HomeGovt SchemesFree Scooty Yojana Fact Check-ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ! ಇಲ್ಲಿದೆ ಅಧಿಕೃತ ಮಾಹಿತಿ!

Free Scooty Yojana Fact Check-ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ! ಇಲ್ಲಿದೆ ಅಧಿಕೃತ ಮಾಹಿತಿ!

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಉಚಿತ ಸ್ಕೂಟಿ ಯೋಜನೆಯಡಿ ಸಬ್ಸಿಡಿಯಲ್ಲಿ ಹೆಣ್ಣು ಮಕ್ಕಳಿಗೆ ಸ್ಕೂಟಿಯನ್ನು(Free Scooty Yojana Fact Check) ವಿತರಣೆ ಮಾಡಲಾಗುತ್ತದೆ ಎನ್ನುವ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು ಈ ಕುರಿತು ಕೇಂದ್ರದ ವಾರ್ತಾ ಇಲಾಖೆಯಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ಪ್ರಕಟಣೆ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಅಸಲಿ ಸುದ್ದಿಗಿಂತಲು ಬಹು ಬೇಗ ನಕಲಿ ಸುದ್ದಿ ದೇಶದಾದ್ಯಂತ ಶೀಘ್ರದಲ್ಲೇ ಹರಡಿಬಿಡುತ್ತವೇ ಸಾರ್ವಜನಿಕರಿಗೆ ನಿಖರ ಮಾಹಿತಿ ತಿಳಿಸುವ ಉದ್ದೇಶದಿಂದ ಈ ಲೇಖನದಲ್ಲಿ ನಕಲಿ ಸುದ್ದಿ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Sprinkler Set Subsidy-ಕೃಷಿ ಇಲಾಖೆಯಿಂದ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

ಕೆಲವು ದಿನಗಳಿಂದ ಹಿಂದಿ ಭಾಷೆಯ ಕೆಲವು ಡಿಜಿಟಲ್ ವೆಬ್ಸೈಟ್/ಯುಟೂಬ್ ಮಾಧ್ಯಮದಲ್ಲಿ ಕೇಂದ್ರ ಸರಕಾರದಿಂದ ಹೆಣ್ಣು ಮಕ್ಕಳಿಗೆ ಸಬ್ಸಿಡಿಯಲ್ಲಿ(Free Scooty Yojana) ಅತೀ ಕಡಿಮೆ ಬೆಲೆಯಲ್ಲಿ ಸ್ಕೂಟಿಯನ್ನು ನೀಡಲು ಯೋಜನೆಯನ್ನು ಜಾರಿಗೆ ತರಲಾಗಿದ್ದು ಅರ್ಜಿ ಸಲ್ಲಿಸಲು ಈ ವಿಧಾನವನ್ನು ಅನುಸರಿಸಿ ಎಂದು ಲಿಂಕ್ ಗಳನ್ನು ಪ್ರಕಟಿಸಿರುತ್ತಾರ‍ೆ ಇದರ ಬಗ್ಗೆ ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ.

Free Scooty Yojana Fact Check- ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ: ಕೇಂದ್ರದ ವಾರ್ತಾ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ!

ಅನೇಕ ಡಿಜಿಟಲ್ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರದ ವಾರ್ತಾ ಇಲಾಖೆಯಿಂದ ಅಧಿಕೃತ ಮಾಹಿತಿಯನ್ನು ತನ್ನ ಟ್ವಿಟರ್(X) ಖಾತೆಯಲ್ಲಿ ಹಂಚಿಕೊಂಡಿದ್ದು ಈ ರೀತಿಯ ಯಾವುದೇ ಯೋಜನೆಯನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿರುವುದಿಲ್ಲ ಎಂದು ತಿಳಿಸಿದ್ದು ಅರ್ಜಿ ಸಲ್ಲಿಸಲು ಯಾವುದೇ ಬಗ್ಗೆಯ ಲಿಂಕ್ ಮೇಲೆ ಕ್ಲಿಕ್ ಮಾಡದೇ ಇರಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿರುತ್ತದೆ.

ಇದನ್ನೂ ಓದಿ: Ration card-ಪಡಿತರ ಚೀಟಿಗೆ ಹೆಂಡತಿ ಮತ್ತು ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ!

