ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದಿಂದ ಉಚಿತವಾಗಿ ಒಂದು ವರ್ಷದ ಕೌಶಲ್ಯ ತರಬೇತಿಗೆ(Free Skill training) ಅರ್ಜಿ ಆಹ್ವಾನಿಸಲಾಗಿದೆ.
ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ, ನವದೆಹಲಿಯ ಅಧೀನ ಕಛೇರಿಯಾದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಆವರಣ, ಕೌಶಲ್ಯ ಭವನ ಹಿಂಭಾಗ, ಡೈರಿ ಸರ್ಕಲ್, ಬೆಂಗಳೂರು-560 029 ಕಛೇರಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಬೆಂಗಳೂರಿನಲ್ಲಿರುವ ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳ ಮೂಲಕ ಗುಂಪು ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ “ಒಂದು ವರ್ಷದ ಅವಧಿಯ ವಿಶೇಷ ಕೌಶಲ್ಯ ತರಬೇತಿ”(Free Skill training-2024) ಗಳ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: LIC Assistant Recruitment- LIC ಯಿಂದ 7000 ಹುದ್ದೆಗಳ ಬೃಹತ್ ನೇಮಕಾತಿ ಶೀಘ್ರದಲ್ಲಿ!ಮಾಸಿಕ ವೇತನ ₹78,230!
Free Skill training application-ಒಟ್ಟು 06 ತರಬೇತಿಗಳಿದ್ದು ಅವುಗಳ ವಿವರ ಹೀಗಿದೆ:
1) ವಿಶೇಷ ತರಬೇತಿ ಯೋಜನೆ.
2) ಓ ಲೇವಲ್ ಕಂಪ್ಯೂಟರ್ ತರಬೇತಿ.
3) ಓಲೇವಲ್ ಕಂಪ್ಯೂಟರ್ ಸಿಎಚ್ ಎಮ್.
4) ಆಫೀಸ್ ಅಟೋಮೋಷನ್, ಅಕೌಂಟಿಂಗ್ ಮತ್ತು ಪಬ್ಲಿಷಿಂಗ್ ಅಸಿಸ್ಟೆಂಟ್ .
5) ಕಂಪ್ಯೂಟರ್ ಅಪ್ಲಿಕೇಷನ್ ಮತ್ತು ಬ್ಯೂಸಿನೆಸ್ ಅಕೌಂಟಿಂಗ್ ಅಸೋಸೀಯಟ್.
6) ಸೈಬರ್ ಸೆಕ್ಯೂರ್ಡ ವೆಬ್ ಡೆವಲೆಪಮೆಂಟ್ ಅಸೊಸಿಯೇಟ್.
ಈ ತರಬೇತಿಗಳಿಗೆ ಪ್ರವೇಶ ಪಡೆಯಲು ಪಿಯುಸಿ/12 ವಿದ್ಯಾರ್ಹತೆ ಇದ್ದು, ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಹಾಜರಾತಿ ನಿಯಮಗಳಿಗೊಳಪಟ್ಟು ತರಬೇತಿ ಭತ್ಯೆ ನೀಡಲಾಗುತ್ತದೆ. ಅರ್ಜಿಯನ್ನು ಕಛೇರಿಯ ಕಚೇರಿಯ ಸಮಯದಲ್ಲಿ ಸಂಪರ್ಕಿಸಿ ಅರ್ಜಿಯನ್ನು ಹಾಗೂ ಸೇವಾ ಷರತ್ತುಗಳನ್ನು ಪಡೆಯಬಹುದು. ಅಗತ್ಯ ದಾಖಲೆಗಳ ಜೊತೆಗೆ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ:10 ಜೂನ್ 2024 ರ ಸಂಜೆ 5-00 ಒಳಗಾಗಿ ಕಛೇರಿಗೆ ನೋಂದಾಯಿತ ಪೋಸ್ಟ/ಖುದ್ದಾಗಿ ಬಂದು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಹಾಗೂ ಮಾಹಿತಿಗಾಗಿ ಅರ್ಜಿ ಪಡೆಯಲು ಉಪ-ಪ್ರಾದೇಶಿಕ ಉದ್ಯೋಗಾಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೊಬೈಲ್ ಸಂಖ್ಯೆಗಳು: 80-29756192, 09916188914/7027923924
ಇನ್ನು ಹೆಚ್ಚಿನ ಮಾಹಿತಿ ಪಡೆಯಲು:
ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯ, ನವದೆಹಲಿಯ ವೆಬ್ಸೈಟ್: Click here
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಧಿಕೃತ ವೆಬ್ಸೈಟ್: Click here