ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ- ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ರಮ ಈ ಹಿಂದಿನ ಮಾರ್ಗಸೂಚಿಯಲ್ಲಿ ಮನೆಯ ಮಾಲೀಕ ಅಥವಾ ಬಾಡಿಗೆದಾರನ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು, ಆದರೆ ಈಗ ಕುಟುಂಬದ ಸದಸ್ಯರ ಹೆಸರಿನಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಈ ಹಿಂದೆ ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ನಿವಾಸಿ ವಿಧ ಆಯ್ಕೆಯಲ್ಲಿ “ಮಾಲೀಕ” ಮತ್ತು “ಬಾಡಿಗೆದಾರ” ಎಂದು ಎರಡು ಆಯ್ಕೆಗಳು ಮಾತ್ರ ಗೋಚರಿಸುತ್ತಿತ್ತು, ಅದರೆ ಈಗ “ಕುಟುಂಬ ಸದಸ್ಯ” ಎಂಬ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲಾಗಿದ್ದು , ಕರೆಂಟ್ ಬಿಲ್/ವಿದ್ಯುತಿ ಬಿಲ್ ತಾತ/ಅಜ್ಜಿ/ತಂದೆ/ತಾಯಿಯವರ ಹೆಸರಿನಲ್ಲಿ ಬರುತ್ತಿದ್ದು ಅವರು ಇಲ್ಲದಿದ್ದಲ್ಲಿ ಮನೆಯಲ್ಲಿ ವಾಸವಿರುವ ಕುಟುಂಬದ ಸದಸ್ಯರು ತಮ್ಮ ಆಧಾರ್ ಕಾರ್ಡ್ ವಿವರ ಹಾಕಿ ಅರ್ಜಿ ಸಲ್ಲಿಸಬವುದು.
ಸದ್ಯ ಅನೇಕ ಜನರ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ ಏಕೆಂದರೆ ಅರ್ಜಿ ಸಲ್ಲಿಸಲು ಅರ್ಹರಿರುವ ಬಹು ಪಾಲು ಜನರ ಹೆಸರಿಗೆ ವಿದ್ಯುತ್ ಬಿಲ್ ಬರುತ್ತಿರಲಿಲ್ಲ ವಿದ್ಯುತ್ ಬಿಲ್ ನಲ್ಲಿ ಹೆಸರು ಬದಲಾವಣೆಗೆ ಕಚೇರಿ ಅಲೆದಾಡುವ ಪರಿಸ್ಥಿತಿ ತಪ್ಪಿದಂತಾಗಿದೆ.
ಸೈಬರ್ ಕಳ್ಳರ ಎಚ್ಚರಿಕೆ :
ರಾಜ್ಯ ಸರಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರ ದಾಖಲಾತಿಗಳನ್ನು ಕದಿಯಲು ಸೈಬರ್ ಕಳ್ಳರು ಹಲವು ನಕಲಿ ಲಿಂಕ್ ಮತ್ತು ಅಪ್ಲಿಕೇಶನ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಗ್ರಾಹಕರು ಅರ್ಜಿಸಲ್ಲಿಸುವಾಗ ಅಧಿಕೃತ ಇ-ಗವರ್ನೆನ್ಸ್ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು ಅಧಿಕೃತ ಸೇವಾ ಸಿಂಧು ಪೋರ್ಟಲ್ ಲಿಂಕ್: https://sevasindhugs.karnataka.gov.in/
ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಹಾಕಬವುದು:
ಗ್ರಾಹಕರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.
ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ತಿಳಿಯಲು ಈ https://www.krushikamitra.com/how-to-apply-gruha-jyothi ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: 2023-24ನೇ ಸಾಲಿನ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಿಡುಗಡೆ! ರೈತರು ತಪ್ಪದೇ ಈ ಕೆಲಸ ಮಾಡಿ.