Aadhaar bank link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ತಿಳಿಯುವುದೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದಿಯೋ ಇಲ್ಲವೋ? ಮತ್ತು ಲಿಂಕ್ ಅಗಿದ್ದರೆ ಯಾವ ಬ್ಯಾಂಕ್ ಹಾಗೂ  ಖಾತೆಗೆ ಅಗಿದೆ ಎಂದು ಹೇಗೆ ತಿಳಿಯಬವುದು?(aadhaar bank link status) ಆಧಾರ್ ಕಾರ್ಡ ಕುರಿತು ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. 

ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಸವಲತ್ತು ಪಡೆಯಲು ಆಧಾರ್ ಕಾರ್ಡ(Adhar card) ಸರ್ವೇ ಸಾಮಾನ್ಯವಾಗಿ ಸಲ್ಲಿಸಬೇಕಾಗುತ್ತದೆ ಇದರ ಜೊತೆಗೆ ಸರಕಾರಿ ಯೋಜನೆಗಳ ಸಹಾಯಧನದ ಹಣವನ್ನು ನೇರವಾಗಿ ಫಲಾನುಭವಿ ಖಾತೆಗೆ ವರ್ಗಾವಣೆ ಮಾಡಿದಾಗ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಮಾತ್ರ ಫಲಾನುಭವಿ ಖಾತೆಗೆ ಹಣ ಜಮಾ ಅಗುತ್ತದೆ ಇಲ್ಲವಾದಲ್ಲಿ ವರ್ಗಾವಣೆ ಅಗಿರುವುದಿಲ್ಲ.

ರಾಜ್ಯ ಸರಕಾರದ ಸಧ್ಯದ ಅನೇಕ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ದೊಡ್ಡ ಸಂಖ್ಯೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(adhar bank link status check) ಮಾಡಿಕೊಂಡಿರುವುದಿಲ್ಲ ಹೀಗಾಗಿ ಈ ಮಾಹಿತಿಯನ್ನು ನಿಮ್ಮ ಅಪ್ತರಿಗೂ ಶೇರ್ ಮಾಡಿ ಅವರಿಗೂ ತಿಳಿಸಿ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು.

ಆಧಾರ್(adhar) ಎಂದರೇನು?

ಪ್ರಾಧಿಕಾರ ಸೆಕ್ಷನ್ 2ರ ವಿವರಣೆಯ ಅನ್ವಯ ಸೂಚಿಸಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾದ ನಂತರ ಯು.ಐ.ಡಿ.ಐ.ಎ ಭಾರತ ನಿವಾಸಿಗಳಿಗೆ ನೀಡುವ ವಿಶಿಷ್ಟ ಗುರುತಿನ 12 ಅಂಕೆಗಳ ಸಂಖ್ಯೆ ಈ “ಆಧಾರ್”

ಆಧಾರ್ ಯಾರು ಪಡೆಯಬವುದು?

ಯಾವುದೇ ವ್ಯಕ್ತಿ, ಯಾವುದೇ ವಯೋಮಾನ/ಲಿಂಗಳಿರಲಿ ಭಾರತದ ನಿವಾಸಿ ಅಥವಾ ಅನಿವಾಸೀ ಭಾರತೀಯ ಸಹ ಆಧಾರ್ ಸಂಖ್ಯೆಯನ್ನು ಹೊಂದಲು ನೋಂದಣಿ ಮಾಡಿಕೊಳ್ಳಬವುದು. ಪ್ರತಿ ವ್ಯಕ್ತಿಗೆ ಒಂದೇ  ಒಂದು ಆಧಾರ್ ಸಂಖ್ಯೆನ್ನು ನೀಡಲಾಗುತ್ತದ್ದು ಸಂಖ್ಯೆಯ ಅನನ್ಯತೆಯನ್ನು ನಕಲು ಮಾಡಲಾಗದ ಡೆಮೊಗ್ರಾಫಿಕ್ ಹಾಗೂ ಬಯೋಮೆಟ್ರಿಕ್ ಡಿ ಡುಪ್ಲಿಕೇಷನ್ ಪ್ರಕ್ರಿಯೆಯಿಂದ ಸಾಧಿಸಲಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವ ವಿಧಾನ-how to check aadhar link to bank account:

