ಹೌದು ರೈತ ಬಾಂಧವರೇ ಕೇಳಿದ ತಕ್ಷಣ ಇಷ್ಟು ಕಡಿಮೆ ವೆಚ್ಚದಲ್ಲಿ ಎಂದ ತಕ್ಷಣ ನಂಬಲು ಅಸಾಧ್ಯ ಅನಿಸಿದರು ಇದು ವಾಸ್ಥವದಲ್ಲಿ ಸತ್ಯವಾಗಿಸಿದು ಕೃಷಿ ವಿಶ್ವವಿದ್ಯಾಲಯಯ, ದಾರವಾಡದ ಸ್ನೇಹ ತಂಡದ ಕೃಷಿ ಪದವೀಧರ ವಿದ್ಯಾರ್ಥಿಗಳು.
ಈ ವರ್ಷ ಕೃಷಿ ಮೇಳದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಈ ತಂಡದಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಗೊಬ್ಬರ ಹಾಕುವ ಸಾಧನವನ್ನು ಹೇಗೆ ತಯಾರಿಸಿಕೊಳ್ಳಬವುದು ಎಂದು ತಿಳಿಸಿಕೊಳ್ಳುಲು ವಿದ್ಯಾರ್ಥಿಗಳು ಈ ಸಾಧನವನ್ನು ತಾವೇ ಸಿದ್ದಪಡಿಸಿ ಮೇಳಕ್ಕೆ ಬಂದ ರೈತರಿಗೆ ಇದರ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ರೈತರು ಸಾಮಾನ್ಯವಾಗಿ ಬೆಳೆಗಳಿಗೆ ಮೇಲು ಗೊಬ್ಬರವನ್ನು ಕೋಡುವಾಗ ಒಂದು ಚೀಲದಲ್ಲಿ ಅಥವಾ ಬಕೆಟ್ ನಲ್ಲಿ ಗೊಬ್ಬರವನ್ನು ಹಾಕಿಕೊಂಡು ಬಳಿಕ ಜಮೀನಿನಲ್ಲಿ ಕೈಯಿಂದ ಚಲ್ಲುತಾ ಹೋಗುತ್ತಾರೆ ಈ ಸಾಂಪ್ರದಾಯಕ ಪದ್ದತಿಯು ಹೆಚ್ಚು ಶ್ರಮ ಮತ್ತು ಕೆಲವು ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ತಾಂತ್ರಿಕ ಸಮಸ್ಯೆಯನ್ನು ಸಲ್ಪ ಮಟ್ಟಿಗೆ ಸರಿಪಡಿಸುವ ಮಾರ್ಗ ಈ ನೂತನ ಗೊಬ್ಬರ ಹಾಕುವ ಸಾಧನದಲ್ಲಿ ಸಾಧ್ಯ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯ, ದಾರವಾಡದ ಸ್ನೇಹ ತಂಡದ ಕೃಷಿ ವಿದ್ಯಾರ್ಥಿಗಳು.
ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.
fertilizer feeder-ಗೊಬ್ಬರ ಹಾಕುವ ಸಾಧನವನ್ನು ಹೇಗಿದೆ ತಯಾರಿಸಲಾಗಿದೆ?
ಈ ಸಾಧನ ತಯಾರಿಸಲು ರೈತರ ಬಳಿಕ ಈಗಾಗಲೇ ಹಾಳಾಗಿರುವ ಹಳೆಯ ಔಷದಿ ಪಂಪ್/ನ್ಯಾಪ್ ಸ್ಯಾಕ್ ಸ್ಪ್ರೇಯರ್ ಅನ್ನು ತೆಗೆದುಕೊಂಡು ನಂತರ ಇದನ್ನು 2 ಪೋರ್ಟಬಲ್ ಪೈಪ್ ಮತ್ತು 3-3.5 ಅಡಿಯ ಒಂದು ಇಂಚು ಉದ್ದದ ಎರಡು PVC ಪೈಪ್ ಅನ್ನು ಬಳಕೆ ಮಾಡಿಕೊಂಡು ಈ ಸಾಧನವನ್ನು ತಯಾರಿಸಲಾಗಿದೆ.
ಇದನ್ನೂ ಓದಿ: New ration shop- ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬವುದು?
ಗೊಬ್ಬರ ಹಾಕುವ ಸಾಧನದ ಬಳಕೆ ವಿಧಾನ ಹೇಗೆ?
ಈ ಸಾಧನದಲ್ಲಿ ರೈತರು ಒಂದು ಬಾರಿಗೆ 20 ಕೆಜಿವರೆಗೆ ಗೊಬ್ಬರವನ್ನು ಹಾಕಿಕೊಂಡು ಜಮೀನಿನ ಎಲ್ಲಾ ಭಾಗಕ್ಕೆ ಒಂದೇ ಸಮನಾಗಿ ಗೊಬ್ಬರವನ್ನು ಹಾಕಬವುದು ಮೊದಲು ಔಷದಿ ಪಂಪ್ ಟ್ಯಾಂಕಿನ ಒಳಗೆ ಗೊಬ್ಬರವನ್ನು ತುಂಬಿಸಿ ಔಷದಿ ಪಂಪ್ ಅನ್ನು ಹೇಗೆ ಹೆಗಲಿಗೆ ಹಾಕಿಕೊಳ್ಳುತೇವೆಯೋ ಅದೇ ರೀತಿ ಈ ಸಾಧನವನ್ನು ಹೆಗಲಿಗೆ ಹಾಕಿಕೊಂಡು PVC ಪೈಪ್ ನ ಎರಡು ಬದಿಯಲ್ಲಿ ರಂದ್ರದ ಮೇಲೆ ಬೆರಳನ್ನು ಇಟ್ಟುಕೊಂಡು ನಮಗೆ ಗೊಬ್ಬರ ಹಾಕುವ ಸಮಯದಲ್ಲಿ ಆ ಬೆರಳುಗಳನ್ನು ತೆಗೆದುಕೊಂಡು ಜಮೀನಿನಲ್ಲಿ ಸಾಗುತ್ತ ಹೋದರೆ ಆಯ್ತು ಅಷ್ಟೇ.
fertilizer feeder benefits-ಈ ಸಾಧನ ಬಳಕೆ ಪ್ರಯೋಜನಗಳೇನು?
ರೈತರು ಸಾಂಪ್ರದಾಯಕ ಪದ್ದತಿಯನ್ನು ಬಳಕೆ ಮಾಡುವುದರ ಬದಲಿಗೆ ಈ ಸಾಧನವನ್ನು ಬಳಕೆ ಮಾಡಿ ಗೊಬ್ಬರ ಹಾಕುವುದರಿಂದ ಮೊದಲನೆಯದಾಗಿ ಬೆಳೆ ಸುಳಿಯ ಬಾಗಕ್ಕೆ ಗೊಬ್ಬರ ಬಿಳುವುದು ತಪ್ಪುತ್ತದೆ.
ಜಮೀನಿನ ಎಲ್ಲಾ ಭಾಗಕ್ಕೂ ಸರಿ-ಸಮಾನಾಗಿ ಗೊಬ್ಬರ ಹಾಕಿದಂತಾಗುತ್ತದೆ ಸ್ವಂಟ ನೋವು ಇರುವ ವ್ಯಕ್ತಿಗಳು ಬಾಗಿ ಗೊಬ್ಬರ ಹಾಕಲು ಸಮಸ್ಯೆಯಿದಲ್ಲಿ ಅಂತಹ ರೈತರಿಗೆ ಈ ಸಾಧನ ನೆರವಾಗುತ್ತದೆ.
ಗೊಬ್ಬರ ಜಮೀನಿನಲ್ಲಿ ಅನವಶ್ಯಕವಾಗಿ ಬೇರೆ ಜಾಗದಲ್ಲಿ ಬಿದ್ದು ಪೋಲಾಗುವುದನ್ನು ತಪ್ಪಿಸಬವುದಾಗಿದೆ.
ಇದನ್ನೂ ಓದಿ: Sprinkler set Subsidy-ಕೃಷಿ ಇಲಾಖೆಯಿಂದ ಶೇ 90 ರಷ್ಟು ಸಹಾಯಧನದಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
ಗೊಬ್ಬರ ಹಾಕುವ ಸಾಧನದ ವಿಡಿಯೋ: fertilizer feeder video
ಏನಿದು ಸ್ನೇಹ ತಂಡ?
ಕೃಷಿ ವಿಶ್ವವಿದ್ಯಾಲಯ,ದಾರವಾಡದ ವಿದ್ಯಾರ್ಥಿಗಳೇ ಹಲವು ವರ್ಷಗಳಿಂಡ ರಚಿಸಿಕೊಂಡಿರುವ ಕೃಷಿ ವಿದ್ಯಾರ್ಥಿಗಳ ತಂಡವಾಗಿದ್ದು ಈ ತಂಡದ ಮೂಲಕ ಪ್ರತಿ ವರ್ಷ ಪ್ರಗತಿಪರ ರೈತರ ತಾಕಿಗೆ ಕ್ಷೇತ್ರ ಅದ್ಯಯನ ಪ್ರವಾಸ ಕೈಗೊಂಡು ಪ್ರತಿ ಭಾರೀ ನಡೆಯುವ ಕೃಷಿ ಮೇಳದಲ್ಲಿ ರೈತರಿಗೆ ಕಡಿಮೆ ಖರ್ಚಿನಲ್ಲಿ ಅಳವಡಿಸಿಕೊಳ್ಳಬವುದಾದ ತಾಂತ್ರಿಕತೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡುತ್ತಿದ್ದಾರೆ. ಈ ರೀತಿಯ ಪ್ರಯತ್ನಗಳು ಇನ್ನು ಮುಂದಿನ ದಿನಗಳನ್ನು ಹೆಚ್ಚಾಗಲಿ ಎನ್ನುವುದು ನಮ್ಮ ತಂಡದ ಆಶಯ.
ಇನ್ನು ಹೆಚ್ಚಿನ ಮಾಹಿತಿಗಾಗಿ ಸ್ನೇಹ ತಂಡದ ವೆಬ್ಸೈಟ್ ಲಿಂಕ್: click here