- Advertisment -
HomeGovt SchemesHome Documents-ಮನೆ ಖರೀದಿಸುವಾಗ ಈ 6 ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ!

Home Documents-ಮನೆ ಖರೀದಿಸುವಾಗ ಈ 6 ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ!

ಮನೆಯನ್ನು ಖರೀದಿ ಮಾಡುವ ಖರೀದಿದಾರರು ತಪ್ಪದೇ ಈ ದಾಖಲಾತಿಗಳನ್ನು(Home Documents) ಕಡ್ಡಾಯವಾಗಿ ಪರಿಶೀಲನೆ ಮಾಡಿಕೊಳ್ಳಬೇಕು ಇದರ ಕುರಿತು ಯಾವೆಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ನೀವು ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಮನೆಯನ್ನು ಖರೀದಿಸುವುದು ಜೀವನದಲ್ಲಿ ಒಂದು ಪ್ರಮುಖ ಹಂತ. ಆದರೆ ಈ ಪ್ರಕ್ರಿಯೆಯಲ್ಲಿ ಕೇವಲ ನಗದು ಅಥವಾ ಸಾಲದ ಮೌಲ್ಯವಲ್ಲ, ಕಾನೂನುಬದ್ಧ ದಾಖಲೆಗಳ(documents required for home purchase) ಶುದ್ಧತೆಯೂ ಅತ್ಯಂತ ಮುಖ್ಯ. ಇಲ್ಲಿದೆ ನೀವು ಮನೆ ಖರೀದಿಸುವಾಗ ತಪ್ಪದೇ ಪರಿಶೀಲಿಸಬೇಕಾದ 6 ಮುಖ್ಯ ದಾಖಲೆಗಳ ಪಟ್ಟಿಯನ್ನು ವಿವರಿಸಲಾಗಿದೆ.

ಇದನ್ನೂ ಓದಿ: Monsoon Forecast-ಹಮಾಮಾನ ಇಲಾಖೆಯಿಂದ ಮುಂಗಾರು ಮಳೆ ಕುರಿತು ರೈತರಿಗೆ ಶುಭಸುದ್ದಿ!

ಮನೆಯನ್ನು ಖರೀದಿ ಮಾಡುವುದು ಮತ್ತು ನಿರ್ಮಾಣ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಅಂಶಗಳಲ್ಲಿ ಒಂದಾಗಿದ್ದು ತಮ್ಮ ಕನಸಿನ ಮನೆ ಖರೀದಿ/ನಿರ್ಮಾಣ ಮಾಡುವಾಗ ಅಗತ್ಯವಾಗಿದೆ ಪರಿಶೀಲನೆ ಮಾಡಬೇಕಾದ ದಾಖಲೆಗಳ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Home Documents-ಮನೆ ಖರೀದಿಸುವಾಗ ಈ 6 ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ:

1. ಮಾರಾಟ ಒಪ್ಪಂದ (Sale Agreement):

ಈ ಪತ್ರವು ಮನೆ ಖರೀದಿಯಲ್ಲಿನ ಮೊದಲ ಮತ್ತು ಪ್ರಮುಖ ಹಂತ. ಇದರಲ್ಲಿದೆ:

ಮಾಲೀಕತ್ವ ವರ್ಗಾವಣೆಯ ನಿಯಮಗಳು

ಪಾವತಿ ಗಡುವುಗಳು ಷರತ್ತುಗಳು ಮತ್ತು ಸೌಲಭ್ಯಗಳ ವಿವರ ಸ್ವಾಧೀನ ದಿನಾಂಕ ಇದು ಖರೀದಿದಾರ ಮತ್ತು ಬಿಲ್ಡರ್ ನಡುವಿನ ಕಾನೂನು ಬದ್ಧ ಒಪ್ಪಂದವಾಗಿದ್ದು, ಗೃಹ ಸಾಲಕ್ಕಾಗಿವೂ ಮುಖ್ಯ ದಾಖಲೆ.

ಇದನ್ನೂ ಓದಿ: 1st standard admission age-ರಾಜ್ಯದಲ್ಲಿ 1ನೇ ತರಗತಿಗೆ ದಾಖಲಾತಿಗೆ ವಯೋಮಿತಿ ಸಡಿಲಿಕೆ

2. ರೇರಾ ನೋಂದಣಿ ಪ್ರಮಾಣಪತ್ರ (RERA Registration Certificate):

2016 ರ ರೇರಾ ಕಾಯ್ದೆಯ ಅಡಿಯಲ್ಲಿ, ಎಲ್ಲ ನಿರ್ಮಾಣ ಹಂತದ ಯೋಜನೆಗಳು ಪ್ರಾದೇಶಿಕ ರೇರಾ ಪ್ರಾಧಿಕಾರದಲ್ಲಿ ನೋಂದಣಿಯಾಗಿರಬೇಕು. ಈ ಪ್ರಮಾಣಪತ್ರವಿಲ್ಲದ ಯೋಜನೆ ಖರೀದಿಸುವುದರಿಂದ ಕಾನೂನು ಸಮಸ್ಯೆ ಎದುರಾಗಬಹುದು.

3. ಸ್ವಾಧೀನ ಪ್ರಮಾಣಪತ್ರ (Occupancy Certificate – OC):

ಈ ಪ್ರಮಾಣಪತ್ರವು ಸ್ಥಳೀಯ ಪ್ರಾಧಿಕಾರದಿಂದ ನೀಡಲ್ಪಡುತ್ತದೆ. ಇದು ಫ್ಲಾಟ್ ಅನ್ನು ವಾಸೋಚಿತವಾಗಿ ಬಳಸಲು ಅನುಮೋದನೆ ನೀಡುತ್ತದೆ. OC ಇಲ್ಲದ ಮನೆಯಲ್ಲಿ ವಾಸಿಸುವುದು ಕಾನೂನು ಬದ್ಧವಲ್ಲ.

ಇದನ್ನೂ ಓದಿ: SSLC Result-2025: ಎಸ್ಸೆಸ್ಸೆಲ್ಸಿ ಫಲಿತಾಂಶ-2025: ಈ ದಿನ ಪ್ರಕಟಣೆ ಸಾಧ್ಯತೆ!

home documents

4. ಎನ್ಕಂಬರನ್ಸ್ ಪ್ರಮಾಣಪತ್ರ (Encumbrance Certificate – EC):

ಈ ದಾಖಲೆ ಆಸ್ತಿ ಮೇಲೆ ಯಾವುದೇ ಸಾಲ, ಅಡಮಾನ ಅಥವಾ ಕಾನೂನು ವಿವಾದಗಳಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಖರೀದಿದಾರನಿಗೆ ಭದ್ರತೆಯ ಭರವಸೆ ನೀಡುತ್ತದೆ.

5. ಮಾಲೀಕತ್ವ ಪ್ರಮಾಣಪತ್ರ (Title Deed / Ownership Document):

ಈ ಪತ್ರವು ಆಸ್ತಿಯ ಯಥಾರ್ಥ ಮಾಲೀಕರು ಯಾರು ಎಂಬುದನ್ನು ದೃಢಪಡಿಸುತ್ತದೆ. ವಕೀಲರಿಂದ ಪರಿಶೀಲಿಸಿ ಮಾಲೀಕತ್ವ ಸರಿಯಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಅತೀ ಮುಖ್ಯ.

ಇದನ್ನೂ ಓದಿ: Agriculture Loan-ಬೆಳೆ ಸಾಲವನ್ನು ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!

6. ಸ್ಥಳೀಯ ಪ್ರಾಧಿಕಾರದ NOC (No Objection Certificate):

ನೋ ಆಬ್ಜೆಕ್ಷನ್ ಸರ್ಟಿಫಿಕೇಟ್‌ಗಳು ವಿವಿಧ ಇಲಾಖೆಗಳ (ಜಲಮಂಡಳಿ, ವಿದ್ಯುತ್, ಪರಿಸರ) ಅನುಮೋದನೆಗಳನ್ನು ಪ್ರತಿಬಿಂಬಿಸುತ್ತವೆ. ಯಾವುದೇ ಅಡಚಣೆ ಇಲ್ಲದೆ ನಿರ್ಮಾಣ ನಡೆದಿದೆ ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ.

Home Registration Process-ಮನೆಯ ಮಾಲೀಕತ್ವವನ್ನು ನೋಂದಣಿ ಮಾಡುವುದು ಹೇಗೆ?

ಮನೆ ಮತ್ತು ಅಸ್ತಿಯ ನೋಂದಣಿಯನ್ನು ಮಾಡುವುದಕ್ಕೆ ನಾಗರಿಕರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ತಾಲೂಕಿನ ಉಪನೋಂದಣಿ ಅಧಿಕಾರಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: Scholarship-SSLC ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ 15,000/- ಪ್ರೋತ್ಸಾಹ ಧನ!

ಸಂಪೂರ್ಣವಾಗಿ ಹೇಳುವುದಾದರೆ:

ಮನೆಯನ್ನು ಖರೀದಿಸುವ ಪ್ರಕ್ರಿಯೆ ಭರವಸೆ ನೀಡುವಂತಹದ್ದಾಗಿರಬೇಕೆಂದರೆ, ಮೇಲಿನ ದಾಖಲೆಗಳನ್ನು ಪರಿಶೀಲಿಸುವುದು ಬಹುಮುಖ್ಯ. ನಿಮಗೆ ಅನುಮಾನವಿದ್ದರೆ, ವಕೀಲರ ಸಲಹೆ ಪಡೆಯಿರಿ ಮತ್ತು ಸುರಕ್ಷಿತವಾದ ಆಸ್ತಿ ಖರೀದಿಗೆ ಹೆಜ್ಜೆಯಿಡಿ.

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕಿನ ಉಪನೋಂದಣಿ ಅಧಿಕಾರಿ ಕಚೇರಿಯನ್ನು ಭೇಟಿ ಮಾಡಿ.

- Advertisment -
LATEST ARTICLES

Related Articles

- Advertisment -

Most Popular

- Advertisment -