ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಎರಡು ವರ್ಷದ ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಪ್ರವೇಶಕ್ಕೆ(Horticulture diploma admission) ಅರ್ಜಿ ಆಹ್ವಾನಿಸಲಾಗಿದೆ.
2024-25 ನೇ ಸಾಲಿನ ತೋಟಗಾರಿಕೆ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಕೆ ವಿಧಾನ, ಡಿಪ್ಲೋಮಾ ಕೋರ್ಸ್ ಮಾಹಿತಿ ಇತರೆ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ. ತೋಟಗಾರಿಕೆ ವಿಶ್ವವಿದ್ಯಾಲಯ ಅಧಿಕೃತ ಪ್ರಕಟಣೆ ವಿವರವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: PM Internship Yojana-2024: ಕೇಂದ್ರದಿಂದ ಪಿ ಎಂ ಇಂಟರ್ನಶಿಪ್ ಯೋಜನೆ ಜಾರಿಗೆ ಅಸ್ತು! ತಿಂಗಳಿಗೆ ರೂ 5,000 ಭತ್ಯೆ!
Diploma Horticulture-ಡಿಪ್ಲೋಮಾ ತೋಟಗಾರಿಕೆ ಕೋರ್ಸ್ ಹಿನ್ನೆಲೆ:
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷಿ/ತೋಟಗಾರಿಕಾ ಸಹಾಯಕರ ಕೊರತೆಯಿಂದಾಗಿ ಒಕ್ಕಲುತನದ ತಂತ್ರಜ್ಞಾನವು ಸಮರ್ಪಕವಾಗಿ ರೈತ ಸಮುದಾಯಕ್ಕೆ ಸರಿಯಾದ ಸಮಯದಲ್ಲಿ ತಲುಪದೆ ಒಕ್ಕುಲತನದ ಒಟ್ಟಾರೆ ಅಭಿವೃದ್ಧಿಯು ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.
ಸಮಗ್ರ ಕೃಷಿ ಪದ್ಧತಿಯ ಪ್ರಾಮುಖ್ಯತೆ ಹಾಗೂ ಪ್ರಯೋಜನೆಗಳನ್ನು ಮನಗಂಡು, ಕರ್ನಾಟಕ ಘನ ಸರ್ಕಾರವು ತನ್ನ ಐತಿಹಾಸಿಕ ಕೃಷಿ ಅಭಿವೃದ್ಧಿಪರ ನಿಲುವನ್ನು ರಾಜ್ಯದ ಕೃಷಿ ಅಭಿವೃದ್ಧಿಗೆ ಪೂರಕವಾಗುವಂತೆ ಕೃಷಿಗೆ ವಿಶೇಷ ಅನುದಾನವನ್ನು 2011-12 ಹಾಗೂ 2012-13ರಲ್ಲಿ ಮಂಡಿಸಿತು. ಇದಲ್ಲದೇ ತೋಟಗಾರಿಕೆ, ಕೃಷಿ ಹಾಗೂ ಪೂರಕ ಕಸಬುಗಳ ಸರ್ವಾಂಗೀಣ ಅಭಿವೃದ್ಧಿಗೆ ಸೂಕ್ತವಾದ ಹಾಗೂ ಪೂರಕವಾದ ರೀತಿಯಲ್ಲಿ ನೀತಿನಿಯಮಗಳನ್ನು ರೂಪಿಸಿ ಅವಶ್ಯಕವಾದ ಹಣಕಾಸಿನ ಸೌಲಭ್ಯ ಒದಗಿಸಿದೆ.
ಒಕ್ಕಲುತನಕ್ಕೆ ಸಂಬಂಧಿಸಿದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶಗಳಿಂದ ಕೃಷಿ. ತೋಟಗಾರಿಕೆ ಹಾಗೂ ಪಶುಸಂಗೋಪನೆ ವಿಷಯಗಳಲ್ಲಿ ಡಿಪ್ಲೋಮಾ ಕೋರ್ಸನ್ನು ಪ್ರಾರಂಭಿಸಲಾಗಿದೆ. ಈ ದಿಸೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮೊದಲ ಬಾರಿಗೆ 2012-13ನೇ ವರ್ಷದಿಂದ ತೋಟಗಾರಿಕೆಯಲ್ಲಿ ಒಂದು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಅಡಿಯಲ್ಲಿ ಪ್ರಾರಂಭಿಸಿತು.
