Gruha arogya- ಗೃಹ ಆರೋಗ್ಯ ಮನೆ ಬಾಗಿಲಿಗೆ ಬರಲಿದೆ ಆರೋಗ್ಯ ತಪಾಸಣೆ! ಏನಿದು ನೂತನ ಯೋಜನೆ!

October 26, 2024 | Siddesh
Gruha arogya- ಗೃಹ ಆರೋಗ್ಯ ಮನೆ ಬಾಗಿಲಿಗೆ ಬರಲಿದೆ ಆರೋಗ್ಯ ತಪಾಸಣೆ! ಏನಿದು ನೂತನ ಯೋಜನೆ!
Share Now:

ರಾಜ್ಯ ಸರಕಾರದಿಂದ ಮತ್ತೊಂದು ಜನ ಸ್ನೇಹಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆರೋಗ್ಯ ಇಲಾಖೆಯಡಿ ಗೃಹ ಆರೋಗ್ಯ(Gruha arogya) ಯೋಜನೆಗೆ ಅಧಿಕೃತ ಅನುಮೋದನೆಯನ್ನು ನೀಡಿ ಜಾರಿಗೆ ತರಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಈ ಯೋಜನೆಗೆ ಅಧಿಕೃತವಾಗಿ ಕೋಲಾರ ಜಿಲ್ಲೆಯಲ್ಲಿ ಚಾಲನೆಯನ್ನು ನೀಡಲಿದ್ದು ಜನವರಿ ತಿಂಗಳಿಂದ ರಾಜ್ಯಾದ್ಯಂತ ಈ ಯೋಜನೆ(Gruha arogya scheme) ಗ್ರಾಮೀಣ ಭಾಗದಲ್ಲಿ ಅನುಷ್ಥಾನಕ್ಕೆ ಬರಲಿದೆ.

ಏನಿದು "ಗೃಹ ಆರೋಗ್ಯ" ಯೋಜನೆ? ಯಾವೆಲ್ಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಈ ಯೋಜನೆಯ ಮೂಲಕ ನೀಡಲಾಗುತ್ತದೆ? ಇತರೆ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!

Gruha arogya Yojana- ನಾಗರಿಕರ ಮನೆ ಬಾಗಿಲಿಗೆ ಬರಲಿದೆ 'ಗೃಹ ಆರೋಗ್ಯ':

'ಗೃಹ ಆರೋಗ್ಯ ಯೋಜನೆಯಡಿ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್‌ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯಲಿವೆ ಎಂದು ವಾರ್ತಾ ಇಲಾಖೆಯ ಎಕ್ಸ್ ಖಾತೆಯಲ್ಲಿ ಈ ಯೋಜನೆಯ ಕುರಿತು ಪ್ರಕಟಣೆ ಹೊರಡಿಸಲಾಗಿದೆ.

Gruha arogya yojane mahiti-'ಗೃಹ ಆರೋಗ್ಯ" ಯೋಜನೆ ವಿವರ ಹೀಗಿದೆ:

1) ರಕ್ತದೊತ್ತಡ ಸಮಸ್ಯೆ, ಮಧುಮೇಹ, ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ದೆಯಲ್ಲಿ ಉಸಿರುಗಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ.

2) ಆರೋಗ್ಯ ಕಾರ್ಯಕರ್ತರ ಒಂದು ತಂಡ ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಭೇಟಿ ಕಡ್ಡಾಯ.

ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

Gruha arogya yojana

3) ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧ ವಿತರಣೆ, ಕೆಲವರಿಗೆ ಜೀವನ ಶೈಲಿ ಮಾರ್ಪಾಡಿಗೆ ಸಲಹೆ.

4) ಆರೈಕೆಯಲ್ಲಿರುವ ರೋಗಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಔಷಧೋಪಚಾರ. ಉಚಿತವಾಗಿ ಮಾತ್ರೆಗಳ ವಿತರಣೆ.

5) 4 ರಿಂದ 6 ತಿಂಗಳಲ್ಲಿ ಸ್ಟೀನಿಂಗ್ ಕಾರ್ಯ ಪೂರ್ಣ. ನಂತರ ಹೆಚ್ಚಿನ ಆರೈಕೆಗಾಗಿ ಒಂದು ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳ ಆಯೋಜನೆ.

ಇದನ್ನೂ ಓದಿ: Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!

6) ಎರಡನೇ ಹಂತದಲ್ಲಿ ಫಾಲೋಅಪ್ ಮತ್ತು ನಿಯಂತ್ರಣಕ್ಕೆ ಗಮನ. ಅರೈಕೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸಿಕ ಆರೋಗ್ಯ ಶಿಬಿರಗಳ ಆಯೋಜನೆ.

7) ಅಕಾಲಿಕ ಮರಣಗಳನ್ನು ತಡೆಗಟ್ಟಲು, ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಪ್ರಯೋಜನ.

Arogya elake website-ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆ ವೆಬ್ಸೈಟ್ ಲಿಂಕ್: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: