free mobile repair training-2024: ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಉಚಿತವಾಗಿ ಮೊಬೈಲ್ ರಿಪೇರಿ ತರಬೇತಿ(free mobile repair training) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. free mobile repair training-2024, mobile repair business, mobile repair training, rudset training center, mobile repair, free business training, mobile

free mobile repair training-2024: ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
free mobile repair training-2024

ಉಚಿತವಾಗಿ ಮೊಬೈಲ್ ರಿಪೇರಿ ತರಬೇತಿ(free mobile repair training) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ವಿವಿಧ ಬಗ್ಗೆಯ ಉಚಿತ ಸ್ವ-ಉದ್ಯೋಗ ತರಬೇತಿಗಳನ್ನು(mobile repair business) ನಡೆಸುವ ರುಡ್ಸೆಟ್(rudset) ಸಂಸ್ಥೆಯಿಂದ 30 ದಿನಗಳ ಉಚಿತ ತರಬೇತಿಯನ್ನು ನೀಡಲು ಆಸಕ್ತಿಯಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಧ್ಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆದಾರರ ಸಂಖ್ಯೆಯು ತೀರ್ವ ಗತಿಯಲ್ಲಿ ಹೆಚ್ಚುತ್ತಿದ್ದು ಮೊಬೈಲ್ ರಿಪೇರಿ ಬ್ಯುಸಿಸೆಸ್ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ ಅವಕಾಶವಿರುವ ಕಾರಣ ನಿರುದ್ಯೋಗಿ ಯುವಕರು ಈ ತರಬೇತಿಯನ್ನು ಪಡೆದುಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ: Zilla Panchayat Recruitment 2024: ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗಳ ನೇಮಕಾತಿ!

Mobile repair- ಈ ತರಬೇತಿಯ ವಿಶೇಷತೆಗಳು:

1) 30 ದಿನಗಳ ಮೊಬೈಲ್ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ ಯಾವುದೇ ಬಗ್ಗೆಯ ಶುಲ್ಕ ಪಾವತಿಸುವ ಅವಶ್ಯಕತೆಯಿರುವುದಿಲ್ಲ.

2) ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯು ಸಹ ಲಭ್ಯವಿರುತ್ತದೆ.

3) ಮೊಬೈಲ್ ರಿಪೇರಿ ತರಬೇತಿಯನ್ನು ಪಡೆದ ಬಳಿಕ ಅಭ್ಯರ್ಥಿಗಳು ಸ್ವತಃ ಉದ್ದಿಮೆಯನ್ನು ಆರಂಭಿಸಲು ಈ ಸಂಸ್ಥೆವತಿಯಿಂದ ಬ್ಯಾಂಕ್ ಮೂಲಕ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.

4) ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ದಿ ಸಚಿವಾಲಯದಿಂದ ಸರ್ಟಿಪಿಕೇಟ್(Certificate) ನೀಡಲಾಗುತ್ತದೆ.

Mobile repair training date-ತರಬೇತಿ ನಡೆಯುವ ಅವಧಿ:

ತರಬೇತಿ ಪ್ರಾರಂಬ ದಿನಾಂಕ: 11 ಸೆಪ್ಟಂಬರ್ 2024

ತರಬೇತಿ ಪೂರ್ಣಗೊಳ್ಳುವ ದಿನಾಂಕ: 11 ಅಕ್ಟೋಬರ್ 2024

ಇದನ್ನೂ ಓದಿ:  Annabhagya rice-2024: ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇವೆಯೇ? ಅದೇನು ಎಂದು ತಿಳಿಯಬೇಕೇ? ಇಲ್ಲಿದೆ ಸಂಪೂರ್ಣ ವಿವರ.

How can apply for rudset mobile repair training- ತರಬೇತಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಉಚಿತ ಮೊಬೈಲ್ ರಿಪೇರಿ ತರಬೇತಿಯನ್ನು ಪಡೆಯಲು ಆಸಕ್ತಿಯಿರುವ ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.

ಅರ್ಜಿದಾರರಿಗೆ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.

ಅರ್ಜಿದಾರರು ಗ್ರಾಮೀಣ ಭಾಗದವಾಗಿದ್ದು ಜೊತೆಗೆ BPL ರೇಷನ್ ಕಾರ್ಡ ಅಥವಾ ನರೇಗಾ ಯೋಜನೆಯಡಿ ನೀಡುವ ಜಾಬ್ ಕಾರ್ಡ ಅನ್ನು ಹೊಂದಿರಬೇಕು.

Documents for free mobile repair training-  ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಅಧಾರ್ ಕಾರ್ಡ(Aadhar card) ಜೇರಾಕ್ಸ್
2) ಬ್ಯಾಂಕ್ ಪಾಸ್ ಬುಕ್(Bank passbook) ಪ್ರತಿ
3) ರೇಶನ್ ಕಾರ್ಡ(Ration card)
4) ಮೊಬೈಲ್ ಸಂಖ್ಯೆ(Mobile number)

ಇದನ್ನೂ ಓದಿ: property registration-ಇನ್ನು ಮುಂದೆ ಆಸ್ತಿ ನೋಂದಣಿ ಭಾರೀ ಸುಲಭ!

Training center address- ತರಬೇತಿ ನಡೆಯುವ ಸ್ಥಳ:

ಉಚಿತ ಮೊಬೈಲ್ ರಿಪೇರಿ ತರಬೇತಿಯು ರುಡ್ಸೆಟ್ ತರಬೇತಿ ಸಂಸ್ಥೆ ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುತ್ತದೆ.

Apply method-ಅರ್ಜಿ ಸಲ್ಲಿಸುವ ವಿಧಾನ:

ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಲು ಈ 9740982585, 9380162042 ಮೊಬೈಲ್ ಸಂಖ್ಯೆಗೆ ಕರೆ ಮಾಡಿ.