ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು ಇನ್ನು ಎರಡು ವಾರಗಳ ಬಳಿಕ SSLC ಪರೀಕ್ಷೆಯು ಸಹ ಪ್ರಾರಂಭವಾಗಲಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾರಿಗೆ ಸಂಸ್ಥೆಯ ಬಸ್ ನಲ್ಲಿ(Free Bus for Students) ಪ್ರಯಾಣ ಬೆಳೆಸಲು ಉಚಿತ ವ್ಯವಸ್ಥೆಯನ್ನು ರಾಜ್ಯ ಸರಕಾರ ಕಲ್ಪಿಸಿದೆ.
ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಮನೆಯಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಕರ್ನಾಟಕ ಸರ್ಕಾರವು ಉಚಿತ ಬಸ್ ಸೇವೆ ಕಲ್ಪಿಸಿದೆ.
ಇದರ ಕುರಿತು, ಉಚಿತ ಬಸ್ ಸೇವೆ ಸೌಲಭ್ಯ ಪಡೆಯುವುದು ಹೇಗೆ? ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಈ ಅವಕಾಶ ಇರಲಿದೆ ಹಾಗೂ ವಿದ್ಯಾರ್ಥಿಗಳು ಯಾವ ಯಾವ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂಬ ಅಧಿಕೃತ ಮಾಹಿತಿಯು ಇಲ್ಲಿದೆ.
ಇದನ್ನೂ ಓದಿ: Land Rights Cases-ಕೃಷಿ ಜಮೀನಿನ ಪ್ರಕರಣಗಳಲ್ಲಿ ಪೊಲೀಸರು ಈ ನಿಯಮ ಪಾಲಿಸುವುದು ಕಡ್ಡಾಯ!
Free Bus Timing-ಉಚಿತ ಬಸ್ ಸೇವೆ ಇರುವ ಅವಧಿ:
ಕರ್ನಾಟಕ ಸರ್ಕಾರದ ಸಾರಿಗೆ ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣವು ಕೇವಲ ಪರೀಕ್ಷಾ ದಿನಗಳಂದು ಲಭ್ಯವಿರಲಿದೆ. SSLC ಹಾಗೂ PUC ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕಗಳು ಹೀಗಿವೆ.
SSLC ಪರೀಕ್ಷಾ ಅವಧಿ – ವಾರ್ಷಿಕ ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 04ರ ವರೆಗೆ ನಡೆಯಲಿದೆ.
2nd PUC ಪರೀಕ್ಷಾ ಅವಧಿ – ವಾರ್ಷಿಕ ಪರೀಕ್ಷೆಗಳು ಮಾರ್ಚ್ 1 ರಿಂದ ಮಾರ್ಚ್ 20ರ ವರೆಗೆ ನಡೆಯಲಿದೆ.
ಇದನ್ನೂ ಓದಿ: Karnataka Dam Water Level-ಈ ಬಾರಿ ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ! ಡ್ಯಾಂ ವಾರು ನೀರಿನ ಸಂಗ್ರಹ ಎಷ್ಟಿದೆ?

For Free Bus Documents-ಉಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಈ ದಾಖಲಾತಿಗಳು ಕಡ್ಡಾಯ :
ನಿಗದಿತ ಪರೀಕ್ಷಾ ದಿನಾಂಕದಂದು ವಿದ್ಯಾರ್ಥಿಗಳು ತಮ್ಮ ಮನೆಯಿಂದ, ನಿಯೋಜಿತ ಪರೀಕ್ಷೆ ಕೇಂದ್ರಗಳಿಗೆ ಹೋಗಲು ಕೇವಲ ನಿಮ್ಮ ಪರೀಕ್ಷೆ ಪ್ರವೇಶ ಪತ್ರವನ್ನು ತೋರಿಸಿದರೆ ಸಾಕು.
Free Bus Details-ಯಾವ ಯಾವ ಬಸ್ ಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ?
ನಿಗದಿತ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ಹೋಗಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ.
ಇದನ್ನೂ ಓದಿ: SIM Card-ಸಿಮ್ ಕಾರ್ಡ ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!
SSLC and PUC Time Table-2025-ಅಂತಿಮ ಪರೀಕ್ಷೆಯ ವೇಳಾಪಟ್ಟಿ:
ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಮೊಬೈಲ್ ನಲ್ಲೇ 10 ನೇ ತರಗತಿ ಮತ್ತು 12 ನೇ ತರಗತಿ ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
SSLC Time Table- 10 ನೇ ತರಗತಿ ಅಂತಿಮ ಪರೀಕ್ಷೆಯ ವೇಳಾಪಟ್ಟಿ- Download Now
2nd PuC Time Table- 12 ನೇ ತರಗತಿ ಅಂತಿಮ ಪರೀಕ್ಷೆಯ ವೇಳಾಪಟ್ಟಿ- Download Now