ರಾಜ್ಯ ಸರಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಯಡಿ ಒಂದಾದ ಗೃಹಜ್ಯೋತಿ(Gruha Jyothi) ಯೋಜನೆಯಡಿ ಅರ್ಹ ಫಲಾನುಭವಿಗಳು ತಮ್ಮ ಮನೆಯನ್ನು ಬದಲಾವಣೆಯನ್ನು ಮಾಡಿದ ಬಳಿಕ ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ(Gruha Jyothi Scheme) ಅರ್ಜಿ ಸಲ್ಲಿಸಿದ ಅರ್ಹ ನಾಗರಿಕರು ತಮ್ಮ ಗೃಹ ಬಳಕೆಗೆ ಉಪಯೋಗಿಸುವ ವಿದ್ಯುತ್ ಗೆ ಕೆಲವು ಷರತ್ತು ಗಳ ಅನ್ವಯ ಯಾವುದೇ ಬಿಲ್ ಅನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ಬಳಕೆ ಮಾಡಲು ಅವಕಾಶವಿರುತ್ತದೆ.
ಒಮ್ಮೆ ತಾವು ವಾಸವಿರುವ ಬಾಡಿಗೆ ಮನೆಯನ್ನು ಬದಲಾವಣೆ ಮಾಡಿಕೊಂಡ ಬಳಿಕ ಹೊಸ ಮನೆಗೆ ಬರುವ ವಿದ್ಯುತ್ ಬಿಲ್ ಗೆ(Free Current) ಯಾವುದೇ ಬಿಲ್ ಅನ್ನು ಪಾವತಿ ಮಾಡುವುದರಿಂದ ತಪ್ಪಿಸಿಕೊಳ್ಳಲು ಅಂದರೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕವನ್ನು ಪಡೆಯಲು ನಾಗರಿಕರು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವು ವಿಧಾನ ಹೇಗೆ ಎನ್ನುವ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: Labour Card Application-ಹೊಸದಾಗಿ ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
Gruha Jyothi Yojana-ಬಾಡಿಗೆ ಮನೆಯಲ್ಲಿ ವಾಸವಿರುವವರಿಗೂ ಅವಕಾಶ:
ಗೃಹಜ್ಯೋತಿ ಯೋಜನೆಯಡಿ ಪ್ರಯೋಜನವನ್ನು ಪಡೆದುಕೊಳ್ಳಲು ಸ್ವಂತ ಮನೆಯಲ್ಲಿ ವಾಸಿಸುವವರ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸವಿರುವವರಿಗೂ ಸಹ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಣಿಯನ್ನು ಮಾಡಿಕೊಂಡು ಉಚಿತ ವಿದ್ಯುತ್ ಬಳಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
Free Current In Karnataka-ಮನೆ ಬದಲಾವಣೆ ಮಾಡಿಕೊಂಡಾಗ ಯಾವ ಕ್ರಮ ಅನುಸರಿಸಬೇಕು?
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯುತ್ತಿರುವವರು ಮನೆಯನ್ನು ಬದಲಾವಣೆ ಮಾಡಿ ಹೊಸ ಮನೆಗೆ ವರ್ಗಾವಣೆ ಅದ ಬಳಿಕ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಹೊಸ ಮನೆ ವಿದ್ಯುತ್ ಬಿಲ್ ಗೆ ಪಡೆಯಲು ಮೊದಲಿಗೆ ತಮ್ಮ ಹಾಳೆಯ ಮನೆ ಆರ್ ಆರ್ ನಂಬರ್ ಅನ್ನು ಗೃಹಜ್ಯೋತಿ ಯೋಜನೆಯಿಂದ ಡಿ-ಲಿಂಕ್ ಮಾಡಿಸಿಕೊಳ್ಳಬೇಕು ನಂತರ ಹೊಸ ಮನೆ ಆರ್ ಆರ್ ನಂಬರ್ ಅನ್ನು ನಮೂಸಿದಿ ನೂತನ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ: Bilijola MSP-ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ಯಾವೆಲ್ಲ ಜಿಲ್ಲೆಯಲ್ಲಿ ಅವಕಾಶ!
Gruha Jyothi D-link Method-ಗೃಹಜ್ಯೋತಿ ಯೋಜನೆಯಿಂದ ಡಿ-ಲಿಂಕ್ ಗೆ ಅರ್ಜಿ ಸಲ್ಲಿಸುವ ವಿಧಾನ:
ನಾಗರಿಕರು ಹೊಸ ಮನೆಯ ವಿದ್ಯುತ್ ಬಳಕೆಗೆ ಉಚಿತ ಯೋಜನೆಯ ಪ್ರಯೋಜನವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಮೊದಲಿಗೆ ಪ್ರಸ್ತುತ ಹಳೆ ಮನೆಯ ಮೀಟರ್ ನಂಬರ್ ಗೆ ಲಿಂಕ್ ಅಗಿರುವ ನಿಮ್ಮ ಗೃಹಜ್ಯೋತಿ ಅರ್ಜಿಯನ್ನು ಡಿ-ಲಿಂಕ್ ಮಾಡಬೇಕು ನಂತರ ಹೊಸ ಮನೆಯ ಮೀಟರ್ ನಂಬರ್ ಗೆ ಹೊಸ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು.
Step-1: ಮೊದಲಿಗೆ Gruha Jyothi D-link Application ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಗೃಹಜ್ಯೋತಿ ಜಾಲತಾಣವನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: PM-Kisan 2025: ಕೇಂದ್ರದಿಂದ ಪಿ ಎಂ ಕಿಸಾನ್ 19 ನೇ ಕಂತಿ ಹಣ ವರ್ಗಾವಣೆ! ನಿಮಗೆ ಬಂತಾ ಚೆಕ್ ಮಾಡಿ!

Step-2: ಇದಾದ ಬಳಿಕ ಇಲ್ಲಿ ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ “Get Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಇಲ್ಲಿ ಅರ್ಜಿದಾರರ ವೈಯಕ್ತಿಕ ವಿವರ ಮತ್ತು ಮನೆಯ ಮೀಟರ್ ನಂಬರ್ ಇತ್ಯಾದಿ ವಿವರ ಗೋಚರಿಸುತ್ತದೆ ಇಲ್ಲಿ D-link ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಳೆಯ ಮನೆಯ ಮೀಟರ್ ನಂಬರ್ ಗೆ ಗೃಹಜ್ಯೋತಿ ಅರ್ಜಿಯನ್ನು ಡಿ-ಲಿಂಕ್ ಮಾಡಬೇಕು.
ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!
Gruha Jyothi Application-ಹೊಸ ಅರ್ಜಿಯನ್ನು ಸಲ್ಲಿಸುವ ವಿಧಾನ:
ಒಮ್ಮೆ ಮೇಲಿನ ವಿಧಾನವನ್ನು ಅನುಸರಿಸಿ ಹಳೆಯ ಅರ್ಜಿಯನ್ನು ಡಿ-ಲಿಂಕ್ ಮಾಡಿದ ಬಳಿಕ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಹೊಸ ಮನೆಯ ಮೀಟರ್ ನಂಬರ್ ಅನ್ನು ಹಾಕಿ ನೂತನ ಅರ್ಜಿಯನ್ನು ಸಲ್ಲಿಸಬೇಕು.
Step-1: ಮೊದಲಿಗೆ Gruha Jyothi New Application ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಗೃಹಜ್ಯೋತಿ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಗೃಹಜ್ಯೋತಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಸ್ಕಾಂ ಹೆಸರು, ಖಾತೆ ಸಂಖ್ಯೆ ಅರ್ಜಿದಾರರ ಆಧಾರ್ ಕಾರ್ಡ ವಿವರ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ ಕೆಳಗೆ ಕಾಣುವ “I Agree” ಬಟನ್ ಮೇಲೆ ಕ್ಲಿಕ್ ಮಾಡಿ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗೃಹಜ್ಯೋತಿ ಅರ್ಜಿ ಸಲ್ಲಿಕೆಯಾಗುತ್ತದೆ.
ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!
Gruha Jyothi D-link Application Details-ಇಲ್ಲಿಯವರೆಗೆ 1,79,078 ಡಿ- ಲಿಂಕ್ ಅರ್ಜಿಗಳು ಸಲ್ಲಿಕೆ:
ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿ ಒಂದು ಮನೆಯಿಂದ ಮತ್ತೊಂದು ಮನೆಗೆ ಶಿಫ್ಟ್ ಆದ ನಂತರ ನೂತನ ಹೊಸ ಮನೆಗೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಬಳಕೆಯ ಪ್ರಯೋಜನ ಪಡೆಯಬಹುದಾಗಿದೆ.
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಮೊದಲಿಗೆ ಹಳೆಯ ಮನೆಯ ಆರ್ ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಬೇಕಾಗಿರುತ್ತದೆ. ಈಗಾಗಲೇ ರಾಜ್ಯಾದ್ಯಂತ 179078 ಡಿ- ಲಿಂಕ್ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 131936 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದಾಗಿದೆ.