ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಗ್ಯಾಸ್ ಸಿಲಿಂಡರ್ ಅನ್ನು ಅಡುಗೆ ತಯಾರಿಕೆಗೆ ಬಳಕೆ(Gas Safety Tips) ಮಾಡುತ್ತಾರೆ ಅದ್ದರಿಂದ ಇಂದು ಈ ಅಂಕಣದಲ್ಲಿ ಗ್ಯಾಸ್ ಸಿಲಿಂಡರ್ ಸುರಕ್ಷತೆಯಾಗಿ ಬಳಕೆ ಮಾಡುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಸಿಲಿಂಡರ್ ಬಳಕೆ ಮಾಡುವುದರ ಕುರಿತು ಎಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರು ಕಡಿಮೆಯೇ ಅಡುಗೆ ತಯಾರಿ(How to Detect a Gas Leak) ಮಾಡುವಾಗ ಅಡುಗೆ ಸಿದ್ದಪಡಿಸಿದ ಬಳಿಕ ಇದರ ಬಳಕೆ ಕುರಿತು ಒಂದಿಷ್ಟು ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
ಬಹುತೇಕ ಗ್ರಾಮೀಣ ಮತ್ತು ನಗರ ಭಾಗದಲ್ಲಿ ವಾಸ ಮಾಡುವ ಎಲ್ಲರ ಮನೆಯಲ್ಲಿಯು ಸಹ ಸಿಲಿಂಡರ್ ಅನ್ನು ನಾವು ಕಾಣಬವುದು ಇವುಗಳನ್ನು ಸರಿಯಾಗಿ ಬಳಸದಿದ್ದರೆ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಗ್ಯಾಸ್ ಸಿಲಿಂಡರ್ ಗಳನ್ನು ಸುರಕ್ಷಿತವಾಗಿ ಬಳಸುವ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ!
Gas Leak Safety Tips- ಗ್ಯಾಸ್ ಸಿಲಿಂಡರ್ ಸುರಕ್ಷತೆ ಕುರಿತು ಪ್ರಮುಖವಾಗಿ ಗಮನಿಸಬೇಕಾಗದ ಅಂಶಗಳು:
Gas Cylinder-ಸಿಲಿಂಡರ್ ಆಯ್ಕೆ:
ಪ್ರತಿ ತಿಂಗಳು ಮನೆಗೆ ಬೇಕಾಗುವ ಸಿಲಿಂಡರ್ ಅನ್ನು ಅಧಿಕೃತ ವಿತರಕರಿಂದ ಮಾತ್ರ ಖರೀದಿಸಬೇಕು.
ಮನೆ ಬಾಗಿಲಿಗೆ ಏಜೆನ್ಸಿ ಅವರು ಸಿಲಿಂಡರ್ ಅನ್ನು ತೆಗೆದುಕೊಂಡು ಬಂದ ಸಮಯದಲ್ಲಿ ಒಮ್ಮೆ ಸಿಲಿಂಡರ್‌ನಲ್ಲಿ ಯಾವುದೇ ಹಾನಿ ಅಗಿದಿಯೇ ಇಲ್ಲವೇ ಎಂದು ಖಚಿತಪಡಿಸಿಕೊಂಡ ಬಳಿಕವೇ ಮನೆ ಒಳಗೆ ಸಿಲಿಂಡರ್ ಅನ್ನು ತೆಗೆದುಕೊಂಡು ಹೋಗಬೇಕು.
ಸಿಲಿಂಡರ್‌ನಲ್ಲಿರುವ ನಮೂದಿಸಿರುವ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಹಳೆಯ ಮತ್ತು ಹಾನಿಗೊಳಗಾದ ಸಿಲಿಂಡರ್‌ಗಳನ್ನು ಬಳಸಬೇಡಿ.
ಇದನ್ನೂ ಓದಿ: Uchitha Holige Yantra-ಗ್ರಾಮೀಣ ಕೈಗಾರಿಕೆ ಇಲಾಖೆಯಿಂದ ಉಚಿತ ಹೊಲಿಗೆ ಯಂತ್ರ!
Gas Cylinder Leakage Detector- ಮನೆಯಲ್ಲಿ ಸಿಲಿಂಡರ್ ಇಡುವ ಸ್ಥಾನದ ಕುರಿತು ಈ ಕೆಳಗಿನ ಕ್ರಮ ಅನುಸರಿಸಿ:
ಮನೆಯಲ್ಲಿ ಸಿಲಿಂಡರ್‌ನ್ನು ಸಮತಟ್ಟಾದ ಮತ್ತು ಚೆನ್ನಾಗಿ ಗಾಳಿ ಬೀಸುವ ಜಾಗದಲ್ಲಿ ಇಡಬೇಕು ಅಥವಾ ಮನೆಯ ಹೊರಗಡೆಯಿಂದ ಪೈಪ್ ಲೈನ್ ಮಾಡಿಸಿ ಸಿಲಿಂಡರ್ ಅನ್ನು ಮನೆಯ ಹೊರಗೆ ಇರಿಸಿದರೆ ಬಹಳ ಉತ್ತಮ ಆಯ್ಕೆಯಾಗಿರುತ್ತದೆ.
ಮನೆಯಲ್ಲಿ ಸಿಲಿಂಡರ್ ಇಡುವ ಜಾಗಕ್ಕೆ ಸಿಲಿಂಡರ್ ಗೆ ನೇರವಾಗಿ ಸೂರ್ಯನ ಬೆಳಕು ಅಥವಾ ಬಿಸಿ ವಸ್ತು ತಾಕುವಂತಿರಬಾರದು.
ಭರ್ತಿಯಾದ ಸಿಲಿಂಡರ್‌ನ್ನು ಯಾವುದೇ ಕಾರಣಕ್ಕು ಅಡ್ಡ ಮಲಗಿಸಿ ಇಡಬಾರದು.
ಇದನ್ನೂ ಓದಿ: Solar Subsidy-ಮನೆ ಮೇಲೆ ಸೋಲಾರ್ ಅಳವಡಿಕೆಗೆ ₹78,000 ರೂ ಸಬ್ಸಿಡಿ ಪಡೆಯಲು ಅರ್ಜಿ!
ಸಿಲಿಂಡರ್ ರೆಗ್ಯುಲೇಟರ್ ಬಳಕೆ ಕುರಿತು ಅನುಸರಿಸಬೇಕಾದ ಕ್ರಮಗಳು:
ಸಿಲಿಂಡರ್ ಗೆ ಹಾಕುವ ರೆಗ್ಯುಲೇಟರ್ ಅನ್ನು ಅಧಿಕೃತ ಮಾರಾಟಗಾರಿಂದಲೇ ಖರೀದಿ ಮಾಡಿರಿ ಸ್ಥಳೀಯ ಮಾರುಕಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಖರೀದಿ ಮಾಡಬೇಕು.
ರೆಗ್ಯುಲೇಟರ್ ಅನ್ನು ಸರಿಯಾಗಿ ಜೋಡಿಸಿ ಮತ್ತು ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆಂದು ಒಮ್ಮೆ ಖಚಿತಪಡಿಸಿಕೊಳ್ಳಿ.
ಹಾಳಾಗಿರುವ ಅಥವಾ ಹಾನಿಗೊಳಗಾದ ರೆಗ್ಯುಲೇಟರ್‌ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬೇಡಿ.
ಕಾಲ ಕಾಲಕ್ಕೆ ಹಳೆಯದಾದ ರೆಗ್ಯುಲೇಟರ್‌ನ್ನು ಪರಿಶೀಲಿಸಿ ಮತ್ತು ಅಗತ್ಯ ಅನಿಸಿದ್ದಲ್ಲಿ ಕೆಲವು ವರ್ಷ ಕಳೆದ ಬಳಿಕ ರೆಗ್ಯುಲೇಟರ್ ಅನ್ನು ಬದಲಾವಣೆ ಮಾಡಿಕೊಳ್ಳಿ.
ಪ್ರತಿ ದಿನ ಅಡುಗೆ ಮುಗಿದ ನಂತರ ಗ್ಯಾಸ್ ಸರಬರಾಜನ್ನು ನಿಲ್ಲಿಸಿ ಮತ್ತು ರೆಗ್ಯುಲೇಟರ್ ನಲ್ಲಿ ಗ್ಯಾಸ್ ಸರಬರಾಜನ್ನು ಸಂಪೂರ್ಣ ಸ್ಥಗಿತಗೊಳಿಸಿ.
ಇದನ್ನೂ ಓದಿ: Fertilizer Shop- ಬೀಜ ಮತ್ತು ಗೊಬ್ಬರ ಅಂಗಡಿ ಪರವಾನಗಿ ಪಡೆಯುವುದು ಹೇಗೆ? ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?
Gas leak Detector-ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯನ್ನು ಪರಿಶೀಲನೆ:
ನಿಮಗೆ ಮನೆಯಲ್ಲಿ ಗ್ಯಾಸ್ ಸೋರಿಕೆ ವಾಸನೆ ಬಂದರೆ ಕೂಡಲೇ ಸೋಪ್ ನೀರನ್ನು ಬಳಸಿ ಗ್ಯಾಸ್ ಸೋರಿಕೆ ಇದೆಯೇ ಎಂದು ಪರಿಶೀಲಿಸಿ.
ಒಂದೊಮ್ಮೆ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆ ಕಂಡುಬಂದರೆ ತಕ್ಷಣ ಗ್ಯಾಸ್ ಸರಬರಾಜನ್ನು ನಿಲ್ಲಿಸಿ ಮತ್ತು ಅಧಿಕೃತ ತಂತ್ರಜ್ಞರ ಸಹಾಯ ಪಡೆಯಿರಿ.
ಸಿಲಿಂಡರ್ ನಿಂದ ಗ್ಯಾಸ್ ಲಿಂಕ್/ಸೋರಿಕೆ ಅದ ಸಂದರ್ಭದಲ್ಲಿ ಬೆಂಕಿ ಅಥವಾ ವಿದ್ಯುತ್ ಸ್ವಿಚ್‌ಗಳನ್ನು ಯಾವುದೇ ಕಾರಣಕ್ಕೂ ಆನ್ ಮಾಡಬೇಡಿ.
ಒಂದೊಮ್ಮೆ ಗ್ಯಾಸ್ ಲಿಂಕ್ ಅಗಿ ಬೆಂಕಿ ಹತ್ತಿಕೊಂಡರೆ ಒಂದು ಗೋಣಿ ಚೀಲವನ್ನು ತೆಗೆದುಕೊಂಡು ನೀರಿನಲ್ಲಿ ಸಂಪೂರ್ಣವಾಗಿ ನೆನ್ನೆಸಿ ಸಿಲಿಂಡಗೆ ಮುಚ್ಚಲು ಪ್ರಯತ್ನಿಸಿ ಬೆಂಕಿ ನಂದಿಸಲು ಪ್ರಯತ್ನಿಸಿ. ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಅಗ್ನಿಶಾಮಕ ಇಲಾಖೆಯ ತುರ್ತು ಸಹಾಯವಾಣಿಗೆ ಕರೆ ಮಾಡಿ.