Krishimele Dharwad-2023: ಕೃಷಿ ಮೇಳ ಧಾರವಾಡದಲ್ಲಿ ಎಲ್ಲಾ ಆಕರ್ಷಣೆಯ ಕೇಂದ್ರವಾದ ಹತ್ತಿ ಬಿಡಿಸುವ ಯಂತ್ರ!

ಕೃಷಿ ವಿಶ್ವ ವಿದ್ಯಾಲಯ ಧಾರವಾಡದಲ್ಲಿ-krishimela dharwad-2023 ಈ ವರ್ಷದ ಕೃಷಿ ಮೇಳವು ಸೆ.9 ರಿಂದ ಸೆ.12 ರವರೆಗೆ ನಾಲ್ಕು ದಿನ ನಡೆಯಿತ್ತು ಈ ಮೇಳದಲ್ಲಿ ರೈತರಿಗೆ ಅನೇಕ ಯಂತ್ರಗಳನ್ನು ಪ್ರದರ್ಶನಕ್ಕೆ ಮತ್ತು ಯಂತ್ರಗಳ ಪ್ರಾತ್ಯಕ್ಷೀಕೆ ಆಯೋಜನೆ ಮಾಡಲಾಗಿತ್ತು ಇದಲ್ಲಿ ಹೆಚ್ಚು ಗಮನ ಸೆಳೆದ ಒಂದಿಷ್ಟು ಯಂತ್ರೋಪಕರಣಗಳ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ರೈತಾಪಿ ದೈನಂದಿನ ಕೃಷಿ ಚಟುವಟಿಕೆಗಳನ್ನು ಮಾಡಲು ಕೂಲಿ-ಕಾರ್ಮಿಕ ಸಮಸ್ಯೆಯು ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕಾಗಿ ರೈತರು ಯಂತ್ರೋಪಕಣಗಳ ಮೊರೆ ಹೋಗುವುದು ಅನಿವಾರ್ಯ ವಾಗುತ್ತಿದೆ.

ಬಿತ್ತನೆ ಮಾಡಲು, ತೋಟಗಳಲ್ಲಿ ಕಳೆ ತೆಗೆಯಲು, ಕಟಾವಿಗೆ ಬಂದ ವಿವಿಧ ಬೆಳೆಗಳನ್ನು ಕೊಯ್ಲು ಮಾಡಲು ಹೀಗೆ ಬೀಜ ಬಿತ್ತನೆಯಿಂದ ಹಿಡಿದ್ದು ಕೊನೆಗೆ ಕಟಾವು ಮಾಡುವವರೆಗೆ ಅನೇಕ ಕೃಷಿ ಚಟುವಟಿಕೆಗಳನ್ನು ಕೈಗೊಳಲು ರೈತರು ಹೀಗಾಗಲೇ ಹಲವು ಬಗ್ಗೆಯ ಯಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ.

1) Cotton Harvester ‘ಕಾಟನ್ ಮಾಸ್ಟರ್'(Cotton master machine) : 45 ನಿಮಿಷಗಳಲ್ಲಿ ಒಂದು ಎಕರೆ ಹೊಲದ ಹತ್ತಿ ಬಿಡಿಸುವ ಯಂತ್ರ

ಗುಜರಾತ್‌ ರಾಜ್ಯದ ಶಕ್ತಿಮಾನ್ (Shaktiman – Tirth Agro Technology Pvt. Ltd)ಕಂಪನಿಯು 2019ರಲ್ಲಿ ಅಭಿವೃದ್ಧಿಪಡಿಸಿರುವ ‘ಕಾಟನ್ ಮಾಸ್ಟರ್’ ಯಂತ್ರವು ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.

