ಕೃಷಿ ಇಲಾಖೆಯಿಂದ ಶೇ 90% ಸಬ್ಸಿಡಿಯಲ್ಲಿ ರೈತರಿಗೆ ಕೃಷಿ ಹೊಂಡ(Krishi honda) ನಿರ್ಮಾಣ ಮಾಡಿಕೊಳ್ಳಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರೈತರು ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಈ ಯೋಜನೆಯಡಿ ರೈತರು ಶೇ 90 ಸಹಾಯಧನದಲ್ಲಿ ಕೃಷಿ ಹೊಂಡ(Farm Pond) ನಿರ್ಮಾಣ, ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing), ಡೀಸೆಲ್ /ಪೆಟ್ರೋಲ್/ಸೋಲಾರ್ ಪಂಪ್ ಸೆಟ್(pump set) ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ.
ಇದನ್ನೂ ಓದಿ: Union Bank Recruitment 2024-ಯೂನಿಯನ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ!
Krishi bhagya- ಕೃಷಿ ಭಾಗ್ಯ ಯೋಜನೆಯ ಉದ್ದೇಶ:
ನಮ್ಮ ರಾಜ್ಯವು ಮಳೆಯಾಶ್ರಿತ ಕೃಷಿಯ ಮೇಲೆಯೇ ಹೆಚ್ಚು ಅಂಟಿಕೊಂಡಿರುವುದರಿಂದ ವಾತಾವರಣ ಬದಲಾವಣೆಯಿಂದ ಗಂಭೀರವಾಗಿ ಪ್ರಭಾವಕ್ಕೊಳಗಾಗುವ ರಾಜ್ಯಗಳಲ್ಲಿ ಒಂದು. ರಾಜ್ಯದಲ್ಲಿ ಬೆಳೆ ಹಂಗಾಮುಗಳಲ್ಲಿ ಹೆಚ್ಚುತ್ತಿರುವ ಮಧ್ಯಮ ಶ್ರೇಣಿಯ ಬರ ಮತ್ತು ಪ್ರವಾಹಗಳಿಂದ ಮಳೆಯಾಶ್ರಿತ ಕೃಷಿಯು ಅನಿಶ್ಚಿತವಾಗಿರುತ್ತದೆ. ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯನ್ನಾಗಿ ರೈತರ ಜೀವನ ಮಟ್ಟವನ್ನು ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು ನಿರಂತರವಾಗಿ ಐದು ಒಣ ಹವಾಮಾನ ವಲಯಗಳಲ್ಲಿ ಜಾರಿಗೆ ತರಲಾಗಿದೆ.
Krishi bhagya yojana details -ಈ ಯೋಜನೆಯಡಿ ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು:
1) ನೀರು ಸಂಗ್ರಹಣಾ ಘಟಕ (ಕೃಷಿ ಹೊಂಡ)
2) ಕ್ಷೇತ್ರ ಬದು ನಿರ್ಮಾಣ
3) ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ
4) ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing)
5) ಹೊಂಡದಿಂದ ನೀರು ಎತ್ತಲು ಡೀಸೆಲ್ /ಪೆಟ್ರೋಲ್/ಸೋಲಾರ್ ಪಂಪ್ ಸೆಟ್
6) ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ)ನೀರಾವರಿ
ಇದನ್ನೂ ಓದಿ: Pan card aadhar link-ಪಾನ್ ಕಾರ್ಡ್ ಸೆಪ್ಟೆಂಬರ್ ನಿಂದ ಹೊಸ ನಿಯಮ ಜಾರಿ!
Krishi bhagya application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಆಸಕ್ತ ರೈತರು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
krishi honda documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
1) ಅರ್ಜಿ ನಮೂನೆ(ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತದೆ)
2) ಅರ್ಜಿದಾರರ ಅಧಾರ್ ಕಾರ್ಡ/Adhar card
3) ಬ್ಯಾಂಕ್ ಪಾಸ್ ಬುಕ್/Bank pass book
4) ಪಹಣಿ/ಉತಾರ್/RTC
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಅನ್ವಯಿಸಿದಲ್ಲಿ ಮಾತ್ರ)/caste and income certificate
6) ಅರ್ಜಿದಾರರ ಪೋಟೋ/Photo
7) ರೇಷನ್ ಕಾರ್ಡ ಪ್ರತಿ/ration card
ಇದನ್ನೂ ಓದಿ: ITBP ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ : 819 ಹುದ್ದೆಗಳಲ್ಲಿ ಮಹಿಳೆಯರಿಗೆ 122 ಹುದ್ದೆಗಳು ಮೀಸಲು!
ಕೃಷಿ ಹೊಂಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ವಿಧಾನ:
1. ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿಹೊಂಡ ಪೂರ್ಣಗೊಂಡ ನಂತರ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಳ್ಳುವ ಬಗ್ಗೆ ರೈತರಿಂದ ದೃಡೀಕರಣ ಪತ್ರ ಪಡೆದುಕೊಂಡು, ಕ್ಷೇತ್ರ ಬದು ಹಾಗೂ ಕೃಷಿಹೊಂಡ ಘಟಕಗಳಿಗೆ ಸಂಬಂಧಿಸಿದ ಒಟ್ಟು ಸಹಾಯಧನದ ಶೇ. 75 ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
2. ಪಾಲಿಥೀನ್ ಹೊದಿಕೆಗೆ ರೈತರ ವಂತಿಕೆ ಪಾವತಿಸಿ, ಕೃಷಿಹೊಂಡದಲ್ಲಿ ಪಾಲಿಥೀನ್ ಹೊದಿಕೆಯ ಅಳವಡಿಕೆಯ ನಂತರ ಸರಬರಾಜು ಸಂಸ್ಥೆಗೆ ಸಹಾಯಧನವನ್ನು ಪಾವತಿ ಮಾಡಲಾಗುತ್ತದೆ.
3. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿದ ನಂತರ ಮಾರ್ಗಸೂಚಿಯನ್ವಯ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡುವುದು.
4. ಡೀಸಲ್/ ಪೆಟ್ರೋಲ್ಸಂಪ್ ಸೆಟ್ ಮತ್ತು ಲಘು ನೀರಾವರಿ ಘಟಕಗಳಿಗೆ ಸಂಬಂಧಿಸಿದ ಸಹಾಯಧನವನ್ನು ಸರಬರಾಜು ಸಂಸ್ಥೆಗೆ ಪಾವತಿಸಲಾಗುತ್ತದೆ.
5. ಡೀಸಲ್/ ಪೆಟ್ರೋಲ್ ಪಂಪ್ ಸೆಟ್ ಬದಲಾಗಿ, ಸೋಲಾರ್ ಪಂಪ್ ಸೆಟ್ ಅನ್ನು ಇತರೆ ಇಲಾಖೆಗಳ ಚಾಲ್ತಿ ಯೋಜನೆಗಳಿಂದ ಪಡೆದು ಅಳವಡಿಸಿಕೊಂಡಿದ್ದಲ್ಲಿ ಪ್ರೋತ್ಸಾಹಧನವಾಗಿ ರೂ. 30,000/- ಗಳನ್ನು ಪ್ರತಿ ಘಟಕಕ್ಕೆ ಕೃಷಿ ಭಾಗ್ಯ ಯೋಜನೆಯಡಿ ವೆಚ್ಚ ಭರಿಸಲಾಗುತ್ತದೆ.
Krishi bhagya subsidy details-ಸಹಾಯಧನ ವಿವರ:
ಯಾವೆಲ್ಲ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಬಹುದು?
krishi bhagya yojane guidelines-ಕೃಷಿ ಭಾಗ್ಯ ಯೋಜನೆಯ ಅಧಿಕೃತ ಮಾರ್ಗಸೂಚಿ: Download Now
Karnataka agriculture department-ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್: Click here