Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!

October 26, 2024 | Siddesh
Land Mutation-ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಲು ವೆಬ್ಸೈಟ್ ಬಿಡುಗಡೆ!
Share Now:

ಕಂದಾಯ ಇಲಾಖೆಯಿಂದ ರೈತರು ಉಚಿತವಾಗಿ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು(BHOOMI RTC MUTATION HISTORY) ನೋಡಲು ವೆಬ್ಸೈಟ್ ಲಿಂಕ್ ಮತ್ತು ನಿಮ್ಮ ಮೊಬೈಲ್ ನಲ್ಲಿ ಈ ಮ್ಯುಟೇಶನ್ ವಿವರವನ್ನು ಹೇಗೆ ನೋಡಬಹುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ಕೃಷಿ ಜಮೀನಿಗೆ ಸಂಭಂದಪಟ್ಟ ಅಗತ್ಯ ದಾಖಲೆಗಳಲ್ಲಿ ಒಂದಾದ ಪಹಣಿಗೆ ಸಂಭದಪಟ್ಟ ಮ್ಯುಟೇಶನ್ ವಿವರವನ್ನು(Land Mutation Website) ರೈತರು ಯಾವುದೇ ಶುಲ್ಕ ಪಾವತಿ ಮಾಡದೆ ತಮ್ಮ ಮೊಬೈಲ್ ನಲ್ಲೇ ಕೆಲವೇ ನಿಮಿಷಗಳಲ್ಲಿ ಒಂದೆರಡು ಕ್ಲಿಕ್ ನಲ್ಲಿ ಈ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.

ಇದನ್ನೂ ಓದಿ: Gruha arogya- ಗೃಹ ಆರೋಗ್ಯ ಮನೆ ಬಾಗಿಲಿಗೆ ಬರಲಿದೆ ಆರೋಗ್ಯ ತಪಾಸಣೆ! ಏನಿದು ನೂತನ ಯೋಜನೆ!

ಮ್ಯುಟೇಶನ್ ಎಂದರೇನು?ವಿಭಜನೆ/ವಿಭಾಗ, ಪೌತಿ, ಕ್ರಯ ಎಂದು ಪಹಣಿಯಲ್ಲಿ ಏಕೆ? ನಮೂದಿಸಿರುತ್ತಾರೆ, ಈ ಪದದ ಅರ್ಥಗಳೇನು? ಇವು ಏನನ್ನು ಸೂಚಿಸುತ್ತವೆ ಈ ಕುರಿತು ಸಂಪೂರ್ಣ ವಿವರಣೆಯನ್ನು ಈ ಕೆಳಗೆ ತಿಳಿಸಲಾಗಿದೆ.

What is Mutation- ಮ್ಯುಟೇಶನ್ ಎಂದರೇನು?

ಮ್ಯುಟೇಶನ್ ಎಂದರೆ ಇದು ನಿಮ್ಮ ಜಮೀನು ಮಾಲೀಕತ್ವ ಬದಲಾವಣೆಯ ವಿವರವನ್ನು ತೋರಿಸುತ್ತದೆ ಅಂದರೆ ನಿಮ್ಮ ಜಮೀನು ಈ ಹಿಂದೆ ಯಾರ ಹೆಸರಿಗೆ ಇತ್ತು ಪ್ರಸ್ತುತ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಎನ್ನುವ ವಿವರ ದಾಖಲೆಗೆ ಮ್ಯುಟೇಶನ್ ವಿವರ ಎಂದು ಕರೆಯುತ್ತಾರ‍ೆ.

ಇದನ್ನೂ ಓದಿ: Ration card list-2024: 14 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ ಪತ್ತೆ! ಇಲ್ಲಿದೆ ರದ್ದಾದ ರೇಷನ್ ಕಾರ್ಡ ಪಟ್ಟಿ!

Mutation details-ಮ್ಯುಟೇಶನ್ ವಿವರದಲ್ಲಿ ನಮೂದಿಸಿದ ಈ ಪದಗಳ ವಿವರಣೆ:

ಮ್ಯುಟೇಶನ್ ವಿವರವನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿದಾಗ ನಿಮ್ಮ ಹೆಸರಿನ ಮುಂದೆ ಆಸ್ತಿ ವರ್ಗಾವಣೆ ಅಗಿರುವ ವಿಧಾವನ್ನು ಈ ಕೆಳಗೆ ತಿಳಿಸಿರುವ ಪದ ಬಳಕೆ ಮೂಲಕ ಸೂಚಿಸಲಾಗುತ್ತದೆ.

