Gruhalakshmi april amount-2024: ಗೃಹಲಕ್ಷ್ಮಿ ಯೋಜನೆ ಏಪ್ರಿಲ್ ತಿಂಗಳ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Facebook
Twitter
Telegram
WhatsApp

ಗೃಹಲಕ್ಷ್ಮಿ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳ ಖಾತೆಗೆ ಏಪ್ರಿಲ್-2024 ತಿಂಗಳ ರೂ 2,000 ಹಣವನ್ನು(Gruhalakshmi april amount) ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಅರ್ಥಿಕ ನೆರವು ಪಡೆಯುತ್ತಿರುವ ಕುಟುಂಬದ ಯಜಮಾನಿಯರು ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಮೊಬೈಲ್ ನಲ್ಲೇ ಏಪ್ರಿಲ್ ತಿಂಗಳ ಹಣ ಜಮಾ ಅಗಿರುವ ವಿವರವನ್ನು ಪಡೆಯಿರಿ. 

ಎರಡು ವಿಧಾನ ಅನುಸರಿಸಿ ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು(Gruhalakshmi april amount-2024) ನಿಮ್ಮ ಖಾತೆಗೆ ಜಮಾ ಅಗಿರುವ ವಿವರವನ್ನು ಪರಿಶೀಲಿಸಬಹುದು ಒಂದನೇಯದು ಇ-ಆಡಳಿತ ಇಲಾಖೆಯ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಹಣ ವರ್ಗಾವಣೆ ಮಾಹಿತಿಯನ್ನು ಚೆಕ್ ಮಾಡಬಹುದು.

ಅಥವಾ ನೇರವಾಗಿ ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಅನ್ನು ತೆಗೆದುಕೊಂಡು ಬ್ಯಾಂಕ್ ಖಾತೆಯಿರುವ ಶಾಖೆಗೆ ಭೇಟಿ ಮಾಡಿ ಪ್ರತಿ ತಿಂಗಳ 25ರ ಒಳಗಾಗಿ ಎಂಟ್ರಿ ಮಾಡಿಸಿದರೆ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ(gruhalakshmi application status) ಅರ್ಥಿಕ ನೆರವು ರೂ 2,000 ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: 2nd installment parihara amount- ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 2ನೇ ಕಂತಿನ ಬರ ಪರಿಹಾರ!

Gruhalakshmi april amount status-ಗೃಹಲಕ್ಷ್ಮಿ ಯೋಜನೆ ಏಪ್ರಿಲ್ ತಿಂಗಳ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ:

ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ರೂ ನಿಮ್ಮ ಖಾತೆಗೆ ಜಮಾ ಅಗಿದಿಯೋ? ಅಥವಾ ಇಲ್ಲವೋ ಎಂದು ನಿಮ್ಮ ಮೊಬೈಲ್ ನಲ್ಲೇ ಇ-ಆಡಳಿತ ಇಲಾಖೆಯ ಅಧಿಕೃತ ಡಿಬಿಟಿ ಕರ್ನಾಟಕ(DBT Karnataka) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಯಾವ ಸರಕಾರಿ ಇಲಾಖೆಯನ್ನು ಭೇಟಿ ಮಾಡದೆ ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು.

Step-1: ಈ ಲಿಂಕ್ ಮೇಲೆ Gruhalakshmi amount status check ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಪ್ರವೇಶ ಮಾಡಿ ಅಧಿಕೃತ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರ ತಿಳಿಯಲು ಡಿಬಿಟಿ ಕರ್ನಾಟಕ(DBT Karnataka mobile app) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

Step-2: ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ತೆರೆದು ಮೊದಲಿಗೆ ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಬಳಕೆದಾರರ ನೊಂದಣಿಯನ್ನು ಮಾಡಿಕೊಳ್ಳಬೇಕು.

ಇದ್ದಕ್ಕಾಗಿ ಆಧಾರ್ ಕಾರ್ಡ ನಂಬರ್ ಹಾಕಿ ನಂತರ ಆಧಾರ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ(OTP) ಅನ್ನು ನಮೂದಿಸಿ ತದನಂತರ ಈ ಅಪ್ಲಿಕೇಶನ್ ಗೆ ನಾಲ್ಕು ಅಂಕಿಯ ಪಾಸ್ವರ್ಡ(Password) ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಈ ಅಪ್ಲಿಕೇಶನ್ ಅನ್ನು ತೆರೆಯಲು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್(Login) ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele parihara-2024: ಇಲ್ಲಿದೆ ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ!

