KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ!

February 9, 2025 | Siddesh
KSOU Admission-ಮನೆಯಲ್ಲೇ ಕುಳಿತು ಓದಿ ಡಿಗ್ರಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆಯಲು ಅವಕಾಶ!
Share Now:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ದಿಂದ 2024-25 ನೇ ಸಾಲಿನ ಜನವರಿ ಆವೃತ್ತಿಯಲ್ಲಿನ ವಿವಿದ ಪದವಿಗಳಿಗೆ ಅರ್ಹ(Karnataka open University) ಅಭ್ಯಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಬಹುತೇಕ ಎಲ್ಲಾ ವರ್ಗದ ಜನರು ಹೆಚ್ಚು ಗಮನವನ್ನು ಕೊಡುತ್ತಾರೆ(Open University) ಈ ನಿಟ್ಟಿನಲ್ಲಿ ಕೆಲವು ವೈಯಕ್ತಿಕ ಕಾರಣಗಳಿಂದ ದಿನನಿತ್ಯ ಶಾಲೆಗ ಹೋಗಿ ಕಲಿಯಲು ಸಾಧ್ಯವಾಗದೇ ಇರುವವರು ಈ ಪ್ರವೇಶಾತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮನೆಯಲ್ಲಿ ಕುಳಿತು ಅಭ್ಯಾಸ ಮಾಡಿ ಪರೀಕ್ಷೆಯನ್ನು(Karnataka open University Admission) ಬರೆದು ವಿವಿಧ ಬಗ್ಗೆಯ ಪದವಿಗಳನ್ನು ಪಡೆಯಲು ಸಾಧ್ಯವಿದ್ದು ಈ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಕಟನೆ ವಿವರವನ್ನು ಈ ಕೆಳಗೆ ಪ್ರಕಟಿಸಲಾಗಿದೆ.

ಇದನ್ನೂ ಓದಿ: Land registration-ಆಸ್ತಿ ನೋಂದಣಿ ಮಾಡಿಕೊಳ್ಳುವರಿಗೆ ಇಲ್ಲಿದೆ ನೂತನ ಮಾಹಿತಿ!

Karnataka open University-ಯಾವೆಲ್ಲ ಪದವಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ?

ಬಿ.ಎ(BA)
ಬಿ.ಕಾಂ(Bcom)
ಬಿ.ಬಿ.ಎ(BBA)
ಬಿ.ಇಡಿ
ಬಿ.ಎಸ್.ಡಬ್ಲ್ಯೂ(BSW)
ಬಿ.ಲಿಬ್.ಐ.ಎಸ್ ಸಿ(BLIS)
ಬಿ.ಎಸ್.ಸಿ(BSC)
ಬಿ.ಸಿ.ಎ(BCA)
ಎಂ.ಎ(MA)
ಎಂ.ಎಸ್.ಡಬ್ಲ್ಯೂ(MSW)
ಎಂ.ಬಿ.ಎ(MBA)
ಎಂ.ಕಾಂ(Mcom)
ಎಂ.ಸಿ.ಎ(MCA)
ಎಂ.ಎಲ್.ಸಿ(MLC)

ಇದಲ್ಲದೇ ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು, ಡಿಪ್ಲೋಮಾ ಶಿಕ್ಷಣ, ಆರು ತಿಂಗಳ ಸರ್ಟಿಫಿಕೇಟ್ ಕಾರ್ಯಕ್ರಮಗಳಿಗೂ ಸಹ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

KSOU Admission

KSOU ವಿಶ್ವವಿದ್ಯಾನಿಲಯದ ಸೌಕರ್ಯಗಳು:

ವಿಶಾಲ ಅತ್ಯಾಧಿನಿಕ ಹಾಗೂ ಹಸಿರುಮಯ ಕ್ಯಾಂಪಸ್

ಆಧುನಿಕ ಐಶಿಟಿ ತಂತ್ರಜ್ನಾನ ಬೆಂಬಲಿತ ಬೋಧನಾ ಸೌಲಭ್ಯಗಳು.

ಅನುಭವಿ ಹಾಗೂ ನುರಿತ ಬೋಧನಾ ಸಿಬ್ಬಂದಿ

ಸುಸರ್ಜಿತ ಪ್ರಯೋಗಾಲಯಗಳು.

ಸುಸರ್ಜಿತ ಗ್ರಂಥಾಲಯ ಹಾಗೂ ಇಂಟರ್ನೆಟ್ ಸೌಲಭ್ಯಗಳು.

ಪ್ರಾದೇಶಿಕ ಕೇಂದ್ರಗಳು ಹಾಗೂ ಕಲಿಕಾರ್ಥಿ ಸಹಾಯ ಕೇಂದ್ರಗಳನ್ನೊಳಗೊಂಡ ಸೇವಾ ವ್ಯವಸ್ಥೆ.

ವೃತ್ತಿ ಸಂಬಂಧಿತ ಸಲಹೆ ಹಾಗೂ ನೇಮಕಾತಿಯಲ್ಲಿ ನೆರವು ನೀಡಲಾಗುತ್ತದೆ ಎಂದು ವಿವಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: E-Khata Application: ಆಸ್ತಿ ನೋಂದಣಿ ಸಂಬಂಧಿಸಿದಂತೆ ಇ-ಖಾತಾದಲ್ಲಿ ಮಹತ್ವದ ಬದಲಾವಣೆ!

UGC Certified University- ಯು.ಜಿ.ಸಿ ಯಿಂದ ಮಾನ್ಯತೆಯನ್ನು ಪಡೆದಿರುತ್ತದೆ:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU) ದಿಂದ ಪಡೆಯುವ ಎಲ್ಲಾ ಪದವಿಗಳಿಗೆ ಕೇಂದ್ರ ಸರಕಾರದ ಅಧಿಕೃತ ಯು ಜಿ ಸಿ(UGC) ಮಾನ್ಯತೆಯನ್ನು ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Online Application KSOU Admission-2025: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ:

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಪ್ರಥಮದಲ್ಲಿ Online Application For KSOU Admission ಇಲ್ಲಿ ಕ್ಲಿಕ್ ಮಾಡಿ ಅಧಿಕೃತ KSOU ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಮೊದಲ ಬಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ "Click here for New Registration" ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಇದಾದ ಬಳಿಕ Login ಪೇಜ್ ಭೇಟಿ ಮಾಡಿ User Name ಮತ್ತು Password ಅನ್ನು ನಮೂದಿಸಿ Security Code ಅನ್ನು ನಮೂದಿಸಿ Login ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: E-Swathu Application-90 ಲಕ್ಷ ಆಸ್ತಿಗಳ ಇ-ಸ್ವತ್ತು ಬಾಕಿ! ಇ-ಸ್ವತ್ತು ಎಲ್ಲಿ ಮಾಡಿಸಬೇಕು? ಪ್ರಯೋಜನಗಳೇನು?

Required Documents For KSOU Admission-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಅಂಕಪಟ್ಟಿ
4) ಸಹಿ ಮಾಡಿದ ಪ್ರತಿ
5) ಮೊಬೈಲ್ ನಂಬರ್

KSOU Admission Fee-ಎಷ್ಟು ಶುಲ್ಕವನ್ನು ಪಾವತಿ ಮಾಡಬೇಕು?

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(KSOU)ದ ಅಧಿಕೃತ ಜಾಲತಾಣದಲ್ಲಿ ಪದವಿವಾರು ನಿಗದಿಪಡಿಸಿರುವ ಶುಲ್ಕದ ವಿವರವಾದ ಮಾಹಿತಿಯ ಕೈಪಿಡಿಯನ್ನು ಪ್ರಕಟಿಸಲಾಗಿದ್ದು ಈ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳು ಈ ಕೆಳಗೆ ವೆಬ್ಸೈಟ್ ಲಿಂಕ್ ನೀಡಲಾಗಿದೆ.

KSOU Admission Fee-ಶೈಕ್ಷಣಿಕ ಪದವಿವಾರು ಶುಲ್ಕದ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ- Download Now

KSOU Admission Copy-ಅಧಿಕೃತ ಪ್ರಕಟಣೆ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುಲು ಇಲ್ಲಿ ಕ್ಲಿಕ್ ಮಾಡಿ- Download Now
ಸಹಾಯವಾಣಿ/Helpline- 8690544544

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: