free fodder seeds kit: ಪಶುಸಂಗೋಪನೆ ಇಲಾಖೆಯಿಂದ ಉಚಿತ ಮೇವಿನ ಕಿಟ್ ವಿತರಣೆ!

free fodder seeds kits: ರಾಜ್ಯದಲ್ಲಿ ಈ ವರ್ಷ ಸರಿ ಸುಮಾರು ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಪಶುಸಂಗೋಪನೆ ಇಲಾಖೆಯಿಂದ ರೈತರಿಗೆ ಉಚಿತ ಮೇವಿನ ಕಿಟ್ ವಿತರಣೆ ಮಾಡಲಾಗುತ್ತಿದೆ.

free fodder seeds kit: ಪಶುಸಂಗೋಪನೆ ಇಲಾಖೆಯಿಂದ ಉಚಿತ ಮೇವಿನ ಕಿಟ್ ವಿತರಣೆ!
free fodder seeds

ರಾಜ್ಯದಲ್ಲಿ ಈ ವರ್ಷ ಸರಿ ಸುಮಾರು ಎಲ್ಲಾ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಪಶುಸಂಗೋಪನೆ ಇಲಾಖೆಯಿಂದ ರೈತರಿಗೆ ಉಚಿತ ಮೇವಿನ ಕಿಟ್ ವಿತರಣೆ ಮಾಡಲಾಗುತ್ತಿದೆ.

ಪ್ರಸ್ತುತ ಜಿಲ್ಲಾವಾರು ಬೇಡಿಕೆಯನ್ವಯ ಬರಪೀಡಿತ ತಾಲ್ಲೂಕುಗಳ ಪಟ್ಟಿವಾರು ಮೊದಲ ಹಂತದಲ್ಲಿ ಮೇವಿನ ಕಿಟ್ ಗಳನ್ನು ಒದಗಿಸಲಾಗಿದ್ದು ಪಶುಸಂಗೋಪನೆ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಅರ್ಜಿಯನ್ನು ಸಂಗ್ರಹಿಸಿ ಜಾನುವಾರುಗಳನ್ನು ಹೊಂದಿರುವ ರೈತರನ್ನು ಗುರುತಿಸಿ ಅಂತವರಿಗೆ ಉಚಿತ ಮೇವಿನ ಕಿಟ್ ಅನ್ನು ವಿತರಣೆ ಮಾಡಲಾಗುತ್ತಿದೆ.

free fodder seeds kit- ಮೇವಿನ ಕಿಟ್ ನಲ್ಲಿ ಯಾವೆಲ್ಲ ಬೀಜ ಒದಗಿಸಲಾಗುತ್ತಿದೆ?

ರಾಜ್ಯ ಸರಕಾರದಿಂದ ಬರ ಪೀಡಿತ ತಾಲ್ಲೂಕುಗಳಲ್ಲಿ ಮೊದಲ ಹಂತದಲ್ಲಿ ವಿತರಣೆ ಮಾಡುತ್ತಿರುವ ಉಚಿತ ಮೇವಿನ ಬೀಜದ ಕಿಟ್ ನಲ್ಲಿ ಮೇವಿನ ಜೋಳ (ಆಫ್ರಿಕನ್ ಟಾಲ್), ಬಹು ವಾರ್ಷಿಕ ಜೋಳ, ಮೇವಿನ ಅಲಸಂದೆ ಹಾಗೂ ಸಜ್ಜೆ ಬೀಜವನ್ನು ರೈತರು ಪಡೆಯಬವುದು. ಇಲಾಖೆಯಿಂದ ಈಗ ನೀಡುತಿರುವ ಮೇವಿನ ಕಿಟ್ ತೂಕವು ಐದು ಕೆಜಿಯಷ್ಟು ಇದ್ದು ಈ ಮೇವಿನ ಬೀಜವನ್ನು ಬಿತ್ತನೆ ಮಾಡಿ ಬೆಳೆಯಲು ನೀರಿನ ಸೌಲಭ್ಯವಿವ ರೈತರಿಗೆ ಮಾತ್ರ ಕಿಟ್ ಅನ್ನು ನೀಡಲಾಗುತ್ತಿದೆ. 

ಇದನ್ನೂ ಓದಿ: vishwakarma yojana-2023: ಕೈಗಾರಿಕ ಮತ್ತು ವಾಣಿಜ್ಯ ಇಲಾಖೆಯಿಂದ ಶೇ 5 ಬಡ್ಡಿದರದಲ್ಲಿ ಸಾಲ ಮತ್ತು ಕೌಶಲ್ಯ ತರಬೇತಿ ಪಡೆಯಲು ಅರ್ಜಿ ಆಹ್ವಾನ!

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ರಾಜ್ಯದ ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಪ್ರದೇಶಗಳಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಉಚಿತ ಮೇವಿನ ಬೀಜದ ಕಿಟ್ ವಿತರಣೆ ಆರಂಭವಾಗಿದ್ದು ಹೆಚ್ಚು ಜಾನುವಾರುಗಳನ್ನು ಹೊಂದಿರುವ ರೈತರು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಕೂಡಲೇ ಅರ್ಜಿ ಸಲ್ಲಿಸಿದರೆ ಕಿಟ್ ವಿತರಣೆ ಸಮಯದಲ್ಲಿ ನಿಮಗೆ ಮೇವಿನ ಬೀಜಗಳು ದೊರೆಯುತ್ತವೆ.

ಇದನ್ನೂ ಓದಿ: Micro credit loan scheme- ಪ್ರೇರಣಾ ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!

ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ?

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
FID ನಂಬರ್.
ಮೊಬೈಲ್ ಸಂಖ್ಯೆ.
ನೀರಾವರಿ ಸೌಲಭ್ಯ ಇರುವುದು ಕಡ್ಡಾಯ.

fodder seeds-ಮೇವಿನ ಬೀಜದ ಕಿಟ್ ವಿತರಣೆಗೆ 20 ಕೋಟಿ ಅನುದಾನ ಬಿಡುಗಡೆ:

ಸರಕಾರದಿಂದ ಬರಪೀಡಿತ ತಾಲ್ಲೂಕುಗಳಿಗೆ ಮೊದಲ ಹಂತದಲ್ಲಿ ಮೇವಿನ ಬೀಜದ ಕಿಟ್ ವಿತರಣೆ ಮಾಡಲು 20 ಕೋಟಿ ಅನುದಾನವನ್ನು ಪಶುಸಂಗೋಪನೆ ಇಲಾಖೆಗೆ ಬಿಡುಗಡೆ ಮಾಡಲಾಗಿದ್ದು, ಈ ಅನುದಾನದಲ್ಲಿ ಇಲಾಖೆಯು ಮೇವಿನ ಬೀಜ ಖರೀದಿಸಿ ಜಾನುವಾರು ಸಂಖ್ಯೆಗಳಿಗೆ ಅನುಗುಣವಾಗಿ ಕಿಟ್‌ಗಳನ್ನು ಹಂಚಿಕೆ ಮಾಡುತ್ತಿದೆ. ಹಂತ ಹಂತವಾಗಿ ಕಿಟ್‌ ಬರಲಿದ್ದು ಮೊದಲ ಹಂತದಲ್ಲಿ ನಮಗೆ 2287 ಕಿಟ್‌ಗಳು ಬಂದಿವೆ' ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

fodder seed-ಬಹುವಾರ್ಷಿಕ ಮೇವಿನ ಬೀಜದ ವಿಶೇಷತೆಗಳು:

ಮಳೆ ಆಧಾರಿತ ಪ್ರದೇಶಗಳಲ್ಲಿ, ಮಳೆ ಕುಂಠಿತಗೊಂಡ ಸಂದರ್ಭದಲ್ಲಿ ಮೇವಿನ ಅಭಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಬರ ಪರಿಸ್ಥಿತಿಯಲ್ಲಿ ಈ ಕ್ಷೇತ್ರಗಳಲ್ಲಿ ಮೇವಿನ ತೀವ್ರ ಅಭಾವ ದಿಂದ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಗೆ ಹಿನ್ನಡೆ ಉಂಟಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಬಹುವಾರ್ಷಿಕ ಮೇವಿನ ಜೋಳದ ಕೃಷಿಯಿಂದ ಈ ಪರಿಸ್ಥಿತಿಯನ್ನು ಬಹಳ ಮಟ್ಟಿಗೆ ವಿಭಾಗಿಸಬಹುದು.  ಹೆಸರೆ ಸೂಚಿಸುವಂತೆ ಇದು ಒಂದು ಬಹುವಾರ್ಷಿಕ ಮೇವಿನ ಬೆಳೆಯಾಗಿದ್ದು ಒಮ್ಮೆ ಬಿತ್ತಿದ ಬೆಳೆ ಕನಿಷ್ಠ ಮೂರು ವರ್ಷಗಳ ವರೆಗೆ ಮೇವನ್ನು ಪೂರೈಸಲಾಗುತ್ತದೆ. ಈ ಮೇವನ್ನು ಹಸು, ಎಮ್ಮೆ, ಆಡು, ಕುರಿ, ಮೋಲ ಮುಂತಾದ ಪ್ರಾಣಿ ಗಳಿಗೆ ನಿತ್ಯ ಆಹಾರವಾಗಿ ಕೊಡಬಹುದು.

ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

ಬಿತ್ತನೆ ಕಾಲಮಾನ: 

ಮಳೆ ಆಶ್ರಿತ ಜಮೀನಿನಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ ಬಿತ್ತಬಹುದು .

ನೀರಾವರಿ ವ್ಯವಸ್ಥೆ ಇದ್ದಲ್ಲಿ ವರ್ಷವಿಡೀ ಬಿತ್ತನೆ ಮಾಡಬಹುದು 

ಬೀಜ: 5kg/ಎಕರೆ

ಸಾಲುಗಳ ಅಂತರ : 45 cm 

ಕಟಾವು: ಬಿತ್ತಿದ 75 ದಿನಗಳ ನಂತರ ಮೊದಲ  ನಂತರದಲ್ಲಿ 40 ದಿವಸಗಳಿಗೊಮ್ಮೆ ಕಟಾವು ಮಾಡಬೆಕು.

ಇಳುವರಿ: ಎಕರೆಗೆ ವಾರ್ಷಿಕ 80-100 ಟನ್ ಹಸಿರು ಮೇವನ್ನು ನೀರಿಕ್ಷಿಸಬಹುದು.

ಪೋಷಕಾಂಶಗಳು:

ಕಚ್ಚಾ ಸಸಾರಜನಕ    -  8%

ಈಥರ್ ಹೀರುವಿಕೆ     - 2.6%

ಕಚ್ಚಾ ನಾರು              - 24%

ಬೂದಿ                      - 10.8%

ಸಾರಜನಕ ಮುಕ್ತ ಹೀರುವಿಕೆ (Protein) - 54%

ಒಣ ಪದಾರ್ಥ            -25.5%