How to block SIM card- ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಅನ್ನು ಖರೀದಿಸಿರುವ ಅನುಮಾನವಿದೆಯೇ? ಹಾಗಾದರೆ ಈ ವೆಬ್ಸೈಟ್ ಭೇಟಿ ಮಾಡಿ ಮಾಹಿತಿ ತಿಳಿಯಿರಿ.

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಎಷ್ಟು ಉಪಯುಕ್ತ ಕೆಲಸಗಳು ಅಗುತ್ತವೆಯೋ ಅಷ್ಟೇ ಪ್ರಮಾಣದ ದುರುಪಯೋಗದ ಚಟುವಟಿಕೆಗಳನ್ನು ನಡೆಸುವುದನ್ನು ನಾವು ನೋಡುತ್ತಿದ್ದೇವೆ.

ಅದ್ದರಿಂದ ಡಿಜಿಟಲ್ ಮಾಧ್ಯಮದ ಕುರಿತು ಒಂದಿಷ್ಟು ಮಾಹಿತಿಯನ್ನು ಪ್ರತಿಯೊಬ್ಬ ನಾಗರಿಕರು ತಿಳಿದುಕೊಳ್ಳುವುದು ಅತ್ಯವಶ್ಯಕ. ಇಂದು ಈ ಅಂಕಣದಲ್ಲಿ ಸಿಮ್ ಕಾರ್ಡ ಬಳಕೆ ಮತ್ತು ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಇವೆ? ಅದರ ನಂಬರ್ ಯಾವುದು? ನೀವು ಖರೀದಿ ಮಾಡದೇ ಇರುವ ಅಥವಾ ನೀವು ಉಪಯೋಗಿಸದೇ ಇರುವ ಸಿಮ್ ಅನ್ನು ಹೇಗೆ ಬ್ಲಾಕ್ ಮಾಡುವುದು ಎಂದು ವಿವರಿಸಲಾಗಿದೆ.

ಯಾವುದೇ ಆನ್ಲೈನ್ ಚಟುವಟಿಕೆಗಳನ್ನು ಕೈಗೊಳ್ಳಲು ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆ ಮಾಡಲು ಮತ್ತು ಕರೆ ಮಾಡಿ ಇತರರೊಂದಿಗೆ ಮಾತಾಡಲು ಸಿಮ್ ಕಾರ್ಡ ಅಗತ್ಯವಾಗಿ ಬೇಕಾಗುತ್ತದೆ. ಇದನ್ನು ಖರೀದಿಸಲು ಗುರುತಿನ ಚೀಟಿ/ಆಧಾರ್ ಕಾರ್ಡ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಒಂದೊಮ್ಮೆ ಯಾರಾದರು ನಿಮ್ಮ ದಾಖಲೆಗಳನ್ನು ಬಳಕೆ ಮಾಡಿಕೊಂಡು ಸಿಮ್ ಖರೀದಿಸಿ ಅನಧಿಕೃತವಾಗಿ ನಿಮ್ಮ ಹೆಸರಿನ ಸಿಮ್ ಬಳಕೆ ಮಾಡಿದರೆ ಅದನ್ನು ತಡೆಯಲು ಈ ಕೆಳಗೆ ತಿಳಿಸಿರುವ ಕೇಂದ್ರ ಸರಕಾರದ Department of Telecommunications ನ ವೆಬ್ಸೈಟ್ ಭೇಟಿ ಮಾಡಿ ಬ್ಲಾಕ್ ಮಾಡಬವುದಾಗಿದೆ.

How to block SIM card- ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಅಥವಾ ಬೇರೆ ಯಾರಾದರೂ ಅನಧಿಕೃತವಾಗಿ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾರೆಯೇ? ಎಂದು  ತಿಳಿಯಲು ವಿಧಾನ:

ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಅನ್ನು ಖರೀದಿಸಿರುವ ಅನುಮಾನವಿದೆಯೇ? ಹಾಗಾದರೆ ಒಮ್ಮೆ Department of Telecommunications ನ  ಈ ವೆಬ್ಸೈಟ್ ಭೇಟಿ ಮಾಡಿ ತಪ್ಪದೇ ಪರಿಶೀಲಿಸಿಕೊಳ್ಳಿ.

