ಕಳೆದ ಎರಡು ತಿಂಗಳಿಂದ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿರದ ಗೃಹಲಕ್ಷ್ಮಿ ಯೋಜನೆಯ ರೂ 2,000 ಹಣ(Gruhalakshmi amount release) ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ಜಮಾ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಯಾವೆಲ್ಲ ಜಿಲ್ಲೆಯ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ? ನಿಮಗೆ ಈ ಯೋಜನೆಯ ಹಣ ಜಮಾ ಅಗಿರುವುದನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳಬೇಕು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ವರಮಹಾಲಕ್ಷ್ಮೀ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ‘ಗೃಹಲಕ್ಷ್ಮಿ ಯೋಜನೆ’ಯ ಎರಡು ತಿಂಗಳ ಬಾಕಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಸ್ಪಷ್ಟನೆ ನೀಡಲಾಗಿತ್ತು ಇದರಂತೆ ಈಗ ಮೊದಲ ಹಂತದಲ್ಲಿ ಹಣ ವರ್ಗಾವಣೆ ಮಾಡಲಾಗಿರುತ್ತದೆ.
ಇದನ್ನೂ ಓದಿ: RRB JE Recruitment 2024: ರೈಲ್ವೆ ಇಲಾಖೆಯಲ್ಲಿ 7500+ ಹುದ್ದೆಗಳ ಬೃಹತ್ ನೇಮಕಾತಿ | ವೇತನ ₹44,900
gruhalakshmi amount release date-ಈ ಜಿಲ್ಲೆಯವರಿಗೆ ಮೊದಲ ಹಂತದಲ್ಲಿ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ:
ರಾಜ್ಯದ ಎಲ್ಲಾ ಜಿಲ್ಲೆಯ ಅರ್ಹ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಜಮಾ ಮಾಡಲಾಗುತ್ತಿದ್ದು ಪ್ರಸ್ತುತ ಮೊದಲ ಹಂತದಲ್ಲಿ ಬೆಳಗಾವಿ, ಕಲಬುರಗಿ, ಬೀದರ್, ವಿಜಯಪುರ, ಬಳ್ಳಾರಿ, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ 533 ಕೋಟಿ ರೂ. ಪಾವತಿ ಮಾಡಲಾಗಿರುತ್ತದೆ.
ಉಳಿದ ಜಿಲ್ಲೆಯ ಫಲಾನುಭವಿಗಳಿಗೆ ಎರಡನೇ ಹಂತ ಅಂದರೆ ಇನ್ನೊಂದರೆಡು ದಿನಗಳ ಒಳಗಾಗಿ ಎಲ್ಲಾ ಜಿಲ್ಲೆಯ ಅರ್ಜಿದಾರರಿಗೆ ಈ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿದ್ದ ರೂ 2,000 ಅರ್ಥಿಕ ನೆರವು ಜಮಾ ಅಗಲಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Mane hani parihara-ಅತೀಯಾದ ಮಳೆಯಿಂದ ಉಂಟಾದ ನಷ್ಟಕ್ಕೆ ಪರಿಹಾರ! ಅಧಿಕೃತ ಮಾರ್ಗಸೂಚಿ ಬಿಡುಗಡೆ!
reason for gruhalakshmi amount not credited- ತಾಂತ್ರಿಕ-ಚುನಾವಣೆ ಕಾರಣ ಹಣ ವರ್ಗಾವಣೆ ಮಾಡಲು ವಿಳಂಬ: ಸಚಿವೆ ಲಕ್ಷ್ಮೀ ಹೆಬ್ಬಾಳರ್
ಮಂಗಳವಾರ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ‘ತಾಂತ್ರಿಕ ಕಾರಣಗಳಿಂದ ಎರಡು-ಮೂರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿದ ರೂ 2,000 ಹಣ ಫಲಾನುಭವಿಗಳ ಖಾತೆಗೆ ಅಂದರೆ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಜಮೆ ಆಗಿರಲಿಲ್ಲ. 6 ಆಗಸ್ಟ್ 2024 ರಿಂದಲೇ ಜೂನ್, ಜುಲೈ ತಿಂಗಳ ಗೃಹಲಕ್ಷ್ಮೀ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Gruhalakshmi total beneficiaries- 26.65 ಲಕ್ಷ ರೂ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ
ಗೃಹಲಕ್ಷ್ಮಿ ಯೋಜನೆಯಡಿ ಹಣ ವರ್ಗಾವಣೆಯು 26.65 ಲಕ್ಷ ರೂ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಅಗಲಿದ್ದು ಮೊದಲ ಹಂತದಲ್ಲಿ ಬೆಳಗಾವಿ, ಕಲಬುರಗಿ, ಬೀದರ್, ವಿಜಯಪುರ, ಬಳ್ಳಾರಿ, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ 533 ಕೋಟಿ ರೂ. ಹಣ ವರ್ಗಾವಣೆ ಅಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: aadhar card address change-ಆಧಾರ್ ಕಾರ್ಡನಲ್ಲಿ ವಿಳಾಸ ತಿದ್ದುಪಡಿಗೆ ನೂತನ ವ್ಯವಸ್ಥೆ!
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಇದ್ದ ಕಾರಣ ಇದರ ಪ್ರಯುಕ್ತ ನೀತಿ ಸಂಹಿತೆ ಜಾರಿ ಇದ್ದ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಲು ತಡಲಾಗಿತ್ತು ಈಗ ಹಣಕಾಸು ಇಲಾಖೆ ಸಮ್ಮತಿಸಿದ್ದು, ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳರ್ ಕಾರ್ಯಕ್ರಮದಲ್ಲಿ ತಿಳಿಸಿದರು.
Gruhalakshmi dbt status- ನಿಮ್ಮ ಖಾತೆಗೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿರುವ ಫಲಾನುಭವಿಗಳು ಎರಡು ವಿಧಾನ ಅನುಸರಿಸಿ ತಮ್ಮ ತಮ್ಮ ಖಾತೆಗೆ ಹಣ ಜಮಾ ಅಗಿರುವ ಮಾಹಿತಿಯನ್ನು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ವಿಧಾನ-1: ನೀವು ಯಾವ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುತ್ತಿರೋ ಆ ಬ್ಯಾಂಕ್ ನ ಬ್ಯಾಲೆನ್ಸ್ ಚೆಕ್ ಮಾಡುವ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ನಿಮಗೆ ಈ ಯೋಜನೆಯಡಿ ಹಣ ಜಮಾ ಅಗಿರುವ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: RTC ಅಲ್ಲಿ ಹೆಸರು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಅನ್ಲೈನ್ ನಲ್ಲಿ RTC ವಿವರ ತಿಳಿಯಲು ವೆಬ್ಸೈಟ್ ಲಿಂಕ್!
ಎಲ್ಲಾ ಬ್ಯಾಂಕ್ ನ ಬ್ಯಾಲೆನ್ಸ್ ಚೆಕ್ ಸಹಾಯವಾಣಿ ಸಂಖ್ಯೆಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: bank balance check helpline numbers list
ವಿಧಾನ-2: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT karnataka gruhalakshmi status ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ಹೇಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳುವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲೇ ಹಣ ಜಮಾ ವಿವರವನ್ನು ಪಡೆದುಕೊಳ್ಳಬಹುದು.