Janana pramana patra-2024: ಜನನ ಪ್ರಮಾಣ ಪತ್ರ ಪಡೆಯುವುದು ಬಾರೀ ಸುಲಭ! ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

ಹುಟ್ಟಿದ ಪ್ರತಿಯೊಬ್ಬ ಮಗುವಿಗೆ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದ್ದು ಈ ಪ್ರಮಾಣ ಪತ್ರವನ್ನು(Birth Certificate) ಪಡೆಯಲು ಆನ್ಲೈನ್ ಮೂಲಕ ಹೇಗೆ ಪಡೆಯಬಹುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಜನನ ಪ್ರಮಾಣ ಪತ್ರವು ಅಗತ್ಯ ದಾಖಲೆಗಳಲ್ಲಿ ಒಂದಾಗಿದ್ದು ಈ ದಾಖಲೆಯನ್ನು ಎಲ್ಲಾ ನಾಗರಿಕರು ತಮ್ಮ ತಮ್ಮ ಮಕ್ಕಳಿಗೆ ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ಅನುಸರಿಸುವುದು ಅನಿರ್ವಾಯವಾಗಿದೆ. ಜನನ ಪ್ರಮಾಣ ಪತ್ರವು(Janana pramana patra) ಯಾವುದಕ್ಕೆಲ್ಲ? ಬಳಕೆ ಮಾಡಬಹುದು, ಈ ದಾಖಲೆಯ ಪ್ರಯೋಜನಗಳೇನು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PMMVY Yojana- ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ ರೂ 11,000 ಸಾವಿರ ಅರ್ಥಿಕ ನೆರವು!

ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಸಾರ್ವಜನಿಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರವನ್ನು ಪಡೆಯಲು ಸುಲಭ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವೆಲ್ಲ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎನ್ನುವ ವಿವರ ಈ ಕೆಳಗಿನಂತಿದೆ.

Birth certificate benefits-ಜನನ ಪ್ರಮಾಣ ಪತ್ರವನ್ನು ಏಕೆ ಪಡೆಯಬೇಕು?

ಹುಟ್ಟಿದ ಮಗುವಿನ ದಿನಾಂಕವನ್ನು ಖಾತರಿ ಪಡಿಸಿಕೊಳ್ಳಲು ಈ ದಾಖಲೆ ಅತ್ಯಗತ್ಯ.

ಮಗುವಿನ ಆಧಾರ್ ಕಾರ್ಡ ಅನ್ನು ಮಾಡಿಸಲು ಜನನ ಪ್ರಮಾಣ ಪತ್ರ ಅವಶ್ಯಕವಾಗಿ ಬೇಕಾಗುತ್ತದೆ.

ಶಾಲ ದಾಖಲಾತಿ ಸಮಯದಲ್ಲಿ ಜನನ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ.

ವಿಮೆ ಯೋಜನೆಯಡಿ ಹಣವನ್ನು ಪಡೆಯಲು ಈ ಪ್ರಮಾಣ ಪತ್ರ ಅವಶ್ಯಕ.

ಇದನ್ನೂ ಓದಿ: MGNREGA-2024: ನರೇಗಾ ಯೋಜನೆಯಡಿ 5.0 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Janana pramana patra

Birth certificate online application- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್(Seva sindhu)ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಸಮಯ ಉಳಿತಾಯ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲೇ ಜನನ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಜಾಲತಾಣಕ್ಕೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

ಇದನ್ನೂ ಓದಿ: BPL card-ಈ ಕಾರ್ಡ ಹೊಂದಿರುವವರಿಗೆ BPL ರ‍ೇಶನ್ ಕಾರ್ಡ ಪಡೆಯಲು ಅವಕಾಶ!

Step-3: ಲಾಗಿನ್ ಅದ ಬಳಿಕ ಇಲ್ಲಿ ಪ್ಲ್ಯಾನಿಂಗ್‌ ಪ್ರೋಗ್ರಾಂ ಮಾನಿಟರಿಂಗ್‌ ಆಂಡ್‌ ಸ್ಟಟಿಸ್ಟಿಕ್ಸ್‌ ಡಿಪಾರ್ಟ್‌ಮೆಂಟ್‌ ಅನ್ನು ಕ್ಲಿಕ್‌ ಮಾಡಿ. ಅಲ್ಲಿ ಬರ್ತ್‌ ಸರ್ಟಿಫಿಕೇಟ್‌ ಕ್ಲಿಕ್‌ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ “Search” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು “Birth certificate” ಎಂದು ಹುಡುಕಿ “Apply” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-4: “Apply” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳಿರುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಆಪ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ:

ಜನನ ಪ್ರಮಾನ ಪತ್ರವನ್ನು ಪಡೆಯಲು ಸಾರ್ವಜನಿಕರು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಾರ್ಯಲಯವನ್ನು ಭೇಟಿ ಮಾಡಿ ಅಥವಾ ತಮ್ಮ ಹೋಬಳಿಯ ನೆಮ್ಮದಿ ಕೇಂದ್ರ/ನಾಡಕಚೇರಿಯನ್ನು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮಗುವಿನ ಜನನ ಪ್ರಮಾಣ ಪತ್ರವನ್ನು ಪಡೆಯಬಹುದು.