1) ವಿಭಜನೆ/ವಿಭಾಗ(Vibhaga): ಒಂದು ಕುಟುಂಬದಲ್ಲಿ ನಾಲ್ಕು ಜನ ಅಣ್ಣ-ತಮ್ಮಂದಿರಿದರೆ ಅಂದುಕೊಳ್ಳಿ ಆ ನಾಲ್ಕು ಜನ ತಮ್ಮ ತಮ್ಮ ಹೆಸರಿಗೆ ಜಮೀನನ್ನು ಭಾಗ ಮಾಡಿಕೊಂಡು ಸರ್ವೆ ನಂಬರ್ ನಲ್ಲಿ ಹಿಸ್ಸಾ ಸಂಖ್ಯೆಯನ್ನು ಹೊಂದುವುದು.

2) ಪೌತಿ(Pouthi Khate): ತಂದೆಯಿಂದ ಮಗ ತನ್ನ ಹೆಸರಿಗೆ ಕೃಷಿ ಜಮೀನನ್ನು ವರ್ಗಾವಣೆ ಮಾಡಿಕೊಂಡಿದ್ದರೆ ಪಹಣಿ/ಮ್ಯುಟೇಶನ್ ವಿವರದಲ್ಲಿ "ಪೌತಿ" ಎಂದು ಗುರುತಿಸಲಾಗಿರುತ್ತದೆ.

ಇದನ್ನೂ ಓದಿ: Google Pay, Phone pe ನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಕಳಿಸಿದರೆ! ವಾಪಸ್ ಪಡೆಯುವುದು ಹೇಗೆ!

ತಂದೆಯಿಂದ ಮಗ ಹೆಸರಿಗೆ ಆಸ್ತಿ ವರ್ಗಾವಣೆ ಅಗಿರುವುದಕ್ಕೆ ಮತ್ತು ಗಂಡನಿಂದ ಹೆಂಡತಿ ಹೆಸರಿಗೆ ಆಸ್ತಿ ವರ್ಗಾವಣೆ ಅಗಿರುವುದಕ್ಕೆ "ಪೌತಿ" ಎಂದು ಕರೆಯುತ್ತಾರೆ.

3) ಕ್ರಯ(Kraya): ಕೃಷಿ ಜಮೀನನ್ನು ಹಣ ಕೊಟ್ಟು ಹೊಸದಾಗ ಜಮೀನನ್ನು ಖರೀದಿ ಮಾಡಿ ನಿಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರೆ "ಕ್ರಯ" ಎಂದು ಸೂಚಿಸಿರಲಾಗುತ್ತದೆ.

Mutation Download link- ಎರಡು ವಿಧಾನ ಅನುಸರಿಸಿ ಉಚಿತವಾಗಿ ಮ್ಯುಟೇಶನ್ ವಿವರವನ್ನು ಪಡೆಯಬಹುದು:

ವಿಧಾನ-1:

ಕಂದಾಯ ಇಲಾಖೆಯ Bhoomi ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಮ್ಯುಟೇಶನ್ ವಿವರವನ್ನು ನೋಡಬಹುದು.

Step-1: ಮೊದಲಿಗೆ ಈ Mutation Status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ತದನಂತರ ನಿಮ್ಮ ಸರ್ವೆ ನಂಬರ್ ಅನ್ನು ಹಾಕಿ "Fetch Details" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಮ್ಯುಟೇಶನ್ ವಿವರವನ್ನು ನೋಡಬಹುದು.

Mutation details

ಇದನ್ನೂ ಓದಿ: Online RTC-ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಪಹಣಿ ನೋಡಿ! ಇಲ್ಲಿದೆ ವೆಬ್ಸೈಟ್ ಲಿಂಕ್!

ವಿಧಾನ-2:

Step-1: ಪ್ರಥಮದಲ್ಲಿ Mutation Status ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.

Mutation details

Step-2: ಬಳಿಕ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಅನ್ನು ಹಾಕಿ "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ಮ್ಯುಟೇಶನ್ ವಿವರ ಡೌನ್ಲೋಡ್ ಅಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: