- Advertisment -
HomeGovt SchemesKarmika Card-ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ!

Karmika Card-ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ!

Hi-tech Mobile Health Unit for Labours of Karnataka -ರಾಜ್ಯ ಸರಕಾರದಿಂದ ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಮತ್ತೊಂದು ನೂತನ ಯೋಜನೆಯನ್ನು ಜಾರಿಗೆ ತರಲಾಗಿದು ಈ ಕಾರ್ಡ ಅನ್ನು ಹೊಂದಿರುವ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ? ಈ ವಿನೂತನ ಯೋಜನೆಯ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ತಿಳಿಸಲಾಗಿದೆ.

ಕರ್ನಾಟಕ ರಾಜ್ಯದ ನೊಂದಾಯಿತ ಕಟ್ಟಡ(Labour Card) ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ವರ್ಗದವರಿಗೆ ಆರೋಗ್ಯ ರಕ್ಷಣೆಯನ್ನು ನೀಡಲು ಹೊಸ ಯೋಜನೆ ಒಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದಿದ್ದಾರೆ.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

ಈ ಯೋಜನೆಯ ಅಡಿಯಲ್ಲಿ ರಾಜ್ಯದ ಕಾರ್ಮಿಕರಿಗೆ ಏನೆಲ್ಲಾ ಸೌಲಭ್ಯಗಳು(Labour Card Benefits) ಸಿಗಲಿವೆ? ಈ ಯೋಜನೆಯ ಲಾಭವನ್ನು ಪಡೆಯಲು ಯಾವ ಅರ್ಹತೆ ಹೊಂದಿರಬೇಕು ಎಂಬ ಅಧಿಕೃತವಾದ ಮಾಹಿತಿ ಇಲ್ಲಿದೆ.

Hi-tech Mobile Health Unit for Labours-ಯಾವುದು ಈ ಯೋಜನೆ?

ಈ ಯೋಜನೆಯ ಅಡಿಯಲ್ಲಿ ಕಟ್ಟಡ ಕಾರ್ಮಿಕರಿಗೆ ತಾವು ಕೆಲಸ ಮಾಡುತ್ತಿರುವ ಅಥವಾ ವಾಸಿಸುತ್ತಿರುವ ಸ್ಥಳಗಳಿಗೆ ನೇರವಾಗಿ ಭೇಟಿ ನೀಡಿ ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಯನ್ನು ಒದಗಿಸಲಿರುವ ಸಂಚಾರಿ ವಾಹನ ಯೋಜನೆ ಇದಾಗಿದೆ. ಈ ಯೋಜನೆಯನ್ನು ಜಾರಿಗೆ ತರಲು 2022-23 ರಲ್ಲಿಯೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕ್ರಮವಹಿಸಿತ್ತು.

ಇದಕ್ಕೆ ಅನುಗುಣವಾಗಿ ಈಗ 129 ಕೋಟಿ ರೂ. ವೆಚ್ಚದಲ್ಲಿ 100 ಹೈಟೆಕ್ ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸಿದ್ದು, ರಾಜ್ಯದಲ್ಲಿರುವ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇದು ಬಹು ಪ್ರಯೋಜನಕಾರಿ ಆಗಲಿದೆ.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

Hi-tech Mobile Health Unit Details-ಈ ಯೋಜನೆಯ ವಿಶೇಷತೆಗಳೇನು?

ಈ ಸಂಚಾರಿ ಆರೋಗ್ಯ ಘಟಕ ವಾಹನಗಳು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಹಾಗೂ ಕನೆಕ್ಟೆಡ್ ಹೆಲ್ತ್ ಎಕೋ ಸಿಸ್ಟಮ್ ಹೊಂದಿದ್ದು, ಕಾರ್ಮಿಕರು ತಾವು ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಅಥವಾ ಕಾರ್ಮಿಕರು ವಾಸಿಸುತ್ತಿರುವ ಸ್ಥಳಗಳಿಗೆ ನೇರವಾಗಿ ಭೇಟಿ ನೀಡಿ ಅರೋಗ್ಯ ಸೇವೆಗಳನ್ನು ನೀಡಲಿವೆ. ಈ ಸಂಚಾರಿ ವಾಹನದಲ್ಲಿ ನುರಿತ ವೈದ್ಯ, ನರ್ಸ್, ಫಾರ್ಮಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಒಳಗೊಂಡಿರುವಂತಹ ತಂಡ ಇರಲಿದ್ದು, ಕಾರ್ಮಿಕರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸಲಿವೆ.

Mobile Health Unit

Karnataka Labour Department Scheme-ಪ್ರತಿಯೊಂದು ಜಿಲ್ಲೆಗೆ ಸಂಚರಿಸಲಿವೆ ಸರಾಸರಿ 3 ವಾಹನಗಳು:

ಹೌದು, ಈ ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಪ್ರತಿಯೊಂದು ಜಿಲ್ಲೆಗೆ ಸರಾಸರಿ ಮೂರು ವಾಹನಗಳು ಸಂಚರಿಸಲಿವೆ. ಇದರಿಂದ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತ ಕುಟುಂಬಗಳು ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಪಡೆಯಲು ಅವಕಾಶವಿದೆ.

ಅದೇ ರೀತಿ ಕಟ್ಟಡ ಕಾರ್ಮಿಕರಿಗೆ ತುರ್ತು ಅರೋಗ್ಯ ಪರಿಸ್ಥಿತಿ ಬೇಕಾದ ಸಮಯದಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಅಂಬುಲೆನ್ಸ್ ಮಾದರಿಯಲ್ಲಿ ಸೇವೆ ನೀಡಲಿದ್ದು, ಸಂಬಂಧಪಟ್ಟ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ದೊರೆಯಲಿದೆ.

ಇದನ್ನೂ ಓದಿ: Bagar Hukum-ಬಗರ್ ಹುಕುಂ ಅರ್ಜಿ ವಿಲೇವಾರಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Labour Department Yojana-ಈ ಯೋಜನೆಯ ಲಾಭ ಪಡೆಯಲು ಏನು ಮಾಡಬೇಕು?

ಕರ್ನಾಟಕ ರಾಜ್ಯ ಸರ್ಕಾರವು ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದ್ದು ಈ ಯೋಜನೆಯ ಲಾಭವನ್ನು ನೀವು ಪಡೆಯಬೇಕಾದಲ್ಲಿ ನಿಮ್ಮ ಹತ್ತಿರ ಕಡ್ಡಾಯವಾಗಿ ಲೇಬರ್ ಕಾರ್ಡ್ ಇರಬೇಕು. ಒಂದು ವೇಳೆ ನೀವು ಕಾರ್ಮಿಕರಾಗಿದ್ದು ಎಲ್ಲಿಯ ತನಕ ಲೇಬರ್ ಕಾರ್ಡ್ ಹೊಂದಿರದೆ ಇದ್ದಲ್ಲಿ ಹತ್ತಿರದ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಲೇಬರ್ ಕಾರ್ಡ್ ಪಡೆದುಕೊಳ್ಳಿ.

Mobile Health Unit Faculty-ಈ ವಾಹನದ ವಿಶೇಷತೆಗಳೇನು?

ಈ ವಾಹನದ ಮೂಲಕ ನಿರಂತರವಾಗಿ ಕಾರ್ಮಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ ಇಲ್ಲಿ ಕನೆಕ್ಟೆಡ್ ಹೆಲ್ತ ಎಕೋ ಸಿಸ್ಟಂ ಅಳವಡಿಕೆ ಮಾಡಲಾಗಿದ್ದು ವೈದ್ಯರು, ನರ್ಸ್, ಫಾರ್ಮಸಿಸ್ಟ್, ಎ ಎನ್ ಎಂ ಪದವಿ ಹೊಂದಿದ ಮತ್ತು ಲ್ಯಾಬ್ ಟೆಕ್ನೀಷಿಯನ್ ಒಳಗೊಂಡ ಟೀಮ್ ಇಲ್ಲಿ ಇರಲಿದೆ.

ಇದನ್ನೂ ಓದಿ: Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

- Advertisment -
LATEST ARTICLES

Related Articles

- Advertisment -

Most Popular

- Advertisment -