- Advertisment -
HomeAgricultureHorticulture Training-10 ತಿಂಗಳ ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ! ಪ್ರತಿ ತಿಂಗಳು 1,750 ರೂ ಶಿಷ್ಯವೇತನ!

Horticulture Training-10 ತಿಂಗಳ ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ! ಪ್ರತಿ ತಿಂಗಳು 1,750 ರೂ ಶಿಷ್ಯವೇತನ!

2025-26 ನೇ ಸಾಲಿಗೆ ರಾಜ್ಯದ ವಿವಿಧೆಡೆ ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ(10 months horticulture training)ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ತೋಟಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಮತ್ತು ಅರ್ಥಿಕವಾಗಿ ಉತ್ತಮ ಬೇಸಾಯ ಕ್ರಮಗಳ ಕುರಿತು ತರಬೇತಿಯನ್ನು ಪಡೆಯಲು ಆಸಕ್ತಿಯಿರುವ ಅಭ್ಯರ್ಥಿಗಳು ತಾಂತ್ರಿಕ ತರಬೇತಿ ನೀಡಲು ರಾಜ್ಯದ ವಿವಿಧೆಡೆ ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು.

10 ತಿಂಗಳ ತೋಟಗಾರಿಕೆ ತರಬೇತಿ ಯಾವ ತಿಂಗಳಿನಿಂದ ಅರಂಭವಾಗುತ್ತದೆ? ಅರ್ಜಿ ಸಲ್ಲಿಸಲು ಅರ್ಹರು ಯಾರು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಪ್ರವೇಶಕ್ಕೆ ಸೀಟ್ ಅನ್ನು ಪಡೆದವರಿಗೆ ಪ್ರತಿ ತಿಂಗಳು ಸರಕಾರದಿಂದ ನೀಡುವ ಶಿಷ್ಯವೇತನದ ಕುರಿತು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲವಾ? ಇಲ್ಲಿದೆ ಉಪಯುಕ್ತ ಸಲಹೆಗಳು!

10 months horticulture course- ತರಬೇತಿ ನಡೆಯುವ ಅವಧಿ:

ಈ ತರಬೇತಿಯು 02 ಮೇ 2025 ರಿಂದ ಪ್ರಾರ‍ಂಭವಾಗಿ 28 ಮೇ 2026 ರವರೆಗೆ ನಡೆಯಲಿದ್ದು ಒಟ್ಟು 10 ತಿಂಗಳ ಅವಧಿಯ ತರಬೇತಿ ಇದಾಗಿರುತ್ತದೆ.

10 months horticulture training- ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:

ಕನ್ನಡ ವಿಷಯಗಳೊಂದಿಗೆ ಎಸ್‍ಎಸ್‍ಎಲ್‍ಸಿ ಉತ್ತಿರ್ಣರಾಗಿರಬೇಕು.

ಅರ್ಜಿ ಸಲ್ಲಿಸಲು ವಯೋಮಿತಿ:

1) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ: ಕನಿಷ್ಟ 18 ವರ್ಷ ಮತ್ತು ಗರಿಷ್ಠ 33 ವರ್ಷ
2) ಮಾಜಿ ಸೈನಿಕರಿಗೆ: 33 ರಿಂದ 65 ವರ್ಷ
3) ಇತರೆ ವರ್ಗದವರಿಗೆ:18 ವರ್ಷ ರಿಂದ ಗರಿಷ್ಠ 30 ವರ್ಷ.

ಇದನ್ನೂ ಓದಿ: Gruha Jyothi Scheme: ಮನೆ ಬದಲಾವಣೆ ಮಾಡಿದರೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

10 Months Horticulture

10 months horticulture training application- ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ತರಬೇತಿಯನ್ನು ಪಡೆಯಲು ಆಸಕ್ತಿಯಿರುವ ಅಭ್ಯರ್ಥಿಗಳು ಅರ್ಜಿಗಳನ್ನು, ತೋಟಗಾರಿಕೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯತ ಧಾರವಾಡ ಕಛೇರಿಯಲ್ಲಿ ಸಲ್ಲಿಸಬೇಕು.

ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 30 ಮತ್ತು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.15 ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (ಐಪಿಓ) ಅಥವಾ ಬ್ಯಾಂಕ್ ಡಿಮ್ಯಾಂಡ್ ಡ್ರಾಪ್ಟ್‍ನ್ನು ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಅವರ ಹೆಸರಿನಲ್ಲಿ ಪಡೆದು, ಅರ್ಜಿ ಜೊತೆಗೆ ಅರ್ಜಿ ಶುಲ್ಕದ ಬಾಬತ್ತು ಲಗತ್ತಿಸಬೇಕು.

ಅರ್ಜಿ ಫಾರಂಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಛೇರಿಯಲ್ಲಿ ಅಥವಾ ಇಲಾಖಾ ವೆಬ್‍ಸೈಟ್ https://horticulturedir.karnataka.gov.in ನಲ್ಲಿ 01 ಮಾರ್ಚ 2025 ರಿಂದ 30 ಮಾರ್ಚ 2025 ರವರೆಗೆ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Labour Card Application-ಹೊಸದಾಗಿ ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

10 months horticulture training last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಭರ್ತಿ ಮಾಡಿದ ಅರ್ಜಿ ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ 01 ಎಪ್ರೀಲ್ 2025 ರ ಸಂಜೆ 5:30 ಗಂಟೆಯೊಳಗಾಗಿ ಸಲ್ಲಿಸಬೇಕು.

ಈ ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ 1,750 ಮಾಸಿಕ ಶಿಷ್ಯವೇತನ ನೀಡಲಾಗುತ್ತದೆ:

ಈ ತರಬೇತಿಯನ್ನು ಪಡೆಯಲು ಆಯ್ಕೆಯಾಗುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1,750 ರೂ ಶಿಷ್ಯವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!

ತರಬೇತಿ ಪಡೆಯಲು ಷರತ್ತುಗಳು ಹೀಗಿವೆ:

ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪೋಷಕರು ಕಡ್ಡಾಯವಾಗಿ ಜಮೀನಿ ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡಬೇಕು.

ಅಭ್ಯರ್ಥಿಯು ತಮ್ಮ ಸ್ವಂತ ತೋಟಗಳನ್ನು ಅಭಿವೃದ್ದಿಪಡಿಸಬೇಕೆಂಬ ಅಭಿಲಾಷೆಯುಳ್ಳವವರಿ ಆಧ್ಯತೆ ನೀಡಲಾಗುತ್ತದೆ.

ಈ ತರಬೇತಿಯ ಕಾಲಾವಧಿ 10 ತಿಂಗಳು ತರಬೇತಿಯು ದಿನಾಂಕ: 02 ಮೇ 2024 ರಿಂದ ಪ್ರಾರ‍ಂಭವಾಗಿ 28 ಮೇ 2025 ರವರೆಗೆ ನಡೆಯುತ್ತದೆ.

ತರಬೇತಿಯ ಅಂತ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೇಗಳನ್ನು ನಡೆಸಲಾಗುತ್ತದೆ. ಅಂತಿಮ ಪರೀಕ್ಷೆಗೆ ಕುಳಿತುಕೊಳ್ಳಲು ಶೇ 75 ರಷ್ಟು ಹಾಜರಾತಿ ಕಡ್ಡಾಯ( ವೈದ್ಯಕೀಯ ಆಧಾರದ ಮೇಲೆ ಗರಿಷ್ಟ 30 ದಿನಗಳ ವಿನಾಯಿತಿ ಪಡೆಯಬವುದು)

ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು:

Horticulture department karnataka- ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸಟ್ : Click here
ಕಚೇರಿ ದೂರವಾಣಿ ಸಂಖ್ಯೆ: 0836-2957801

- Advertisment -
LATEST ARTICLES

Related Articles

- Advertisment -

Most Popular

- Advertisment -