land encroachment: ನಿಮ್ಮ ಅಕ್ಕ-ಪಕ್ಕದ ಜಮೀನಿನವರು ಜಮೀನು ಒತ್ತುವರಿ ಮಾಡಿದರೆ ಅದನ್ನು ತೆರವುಗೊಳಿಸುವುದು ಹೇಗೆ?

ರೈತಾಪಿ ವರ್ಗದಲ್ಲಿ ಜಮೀನಿನ ಒತ್ತುವರಿ ಕುರಿತು ಅನೇಕ ಕಡೆ ಪ್ರತಿ ನಿತ್ಯ ಗಲಾಟೆಗಳು ನಡೆಯುತ್ತಲೇ ಇರುತ್ತವೆ ಕೆಲವೊಂದು ಸಮಸ್ಯೆಗಳು ಗ್ರಾಮ ಮಟ್ಟದಲ್ಲಿ ಗ್ರಾಮದ ಹಿರಿಯ ಸಮ್ಮುಖದಲ್ಲಿ ಸರಿಪಡಿಸಿಕೊಂಡರೆ, ಇಲ್ಲಿಯೋ ಬಗೆಯರಿಯದ ವ್ಯಾಜ್ಯಗಳು ಪೋಲಿಸ್-ಕೋರ್ಟ್ ಮೇಟಿಲೆರುತ್ತವೆ.

ರೈತರು ತಮ್ಮ ಅಕ್ಕ-ಪಕ್ಕದ ಜಮೀನಿನವರು ತಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂದು ತಿಳಿದಲ್ಲಿ ಯಾವುದೇ ಜಗಳ-ಗಲಾಟೆ ಮಾಡಿಕೊಳ್ಳದೆ ಕಾನೂನಿನ ನಿಯಮದ ಪ್ರಕಾರ ಯಾವ ರೀತಿ ಸಮಸ್ಯೆಯನ್ನು ಪರಿಹಾರಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ. ಮೊದಲ ಹಂತದಲ್ಲಿ ಹಳ್ಳಿಯ ಮಟ್ಟದಲ್ಲಿ ಸಮಸ್ಯೆಯನ್ನು ಬಗ್ಗೆ ಅರಿಸಿಕೊಳ್ಳುವುದು ಉತ್ತಮ ಅಕ್ಕಪಕ್ಕದ ಜಮೀನಿನವರು ಯಾವಾಗಲೂ ಸಹಾಯಕ್ಕೆ ಬೇಕಾಗುತ್ತಾರೆ ಎಂಬ ವಿಷಯವನ್ನು ಮರೆಯಬಾರದು.

ನಿಮ್ಮ ಜಮೀನಿನ ಹದ್ದುಬಸ್ತು ಕಾಪಾಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಇದನ್ನು ಭೂ ಕಂದಾಯ ಅಧಿನಿಯಮ, 1964ರ ಸೆ. 145 ಅಲ್ಲಿ (ಕರ್ನಾಟಕ ಅಧಿನಿಯಮ ಸಂಖ್ಯೆ 12, 2020 ರ ಅಧಿನಿಯಮ ಸಂಖ್ಯೆ 22 ಮತ್ತು 24 ರ ಅನ್ವಯ ತಿದ್ದುಪಡಿಯಂತೆ) ಸೂಚಿಸಲಾಗಿದೆ. ಇದಾಗ್ಯೂ, ಪೂರ್ವ ಕಾಲದಿಂದಲೂ ನಿಮ್ಮ ಸರ್ವೆ ನಂಬರ್ ಅಳತೆ ಕಾರ್ಯ ನಿರ್ವಹಿಸದೇ ಇರುವುದರಿಂದ ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿದರೆ ಅದನ್ನು ಹೇಗೆ ತೆರವುಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. 

ಇದನ್ನೂ ಓದಿ: Online RTC : ನಿಮ್ಮ ಜಮೀನಿನ ಪಹಣಿ/ಉತಾರ್ ಪ್ರಿಂಟ್ ತೆಗೆಸಲು ಸರ್ವೆ ನಂಬರ್ ಮರೆತು ಹೋಗಿದೆಯೇ? ಈ ಇಲ್ಲಿದೆ ಸರ್ವೆ ನಂಬರ್ ಇಲ್ಲದೇ ಪಹಣಿ ತೆಗೆಯುವ ಐಡಿಯಾ!

ನಿಮ್ಮ ಆಧಾರ್ ಕಾರ್ಡ್, ಪಹಣಿ ಮತ್ತು ಅಗತ್ಯ ಶುಲ್ಕದೊಂದಿಗೆ ನಿಮ್ಮ ಹೋಬಳಿಯ ನಾಡಕಚೇರಿಗೆ ಭೇಟಿ ಮಾಡಿ ಹದ್ದುಬಸ್ತು ಸರ್ವೆಗೆ ಹಣ ಪಾವತಿಸಿ ಅರ್ಜಿ ಸಲ್ಲಿಸಬೇಕು. ಹದ್ದುಬಸ್ತು ಅಳತೆ ಭೂ ಮಾಪಕರಿಗೆ ವರ್ಗಾಯಿಸಿದ ನಂತರ ಅವರು ನಿಮಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಅಕ್ಕಪಕ್ಕದ ಜಮೀನಿನ ಮಾಲೀಕರ ಮಾಹಿತಿಯನ್ನು ಪಡೆದುಕೊಂಡು ಎಲ್ಲರೂ ಒಂದು ದಿನಾಂಕವನ್ನು ನಿಗದಿಗೊಳಿಸಿ ನೋಟಿಸನ್ನು ಕಳುಹಿಸಲಾಗುವುದು.
 
ಅಳತೆ ದಿನದಂದು ಬಂದು ಹದ್ದುಬಸ್ತು ಮಾಡಿ ನಿಮ್ಮ ಜಮೀನಿನ ಸುತ್ತಳತೆಗೆ ಬಾಂದುಕಲ್ಲುಗಳನ್ನು ಇಡಲಾಗುವುದು. ಪಕ್ಕದ ಜಮೀನಿನವರು ಏನಾದರೂ ಒತ್ತುವರಿ ಮಾಡಿರುವುದು ಕಂಡುಬಂದಾಗ ಗ್ರಾಮದಲ್ಲಿ ಮುಖಂಡರ ಸಮಕ್ಷಮ ಬಗೆಹರಿಸಿಕೊಂಡು ಒತ್ತುವರಿಯನ್ನು ತೆರವು ಮಾಡಲು ಭೂ ಮಾಪಕರು ತಿಳಿಸುತ್ತಾರೆ. ಇಲ್ಲವಾದಲ್ಲಿ ಹದ್ದುಬಸ್ತು ನಕ್ಷೆ ತಯಾರಿಸಿ ಯಾರೆಲ್ಲ ಒತ್ತುವರಿ ಮಾಡಿದ್ದಾರೆ? ಎಷ್ಟು ವಿಸ್ತಿರ್ಣ ಒತ್ತುವರಿಯಾಗಿದೆ ಎಂಬುವುದನ್ನು ವಿವರವಾದ ವರದಿಯೊಂದಿಗೆ ಮೋಜಿಣಿ ತಂತ್ರಾಂಶಕ್ಕೆ ಅಪ್ ಲೋಡ್ ಮಾಡುತ್ತಾರೆ. ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಬಿಡಲು ಒಪ್ಪದೇ ಇದ್ದಲ್ಲಿ, ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾಗುವುದು. ಆಗ ಹದ್ದುಬಸ್ತು ನಕ್ಷೆ ಹಾಗೂ ವರದಿ ನ್ಯಾಯಾಲಯದಲ್ಲಿ ಪ್ರಮುಖ ಆಧಾರವಾಗಿರುತ್ತದೆ.

ಅಳತೆ ಕಾರ್ಯ ನಡೆಸಲು ಅಡ್ಡಿಪಡಿಸಿದ ಸಂದರ್ಭದಲ್ಲಿ ಭೂ ಮಾಪಕರು ಇನ್ನೊಂದು ದಿನಾಂಕ ನಿಗದಿಗೊಳಿಸಿ ಸೂಕ್ತ ಪೋಲಿಸ್ ಬಂದೋಬಸ್ತಿನಲ್ಲಿ ಅಳತೆ ಕಾರ್ಯ ನಿರ್ವಹಿಸುತ್ತಾರೆ. ಅಕ್ಕಪಕ್ಕದ ಜಮೀನಿನವರು ಏನಾದರೂ ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದಲ್ಲಿ ಅಳತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕೆಲವು ಸಲ ಅಳತೆ ಕಾರ್ಯ ಸಮಯದಲ್ಲಿ ಶಾಂತಿ ಭಂಗ ಉಂಟಾಗಬಹುದು ಎಂದು ಮೊದಲೇ ತಿಳಿದಿದ್ದರೆ ಭೂ ಮಾಪಕರಿಗೆ ಮೊದಲೇ ತಿಳಿಸಿ ಸೂಕ್ತ ಪೋಲಿಸ್ ಬಂದೋಬಸ್ತಿಗೆ ಅರ್ಜಿ ಸಲ್ಲಿಸುವುದು ಉತ್ತಮ.
 
ನ್ಯಾಯಾಲಯದಲ್ಲಿ ಹದ್ದುಬಸ್ತಿನ ನಕ್ಷೆ, ಪಹಣಿ MR (ಮ್ಯುಟೇಷನ್ ರೆಜಿಸ್ಟರ್) ನೋಂದಣಿ ಪತ್ರಗಳಿಗೆ ವಕೀಲರ ಮೂಲಕ ಅರ್ಜಿ ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು. ಎವಿಕ್ಷನ್ ಆರ್ಡರ್ ಅಥವಾ ಪೊಟೆಕ್ಷನ್ ಆರ್ಡರ್ ತೆಗೆದುಕೊಂಡು ಪೋಲಿಸರ ಸಮಕ್ಷಮ ಒತ್ತುವರಿ ತೆರೆವುಗೊಳಿಸುವುದಕ್ಕೆ ನ್ಯಾಯಾಲಯ ಆದೇಶ ನೀಡುತ್ತದೆ. ಗ್ರಾಮದ್ಲಲಿಯೇ ಒಗ್ಗಟ್ಟಿನಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮವಾದ ಬೆಳವಣಿಗೆ. 

ಇದನ್ನೂ ಓದಿ: Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?