Google Pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 9.0 ಲಕ್ಷದವರೆಗೆ ಲೋನ್!

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಳಕೆದಾರರು ವೈಯಕ್ತಿಕ ಸಾಲ(Google Pay loan) ಪಡೆಯಲು ಅವಕಾಶವಿದ್ದು, ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ? ಇತರೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕರು ಲೋನ್ ಪಡೆಯಲು ಅನೇಕ ಬಾರಿ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡುತ್ತಾರೆ ಹಲವು ಸಮಯದಲ್ಲಿ ಲೋನ್(Google Pay personal loan) ಪಡೆಯಲು ಸಾಧ್ಯವಾಗುವುದಿಲ್ಲ, ಇಂತಹ ಸನ್ನಿವೇಶದಲ್ಲಿ ಸಾಲ ಪಡೆಯಲು ಅರ್ಹರಿರುವವರು ಕೆಲವು ಆನ್ಲೈನ್ ಮೊಬೈಲ್ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದು.

ಗೂಗಲ್ ಪೇ ಮೊಬೈಲ್ ಅಪ್ಲಿಕೇಶನ್(Google Pay loan application) ಮೂಲಕ ಬಳಕೆದಾರರು ರೂ 10,000 ದಿಂದ ರೂ 9 ಲಕ್ಷದವರೆಗೆ ಸಾಲವನ್ನು ಕಡಿಮೆ ಸಮಯದಲ್ಲಿ ತ್ವರಿತವಾಗಿ ಸಾಲವನ್ನು ಪಡೆಯಬಹುದು.

ಇದನ್ನೂ ಓದಿ: D.Pharm admission-2024: ಡಿ.ಫಾರ್ಮ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

Who can apply for Google Pay loan- ಯಾರೆಲ್ಲ ಗೂಗಲ್ ಪೇ ನಿಂದ ಲೋನ್ ಪಡೆಯಲು ಅರ್ಜಿ ಸಲ್ಲಿಸಬಹುದು:

ಗೂಗಲ್ ಪೇ ನಿಂದ ತ್ವರಿತವಾಗಿ ಸಾಲವನ್ನು ಪಡೆಯಲು ಕೆಲವು ನಿಯಮಗಳನ್ನು/ಷರತ್ತು ಗಳನ್ನು ಹಾಕಲಾಗಿದ್ದು ಈ ಅರ್ಹತೆಯನ್ನು ಹೊಂದಿರುವವರಿಗೆ ಮಾತ್ರ ಗೂಗಲ್ ಪೇನಿಂದ ಪರ್ಸನಲ್ ಲೋನ್ ಸಿಗುತ್ತದೆ ಎಂದು ಅಪ್ಲಿಕೇಶನ್ ನಲ್ಲಿ ತಿಳಿಸಲಾಗಿದೆ.

ಅರ್ಜಿದಾರರು ಗೂಗಲ್ ಪೇನಲ್ಲಿ ಯುಪಿಐ ಐಡಿಯನ್ನು ಹೊಂದಿರುವುದು ಕಡ್ಡಾಯವಾಗಿದೆ ಅಂದರೆ ತಮ್ಮ ಬ್ಯಾಂಕ್ ಖಾತೆಯನ್ನು ಗೂಗಲ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಲಿಂಕ್ ಮಾಡಿಕೊಳ್ಳಬೇಕು.

ಅರ್ಜಿದಾರರ ವ್ಯಕ್ತಿಯ ವಯಸ್ಸು 21 ವರ್ಷದಿಂದ ಗರಿಷ್ಠ 57 ವರ್ಷದ ಒಳಗಿರಬೇಕು.

ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ಅರ್ಜಿದಾರರ ಸಿಬಿಲ್ ಸ್ಕೋರ್ ಕನಿಷ್ಠ 600 ಇರಬೇಕು.

ಇದನ್ನೂ ಓದಿ: Colgate Scholarship 2024 – ಕೋಲ್ ಗೇಟ್ ಕಂಪನಿಯಿಂದ ವಿದ್ಯಾರ್ಥಿಗಳಿಗೆ 75 ಸಾವಿರ ವಿದ್ಯಾರ್ಥಿ ವೇತನ!

Required Document for Google pay loan-ಗೂಗಲ್ ಪೇ ಪರ್ಸನಲ್ ಲೋನ್ ಗೆ ಅಗತ್ಯವಿರುವ ದಾಖಲೆಗಳು:

1) ಪಿನ್ ಕೋಡ್ ನಂಬರ್

2) ಪ್ಯಾನ್ ಕಾರ್ಡ್ ನಂಬರ್

3) ಅರ್ಜಿದಾರರ ಉದ್ಯೋಗ ವಿವರ

ಇದನ್ನೂ ಓದಿ: Gruhalakshmi Status-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌!

How to apply for Google pay loan-ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಲೋನ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಬಳಕೆದಾರರು ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಪ್ರವೇಶ ಮಾಡಿ ಲೋನ್ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

Step-1: ಸಾರ್ವಜನಿಕರು ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Google Pay

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಮುಖಪುಟದಲ್ಲಿ ಕೊನೆಯಲ್ಲಿ ಕಾಣುವ “Get a loan” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Google Pay loan

ಇದನ್ನೂ ಓದಿ: Horticulture Diploma- ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Step-3: ಇದಾದ ಬಳಿಕ Apply Now ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆದು PIN Code ಕಾಲಂ ನಲ್ಲಿ ಪಿನ್ ಕೋಡ್ ಹಾಕಿ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಹೆಸರು ಪಾನ್ ಕಾರ್ಡ ಸಂಖ್ಯೆ ನಮೂದಿಸಿ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Google Pay loan application

Step-4: ಬಳಿಕ ನಿಮ್ಮ ಆದಾಯ ವಿವರ ಮತ್ತು ಕೊನೆಯಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಷರತ್ತುಗಳಿಗೆ “Accept” ಎಂದು ಕ್ಲಿಕ್ ಮಾಡಿದರೆ ನೀವು ಲೋನ್ ಪಡೆಯಲು ಅರ್ಹರಿದಲ್ಲಿ ನಿಮಗೆ ಲೋನ್ ದೊರೆಯುತ್ತದೆ ಇಲ್ಲವಾದಲ್ಲಿ “Loan Not Approved” ಎಂದು ಗೋಚರಿಸುತ್ತದೆ.

Google Pay loan

ಗಮನಿಸಿ: ಅರ್ಹತೆ ಅನುಗುಣವಾಗಿ ಈ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದಾಗಿದು ಎಲ್ಲಾ ಬಳಕೆದಾರಿಗೂ ಈ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಸಾಧ್ಯವಿಲ್ಲ.