ಕೃಷಿಕರಿಗೆ ತಮ್ಮ ತಮ್ಮ ಜಮೀನಿಗೆ ಹೋಗಲು ಮತ್ತು ಕೃಷಿ ಸಲಕರಣೆಗಳನ್ನು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಲು ಜಮೀನಿಗೆ ದಾರಿ(Agriculture land road) ಅತೀ ಮುಖ್ಯ ಇತ್ತಿಚೇಗೆ ಕೆಲವು ವೈಯಕ್ತಿಕ ದ್ವೇಷದಿಂದ ಅನಾದಿ ಕಾಲದಿಂದಲು ಇದ್ದ ದಾರಿಯನ್ನು ಮುಚ್ಚುವ ಪ್ರಕರಣಗಳು ರೈತಾಪಿ ವರ್ಗದಲ್ಲಿ ಹೆಚ್ಚುತ್ತಿದ್ದು ಇದಕ್ಕಾಗಿ ಸರಕಾರದಿಂದ ಕಟ್ಟು ನಿಟ್ಟಿನ ನಿಯಮವನ್ನು ಜಾರಿಗೆ ತರಲಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸರಾಗವಾಗಿ ಮಾರುಕಟ್ಟೆಗೆ ಸಾಗಿಸಲು ಹಾಗೂ ಟ್ರಾಕ್ಟರ್(Tractor) ಸೇರಿದಂತೆ ಕಟಾವು ಯಂತ್ರ ಇತರೆ ಉಪಕರಣಗಳನ್ನು(Agriculture equipment) ಜಮೀನಿಗೆ ತೆಗೆದುಕೊಂಡು ಹೋಗಿ ಕೃಷಿ ಚಟುವಟಿಕೆಗಳನ್ನು ಮಾಡಲು ಸರಿಯಾದ ದಾರಿ ವ್ಯವಸ್ಥೆ ಇರಬೇಕಾಗುತ್ತದೆ.
ಇದನ್ನೂ ಓದಿ: Bank Loan-ಬ್ಯಾಂಕ್ ನಿಂದ ಸಾಲ ಪಡೆಯುವಾಗ ಈ ತಪ್ಪು ಮಾಡದಿರಿ!
ರೈತರು ತಮ್ಮ ತಮ್ಮ ಹೊಲಗಳಿಗೆ ಹೋಗಲು ಇರುವ ಕಾಲುದಾರಿ ಮತ್ತು ಬಂಡಿದಾರಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳಲು ರೈತರಿಗೆ ನೆರವು ನೀಡಲು ರಾಜ್ಯ ಸರಕಾರದಿಂದ ನೂತನ ಸುತ್ತೋಲೆಯನ್ನು ಹೊರಡಿಸಲಾಗಿದೆ ಈ ಸುತ್ತೋಲೆಯನ್ವಯ ಇನ್ನು ಮುಂದೆ ಯಾವುದೇ ಜಮೀನಿಗೆ ಹೋಗಲು ದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ದಾರಿ ಮಾಡಿ ಕೊಡಲು ಸರ್ಕಾರವು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಿದೆ.
Agriculture land road- ಏನಿದು ದಾರಿ ಸಮಸ್ಯೆ?
ಹಳ್ಳಿಗಳಲ್ಲಿ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ರೈತರು ಮತ್ತು ಕೃಷಿ ಯಂತ್ರೋಪಕರಣಗಳನ್ನು ತಮ್ಮ ತಮ್ಮ ಜಮೀನುಗಳಿಗೆ ತೆಗೆದುಕೊಂಡು ಹೋಗಲು ಬೇರೊಬ್ಬರ ಜಮೀನನ್ನ ದಾಟಿ ಹೋಗುವ ಸನ್ನಿವೇಶಗಳನ್ನು ಆ ಜಮೀನಿನ ಮಾಲೀಕ ತೊಂದರೆ ಉಂಟು ಮಾಡುತ್ತಾರೆ ಇಂತಹ ಸಮಯದಲ್ಲಿ ದಾರಿ ಸಮಸ್ಯೆ ಉದ್ಬವಿಸುತ್ತದೆ.
Kaludhari-bandi dhari-ಕಾಲುದಾರಿ ಮತ್ತು ಬಂಡಿದಾರಿ ವ್ಯಾತ್ಯಾಸವೇನು?
ಜಮೀನಿಗೆ ಹೋಗವ ದಾರಿಗಳಲ್ಲಿ ಎರಡು ವಿಧಗಳಿದ್ದು ಒಂದನೇಯದು “ಕಾಲು ದಾರಿ(Kaludhari)” ಇದು ಸಣ್ಣದಾಗಿರುತ್ತದೆ ಮಾನವ ಓಡಾಟಕ್ಕೆ ಇದನ್ನು ನಿಗದಿಪಡಿಸಲಾಗಿರುತ್ತದೆ, “ಬಂಡಿದಾರಿ” ಎಂದರೆ ಕೃಷಿ ಯಂತ್ರೋಪಕರಣ ಓಡಾಟಕ್ಕೆ ನಿಗದಿಪಡಿಸಿದ ದಾರಿಗೆ “ಬಂಡಿದಾರಿ(Bandi dhari)” ಎಂದು ಕರೆಯುತ್ತಾರೆ.
ಇದನ್ನೂ ಓದಿ: Money saving tips- ನಿಮ್ಮ ಬಳಿ ಹಣ ಉಳಿಯುತ್ತಿಲ್ಲವೇ? ಇಲ್ಲಿದೆ ಹಣ ಉಳಿತಾಯಕ್ಕೆ ಸೂಕ್ತ ಸಲಹೆಗಳು!
ಜಮೀನಿನ ದಾರಿ ಸಮಸ್ಯೆ ಪರಿಹಾರಕ್ಕೆ ಸರಕಾರದಿಂದ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶ:
ರೈತರು ವ್ಯವಸಾಯ ಉದ್ದೇಶಕ್ಕಾಗಿ ಖಾಸಗಿ ಜಮೀನಿನಲ್ಲಿ ತಿರುಗಾಡವುದಿದ್ದರೂ ಅವರಿಗೆ ಕಾಲುದಾರಿ ಅಥವಾ ಬಂಡಿದಾರಿ ಮಾಡಿಕೊಡಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ರೈತರು ಎಷ್ಟೋ ಬಾರಿ ತಮ್ಮ ಜಮೀನಿಗೆ ಬೇರೆ ಜಮೀನಿನ ಮೂಲಕ ಸಾಗಾಟ-ಓಡಾಟ ನಡೆಸಬೇಕು ಅಲ್ಲಿಯವರೆಗೆ ಅವಕಾಶ ನೀಡಲು ಸೂಚಿಸಲಾಗಿದೆ.
ಈ ಹಿಂದೆ ಕಾಲುದಾರಿ ಮತ್ತು ಬಂಡಿದಾರಿಗಳು ಎಲ್ಲಾ ಜಮೀನುಗಳಿಗೂ ಇದೇ ಇರುತ್ತದೆ ಅದರೆ ಕಾಲ ಕಳೆದಂತೆ ಕೆಲವು ಮನುಷ್ಯರು ದುರಸೆಗೆ ಬಿದ್ದು ಅನಾದಿ ಕಾಲದಿಂದಲು ಇದ್ದ ದಾರಿಯನ್ನು ಮುಚ್ಚಿ ಅಕ್ಕ-ಪಕ್ಕದ ರೈತರಿಗೆ ತೊಂದರೆ ಉಂಟು ಮಾಡಿದರೆ ಅಂತವರ ವಿರುದ್ದ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರಿಗೆ ರಾಜ್ಯ ಸರಕಾರದಿಂದ ಆದೇಶ ಹೊರಡಿಸಲಾಗಿದೆ.
Village revenue map download- ನಿಮ್ಮ ಹಳ್ಳಿಯ ನಕಾಶೆಯನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ:
ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ರೈತರು ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಕಡಿಮೆ ಸಮಯ ಬಳಸಿ ತಮ್ಮ ತಮ್ಮ ಹಳ್ಳಿಯ ನಕಾಶೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
Step-1: ಮೊದಲಿಗೆ Village revenue map ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ: Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!
Step-3: ಇಲ್ಲಿ ನಿಮ್ಮ ಹಳ್ಳಿ ಹೆಸರು ಇರುವ ಕಾಲಂ ಮುಂದೆ “Pdf File” ವಿಭಾಗದಲ್ಲಿ PDF ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ನಕಾಶೆ ಡೌನ್ಲೋಡ್ ಅಗುತ್ತದೆ.
ಈ ನಕಾಶೆಯಲ್ಲಿ ನಿಮ್ಮ ಜಮೀನಿಗೆ ಹೋಗಲು ಯಾವ ಜಾಗದಲ್ಲಿ ಕಾಲು ದಾರಿ ಮತ್ತು ಬಂಡಿ ದಾರಿ ಇದೆ ಎನ್ನುವ ಮಾಹಿತಿಯನ್ನು ತಿಳಿಯಬಹುದು.