Labour card application-ಲೇಬರ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ! ಒಂದು ಕಾರ್ಡ ಅನೇಕ ಪ್ರಯೋಜನಗಳು.

ಕಾರ್ಮಿಕ ಇಲಾಖೆಯಿಂದ ಹೊಸದಾಗಿ ಲೇಬರ್ ಕಾರ್ಡ/ಕಾರ್ಮಿಕ ಕಾರ್ಡ(Labour card ) ಪಡೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಅರ್ಥಿಕ ಸಂಕಷ್ಟ ಎದುರಾದ ಸಮಯದಲ್ಲಿ ನೆರವಾಗಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಸಹಾಯಧನ ಯೋಜನೆಗಳನ್ನು ಅನುಷ್ಥಾನ ಮಾಡಲಾಗುತ್ತದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಾಯಧನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಥವಾ ವಿವಿಧ ಯೋಜನೆಗಳ ಅರ್ಜಿಯನ್ನು ಕರೆದಾಗ ಅರ್ಜಿ ಸಲ್ಲಿಸಲು ಕಾರ್ಮಿಕರು ಕಡ್ಡಾಯವಾಗಿ ಲೇಬರ್ ಕಾರ್ಡ ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: Bara parihara-ರೈತರ ಖಾತೆಗೆ 105.00 ಕೋಟಿ ಬರ ಪರಿಹಾರ ಬಿಡುಗಡೆ! ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ?

ಈ ಎಲ್ಲಾ ಕಾರಣಗಳಿಂದ ಪ್ರಸ್ತುತ ಕಾರ್ಮಿಕ ಮಂಡಳಿಯಿಂದ ಹೊಸದಾಗಿ ಲೇಬರ್ ಕಾರ್ಡ ಮಾಡಿಕೊಳ್ಳಲು ಅರ್ಹ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಅಂಕಣದಲ್ಲಿ ಲೇಬರ್ ಕಾರ್ಡ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

Labour card application-ಲೇಬರ್ ಕಾರ್ಡ ನೋಂದಣಿ ಅಭಿಯಾನ:

ಪ್ರಸ್ತುತ ಕಾರ್ಮಿಕ ಇಲಾಖೆಯಿಂದ ಅರ್ಹ ಕಾರ್ಮಿಕರಿಗೆ ಮಂಡಳಿಯ ಯೋಜನೆಯ ಪ್ರಯೋಜನ ಒದಗಿಸಲು ಲೇಬರ್ ಕಾರ್ಡ ನೋಂದಣಿ ಅಭಿಯಾನವನ್ನು 30 ಡಿಸೆಂಬರ್ 2023 ರಿಂದ 31 ಮಾರ್ಚ 2024 ರ ವರೆಗೆ ಮಾಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Gruhalakshmi new application: ಗ್ರಾಮ ಒನ್ ನಲ್ಲಿ ಹೊಸ ಗೃಹಲಕ್ಷ್ಮಿ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ!

Labour card benefits- ಲೇಬರ್ ಕಾರ್ಡ ಪ್ರಯೋಜನಗಳು:

ಈ ಕಾರ್ಡ ಹೊಂದಿರು ಫಲಾನುಭವಿಗಳಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅನೇಕ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು ಅವುಗಳ ಪಟ್ಟಿ ಈ ಕೆಳಗಿನಂತಿವೆ.

  • ಮದುವೆ ಸಹಾಯಧನ
  • ವೈದ್ಯಕೀಯ ವೆಚ್ಚಕ್ಕೆ ನೆರವು
  • ಮಾಸಿಕ ಪಿಂಚಣಿ ಸೌಲಭ್ಯ
  • ಶ್ರಮಸಾಮರ್ಥ್ಯ ಟೂಲ್ ಕಿಟ್
  • ಉಚಿತ ಸಾರಿಗೆ ಬಸ್ ಪಾಸ್ ವಿತರಣೆ
  • ಅಂತ್ಯಕ್ರಿಯೆ ವೆಚ್ಚ ನೆರವು
  • ಶೈಕ್ಷಣಿಕ ಸಹಾಯಧನ ಯೋಜನೆ
  • ಹೆರಿಗೆ ಸೌಲಭ್ಯ
  • ತಾಯಿ ಮಗು ಸಹಾಯಹಸ್ತಾ ಯೋಜನೆ
  • ಅಪಘಾತ ಪರಿಹಾರ ಸೌಲಭ್ಯ
  • ದುರ್ಬಲತೆ ಪಿಂಚಣಿ ನೆರವು

Required documents for Labour card- ಲೇಬರ್ ಕಾರ್ಡ ಪಡೆಯಲು ಸಲ್ಲಿಸಬೇಕಾಗದ ದಾಖಲೆಗಳು:

(1) ಅರ್ಜಿದಾರರ ಅಧಾರ್ ಕಾರ್ಡ ಪ್ರತಿ
(2) ಬ್ಯಾಂಕ್ ಪಾಸ್ ಬುಕ್
(3) 90 ದಿನಗಳ ಉದ್ಯೋಗ ದೃಢೀಕರಣ ಪತ್ರ 
(4) ಪೋಟೋ
(5) ಮೊಬೈಲ್ ನಂಬರ್

ಇದನ್ನೂ ಓದಿ: life insurance-ಕಾರ್ಮಿಕ ಇಲಾಖೆಯಿಂದ ರೂ.2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ ಪಡೆಯಲು ಅರ್ಜಿ ಆಹ್ವಾನ!

Karmika card-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

Karmika elake-ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಿನ್ನೆಲೆ:

ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂತಹ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಒಂದನೇ ಮಾರ್ಚ್ 1996 ರಿಂದ ಅನ್ವಯವಾಗುವಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ಕೇಂದ್ರ ನಿಯಮಗಳು, 

1998 ಅನ್ನು ಜಾರಿಗೆ ತಂದಿರುತ್ತದೆ. ಸದರಿ ಕಾಯ್ದೆಗಳನ್ನು ಯಥಾವತ್ತಾಗಿ ಜಾರಿಗೆ ತರುವ ಉದ್ದೇಶದಿಂದ 2006 ರಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕರ್ನಾಟಕ ನಿಯಮಗಳನ್ನು ರೂಪಿಸಿರುತ್ತದೆ. ಇದರ ಅನುಷ್ಠಾನಕ್ಕೆ 2007ರಲ್ಲಿ ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಿರುತ್ತದೆ.

ಇದನ್ನೂ ಓದಿ: Disabled Welfare Yojana-ದೈಹಿಕವಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮೋಟಾರು ದ್ವಿಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ!

ಮಂಡಳಿಯ ಮುಖ್ಯ ಧ್ಯೇಯೋದ್ದೇಶಗಳು:

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996ರ ಅನುಸಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲನುಭವಿಗಳಾಗಿ ನೊಂದಣಿ ಮಾಡುವುದು.

ಮಂಡಳಿ ಜಾರಿಗೆ ತಂದಿರುವ ಯೋಜನೆಗಳಡಿ ದೊರಕುವ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಸಮರ್ಪಕ ವಿತರಣೆ ಮಾಡುವುದು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗು ಸುಂಕ ನಿಯಮಗಳು, 1998ರ ಅಡಿಯಲ್ಲಿ ಮಂಡಳಿಗೆ ಸುಂಕದ ರೂಪದಲ್ಲಿ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದು.

ಕಾರ್ಮಿಕ ಇಲಾಖೆ ಸಹಾಯವಾಣಿ: 155214, 9845353214(Whats app number)
ಅಧಿಕೃತ ವೆಬ್ಸೈಟ್ ಲಿಂಕ್: click here