HomeNew postsHoney Bee Keeping Training-ಉಚಿತ ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಲು ಅವಕಾಶ!

Honey Bee Keeping Training-ಉಚಿತ ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಲು ಅವಕಾಶ!

ಕೃಷಿಯ ಜೊತೆಯಲ್ಲಿ ಜೇನು ಸಾಕಾಣಿಕೆಯನ್ನು ಮಾಡಲು ಆಸಕ್ತಿಯಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಜೇನು ಸಾಕಾಣಿಕೆ(Honey Bee Keeping Training) ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೃಷಿಯ ಜೊತೆಯಲ್ಲಿ ತಮ್ಮ ಜಮೀನು/ತೋಟದಲ್ಲಿ ಜೇನು ಹುಳುಗಳನ್ನು ಸಾಕಾಣಿಕೆ ಮಾಡುವುದರಿಂದ(Free Honey Bee Keeping Training) ಎರಡು ರೀತಿಯ ಆದಾಯವನ್ನು ಪಡೆಯಬಹುದು ಜೇನು ತುಪ್ಪುದಿಂದ ಹಣ ಗಳಿಕೆ ಮಾಡಬಹುದು ಇದರ ಜೊತೆಗೆ ಬೆಳೆಗಳಲ್ಲಿ ಪರಾಗ ಸ್ಪರ್ಶ ಹೆಚ್ಚಾಗಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ ಕುಮಟಾ ಉತ್ತರಕನ್ನಡ ಜಿಲ್ಲೆ ವತಿಯಿಂದ ಉಚಿತವಾಗಿ ಜೇನು ಸಾಕಾಣಿಕೆ(Honey Bee) ತರಬೇತಿಯನ್ನು ಪಡೆಯಲು ಅವಕಾಶವಿದ್ದು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ತರಬೇತಿ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Who can apply Honey Bee Keeping Training- ಉಚಿತ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು:

(A) ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 

(B) ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿರುತ್ತದೆ. 

(C) ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಅರ್ಜಿದಾರರಿಗೆ ತರಬೇತಿಯಲ್ಲಿ ಭಾಗವಹಿಸಲು ಪ್ರಥಮ ಅವಕಾಶವನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(D) ಅರ್ಜಿದಾರರು ಒಮ್ಮೆ ಸಂಸ್ಥೆಯಿಂದ ತರಬೇತಿ ಪೂರ್ಣಗೊಳಿಸಿದ ಬಳಿಕ ಜೇನು ಸಾಕಾಣಿಕೆಯನ್ನು ಪ್ರಾರಂಬಿಸಲು ಆಸಕ್ತಿಯನ್ನು ಹೊಂದಿರಬೇಕು.

ಇದನ್ನೂ ಓದಿ: Labor Department Scholarship-ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಇನ್ನು 11 ದಿನಗಳು ಮಾತ್ರ ಬಾಕಿ!

Honey Bee Keeping

Free Honey Bee Keeping Training- ತರಬೇತಿಯು ಉಚಿತವಾಗಿರುತ್ತದೆ:

ಈ ತರಬೇತಿಯು ಒಟ್ಟು 10 ದಿನಗಳ ಕಾಲ ನಡೆಯಲ್ಲಿದ್ದು ಹತ್ತು ದಿನವು ಶಿಬಿರಾರ್ಥಿಗಳಿಗೆ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವನ್ನು ತರಬೇತಿ ಸಂಸ್ಥೆಯಿಂದಲೇ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

Free two-wheeler repair training Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಉಚಿತ ಜೇನು ಸಾಕಾಣಿಕೆ ತರಬೇತಿಯನ್ನು ಪಡೆಯಲು ಭಾಗವಹಿಸಲು ಆಸಕ್ತಿಯಿರುವವರು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ನಂತರ ತರಬೇತಿ ನಡೆಯುವ ದಿನಾಂಕದಂದು ನೇರವಾಗಿ ತರಬೇತಿ ಕೇಂದ್ರ ಭೇಟಿ ಮಾಡಿ ತರಬೇತಿಯಲ್ಲಿ ಭಾಗವಹಿಸಬಹುದು.

ಅಥವಾ ಈ Apply Now ಗೂಗಲ್ ಪಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿಯು ಸಹ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!

Documents for Training – ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

(1) ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.
(2) ಬ್ಯಾಂಕ್ ಪಾಸ್ ಬುಕ್ ಪ್ರತಿ.
(3) ರೇಶನ್ ಕಾರ್ಡ ಪ್ರತಿ.
(4) ಮೊಬೈಲ್ ನಂಬರ್.

Training date- ತರಬೇತಿ ಪ್ರಾರಂಭವಾಗುವ ದಿನಾಂಕ:

ಜೇನು ಸಾಕಾಣಿಕೆ ತರಬೇತಿಯು ದಿನಾಂಕ: 07 ಜನವರಿ 2025 ರಿಂದ ಪ್ರಾರಂಭವಾಗಿ 16 ಜನವರಿ 2025ಕ್ಕೆ ಪೂರ್ಣಗೊಳ್ಳಲಿದ್ದು ಒಟ್ಟು ಹತ್ತು ದಿನದ ತರಬೇತಿ ಇದಾಗಿರುತ್ತದೆ.

ಇದನ್ನೂ ಓದಿ: KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?

Training Center Address- ತರಬೇತಿ ನಡೆಯುವ ಸ್ಥಳ:

ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343

ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612

LATEST ARTICLES

Related Articles

Most Popular