PIB Fact Check-ವಾರ್ತಾ ಇಲಾಖೆಯ ಅಧಿಕೃತ ಪ್ರಕಟಣೆ:

Free Scooty Yojana Fact Check (2)

ಟ್ವಿಟರ್ ಅಕೌಂಟ್ ಲಿಂಕ್- Click here

ವೈರಲ್ ಸುದ್ದಿ ವಿವರ:

ಸಾರ್ವಜನಿಕರು ಗೂಗಲ್ ಸರ್ಚ್ ನಲ್ಲಿ free scooty yojana ಎಂದು ಸರ್ಚ್ ಮಾಡಿದರೆ ಅನೇಕ ವೆಬ್ಸೈಟ್ ರಚನಾಕರರು ಈ ಯೋಜನೆಯ ಕುರಿತು ಸುಳ್ಳು ಸುದ್ದಿಯನ್ನು ಪ್ರಕಟಣೆ ಮಾಡಿರುತ್ತಾರೆ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಸ್ಪಷ್ಟನೆಯನ್ನು ಕೇಂದ್ರ ಸರಕಾರದ ವಾರ್ತಾ ಇಲಾಖೆಯಿಂದ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Gold Rate India-ಇಲ್ಲಿದೆ ಇಂದಿನ ಚಿನ್ನದ ದರ! ಇಂದು ವಿವಿಧ ನಗರಗಳಲ್ಲಿ ಮತ್ತು ವಿದೇಶದಲ್ಲಿ ಚಿನ್ನದ ದರ ಎಷ್ಟಿದೆ?

ಸುಳ್ಳು ಸುದ್ದಿಯನ್ನು ಏಕೆ ಹರಿಬಿಡುತ್ತಾರೆ?

ಪ್ರತಿ ವರ್ಷವು ಸಹ ಅನೇಕ ನಕಲಿ/ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ ಇದನ್ನು ಸೃಷ್ಟಿ ಮಾಡಿ ಹರಿಬಿಡುವುದರ ಹಿಂದಿನ ಕಾರಣ ಏನು? ಎಂದು ತಿಳಿಯೋಣ ಸೈಬರ್ ತಜ್ಞ, ಸೈಬರ್ ಅಪರಾಧ ಮತ್ತು ಸೈಬರ್ ಕಾನೂನಿನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಅನುಜ್ ಅಗರ್ವಾಲ್ ಈ ಕುರಿತು ಹೀಗೆ ವಿವರಿಸಿದ್ದಾರೆ ವೆಬ್ಸೈಟ್ ನಲ್ಲಿ ಕ್ಲಿಕ್‌ಬೈಟ್ ಲಿಂಕ್ ರಚಿಸಿ ಬಳಕೆದಾರರು ಈ ಮೂಲಕ ವೀವ್ಸ್ ಪಡೆದು ಇದರಿಂದ ಅವರು ಹಣವನ್ನು ಗಳಿಸಬಹುದು ಎಂದಿದ್ದಾರೆ.

Free Scooty Yojana Fact Check

ಇದನ್ನೂ ಓದಿ: Agriculture loan limit-ರೈತರಿಗೆ ಸಿಹಿ ಸುದ್ದಿ ಅಡಮಾನ ರಹಿತ ಸಾಲದ ಮಿತಿ ₹2 ಲಕ್ಷಕ್ಕೆ ಏರಿಕೆ! ಎಲ್ಲಿ ಅರ್ಜಿ ಸಲ್ಲಿಸಬೇಕು?

ಯಾವುದೇ ಬಗ್ಗೆಯ ಸುದ್ದಿ ಕುರಿತು ನಿಖರ ಮಾಹಿತಿ ತಿಳಿಯಲು ಈ ವಿಧಾನ ಅನುಸರಿಸಿ:

ಮೊಬೈಲ್ ಬಳಕೆದಾರರು ತಮ್ಮ ವಾಟ್ಸಾಪ್ ಮೂಲಕ ಅಥವಾ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸರಕಾರಿ ಯೋಜನೆಗಳ ಕುರಿತು ಮಾಹಿತಿ ತಿಳಿದಾಗ ಇದರ ಕುರಿತು ನಿಜಾಂಶವನ್ನು ಖಚಿತಪಡಿಸಿಕೊಳ್ಳಲು ಒಮ್ಮೆ ಟ್ವಿಟರ್/ಎಕ್ಸ್ ಖಾತೆಯನ್ನು ತೆರೆದು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವಾರ್ತಾ ಇಲಾಖೆಯ ಖಾತೆಯನ್ನು ಒಪನ್ ಮಾಡಿ ಇಲ್ಲಿ ಕಾಣಿಸುವ ವಾಟ್ಸಾಪ್ ನಂಬರ್ ಗೆ ಸಂದೇಶವನ್ನು ಕಳುಹಿಸಿ ಈ ಯೋಜನೆಯ ಕುರಿತು ಅಧಿಕೃತ ಮಾಹಿತಿಯನ್ನು ಪಡೆಯಬಹುದು.

ಸರಕಾರಿ ಯೋಜನೆಯ ಮಾಹಿತಿ ಕುರಿತು ನಿಜ ಮಾಹಿತಿ ತಿಳಿಯಲು ವಾಟ್ಸಾಪ್ ಸಹಾಯವಾಣಿ: 8799711259(Whats app number)

ಅಧಿಕೃತ ಟ್ವಿಟರ್/ಎಕ್ಸ್ ಅಕೌಂಟ್- Click here

LATEST ARTICLES

Related Articles

Most Popular