ಪ್ರತಿ ಮನೆಗೆ ತಿಂಗಳ ಅಂತ್ಯದಲ್ಲಿ ತಾವು ಬಳಕೆ ಮಾಡಿದ ವಿದ್ಯುತ್ ಗೆ ಕೆಇಬಿ ಸಿಬ್ಬಂದಿಗಳು ಬಿಲ್ ಅನ್ನು ಕೊಡುತ್ತಾರೆ ಅದರೆ ಅನೇಕ ಕಾರಣಗಳಿಂದ ಗ್ರಾಮೀಣ ಭಾಗಗಳ ಮನೆಗಳ ಮೀಟರ್ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದಿಲ್ಲ.
ಅದರೆ ಈಗ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಪ್ರಸ್ತುತ ವಾಸವಿರುವವರ ಹೆಸರಿನಲ್ಲಿ ವಿದ್ಯುತ್ ಬಿಲ್ ಇರುವುದು ಕಡ್ಡಾಯವಾಗಿರುವುದರಿಂದ ಗ್ರಾಹಕರು ತಮ್ಮ ಹೆಸರಿಗೆ ವಿದ್ಯುತ್ ಬಿಲ್ ಬರುವ ಹಾಗೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಹಳೆ ಮಾಲೀಕರರಿಂದ ಮತ್ತು ತಂದೆ ಮತ್ತು ತಾತಾನ ಹೆಸರಿಗೆ ಬರುವ ವಿದ್ಯುತ್ ಬಿಲ್‌ಅನ್ನು ನಿಮ್ಮ ಹೆಸರಿಗೆ ವರ್ಗಾಹಿಸಲು ಬೇಕಾಗುವ ದಾಖಲಾತಿ ವಿವರ ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು:
1. ಅರ್ಜಿ ನಮೂನೆ(ಕೆಇಬಿ ಕಚೇರಿಯಲ್ಲಿ ಪಡೆಯಬೇಕು).
2. ಗ್ರಾಹಕರ ಆಧಾರ ಜೆರಾಕ್ಸ್.
3. ಪೋಟೋ-1.
4. 200ರೂ ಬಾಂಡ (INDEMNITY BOND).
5. ಖರೀದಿಸಿದ ಮನೆಯಾಗಿದ್ದರೆ ರಿಜಿಸ್ಟರ್ ಪ್ರತಿ.
6. ವಂಶವೃಕ್ಷ (ತಂದೆ/ತಾತಾನಿಂದ ವರ್ಗಾವಣೆಗಾಗಿ).
7. ಮರಣ ಪ್ರಮಾಣ ಪತ್ರ.
8. ವಿದ್ಯುತ್ ಗುತ್ತಿಗೆದಾರರಿಂದ CR ಅಗ್ರಿಮೇಂಟ್.
9. ವಿದ್ಯುತ್ ಬಿಲ್ಲಿನ ಬಾಕಿ ಮೊತ್ತವನ್ನು ಪಾವತಿಸಿರಬೇಕು
10. ಅರ್ಜಿದಾರನ ಮೊಬೈಲ್ ಸಂಖ್ಯೆ.
ಇದನ್ನೂ ಓದಿ: “ಗೃಹ ಜ್ಯೋತಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?
ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾಯಿಸುವ ಪ್ರಕ್ರಿಯೆ:
ಅಗತ್ಯ ದಾಖಲಾತಿ ಸಮೇತ ನಿಮ್ಮ ಭಾಗದ ವಿದ್ಯುತ್ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ವಿವರ ಭರ್ತಿ ಮಾಡಿ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿದ ನಂತರ
ನೀವು ಸಲ್ಲಿಸಿದ ದಾಖಲೆಗಳು ಮತ್ತು ಅರ್ಜಿಯನ್ನು ಪರಿಶೀಲಿಸಿ ಅಗತ್ಯವಿದಲ್ಲಿ ಸ್ಥಳ ಭೇಟಿ ಮಾಡಿ ಪರಿಶೀಲಿಸಿ ನಿಮ್ಮ ಹೆಸರಿಗೆ ವಿದ್ಯುತ್ ಬಿಲ್ ಬರುವ ಹಾಗೆ ಕ್ರಮ ಕೈಗೊಳ್ಳುತ್ತಾರೆ.
ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಮುಖ್ಯ ವ್ಯವಸ್ಥಾಪಕರ ಶಾಖೆಯನ್ನು ಭೇಟಿ ಮಾಡಿ.
ಬೆಸ್ಕಾಂ ಜಾಲಾತಾಣ: https://bescom.karnataka.gov.in/