ಇದನ್ನೂ ಓದಿ: Free hostel application-ಉಚಿತ ಹಾಸ್ಟೆಲ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
2013-14 ನೇ ಸಾಲಿನಿಂದ ಎರಡು ವರ್ಷದ ಡಿಪ್ಲೋಮಾ ಕೋರ್ಸ್‌ನ್ನು ಎರಡು ಕೇಂದ್ರಗಳಲ್ಲಿ ಪ್ರಾರಂಭಿಸಲಾಯಿತು. 2017-18 ನೇ ಸಾಲಿನಿಂದ ಮತ್ತೇ ಎರಡು ಕೇಂದ್ರಗಳಲ್ಲಿ ಹೊಸದಾಗಿ ಎರಡು ವರ್ಷದ ಡಿಪ್ಲೋಮಾ ಕೋರ್ಸನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ 2021-22ನೇ ಸಾಲಿನಿಂದ ತೋಟಗಾರಿಕೆಯಲ್ಲಿ ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್‌ನ್ನು ಒಟ್ಟು ಎರಡು ಕೇಂದ್ರಗಳಲ್ಲಿ ಮಾತ್ರ ಮುಂದುವರಿಸಲಾಗಿದೆ (2023-24 ವರ್ಷ ಹೊರತುಪಡಿಸಿ).
ಡಿಪ್ಲೋಮಾ (ತೋಟಗಾರಿಕೆ) ಪಡೆದವರು ಏನು ಮಾಡಬಹುದು ?
1) ಮುಖ್ಯವಾಗಿ, ಡಿಪ್ಲೋಮಾದಲ್ಲಿ ತೇರ್ಗಡೆಯಾದವರು ತೋಟಗಾರಿಕೆಯಲ್ಲಿ ಸಶಕ್ತರಾಗಿ ನಿರತರಾಗಲು, ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಹೋಗುವ ಹಂಬಲವನ್ನು ನಿಯಂತ್ರಿಸುವುದರ ಜೊತೆಗೆ ಈ ಪ್ರದೇಶಗಳಲ್ಲಿ ತೋಟಗಾರಿಕೆಯನ್ನು ಅಭಿವೃದ್ಧಿಪಡಿಸಿ ಪ್ರಗತಿಪರ ರೈತರಾಗುವಲ್ಲಿ ನೆರವಾಗುತ್ತದೆ.
2) ವಿದ್ಯಾರ್ಥಿಗಳು ಗ್ರಾಮೀಣ ಮಟ್ಟದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹಾಗೂ ಅವುಗಳ ಮೌಲ್ಯವರ್ಧನೆಗೆ ಸಂಬಂಧಪಟ್ಟ ತಾಂತ್ರಿಕತೆಗಳನ್ನು ರೈತರಿಗೆ ಮುಟ್ಟಿಸುವ ದಿಸೆಯಲ್ಲಿ ಮುಂಚೂಣಿಯ ಕಾರ್ಯಕರ್ತರಾಗಿ ಹೊರಹೊಮ್ಮುತ್ತಾರೆ.
3) ಡಿಪ್ಲೋಮಾ (ತೋಟಗಾರಿಕೆ)ಯಲ್ಲಿ ತೇರ್ಗಡೆಯಾದವರಿಗೆ ರಾಜ್ಯ ಸರಕಾರದ ಅಭಿವೃದ್ಧಿ ಇಲಾಖೆಗಳಾದ ತೋಟಗಾರಿಕೆ, ಬೀಜೋತ್ಪಾದನಾ ಕಂಪನಿಗಳು, ರಸಗೊಬ್ಬರ ಮತ್ತು ಕೀಟನಾಶಕ ಕಂಪನಿಗಳು, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣಾ ಘಟಕಗಳು, ಆಮದು ಮತ್ತು ರಫ್ತು ಕಂಪನಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಮುಂತಾದ ಕಡೆಗಳಲ್ಲಿ ಉದ್ಯೋಗಾವಕಾಶಗಳ ಸೌಲಭ್ಯ ದೊರೆಯುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: E-kyc status- ಇ-ಕೆವೈಸಿ ಆದವರಿಗೆ ಮಾತ್ರ ಸಿಗಲಿದೆ ಪಿಎಂ ಕಿಸಾನ್ ಹಣ! ಇ-ಕೆವೈಸಿ ಆಗಿದಿಯಾ? ಚೆಕ್ ಮಾಡಿಕೊಳ್ಳಿ!
4) ಡಿಪ್ಲೋಮಾ (ತೋಟಗಾರಿಕೆ)ಯಲ್ಲಿ ಎರಡು ವರ್ಷದ ಕೋರ್ಸ್‌ದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ (ಹಾನರ್ಸ್) ತೋಟಗಾರಿಕೆಯಲ್ಲಿ ಶೇಕಡಾ 5 ರಷ್ಟು ಸೀಟುಗಳನ್ನು ಸಹ ಕಾಯ್ದಿರಿಸಲಾಗಿದೆ. [ಲ್ಯಾಟ್ರಲ್ ಎಂಟ್ರಿ ಟು ಬಿ.ಎಸ್ಸಿ (ಹಾನರ್ಸ್.) ತೋಟಗಾರಿಕೆ]
Horticulture diploma college-ಡಿಪ್ಲೋಮಾ (ತೋಟಗಾರಿಕೆ) ಕೋರ್ಸ್ ಲಭ್ಯವಿರುವ ಕೇಂದ್ರಗಳ ವಿಳಾಸ:
1) ಕಿತ್ತೂರರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ, ತಾ: ಗೋಕಾಕ, ಜಿ: ಬೆಳಗಾವಿ.
2) ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ (ಡಿಪ್ಲೋಮಾ) ಕೇಂದ್ರ, ಹೊಗಳಗೆರೆ, ತಾ: ಶ್ರೀನಿವಾಸಪುರ, ಜಿ: ಕೋಲಾರ.
Horticulture diploma eligibility-ಪ್ರವೇಶಕ್ಕೆ ಶೈಕ್ಷಣಿಕ ಅರ್ಹತೆ ಹಾಗೂ ಆಯ್ಕೆ ವಿಧಾನ:
1) ಈ ಕೋರ್ಸ್‌ಗೆ ಪ್ರವೇಶ ಬಯಸುವ ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇವರು ನಡೆಸುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2) ಅರ್ಜಿ ಸಲ್ಲಿಸಲು ನಿಗದಿತ ಕೊನೆಯ ದಿನಾಂಕದಂದು 25 ವರ್ಷ ಮೀರಿರಬಾರದು.
3) ಎಸ್.ಎಸ್.ಎಲ್.ಸಿ./ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಹಾಗೂ ರೋಸ್ಟರ್ ಪದ್ದತಿ ಆಧರಿಸಿ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುವುದು. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮೂಲ ಎಸ್.ಎಸ್.ಎಲ್.ಸಿ ಅಂಕಪಟ್ಟಿ ವಿತರಣೆಯಾಗದಿದ್ದಲ್ಲಿ ತಾವು ಉತ್ತೀರ್ಣರಾದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ಅಂಕಪಟ್ಟಿಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಸೀಟು ಹಂಚಿಕೆ ನಂತರ ಸಂಬಂಧಪಟ್ಟ ಮಹಾವಿದ್ಯಾಲಯ/ಡಿಪ್ಲೋಮಾ ಕೇಂದ್ರದಲ್ಲಿ ಹಾಜರಾಗುವಾಗ ಕಡ್ಡಾಯವಾಗಿ ಮಂಡಳಿ ನೀಡಿದ ಅಂಕಪಟ್ಟಿಯನ್ನು ಹಾಜರುಪಡಿಸಬೇಕು ತಪ್ಪಿದ್ದಲ್ಲಿ ಪ್ರವೇಶ ರದ್ದಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ನಮೂನೆಯನ್ನು ದಿನಾಂಕ: 05.10.2024 ರಿಂದ 25.10.2024 ರ ನಡುವೆ ಈ ವೆಬ್ಸೈಟ್ ಭೇಟಿ ಮಾಡಿ https://uhsbagalkot.karnataka.gov.in ಡೌನ್ಲೋಡ್ ಮಾಡಿಕೊಂಡು ಪ್ರವೇಶ ಬಯಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿಶ್ವವಿದ್ಯಾಲಯದ ಚಲನ್ ಪ್ರತಿ ಮತ್ತು ಎಲ್ಲಾ ಅವಶ್ಯಕ ದಾಖಲೆಗಳೊಂದಿಗೆ ಡೀನ್ ಸ್ನಾತಕೋತ್ತರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಉದ್ಯಾನಗಿರಿ, ನವನಗರ, ಬಾಗಲಕೋಟ-587104 ಇವರಿಗೆ ಕೊನೆಯ ದಿನಾಂಕ: 25.10.2024 ರಂದು 5.00 ಘಂಟೆಯ ಒಳಗಾಗಿ ಖುದ್ದಾಗಿ ಅಥವಾ ಅಂಚೆಯ ಮೂಲಕ ತಲುಪುವಂತೆ ಸಲ್ಲಿಸುವುದು.
Application link-ಅರ್ಜಿ ನಮೂನೆ: Download Now
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
1) ಡೀನ್, ಕಿತ್ತೂರರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ, ತಾ : ಗೋಕಾಕ. ಜಿ: ಬೆಳಗಾವಿ, 08332-293436, 9449872860,
2) ತೋಟಗಾರಿಕೆ ವಿಸ್ತರಣಾ ಕೇಂದ್ರ ಕೋಲಾರ: 08152-243208, 9449872878
3) ಸಂಯೋಜಕರು, ಡಿಪ್ಲೋಮಾ (ತೋಟಗಾರಿಕೆ) ಎರಡು ವರ್ಷದ ಕೋರ್ಸ್, ತೋ.ಮ. ಅರಭಾವಿ (ಗೋಕಾಕ): 9845656148
4) ಸಂಯೋಜಕರು, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ (ಡಿಪ್ಲೋಮಾ) ಕೇಂದ್ರ, ಕೋಲಾರ (ಹೊಗಳಗೆರೆ): 9900534193
Website link-ಅಧಿಕೃತ ವೆಬ್ಸೈಟ್: Click here