Karnataka post office jobs-2024: ಕರ್ನಾಟಕ ಅಂಚೆ ಇಲಾಖೆಯಲ್ಲಿ 1900+ ಹುದ್ದೆಗಳ ಬೃಹತ್ ನೇಮಕಾತಿ!

ಕರ್ನಾಟಕ ಅಂಚೆ ವೃತ್ತ ಇಲಾಖೆಯಲ್ಲಿ 1900 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ ಹುದ್ದೆಗಳನ್ನು ನೇಮಕಾತಿ(Karnataka post office notification) ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯ ಸಂಪೂರ್ಣ ವಿವರವೂ ಇಲ್ಲಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶವಿದ್ದು, ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು, ವಯೋಮಿತಿ ಅರ್ಹತೆಗಳು(Karnataka post office recruitment 2024) ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಅಧಿಸೂಚನೆಯ ಅಧಿಕೃತ ವಿವರವನ್ನು ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: Marriage Assistane Scheme-2024: ರೂ.60,000/- ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Grameena Dak Sevak Recruitment-ನೇಮಕಾತಿ ವಿವರ 

• ನೇಮಕಾತಿ ಇಲಾಖೆ ಹೆಸರು : ಕರ್ನಾಟಕ ಅಂಚೆ ಇಲಾಖೆ
• ಹುದ್ದೆಗಳ ಸಂಖ್ಯೆ : 1940 ಹುದ್ದೆಗಳು 
• ಅರ್ಜಿ ಸಲ್ಲಿಸುವುದು : ಆನ್ ಲೈನ್ ಮುಖಾಂತರ 

ಶೈಕ್ಷಣಿಕ ಅರ್ಹತೆಗಳು / Educational Qualification : 

ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

Age limit-ವಯೋಮಿತಿ- ಅರ್ಜಿ ಸಲ್ಲಿಸುವವರು ಅಧಿಸೂಚನೆ ಪ್ರಕಾರ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷದ ಒಳಗಿರಬೇಕು.

ಇದನ್ನೂ ಓದಿ: Karnataka dams water level: ಪ್ರಸ್ತುತ ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ವೇತನ ಶ್ರೇಣಿ / Pay Scale: 

• ಅರ್ಜಿ ಸಲ್ಲಿಸಿ ಅಂತಿಮವಾಗಿ ” ಶಾಖೆ ಪೋಸ್ಟ್ ಮಾಸ್ಟರ್ ” ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹12,000/- ರಿಂದ ₹29,380/- ರವರೆಗೆ ಇರುತ್ತದೆ.
• ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹10,000/- ರಿಂದ ₹24,470/- ರವರೆಗೆ ಇರಲಿದೆ.

Application fee-ಅರ್ಜಿ ಶುಲ್ಕ: 

• ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
• ಉಳಿದ ವರ್ಗದ ಅಭ್ಯರ್ಥಿಗಳಿಗೆ – ₹100/-

ಇದನ್ನೂ ಓದಿ: loan interest Subsidy-ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು : 

• ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 15 ಜುಲೈ 2024
• ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಆಗಸ್ಟ್ 2024

ಪ್ರಮುಖ ಲಿಂಕ್ ಗಳು : 

• ಅಧಿಸೂಚನೆ : ಡೌನ್ಲೋಡ್ 
• ಅರ್ಜಿ ಸಲ್ಲಿಸುವ ಲಿಂಕ್ : Click here