ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

ರೈತರು ನಿಮ್ಮ ಗ್ರಾಮದ ಸಂಪೂರ್ಣ ಮಾಹಿತಿಯುಳ್ಳ ನಕ್ಷೆಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಮೊಬೈಲನಲ್ಲೇ ಡೌನ್ಲೋಡ್ ಮಾಡಬವುದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವವರಿಸಲಾಗಿದೆ. ನೀವು ತಿಳಿಯಿರಿ ನಿಮ್ಮ ಅಪ್ತರಿಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಏಕೆಂದರೆ ಜಮೀನಿನ ಅಳತೆ ಮಾಡುವ ಸಂದರ್ಭದಲ್ಲಿ ಈ ನಕ್ಷೆ ರೈತರಿಗೆ ತುಂಬ ಸಹಕಾರಿಯಾಗಿದೆ.

ರೈತರು ತಮ್ಮ ಗ್ರಾಮದಲ್ಲಿ ತಮ್ಮ ಜಮೀನು ಯಾವ ದಿಕ್ಕಿನಲ್ಲಿ ಬರುತ್ತದೆ ಮತ್ತು ಅಕ್ಕ ಪಕ್ಕದ ಜಮೀನಿನ ಸರ್ವೆ ನಂಬರ್ ಯಾವುವು ಮತ್ತು ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಎಲ್ಲಿ ಬರುತ್ತದೆ ಹೀಗೆ ಅನೇಕ ಮಾಹಿತಿಯುಳ್ಳ ನಕ್ಷೆ ಇದಾಗಿದೆ.

ಗ್ರಾಮದ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

ರಾಜ್ಯ ಸರಕಾರದ ಮಾಹಿತಿ ಕಣಜ ವೆಬ್ಸೈಟ್ ನ ಈ https://mahitikanaja.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು  “ಸಲ್ಲಿಸು” ಮೇಲೆ ಕ್ಲಿಕ್ ಮಾಡಬೇಕು ಆಗ ಕೆಳಗೆ “ನಕ್ಷೆ” ಎನ್ನುವ ಆಯ್ಕೆ ಗೋಚರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಗ್ರಾಮದ ನಕ್ಷೆಯು ಡೌನ್ಲೋಡ್ ಆಗುತ್ತದೆ.

ಅನೇಕ ಮಾಹಿತಿಯುಳ್ಳ ನಕ್ಷೆ ಇದಾಗಿದೆ:

ಈ ನಕ್ಷೆಯು ಹಲವು ಮಾಹಿತಿಯನ್ನು ಒಂದಿದ್ದು ರೈತರಿಗೆ ತಮ್ಮ ಜಮೀನು ಮತ್ತು ಅಕ್ಕ-ಪಕ್ಕದ ಜಮೀನಿನ ಕುರಿತು ಹಾಗೂ ಗ್ರಾಮದ ಭೌಗೋಳಿಕ ಮಾಹಿತಿಯನ್ನು ತಿಳಿಯಬವುದಾಗಿದೆ.

ಗ್ರಾಮದ ಗಡಿ ರೇಖೆ, ಜಮೀನಿನ ಸರ್ವೆ ನಂಬರ್ ಗಡಿ, ಕಾಲು ದಾರಿ, ಬಂಡಿ ದಾರಿ, ಹಳ್ಳ, ಸರ್ವೆ ನಂಬರುಗಳು,  ಬೆಟ್ಟ, ಬಾಂದುಗಳು, ಬೇಲಿ, ಬಾವಿ, ಮೆಟ್ಟಿಲು ಬಾವಿ, ದೇವಸ್ಥಾನ, ದೊಡ್ಡ ಮರಗಳು, ತೆಂಗಿನ ಮರಗಳು ಈ ಎಲ್ಲಾ ಮಾಹಿತಿಯನ್ನು ವಿವಿಧ ಬಣ್ಣ ಮತ್ತು ಆಕಾರದಿಂದ ಗುರುತಿಸುವ ನಕ್ಷೆ ಇದಾಗಿದೆ.

ಇದನ್ನೂ ಓದಿ: ಪಿ.ಎಮ್-ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಲು 30 ಜೂನ್ ಕೊನೆಯ ದಿನ.

ಡೌನ್ಲೋಡ್ ಮಾಡಿದ ಗ್ರಾಮದ ನಕ್ಷೆಯ ವಿವಿಧ ಸೂಚಕಗಳು:

ಗ್ರಾಮದ ಗಡಿ ರೇಖೆ: ಗುಲಾಬಿ ಬಣ್ಣ ರೇಖೆಯಿಂದ ಗುರುತಿಸಲಾಗಿದೆ.
ಜಮೀನಿನ ಸರ್ವೆ ನಂಬರ್ ಗಡಿ: ಕಪ್ಪು ಬಣ್ಣದ ರೇಖೆಯಿಂದ ಗುರುತಿಸಲಾಗಿದೆ.
ಕಾಲು ದಾರಿ: ಹಳದಿ ಬಣ್ಣದ ಚುಕ್ಕೆ ಚುಕ್ಕೆ ಗೆರೆಗಳಿಂದ ಸೂಚಿಸಲಾಗಿದೆ.
ಬಂಡಿದಾರಿ: ಗುಲಾಬಿ ಬಣ್ಣದ ಚುಕ್ಕೆ ಚುಕ್ಕೆ ಗೆರೆಗಳಿಂದ ಸೂಚಿಸಲಾಗಿದೆ.
ಸರ್ವೆ ನಂಬರುಗಳು: ಕಪ್ಪು ಬಣ್ಣದ ಕನ್ನಡ ಅಂಕಿಗಳಿಂದ ನಮೂದಿಸಲಾಗಿದೆ.
ಬೆಟ್ಟ : ವೃತ್ತಾಕಾರದ ಹಸಿರು ಬಣ್ಣ.
ಬಾವಿ: ಗುಲಾಬಿ  ಬಣ್ಣದ ವೃತ್ತಾಕಾರ.
ದೇವಸ್ಥಾನ: ಹಳದಿ ಬಣ್ಣದ ಮನೆ ಆಕಾರ.