- Advertisment -
HomeGovt SchemesGruhalakshmi Status-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆ!

Gruhalakshmi Status-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆ!

ಯುಗಾದಿ ಮತ್ತು ಈದ್ ಹಬ್ಬಕ್ಕೆ ರಾಜ್ಯದ ಗೃಹಲಕ್ಷ್ಮಿ(Gruhalakshmi Amount) ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಗಿಪ್ಟ್ ಅನ್ನು ನೀಡಿದ್ದು ಒಂದೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಜಮಾ ಮಾಡಲಾಗಿದೆ.

ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ಜನವರು-2025 ಮತ್ತು ಫೆಬ್ರವರಿ-2025 ಎರಡು ತಿಂಗಳ ಹಣವನ್ನು(Gruhalakshmi Status) ಈ ಯೋಜನೆಯ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದು ಬಾಕಿ ಉಳಿಸಿಕೊಳ್ಳಲಾಗಿತ್ತು ಪ್ರಸ್ತುತ ಒಂದೇ ವಾರದಲ್ಲಿ ಒಟ್ಟು ಎರಡು ಕಂತುಗಳ ರೂ 4,000/- ಹಣವನ್ನು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಇದನ್ನೂ ಓದಿ: Sheep Farming-ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ! ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

ಗೃಹಲಕ್ಷ್ಮಿ ಯೋಜನೆಯಡಿ ಜಮಾ ಅಗಿರುವ ಹಣದ ವಿವರವನ್ನು ಮೊಬೈಲ್ ನಲ್ಲೇ ಚೆಕ್(Gruhalakshmi DBT Status) ಮಾಡುವ ವಿಧಾನ ಹೇಗೆ? ಇಲ್ಲಿಯವರೆಗೆ ಎಷ್ಟು ಕಂತುಗಳ ಹಣ ಜಮಾ ಅಗಿದೆ? ಗೃಹಲಕ್ಷ್ಮಿ ಯೋಜನೆಯಡಿ ಯಾವ ದಿನಾಂಕದಂದು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ? ಹಣ ಜಮಾ ಅಗದವರು ಅನುಸರಿಸಬೇಕಾದ ಕ್ರಮಗಳು ಯಾವುವು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Gruhalakshmi Total Installment-ಇಲ್ಲಿಯವರೆಗೆ ಎಷ್ಟು ಕಂತು ಹಣ ಜಮಾ ಅಗಿದೆ?

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ 2,000 ಹಣವನ್ನು ಜಮಾ ಮಾಡುವ ಕಾರ್ಯಕ್ಕೆ ಆಗಸ್ಟ್ 2023 ರಿಂದ ಚಾಲನೆ ಮಾಡಲಾಗಿದ್ದು ಇಲ್ಲಿಯವರೆಗೆ ಅಂದರೆ ಫೆಬ್ರವರಿ 2025 ರವರೆಗೆ ಒಟ್ಟು 18 ಕಂತುಗಳ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ರಾಜ್ಯ ಸರ್ಕಾರದಿಂದ ಜಮಾ ಮಾಡಲಾಗಿದೆ.

ಇದನ್ನೂ ಓದಿ: Free AI Training-ವಿದ್ಯಾರ್ಥಿಗಳಿಗೆ ₹15,000/- ರೂ ವಿದ್ಯಾರ್ಥಿವೇತನ ಸಹಿತ ಎಐ ಕುರಿತು ತರಬೇತಿಗೆ ಅರ್ಜಿ ಆಹ್ವಾನ!

Gruhalakshmi Amount Release Date-ಗೃಹಲಕ್ಷ್ಮಿ ಹಣ ಜಮಾ ದಿನಾಂಕ:

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರದಿಂದ ಹಂತ ಹಂತವಾಗಿ ಜಿಲ್ಲಾವಾರು ನಿಗದಿತ ದಿನಾಂಕದಂದು ಅರ್ಹ ಫಲಾನುವಿಗಳ ಖಾತೆಗೆ ಜಮಾ ಮಾಡಲಾಗಿರುತ್ತದೆ. ಪ್ರಸ್ತುತ ಈ ಬಾರಿ ಮಾರ್ಚ 2025ರ ಕೊನೆಯ ವಾರ ಒಂದೇ ಬಾರಿಗೆ ಎರಡು ಕಂತುಗಳ ರೂ 4,000/- ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ.

Gruhalakshmi Status Check On Mobile-ನಿಮ್ಮ ಮೊಬೈಲ್ ನಲ್ಲೇ ಗೃಹಲಕ್ಷ್ಮಿ ಹಣ ಜಮಾ ವಿವರ ತಿಳಿಯಿರಿ:

ಫಲಾನುಭವಿಗಳು ಎರಡು ವಿಧಾನವನ್ನು ಅನುಸರಿಸಿ ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮಾ ಅಗಿರುವ ವಿವರವನ್ನು ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು ಇದರ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Khatha Details-ಆಸ್ತಿಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಎಂದರೇನು? ಇದರ ವ್ಯತ್ಯಾಸಗಳೇನು? ಇಲ್ಲಿದೆ ಸಂಪೂರ್ಣ ವಿವರ!

Method-1: ನಿಮ್ಮ ಬ್ಯಾಂಕ್ ನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ತಿಳಿಯಬಹುದು:

ಅರ್ಜಿದಾರರು ಬ್ಯಾಂಕ್ ಅಕೌಂಟ್ ಅನ್ನು ಹೊಂದಿರುವ ಬ್ಯಾಂಕಿನ ಸಹಾಯವಾಣಿ ಸಂಖ್ಯೆಗೆ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ ಕಾಲ್ ನೀಡುವುದರ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಅಗಿದಿಯಾ? ಇಲ್ಲವಾ? ಎಂದು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Bank balance check mobile numbers-ಎಲ್ಲಾ ಬ್ಯಾಂಕಿನ ಸಹಾಯವಾಣಿ ಸಂಖ್ಯೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ: Click here

Method-2: DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿಯಬಹುದು:

Step-1: ಮೊದಲಿಗೆ Gruhalakshmi Status Check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Military College-ಆರ್ಮಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಇಲ್ಲಿದೆ ಉತ್ತಮ ಅವಕಾಶ!

Gruhalakshmi

Step-2: ತದನಂತರ ಅರ್ಜಿದಾರರ/ಫಲಾನುಭವಿಯ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ OTP ಅನ್ನು ಪಡೆದು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಬಳಕೆ ಮಾಡಲು ಬಳಕೆದಾರ ಐಡಿಯನ್ನು ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಬಳಿಕ ರಚನೆ ಮಾಡಿಕೊಂಡಿರುವ ಪಾಸ್ವರ್ಡ ಅನ್ನು ಹಾಕಿ ಲಾಗಿನ್ ಅಗಿ “ಪಾವತಿ ಸ್ಥಿತಿ/Payment Status” ಬಟನ್ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯಡಿ ಜಮಾ ಅಗಿರುವ ಕಂತುಗಳ/ಹಣದ ವಿವರವನ್ನು ಪಡೆಯಬಹುದು.

Reason For Gruhalakshmi Smount Not Credited-ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮಾ ಅಗದಿರುವ ಕಾರಣಗಳು:

1) ತಾಂತ್ರಿಕ ಸಮಸ್ಯೆಗಳು (Technical Glitches):

ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‌ಫರ್ (DBT) ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಗಳು, ಉದಾಹರಣೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆಯ ಸೀಡಿಂಗ್‌ನಲ್ಲಿ ತೊಡಕುಗಳು, ಹಣ ಜಮಾ ಆಗದಿರಲು ಕಾರಣವಾಗಬಹುದು ಮತ್ತು ಬ್ಯಾಂಕ್ ಖಾತೆಯಲ್ಲಿನ ಹೆಸರು ಆಧಾರ್ ಕಾರ್ಡನಲ್ಲಿರುವ ಹೆಸರು ಮ್ಯಾಚ್ ಇಲ್ಲದೇ ಇದ್ದಲ್ಲಿ ಹಣ ಜಮಾ ಅಗುವುದಿಲ್ಲ.

ಇದನ್ನೂ ಓದಿ: Land Documents-ಕಂದಾಯ ಇಲಾಖೆಯಿಂದ ಅಕ್ರಮ-ಸಕ್ರಮ ಜಮೀನುಗಳಿಗೆ ಪಹಣಿ!

2) ಆಧಾರ್ ಮತ್ತು ಬ್ಯಾಂಕ್ ಖಾತೆಯ ಲಿಂಕ್ ಇಲ್ಲದಿರುವುದು:

ಫಲಾನುಭವಿಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸರಿಯಾಗಿ ಲಿಂಕ್ ಆಗಿಲ್ಲದಿದ್ದರೆ, DBT ಮೂಲಕ ಹಣ ಜಮಾ ಆಗುವುದಿಲ್ಲ. ಇದು e-KYC ಅಪ್‌ಡೇಟ್ ಆಗದಿರುವುದು ಅಥವಾ ತಪ್ಪು ವಿವರಗಳನ್ನು ನಮೂದಿಸಿರುವುದರಿಂದ ಅಗುತ್ತದೆ.

3) ರೇಶನ್ ಕಾರ್ಡ್‌ನಲ್ಲಿ ಹೆಡ್ ಆಫ್ ಫ್ಯಾಮಿಲಿ ವಿವರಗಳ ಸರಿಯಿಲ್ಲದಿರುವುದು:

ಯೋಜನೆಯ ಪ್ರಕಾರ, ಫಲಾನುಭವಿ ಮಹಿಳೆಯೇ ರೇಶನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥೆ (Head of Family) ಆಗಿರಬೇಕು. ಇದು ಸರಿಯಾಗಿ ಅಪ್‌ಡೇಟ್ ಆಗದಿದ್ದರೆ, ಅರ್ಜಿ ಅಂಗೀಕರಿಸಲ್ಪಡುವುದಿಲ್ಲ.

- Advertisment -
LATEST ARTICLES

Related Articles

- Advertisment -

Most Popular

- Advertisment -