ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಕಾರ್ಮಿಕ ಕಾರ್ಡ(Labour Card Application) ಅನ್ನು ಪಡೆಯಲು ಹಾಗೂ ಈಗಾಗಲೇ ಕಾರ್ಡ ಅನ್ನು ಹೊಂದಿರುವವರು ನವೀಕರಣ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕಾರ್ಮಿಕ ಕಾರ್ಡ ಅನ್ನು(Labour Card) ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಕಾರ್ಮಿಕ ಕಾರ್ಡ ಅನ್ನು ಪಡೆಯಲು ಹೊಂದಿರಬೇಕಾದ ಅರ್ಹತೆಗಳೇನು?ಕಾರ್ಮಿಕ ಕಾರ್ಡನಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು?ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Bilijola MSP-ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ! ಯಾವೆಲ್ಲ ಜಿಲ್ಲೆಯಲ್ಲಿ ಅವಕಾಶ!
Labour Card Details-ಕಾರ್ಮಿಕ ಕಾರ್ಡ ವಿವರ:
ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ನೋಂದಾಯಿತ ಕಾರ್ಮಿಕರಿಗೆ ಮತ್ತು ಕಾರ್ಮಿಕರ ಮಕ್ಕಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ವಿವಿಧ ಬಗ್ಗೆಯ ನೆರವನ್ನು ನೀಡಲು ಅರ್ಹ ಕಾರ್ಮಿಕ ಫಲಾನುಭವಿಗಳನ್ನು ಗುರುತಿಸಲು ಸರಕಾರದಿಂದ ಈ ಕಾರ್ಡ ಅನ್ನು ಪರಿಚಯಿಸಲಾಗಿದೆ.
Labour Card Benefits-ಕಾರ್ಮಿಕ ಕಾರ್ಡನಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು?
ಅರ್ಜಿಯನ್ನು ಸಲ್ಲಿಸಲು ಕಾರ್ಮಿಕ ಕಾರ್ಡ ಅನ್ನು ಪಡೆದುಕೊಂಡ ಫಲಾನುಭವಿಗಳು ಈ ಕೆಳಗಿನ ಪಟ್ಟಿಯಲ್ಲಿರುವ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
1) ಪಿಂಚಣಿ ಸೌಲಭ್ಯ
2) ಅಪಘಾತ ಪರಿಹಾರ
3) ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)
4) ತಾಯಿ ಮಗು ಸಹಾಯ ಹಸ್ತ
5) ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್)
6) ಮದುವೆ ಸಹಾಯ ಧನ (ಗೃಹ ಲಕ್ಷ್ಮೀ ಬಾಂಡ್)
7) ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)
8) ಶೈಕ್ಷಣಿಕ ಧನಸಹಾಯ
9) ದುರ್ಬಲತೆ ಪಿಂಚಣಿ
10) ಅಂತ್ಯಕ್ರಿಯೆ ವೆಚ್ಚಕ್ಕೆ ಸಹಾಯಧನ
11) ಬಿ ಎಂ ಟಿ ಸಿ ಬಸ್ ಪಾಸ್ ಸೌಲಭ್ಯ
ಇದನ್ನೂ ಓದಿ: Bank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!

ಇದನ್ನೂ ಓದಿ: PM-Kisan 2025: ಕೇಂದ್ರದಿಂದ ಪಿ ಎಂ ಕಿಸಾನ್ 19 ನೇ ಕಂತಿ ಹಣ ವರ್ಗಾವಣೆ! ನಿಮಗೆ ಬಂತಾ ಚೆಕ್ ಮಾಡಿ!
ಈ ಮೇಲಿನ ಯೋಜನೆಗಳ ಸಂಪೂರ್ಣ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ- CLICK HERE
Documents For Labour Card-ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
A) ಅರ್ಜಿದಾರ ಕುಟುಂಬ ಸದಸ್ಯರ ಆಧಾರ್ ಕಾರ್ಡ ಪ್ರತಿ
B) ಬ್ಯಾಂಕ್ ಪಾಸ್ ಬುಕ್
C) ರೇಶನ್ ಕಾರ್ಡ ಪ್ರತಿ
D) ಪೋಟೋ
E) ಉದ್ಯೋಗ ದೃಡೀಕರಣ ಪ್ರಮಾಣ ಪತ್ರ
F) ವಯಸ್ಸಿನ ದೃಡೀಕರಣ ಪ್ರಮಾಣ ಪತ್ರ
G) ಮತದಾರ ಗುರುತಿನ ಚೀಟಿ
ಇದನ್ನೂ ಓದಿ: Gruhalakshmi Yojane-2025: ಗೃಹಲಕ್ಷ್ಮಿ ಹಣ ವರ್ಗಾವಣೆಯಲ್ಲಿ ಪ್ರಮುಖ ಬದಲಾವಣೆ!
Eligibility Criteria For Labour Card-ಅರ್ಜಿ ಸಲ್ಲಿಸಲು ಅರ್ಹತೆಗಳು:
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು.
ಅರ್ಜಿದಾರರು ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರಬೇಕು.
ಅರ್ಜಿದಾರರು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೋಂದಣಿಯನ್ನು ಮಾಡಿಕೊಂಡಿರಬೇಕು.
ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!
How to Apply For Labour Card-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Labour Card Renewal-ಕಾರ್ಮಿಕ ಕಾರ್ಡ ನವೀಕರಣಕ್ಕೂ ಅವಕಾಶ:
ಒಮ್ಮೆ ಕಾರ್ಮಿಕ ಕಾರ್ಡ ಅನ್ನು ಪಡೆದುಕೊಂಡ ಬಳಿಕ ಇಂತಿಷ್ಟು ದಿನಗಳು ಕಳೆದ ನಂತರ ಆ ಕಾರ್ಡ ಅನ್ನು ಫಲಾನುಭವಿಗಲು ನವೀಕರಣ ಮಾಡಿಕೊಳ್ಳಬೇಕು ಇದಕ್ಕೂ ಸಹ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.