Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!

Facebook
Twitter
Telegram
WhatsApp

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(Pradhan Mantri Kisan Samman Nidhi) ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವ ರೂ 2,000 ಹಣವನ್ನು ದೇಶದ ಎಲ್ಲಾ ರೈತರಿಗೆ ಇಂದು(05-10-2024) ಜಮಾ ಅಗಲಿದ್ದು, ರೈತರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಮನೆಯಲ್ಲೇ ಕುಳಿತು ಹಣ ಜಮಾ ವಿವರವನ್ನು ಹೇಗೆ ತಿಳಿಯುವುದು ಎಂದು ಇಲ್ಲಿ ವಿವರಿಸಲಾಗಿದೆ.

ಕಿಸಾನ್ ಸಮ್ಮಾನ್ ನಿಧಿ(Kisan Samman Nidhi) ಯೋಜನೆಯ 18ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಮಹಾರಾಷ್ಟ್ರದ ವಾಶಿಮ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇಶದ ಅರ್ಹ 9.4 ಕೋಟಿ ರೈತರ ಖಾತೆಗೆ ಏಕ ಕಾಲಕ್ಕೆ ಈ ಯೋಜನೆಯ 18ನೇ ಕಂತಿನ ರೂ 2,000 ಹಣವನ್ನು ಡಿಬಿಟಿ ಮೂಲಕ ಜಮಾ ಮಾಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ರೈತರು ಕೇಂದ್ರದ ಅಧಿಕೃತ www.pmkisan.gov.in ಜಾಲತಾಣವನ್ನು ಪ್ರವೇಶ ಮಾಡಿ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹಾಕಿ ಈ ಯೋಜನೆಯ ಹಣ ಜಮಾ ಅಗಿರುವ ವಿವರವನ್ನು ಹೇಗೆ ತಿಳಿಯುವುದು ಎಂದು ಇಲ್ಲಿ ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

PM-kisan samman nidhi ಹಣ ವರ್ಗಾವಣೆ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

ಈ ಕೆಳಗಿನ ವಿಧಾನವನ್ನು ಅನುಸರಿಸಿ ಕೇಂದ್ರ ಸರಕಾರದ ಅಧಿಕೃತ pmkisan ಜಾಲತಾಣವನ್ನು ಪ್ರವೇಶ ಮಾಡಿ ಕಂತುಗಳವಾರು ಹಣ(Kisan Samman 18th installment) ವರ್ಗಾವಣೆ ಮಾಹಿತಿಯನ್ನು ಪಡೆಯಬಹುದು.

Step-1: ಮೊದಲಿಗೆ Status check ಇಲ್ಲಿ ಒತ್ತಿ ಕಿಸಾನ್ ಸಮ್ಮಾನ್ ಯೋಜನೆಯ(Kisan Samman status check) ಜಾಲತಾಣವನ್ನು ಭೇಟಿ ಮಾಡಿ.

ಇದನ್ನೂ ಓದಿ: Anganawadi job notification-2024: ಅಂಗನವಾಡಿ ಕೇಂದ್ರಗಳಲ್ಲಿ 552 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ನೇಮಕಾತಿ!

Step-2: ನಂತರ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣುವ Captcha ಕೋಡ್ ಅನ್ನು ನಮೂದಿಸಿ “Get mobile” ಬಟನ್ ಮೇಲೆ ಒತ್ತಿ.

Step-3: “Get mobile” ಮೇಲೆ ಒತ್ತಿದ ನಂತರ “OTP has been sent at registered mobile no” ಎಂದು ಸಂದೇಶ ಗೋಚರಿಸುತ್ತದೆ ಅಗ ನೀವು ಹಾಕಿರುವ ಮೊಬೈಲ್ ನಂಬರ್ ಗೆ 4 ಅಂಕಿಯ ಒಟಿಪಿ ಬಂದಿರುತ್ತದೆ ಅದನ್ನು ಇಲ್ಲಿ ನಮೂದಿಸಿ “Get Details” ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: GKVK krishi mela-2024: ಬೆಂಗಳೂರು ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ವಿಶೇಷತೆಗಳ ವಿವರ!

Step-4: “Get Details” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ Registration Number ಮತ್ತು ಹೆಸರು ತೋರಿಸುತ್ತದೆ ಇಲ್ಲಿ ಕಾಣುವ “KA2213*****” ಈ ರೀತಿಯ ನೋಂದಣಿ ಸಂಖ್ಯೆಯನ್ನುಒಂದು ಕಡೆ ಬರೆದುಕೊಂಡು ಮುಂದುವರೆಯಬೇಕು.