https://resident.uidai.gov.in/bank-mapper ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡನ 12 ಅಂಕಿಯ ಸಂಖ್ಯೆಯನ್ನು “Aadhaar Number” ಕಾಲಂನಲ್ಲಿ ನಮೂದಿಸಬೇಕು ನಂತರ ಇದರ ಕೆಳಗೆ ಇರುವ “Enter Security code” ನಲ್ಲಿ ಕ್ಯಾಪ್ಚರ್ ಕೋಡ ನಮೂದಿಸಿ “Send OTP” ಮೇಲೆ ಕ್ಲಿಕ್ ಮಾಡಿ ಅದಾದ ಬಳಿಕ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ಕೊನೆಯಲ್ಲಿ ನಿಮ್ಮ ಆಧಾರ್ ನಂಬರ್ ಯಾವ ಬ್ಯಾಂಕ್ ಗೆ ನೊಂದಣಿ ಅಗಿದ್ದರೆ “Congratulation Your Adhaar -Bank Mapping hs been done” ಎಂದು ತೋರಿಸುತ್ತದೆ ಇದರ ಜೊತೆಗೆ ಯಾವ ಬ್ಯಾಂಕ್ ಗೆ ಲಿಂಕ್ ಅಗಿದೆ ಎಂದು ಅದರ ಹೆಸರು ಸಹ ತೋರಿಸುತ್ತದೆ.

ಮತ್ತು  ಕೆಳಗೆ  “Bank seeding status” ಕಾಲಂನಲ್ಲಿ “Active” ಎಂದು ಗೋಚರಿಸಬೇಕು, “inactive” ಎಂದು ಗೋಚರಿಸಿದರೆ ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಆಧಾರ‍ ಕಾರ್ಡ ಪ್ರತಿ ನೀಡಿ  Active ಮಾಡಿಕೊಳ್ಳಬೇಕು.

ಇದನ್ನೂ ಓದಿ:  PMFME scheme: ಸ್ವ-ಉದ್ಯೋಗ ಆರಂಭಿಸಲು ಶೇ 35 % ಸಬ್ಸಿಡಿ ಜೊತೆ 15 ಲಕ್ಷದವರೆಗೆ ಸಹಾಯಧನ.


ಹೊಸ ಆಧಾರ್ ಮತ್ತು ಆಧಾರ್ ಅಪ್ಡೇಟ್ ಗಳನ್ನು  ಎಲ್ಲಿ ಮಾಡಿಸಬೇಕು?

ನಿಮ್ಮ ಹತ್ತಿರದ ನಾಡ ಕಚೇರಿ/ನೆಮ್ಮದಿ ಕೇಂದ್ರ , ಆಧಾರ್ ಕೇಂದ್ರಗಳಲ್ಲಿ ಹೊಸ ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸಬವುದು ಮತ್ತು ಇತರೆ ಆಧಾರ್ ಅಪ್ಡೇಟ್ ಗಳನ್ನು ಮಾಡಿಸಿಕೊಳ್ಳಬವುದು.

ನಿಮ್ಮ ಮೊಬೈಲ್ ನಲ್ಲೇ ಆಧಾರ್ ಡೌನ್ಲೋಡ್ ಮಾಡಬವುದು:

ನಿಮ್ಮ ಬಳಿ ಆಧಾರ‍ ಮೂಲ ಪ್ರತಿ ಇಲ್ಲದೇ ಇರುವ ಸಂದರ್ಭದಲ್ಲಿ https://myaadhaar.uidai.gov.in/genricDownloadAadhaar  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆದು ನಿಮ್ಮ ಮೊಬೈಲ್ ನಲ್ಲೇ ಆಧಾರ‍ ಕಾರ್ಡ ಡೌನ್ಲೋಡ ಮಾಡಿಕೊಳ್ಳಬವುದು. 

ಆಧಾರ್ ಉಚಿತ ಸಹಾಯವಾಣಿ ಸಂಖ್ಯೆ-Aadhar helpline number: 

ಆಧಾರ್ ಕಾರ್ಡ ಸೇವೆಗಳ ಕುರಿತು ಪ್ರಶ್ನೊತ್ತರಗಳಿಗೆ ಉಚಿತ ಸಹಾಯವಾಣಿ 1947 ಸಂಖ್ಯೆಗೆ ಕರೆ ಮಾಡಿ ತಿಳಿಯಬವುದು.

ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು:

ಆಧಾರ್ ವೆಬ್ಸೈಟ್(adhar card website): https://resident.uidai.gov.in/