Step-4: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈ ಅಪ್ಲಿಕೇಶನ್ ನ ಮುಖಪುಟದಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಮೊದಲಿಗೆ ಕಾಣುವ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ “ಗೃಹಲಕ್ಷ್ಮಿ” ಎಂದು ತೋರಿಸುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕದಂದು ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಜಮಾ ಅಗಿದೆ ಎನ್ನುವ ಮಾಹಿತಿ ಜೊತೆಗೆ ಹಣ ಜಮಾ ಅದ ಬ್ಯಾಂಕ್ ಹೆಸರು, ಯು.ಟಿ.ಆರ್(UTR) ನಂಬರ್ ಮತ್ತು ಫಲಾನುಭವಿ ಖಾತೆಯ ಹೆಸರು ತೋರಿಸುತ್ತದೆ.

Gruhalakshmi-ನಿಮಗೆ ಏಪ್ರಿಲ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಅಗದಿದ್ದರೆ ಏನು ಮಾಡಬೇಕು?

ಮೇಲಿನ ವಿಧಾನ ಅನುಸರಿಸಿ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯ ಸ್ಥಿತಿಯನ್ನು ಪರಿಶೀಲಿಸಿದಾಗ ಒಂದೊಮ್ಮೆ ನಿಮಗೆ ಏಪ್ರಿಲ್ ತಿಂಗಳ ಹಣ ಜಮಾ ಅಗಗಿದ್ದರೆ ಒಮ್ಮೆ ನಿಮ್ಮ ಅರ್ಜಿಯ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಭೇಟಿ ಮಾಡಿ ವಿಚಾರಿಸಿ ಇ-ಕೆವೈಸಿ ಸ್ಥಿತಿ ಚೆಕ್ ಮಾಡಿದಾಗ ಸರಿ ಇದ್ದ ಪಕ್ಷದಲ್ಲಿ ಎರಡನೇ ಹಂತ ಪರಿಶೀಲನೆಗೆ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಚೇರಿಯನ್ನು(CDPO office) ಒಮ್ಮೆ ನೇರವಾಗಿ ಭೇಟಿ ಮಾಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು.

DBT karnataka app Download link: Click here 

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Facebook
Twitter
Telegram
WhatsApp
Picture of siddesh

siddesh

Leave a Comment

Top Stories

land documents

agricultural land documents: ಜಮೀನನ್ನು ಖರೀದಿ ಮಾಡುವ ಮುನ್ನ ಯಾವೆಲ್ಲಾ ದಾಖಲೆಗಳನ್ನು ಚೆಕ್ ಮಾಡಬೇಕು?

ಕೃಷಿ ಭೂಮಿ ಖರೀದಿಸುವ ಮುಂಚೆ ಯಾವ ಯಾವ ದಾಖಲೆಗಳನ್ನು ಮುಖ್ಯವಾಗಿ ಚೆಕ್ ಮಾಡಬೇಕು ಮತ್ತು ಯಾವೆಲ್ಲ ಮಾಹಿತಿಯನ್ನು ಪರೀಶೀಲನೆ ಮಾಡಬೇಕು? ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಒಂದೊಮ್ಮೆ ನೀವು ಖರೀದಿ ಮಾಡುತ್ತಿರುವ ಜಮೀನಿನ ದಾಖಲೆಗಳು

sarakri yojane

sarakri yojane- ಸಂಚಾರಿ ಮಾರಾಟ ಮಳಿಗೆ ಖರೀದಿಗೆ ರೂ 5.00 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದಿಂದ ವಿವಿಧ ಯೋಜನೆಯಡಿ ಸಬ್ಸಿಡಿಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 30-10-2024 ಕೊನೆಯ ದಿನಾಂಕವಾಗಿದೆ. ಕುಶಲಕಮಿಗಳ ಅಭಿವೃದ್ದಿಗೆ

Crop insurance

Rabi Crop Insurance-ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗಿ ಹಿಂಗಾರು ಹಂಗಾಮು ಆರಂಭವಾಗುತ್ತಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು(Rabi Crop Insurance) ಮಾಡಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಯಾವೆಲ್ಲ ಬೆಳೆಗಳಿಗೆ ವಿಮೆಯನ್ನು ಮಾಡಿಸಬಹುದು? ಅರ್ಜಿ