45 ನಿಮಿಷಗಳಲ್ಲಿ ಒಂದು ಎಕರೆ ಹೊಲದ ಹತ್ತಿ ಬಿಡಿಸುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದ್ದು, 140 ಸೆ.ಮೀ ಎತ್ತರದ ಗಿಡದಿಂದಲೂ ಹತ್ತಿ ಬಿಡಿಸುತ್ತದೆ ಎಂದು ಕಂಪನಿ ಪ್ರತಿನಿಧಿ ಮಾಹಿತಿ ಹಂಚಿಕೊಡರು ಈ ಯಂತ್ರದ ಕುರಿತು ರೈತರಿಗೆ  ಮೇಳದಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಈ ಯಂತ್ರವನ್ನು ಹೆಚ್ಚಿನ ಪ್ರದೇಶದಲ್ಲಿ ಹತ್ತಿ ಬೆಳೆಯುವ ವಿದೇಶಗಳಲ್ಲಿ ಇದಕ್ಕೆ ಅಧಿಕ ಬೇಡಿಕೆ ಇದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ತೆಲಂಗಾಣ, ಮಧ್ಯಪ್ರದೇಶ, ತಮಿಳುನಾಡು,ಗುಜರಾತ್, ಮಹಾರಾಷ್ಟ್ರ  ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹತ್ತಿ ಬೆಳೆಗೆ ಸಂಬಂಧಿಸಿದ  ಕಂಪನಿಗಳು ಹೆಚ್ಚಾಗಿ ಈ ಯಂತ್ರ ಖರೀದಿಸುತ್ತಿದ್ದಾರೆ. ಈ ಯಂತ್ರದ ಮಾರಾಟ ಬೆಲೆಯು ಸರಿಸುಮಾರು 90 ಲಕ್ಷ ಇದ್ದು, ಒಂದು ಭಾರಿಗೆ 13 ಟನ್ ಹತ್ತಿಯನ್ನು ಸಂಗ್ರಹಣೆ ಮಾಡುವ ಬಾಸ್ಕೆಟ್ ಹೊಂದಿದೆ, ಹವಾನಿಯಂತ್ರಿಕ ಕ್ಯಾಬಿನ್ ಸೌಲಭ್ಯವನ್ನು ಸಹ ಹೊಂದಿದೆ. 

ಈ ಯಂತ್ರದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: NHM scheme- ತೋಟಗಾರಿಕೆ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್, ಡ್ರಾಗನ್ ಪ್ರೂಟ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

2) Self-Propelled Boom Sprayer- ಔಷಧ ಸಿಂಪರಣೆ ಯಂತ್ರ:  

ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶವನ್ನು ಮತ್ತು ಒಂದೇ ಪ್ರಮಾಣದಲ್ಲಿ ಎಲ್ಲಾ ಕಡೆ ಸಿಂಪರಣೆ ಮಾಡುವ ಸಾಮಾರ್ಥ್ಯವನ್ನು ಔಷಧ ಸಿಂಪರಣೆ ಯಂತ್ರ (Self-Propelled Boom Sprayer ) ವು ಹೊಂದಿದೆ.

ಇದರ ಸಹಾಯದಿಂದ ಕೀಟನಾಶಕ, ಕಳೆನಾಶಕ ಮತ್ತು ಶಿಲೀಂದ್ರನಾಶಕ ಔಷಧಿಗಳನ್ನು ಸರಳ ಮತ್ತು ಪರಿಣಾಮಕಾರಿಯಾಗಿ ಸಿಂಪರಣೆ ಮಾಡಬವುದು ಯಂತ್ರವು ಹೆಚ್ಚು ರೈತರನ್ನು ಗಮನ ಸೆಳೆಯಿತು. ಎತ್ತರದ ಗಾಲಿ ಸಹಿತ ಟ್ರ್ಯಾಕ್ಟರ್‌ಗೆ ರೆಕ್ಕೆಯಂತೆ ಅಳವಡಿಸಲಾಗಿರುವ ಪೈಪ್ ಮೂಲಕ ಔಷಧಿ ಸಿಂಪಡಿಸಲಾಗುತ್ತದೆ.

ಈ ಯಂತ್ರದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

3) Sugarcane Harvester-ಕಬ್ಬು ಕಟಾವು ಯಂತ್ರ: 

ಕಬ್ಬು ಕಟಾವಿಗೆ ಕೂಲಿ-ಕಾರ್ಮಿಕ ಸಮಸ್ಯೆ ಹೆಚ್ಚಿದು ಈ ಸಮಸ್ಯೆಗೆ ತಗ್ಗಿಸುವ ದೇಸೆಯಲ್ಲಿ ಕಬ್ಬು ಕಟಾವು ಯಂತ್ರ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಈಗಾಗಲೇ ರೈತರ ಹೊಲದಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದೆ ಈ ಯಂತ್ರದ ಪ್ರಾತ್ಯಕ್ಷೀಕೆಯನ್ನು ಸಹ ಮೇಳದಲ್ಲಿ ಏರ್ಪಡಿಸಲಾಗಿತ್ತು.

ಈ ಯಂತರದ ಸಹಾಯದಿಂದ ದಿನಕ್ಕೆ 150 ಟನ್ ಕಬ್ಬುನ್ನು ಕಟಾವು ಮಾಡಬವುದು, ಪ್ರತಿ ತಾಸಿಗೆ 15ರಿಂದ 20 ಟನ್ ಕಟಾವು ಮಾಡಲಾಗುತ್ತದೆ ಎಂದು ಕಂಪನಿಯ ಮಾರುಕಟ್ಟೆ ಪ್ರತಿನಿಧಿ ಮಾಹಿತಿ ತಿಳಿಸಿದ್ದಾರೆ.

ಈ ಯಂತ್ರವನ್ನು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2016 ರಿಂದ 2023ರ ವರೆಗೆ 320 ಯಂತ್ರಗಳು ಮಾರಾಟವಾಗಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಸಕ್ಕರೆ ಕಾರ್ಖಾನೆಯವರು ಖರೀದಿಸಿದ್ದಾರೆ. ಈ ಕೃಷಿ ಮೇಳದಲ್ಲಿ ಎರಡು ಯಂತ್ರಗಳು ಮಾರಾಟವಾಗಿವೆ ಎಂದು ತಿಳಿಸಿದರು.

ಈ ಯಂತ್ರದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

Shaktiman – Tirth Agro Technology Pvt. Ltd. ಕಂಪನಿಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಲು: click here

ಈ ಯಂತ್ರಗಳ ಜೊತೆಗೆ ಇನ್ನು ವಿವಿಧ ಕಂಪನಿಯ ಹಲವು ಬಗ್ಗೆಯ ರೈತರಿಗೆ ಸಹಾಕಾರಿಯಾಗುವಂತಹ ಕಳೆ ತೆಗೆಯುವ ಸಾಧನ, ಬಿತ್ತನೆ ಮಾಡಲು ಕೂರಿಗೆ, ವಿವಿಧ ಬೆಳೆಗಳಿಗೆ ಔಷಧ ಸಿಂಪಡಿಸುವ ಯಂತ್ರ, ಶೇಂಗಾ ಕಾಯಿ ಬೆರ್ಪಡಿಸಿ ಸ್ವಚ್ಛ ಗೊಳಿಸುವ ಯಂತ್ರ, ಭೂಮಿ ಹದಗೊಳಿಸುವ ಯಂತ್ರ, ಗುಂಡಿ ತೋಡುವ ಯಂತ್ರ,  ಸೇರಿದಂತೆ ಹಲವು ಯಂತ್ರಗಳ ಪ್ರದರ್ಶನ ಒಂದೇ ಸೂರಿನಡಿ ಮಾಹಿತಿ ನೀಡುವುದರ ಜತೆಗೆ ಮಾರಾಟವನ್ನೂ ಸಹ ಮಾಡಲಾಗುತ್ತಿತು.

ಇದನ್ನೂ ಓದಿ: Karnataka guarantee schemes: ಈ ಪಟ್ಟಿಯಲ್ಲಿ ಹೆಸರಿಲ್ಲದವರಿಗಿಲ್ಲ ಅನ್ನಭಾಗ್ಯ,ಗೃಹಲಕ್ಷ್ಮಿ ಹಣ! ಇಲ್ಲಿದೆ ಪರಿಷ್ಕೃತ ರೇಷನ್ ಕಾರ್ಡ ಪಟ್ಟಿ.

ಧಾರವಾಡ ಕೃಷಿ ಮೇಳದಲ್ಲಿ ಕಂಡುಬಂದ ಹಾನಿಕಾರಕ ಕೀಟಗಳಿಂದ ರಚಿಸಿದ ಕ್ರಿಕೆಟ್ ಸ್ಟೇಡಿಯಂ- ಚಿಟ್ಟೆ ಸ್ವಾಮಿ ಕ್ರೀಡಾಂಗಣ.

ಕೃಷಿ ವಿಶ್ವವಿದ್ಯಾಲಯ ಕೀಟಶಾಸ್ತ್ರ ವಿಭಾಗದಿಂದ ಈ ಭಾರಿ ವಿವಿಧ ರೀತಿಯ ಹಾನಿಕಾರಕ ಕೀಟಗಳ ಕುರಿತು ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಲು ಹಲವು ಬಗ್ಗೆಯ ಕಾಲಾಕೃತಿಗಳನ್ನು ಮಾಡಲಾಗಿತ್ತು ಇದರಲ್ಲಿ ಎಲ್ಲರನ್ನು ಗಮನ ಸೆಳೆದ ಚಿಟ್ಟೆ ಸ್ವಾಮಿ ಕ್ರೀಡಾಂಗಣದ ಚಿತ್ರವನ್ನು ಈ ಕೆಳಗೆ ಹಾಕಲಾಗಿದೆ.

ಸಹಾಯಧನದಲ್ಲಿ ಎಲ್ಲಾ ಬಗ್ಗೆಯ ಕೃಷಿ ಯಂತ್ರೋಪಕರಣಗಳ ಖರೀದಿಗೆ ಇಂದೇ ಸಂಪರ್ಕಿಸಿ: 9901876682(ಕಾರ್ತಿಕ್, ಈಸೀ ಲೈಫ್ ಎಂಟರ್ ಪ್ರೈಸಸ್, ಉಡುಪಿ)
(ಇದು ಜಾಹೀರಾತು ಅಗಿರುತ್ತದೆ)