- Advertisment -
HomeGovt SchemesHome Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!

Home Subsidy Scheme- ಸರ್ಕಾರದಿಂದ ಸರ್ವರಿಗೂ ಸೂರು ಯೋಜನೆಯಡಿ 42,435 ಮನೆ ಹಂಚಿಕೆ!

ಸರ್ಕಾರದಡಿ ಕೆಲಸ ನಿರ್ವಹಿಸುವ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ “ಸರ್ವರಿಗೂ ಸೂರು” ಯೋಜನೆಯಡಿ(Granted Home From Government) ಈಗಾಗಲೇ ಮೊದಲ ಹಂತದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಯನ್ನು ಹಂಚಿಕೆ ಮಾಡಲಾಗಿದ್ದು ಈಗ ಎರಡನೇ ಹಂತದಲ್ಲಿ ಫಲಾನುಭವಿಗಳಿಗೆ 42 ಸಾವಿರ ಮನೆಯನ್ನು ಹಂಚಿಕೆ ಮಾಡುವುದರ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹಂಚಿಕೊಂಡಿರುವ ಮಾಹಿತಿಯ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಏನಿದು ಸರ್ವರಿಗೂ ಸೂರು ಯೋಜನೆ?(Home Subsidy Yojane)ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಸಹ ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Nrega Yojana-2025: ನರೇಗಾ ಕೂಲಿ ಕಾರ್ಮಿಕರಿಗೆ ಬಂಪರ್ ಸಿಹಿ ಸುದ್ದಿ! ಕೂಲಿ ದರ ಹೆಚ್ಚಳ!

ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ “ಸರ್ವರಿಗೂ ಸೂರು” ಯೋಜನೆಯಡಿ ಒಟ್ಟು 1.82 ಲಕ್ಷ ಮನೆಯ ನಿರ್ಮಾಣ ಗುರಿಯನ್ನು(Grants Home) ಸರ್ಕಾರದಿಂದ ಹಾಕಿಕೊಳ್ಳಲಾಗಿದ್ದು ಈಗಾಗಲೇ ಮೊದಲ ಹಂತದಲ್ಲಿ 36,789 ಮನೆಗಳನ್ನು ಹಂಚಿಕೆ ಮಾಡಲಾಗಿದ್ದು ಎರಡನೇ ಹಂತದಲ್ಲಿ 42,345 ಮನೆಗಳು ಸಿದ್ದವಾಗಿದ್ದು ಈ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು 27 ಎಪ್ರಿಲ್ 2025 ರಂದು ಹುಬ್ಬಳಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿದರು.

Government Home Scheme-ಎರಡನೇ ಹಂತದಲ್ಲಿ 42,345 ಮನೆ ಹಂಚಿಕೆ:

ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ʼಸರ್ವರಿಗೂ ಸೂರುʼ ಯೋಜನೆಯಡಿ ಬಡ ಕುಟುಂಬಗಳಿಗೆ ನಿರ್ಮಿಸಲಾಗುತ್ತಿರುವ 1.82 ಲಕ್ಷ ಮನೆಗಳ ಪೈಕಿ ಎರಡನೇ ಹಂತದಲ್ಲಿ 42,345 ಮನೆಗಳನ್ನು ಏಪ್ರಿಲ್‌ 27 ರಂದು ಹುಬ್ಬಳ್ಳಿಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವರಾದ ಜಮೀರ್ ಅಮ್ಮದ್ ತಿಳಿಸಿದ್ದಾರೆ.

ಇದನ್ನೂ ಓದಿ: Borewell Subsidy-ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 4,923 ಕೊಳವೆ ಬಾವಿ ಕೊರೆಸಲು ಅನುಮತಿ!

Grants Home-ಅಂತಿಮ ಹಂತದಲ್ಲಿ ಮನೆ ನಿರ್ಮಾಣ ಕಾರ್ಯಗಳು:

ಸ್ಲಂ ಪ್ರದೇಶದಲ್ಲಿ ವಾಸಿಸುವ ಅರ್ಹ ಜನರಿಗೆ ವಸತಿ ವ್ಯವಸ್ಥೆಯನ್ನು ಸರ್ಕಾರದ ಸಹಾಯಧನದ ಮನೆಯನ್ನು ನಿರ್ಮಾಣ ಮಾಡಿ ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಇನ್ನಿತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮನೆಗಳಗೆ ಇನ್ನು ಒಂದು ವಾರದ ಒಳಗಾಗಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

Home Subsidy Scheme (2)

Karnataka Government Grants Home-ರ್ಕಾರದಿಂದಲೇ ಹೆಚ್ಚುವರಿ ಹಣ:

2013 ರಿಂದ 2023 ರವರೆಗೆ ಸ್ಲಂ ಪ್ರದೇಶದಲ್ಲಿ ವಸತಿ ರಹಿತವಾಗಿ ವಾಸ ಮಾಡುವ ಅರ್ಹ ಫಲಾನುಭವಿಗಳಿಗೆ ಶಾಶ್ವತ ಮನೆಯನ್ನು ನಿರ್ಮಾಣ ಮಾಡಿ ಹಸ್ತಾಂತರ ಮಾಡಲು ರಾಜ್ಯಾದ್ಯಂತ ಒಟ್ಟು 1.82 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸಲಾಗಿದ್ದು ಅನೇಕ ಅರ್ಜಿದಾರರು ಅವರ ವಂತಿಕೆಯನ್ನು ಪಾವತಿ ಮಾಡಲಾಅದೇ ಮನೆ ನಿರ್ಮಾಣವು ಅರ್ಹಕ್ಕೆ ಸ್ಥಗಿತವಾಗಿತ್ತು ಇದನ್ನು ಮನಗಂಡ ಸರ್ಕಾರವು ಸ್ವಂತ 4 ಲಕ್ಷ ಫಲಾನುಭವಿ ವಂತಿಕೆಯನ್ನು ಪಾವತಿ ಮಾಡಿ ಮನೆಯನ್ನು ನಿರ್ಮಿಸಿ ಅರ್ಹರಿಗೆ ವಿತರಣೆ ಮಾಡಲು ಯೋಜನೆಯನ್ನು ಹಾಕಿಕೊಂಡಿದೆ.

ಇದನ್ನೂ ಓದಿ: RTE Application-ಮಕ್ಕಳನ್ನು RTE ಸೀಟ್ ನಲ್ಲಿ ಶಾಲೆಯನ್ನು ದಾಖಲಿಸಲು ಅರ್ಜಿ ಸಲ್ಲಿಸಲು ಅವಕಾಶ!

Government Grants Home Eligibility-ಮಂಡಳಿಯಿಂದ ಮನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು?

  • ಕೊಳೆಗೇರಿ/ಸ್ಲಂ ಪ್ರದೇಶದಲ್ಲಿ ವಸತಿ ರಹಿತರಾಗಿ ವಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಥಿಕವಾಗಿ ಬಡ ವರ್ಗಕ್ಕೆ ಸೇರಿದವರಾಗಿಬೇಕು.
  • ತಮ್ಮ ಹೆಸರಿನಲ್ಲಿ ಯಾವುದೇ ಬಗ್ಗೆಯ ಆಸ್ತಿ/ಮನೆಯನ್ನು ಹೊಂದಿರದೇ ವಸತಿ ರಹಿತರಾಗಿರಬೇಕು.

How To Apply For Granted Home-ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ನಿಮ್ಮ ಹತ್ತಿರದ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದ ಇಲಾಖೆಯ ಕಚೇರಿಯನ್ನು ಅಗತ್ಯ ದಾಖಲಾತಿಗಳ ಸಮೇತ ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Gruhalakshmi Status-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಬಿಡುಗಡೆ!

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮಂಡಳಿಯ ಸಹಾಯವಾಣಿ ಮತ್ತು ವೆಬ್ಸೈಟ್ ವಿವರ:

Helpline-ಸಹಾಯವಾಣಿ – 080-23564925 / 080-23460085
Official Website-ಮಂಡಳಿಯ ಅಧಿಕೃತ ವೆಬ್ಸೈಟ್- Click here

- Advertisment -
LATEST ARTICLES

Related Articles

- Advertisment -

Most Popular

- Advertisment -