Step-5: ಮೇಲಿನ ಹಂತಗಳನ್ನು ಅನುಸರಿಸಿ ರಿಜಿಸ್ಟರ್ ನಂಬರ್ ಅನ್ನು ತೆಗೆದುಕೊಂಡ ನಂತರ Kisan Samman Status check ಇಲ್ಲಿ ಕ್ಲಿಕ್ ಮಾಡಿ “Enter Registration No” ಕಾಲಂ ನಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಕಿ ಮತ್ತು ಕ್ಯಾಪ್ಚ್ ಕೋಡ್ ನಮೂದಿಸಿ “Get OTP” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 4 ಅಂಕಿಯ OTP ಅನ್ನು ಹಾಕಿ “Get Data” ಬಟನ್ ಮೇಲೆ ಕ್ಲಿಕ್ ಮಾಡಿದರೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.

ಇಲ್ಲಿ “Latest Installments Details ವಿಭಾಗದಲ್ಲಿ “FTO processed :- Yes ಮತ್ತು “Payment Status : Payment Processed” ಎಂದು ತೋರಿಸಿದರೆ ನಿಮಗೆ 18ನೇ ಕಂತಿನ ರೂ 2,000 ಹಣ ಜಮಾ ಅಗುತ್ತದೆ ಎಂದು.

ಇದರ ಜೊತೆಯಲ್ಲಿ “Eligibility Status” ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅರ್ಜಿಗೆ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು ಇಲ್ಲಿ “e-KYC Status :- Yes” ಎಂದು ತೋರಿಸಿದರೆ ಇ-ಕೆವೈಸಿ ಅಗಿದೆ ಎಂದು ಅದೆ ರೀತಿ “Aadhaar Bank Account Seeding Status:- Yes” ಎಂದು ತೋರಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದೆ ಎಂದು.

ರಾಜ್ಯ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವೆಬ್ಸೈಟ್: Click here
ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ವೆಬ್ಸೈಟ್: Click here

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Kisan samman-ಕಿಸಾನ್ ಸಮ್ಮಾನ್ ರೂ 2,000 ಹಣ ರೈತರ ಖಾತೆಗೆ! ನಿಮಗೆ ಬಂತಾ ಚೆಕ್ ಮಾಡಿ!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(Pradhan Mantri Kisan Samman Nidhi) ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವ ರೂ 2,000 ಹಣವನ್ನು ದೇಶದ ಎಲ್ಲಾ ರೈತರಿಗೆ ಇಂದು(05-10-2024) ಜಮಾ ಅಗಲಿದ್ದು, ರೈತರು ತಮ್ಮ ಮೊಬೈಲ್

Best insurance plan-2024: ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷ ಅಪಘಾತ ವಿಮೆ ಪರಿಹಾರಕ್ಕೆ ಅರ್ಜಿ!

ಪೋಟೊಗ್ರಾಫರ್, ಬೀದಿಬದಿ ವ್ಯಾಪಾರಿ,ಹಮಾಲರು ಸೇರಿದಂತೆ 20 ವರ್ಗದ ಅಸಂಘಟಿತ ಕಾರ್ಮಿಕರಿಗೆ 1.00 ಲಕ್ಷದವರೆಗೆ ಅಪಘಾತ ವಿಮೆ(Accidental insurance) ಪ್ರಯೋಜನ ಪಡೆಯಲು ನೂತನ ಯೋಜನೆಯನ್ನು ರಾಜ್ಯ ಸರಕಾರದಿಂದ ಜಾರಿಗೆ(insurance plan) ತರಲಾಗಿದ್ದು, ಈ ಯೋಜನೆಯ ಕುರಿತು

Bele parihara

Parihara farmer list-2024: ಹಳ್ಳಿವಾರು ಬೆಳೆ ಪರಿಹಾರ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಬೆಳೆ ನಷ್ಟ ಪರಿಹಾರವನ್ನು(bele parihara) ಪಡೆಯಲು ಎಲ್ಲಾ ದಾಖಲಾತಿಗಳು ಆನ್ಲೈನ್ ನಲ್ಲಿ ಸರಿಯಾಗಿ ಸಲ್ಲಿಸಿರುವ ರೈತರ ಹಳ್ಳವಾರು ಪಟ್ಟಿಯನ್ನು(Parihara farmer list) ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ನಲ್ಲಿ ಹಳ್ಳಿವಾರು ರೈತರ ಪಟ್ಟಿಯನ್ನು