Step-1: ಮೊದಲಿಗೆ ನಿಮ್ಮ ಮೊಬೈಲ್ ಮೂಲಕ ಸಂಚಾರಸಾತಿ ಡಾಟ್ ಕಾಮ್ ನ ಈ https://tafcop.sancharsaathi.gov.in/telecomUser/  ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ನಂತರ ಸಧ್ಯ ನಿಮ್ಮ ಬಳಿಯಿರುವ  ಮೊಬೈಲ್ ನಂಬರ್ ಹಾಕಿ ನಂತರ ಕೆಳಗಡೆ ಕಾಲಂ ನಲ್ಲಿ ಕಾಣುವ ಕ್ಯಾಪ್ಚರ್ ನಮೂದಿಸಿ “Validate Captcha” ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ನೀವು ನಮೂದಿಸಿರುವ ಮೊಬೈಲ್ ಸಂಖ್ಯ್ಗೆಗೆ 6 ಅಂಕಿಯ ಒಟಿಪಿ ಬರುತ್ತದೆ ಅದನ್ನು ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿ ಇಲ್ಲಿಯವರೆಗೆ ಎಷ್ಟು ಸಿಮ್ ಖರೀದಿ ಮಾಡಲಾಗಿದೆ ಎಂದು ಪ್ರತಿಯೊಂದು ಸಿಮ್ ಕಾರ್ಡ ನಂಬರ್ ನಲ್ಲಿ ಪ್ರಥಮ ಮತ್ತು ಕೊನೆಯ 2 ನಂಬರ್ ಗಳನ್ನು ತೋರಿಸುತ್ತದೆ.

ಅನಧಿಕೃತವಾಗಿ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬ್ಲಾಕ್ ಮಾಡುವ ವಿಧಾನ:

ಕೇಂದ್ರ ಸರಕಾರದ Department of Telecommunications ನ(https://tafcop.sancharsaathi.gov.in/telecomUser/)  ಇದೆ ಜಾಲತಾಣದಲ್ಲಿ ಅನಧಿಕೃತವಾಗಿ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡಬವುದು.

Step-1: ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಇವೆ ಎಂದು ತಿಳಿದುಕೊಂಡ ನಂತರ ನಿಮದಲ್ಲದ ಮೊಬೈಲ್ ಸಂಖ್ಯೆಯ ಮುಂದೆ ಇರುವ ಟಿಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಆ ಮೊಬೈಲ್ ಸಂಖ್ಯೆಯ ಮುಂದೆ ಕಾಣುವ “NOT MY NUMBER” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Report” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: “Report” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ “Are you sure” ಎಂದು ನೋಟಿಪಿಕೇಶ ತೋರಿಸುತ್ತದೆ ಅದನು “OK” ಎಂದು ಕ್ಲಿಕ್ ಮಾಡಿದರೆ 4 ಅಂಕಿಯ ನಿಮ್ಮ ಅರ್ಜಿಯ ಸ್ವೀಕೃತಿ ಸಂಖ್ಯೆ ಬರುತ್ತದೆ. ಅಗ ನಿಮ್ಮ ಸಿಮ್ ಕಾಡ ಬ್ಲಾಕ್ ಮಾಡುವ ಅರ್ಜಿ ಸಲ್ಲಿಕೆಯಾಗಿದೆ ಎಂದು.

ಸಲ್ಲಿಸಿದ ಅರ್ಜಿ ಸ್ಥಿತಿ ತಿಳಿಯುವ ವಿಧಾನ:

ಒಮ್ಮೆ ಅನಧಿಕೃತ ಅಥವಾ ಕಳೆದುಹೋಗಿರುವ ಸಿಮ್ ನಂಬರ್ ಅನ್ನು ಬ್ಲಾಕ್ ಮಾಡಲು “Report” ಮಾಡಿರುವ ಅರ್ಜಿಯ ಸ್ಥಿತಿಯನ್ನು ಸಹ ಇದೆ ಜಾಲತಾಣದಲ್ಲಿ ನೋಡಬವುದಾಗಿದೆ.

ಅರ್ಜಿ ಸಲ್ಲಿಕೆಯಾದ ಬಳಿಕೆ ಗೋಚರಿಸುವ ನಾಲ್ಕು ಅಂಕಿಯ ಸ್ವೀಕೃತಿ ಸಂಖ್ಯೆಗಳನ್ನು ಅದೇ ಪುಟದ ಮೇಲೆ( https://tafcop.sancharsaathi.gov.in/telecomUser/) ಕಾಣುವ “Request Number” ಕಾಲಂ ನಲ್ಲಿ ಹಾಕಿ “track” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತೋರಿಸುತ್ತದೆ.

ಈ ಮಾಹಿತಿ ನಿಮಗೆ ಉಪಯುಕ್ತ ಎಂದು ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ನಾಲ್ಕು ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಏಕೆಂದರೆ ಅನಧಿಕೃತ ಸಿಮ್ ಬಳಕೆಯನ್ನು ತಗ್ಗಿಸಲು ಸಹಕರಿಸಿದಂತಾಗುತ್ತದೆ.

ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಅಂಕಣಗಳು: