪು!

ವಾಹನ ಸವಾರರು ತಮ್ಮ ಫಾಸ್ಟ್ಯಾಗ್/FASTag ಗಳಲ್ಲಿ ಮುಂಚಿತವಾಗಿ ಮೊಬೈಲ್ ಪೋನ್ ಗೆ ರೀಜಾರ್ಚ್ ಮಾಡಿಕೊಳ್ಳುವ ರೀತಿಯಲ್ಲಿ ಈ ಕಾರ್ಡಗೆ ರೀಚಾರ್ಚ್ ಅನ್ನು ಮಾಡಿಟ್ಟುಕೊಳ್ಳಬೇಕು.
ಈ ಹಿಂದೆ ಫಾಸ್ಟ್ಯಾಗ್/FASTag ಬರುವುದಕ್ಕಿಂತ ಮೊದಲು ಟೋಲ್ ಗೇಟುಗಳಲ್ಲಿ ನಗದು ಹಣವನ್ನು ಪಾವತಿ ಮಾಡಿ ರಸ್ತೆ ಸುಂಕವನ್ನು ಪಾವತಿ ಮಾಡಬೇಕಿತ್ತು ಇದರಿಂದ ಸಾರ್ವಜನಿಕರ ಸಮಯ ವ್ಯರ್ಥವಾಗುವುದರ ಜೊತೆಗೆ ಟೋಲ್ ಗೇಟುಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ಉದ್ಬವಿಸುತ್ತಿತ್ತು ಈ ಸಮಸ್ಯೆಗೆ ಫಾಸ್ಟ್ಯಾಗ್/FASTag ವ್ಯವಸ್ಥೆಯು ಶಾಶ್ವತ ಪರಿಹಾರವನ್ನು ಒದಗಿಸಿದೆ ಸಮಯದ ಉಳಿತಾಯ ಮತ್ತು ವಾಹನ ದಟ್ಟನೆಯ ಸಮಸ್ಯೆಯನ್ನು ದೂರ ಮಾಡಿದೆ.
ಇದನ್ನೂ ಓದಿ: Crop Insurance List-ಬೆಳೆ ವಿಮೆ ತಿರಸ್ಕೃತಗೊಂಡ ರೈತರ ಪಟ್ಟಿ ಬಿಡುಗಡೆ!
FASTag New Rules- ಇಂದಿನಿಂದ FASTag ಹೊಸ ನಿಯಮ ಜಾರಿ:
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವತಿಯಿಂದ ಫಾಸ್ಟ್ಯಾಗ್/FASTag ಬಳಕೆದಾರರಿಗೆ ನೂತನ ನಿಯಮವನ್ನು 17 ಫೆಬ್ರವರಿ 2025 ರಿಂದ ಅಂದರೆ ಇಂದಿನಿಂದ ಜಾರಿಗೆ ತಂದಿದ್ದು, ಈ ನಿಯಮದನ್ವಯ ವಾಹನ ಮಾಲೀಕರು/ಸವಾರರು ತಮ್ಮ ಫಾಸ್ಟ್ಯಾಗ್/FASTag ನಲ್ಲಿ ಟೋಲ್ ಗೇಟುಗಳಲ್ಲಿ ಸುಂಕವನ್ನು ಪಾವತಿ ಮಾಡಲು ಟೋಲ್ ಗೇಟ್ ತಲುಪುವ 1 ಗಂಟೆ ಮುಂಚಿತವಾಗಿಯೇ ತಮ್ಮ ಫಾಸ್ಟ್ಯಾಗ್/FASTagನಲ್ಲಿ ಪೂರ್ಣ ಪ್ರಮಾಣದ ಬ್ಯಾಲೆಸ್ ಅನ್ನು ಹೊಂದಿರುವುದು ಕಡ್ದಾಯವಾಗಿದೆ.
ಒಂದೊಮ್ಮೆ ಟೋಲ್ ಗೇಟ್ ತಲುಪುವ ವೇಳೆಯಲ್ಲಿ ನಿಮ್ಮ ಫಾಸ್ಟ್ಯಾಗ್/FASTagನಲ್ಲಿ ನಿಗದಿತ ಬ್ಯಾಲೆನ್ಸ್ ಇಲ್ಲದೇ ಇದ್ದಲ್ಲಿ ವಾಹನ ಸವಾರರು ದಂಡವನ್ನು ಪಾವತಿ ಮಾಡುವುದರ ಜೊತೆಗೆ ಟೋಲ್ ಶುಲ್ಕವನ್ನು ಪಾವತಿ ಮಾಡಲು ಫಾಸ್ಟ್ಯಾಗ್/FASTag ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ದಂಡವನ್ನು ತಪ್ಪಿಸಲು ಸಾಕಷ್ಟು ಬ್ಯಾಲೆನ್ಸ್ ಮತ್ತು KYC ವಿವರಗಳನ್ನು ನವೀಕರಿಸುವುದು ಅತ್ಯಗತ್ಯ.
ಇದನ್ನೂ ಓದಿ: Post office recruitment-ಅಂಚೆ ಇಲಾಖೆಯಲ್ಲಿ ಬರೋಬ್ಬರಿ 21,413 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ!
ಇದಲ್ಲದೆ, ಕೊನೆಯ ಕ್ಷಣದಲ್ಲಿ ರೀಚಾರ್ಜ್ ಮಾಡುವುದರಿಂದ ಪಾವತಿ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗದಿರಬಹುದು. ಸಾಕಷ್ಟು ಬ್ಯಾಲೆನ್ಸ್ ಅನ್ನು ಮೊದಲೇ ನಿರ್ವಹಿಸುವುದು ಈಗ ಬಹಳ ಮುಖ್ಯವಾಗಿದೆ. ಈ ನವೀಕರಣಗಳು ಟೋಲ್ ವಹಿವಾಟುಗಳನ್ನು ಸುಗಮಗೊಳಿಸುವ ಮತ್ತು ವಂಚನೆಯನ್ನು ಕಡಿಮೆ ಮಾಡುವ ದೇಸೆಯಲ್ಲಿ ಈ ನೂತನ ನಿಯಮವನ್ನು ಜಾರಿಗೆ ತರಲಾಗಿದೆ.
ವಾಹನ ಸವಾರರು FASTag ಕುರಿತು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ:
ವಾಹನ ಸವಾರರು ಪ್ರಯಾಣವನ್ನು ಬೆಳೆಸುವ ಮುನ್ನ ನಿಮ್ಮ FASTag ವಾಲೆಟ್‌ನಲ್ಲಿ ಸಾಕಷ್ಟು ಮೊತ್ತದ ಬ್ಯಾಲೆನ್ಸ್ ಇದಿಯಾ ಎನ್ನುವುದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ.
ಸಾರಿಗೆ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ನಿಮ್ಮ FASTag ನೈಜ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು.
ಇದನ್ನೂ ಓದಿ: Uchitha Holige Tarabeti-ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ತರಬೇತಿ!
FASTag Details-ಫಾಸ್ಟ್ಯಾಗ್/FASTag ಕುರಿತು ಇನ್ನಷ್ಟು ಉಪಯುಕ್ತ ಮಾಹಿತಿ ಹೀಗಿದೆ:
ದೇಶಾದ್ಯಂತ ಸಂಚರಿಸುವ ಎಲ್ಲಾ ವಾಹನಗಳು ಫಾಸ್ಟ್ಯಾಗ್ ಅನ್ನು ಬಳಕೆ ಮಾಡಬಹುದಾಗಿದ್ದು, ಇದರಿಂದ ಟೋಲ್ ಗಳಲ್ಲಿ ಹಣ ಪಾವತಿಸುವುದು ಅತ್ಯಂತ ಸರಳ ಮತ್ತು ಸುಲಭವಾಗಿರುತ್ತದೆ.
ರಾಜ್ಯದ ಬಹುತೇಕ ಭಾಗಳಲ್ಲಿ ಫಾಸ್ಟ್ಯಾಗ್ ನ ಅನಿವಾರ್ಯತೆ ಈಗಾಗಲೇ ಇದ್ದು ಬಹುತೇಕ ರಸ್ತೆಗಳಲ್ಲಿ ಫಾಸ್ಟ್ಯಾಗ್ ಪದ್ಧತಿ ಜಾರಿಯಲ್ಲಿದೆ ಫಾಸ್ಟ್ಯಾಗ್ ನ ರೀಚಾರ್ಜ್ ನಿಯಮಗಳು ಫಾಸ್ಟ್ಯಾಗ್ ಅನ್ನು ನಿಯಮಿತವಾಗಿ ರೀಚಾರ್ಜ್ ಮಾಡಬೇಕು. ಖಾತೆಯಲ್ಲಿ ಕನಿಷ್ಟ 100 ರೂ ನಷ್ಟು ಬ್ಯಾಲೆನ್ಸ್ ಅನ್ನು ಹೊಂದಿರಬೇಕು.
ಜನರು ಮೊಬೈಲ್ ಆ್ಯಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಫಾಸ್ಟ್ಯಾಗ್ ಅನ್ನು ರೀಚಾರ್ಜ್ ಮಾಡಿಕೊಳ್ಳಬೇಕು.