- Advertisment -
HomeAgricultureLand ownership act-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕಾನೂನು ಏನು ಹೇಳುತ್ತದೆ?

Land ownership act-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕಾನೂನು ಏನು ಹೇಳುತ್ತದೆ?

ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಹ ಹಕ್ಕು(Land ownership) ಇದೆ ಎಂದು ಬಹುತೇಕ ಜನರಿಗೆ ತಿಳಿದಿದೆ ಅದರೆ ತಂದೆಯ ಆಸ್ತಿಯನ್ನು ಹೆಣ್ಣು ಮಕ್ಕಳು ತಮ್ಮ ಭಾಗವನ್ನು ಪಡೆಯಲು ಕಾನೂನಿನಲ್ಲಿ ಯಾವ ರೀತಿ ನಿಯಮವನ್ನು ರೂಪಿಸಲಾಗಿದೆ ಎನ್ನುವ ಮಾಹಿತಿ ಬಹಳಷ್ಟು ಜನರಿಗೆ ಸ್ಪಷ್ಟವಾಗಿ ತಿಳಿದಿಲ್ಲ ಈ ಕುರಿತು ಉಪಯುಕ್ತ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೂ ಸಹ ಗಂಡು ಮಕ್ಕಳಷ್ಟೇ(Land ownership acts) ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಹಕ್ಕನ್ನು ನೀಡಲಾಗುತ್ತದೆ ಇದರನ್ವಯ ತಂದೆ-ತಾಯಿಯ ಆಸ್ತಿಯಲ್ಲಿ ಹಕ್ಕನ್ನು ಯಾವ ರೀತಿ ಹೊಂದಿದ್ದಾರೆ ಭಾರತೀಯ ಕಾನೂನಿನಲ್ಲಿ ಈ ಕುರಿತು ಉಲ್ಲೇಖಿಸಿರುವ ಅಂಶಗಳೇನು? ಅನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಒಂದಿಷ್ಟು ವಿವರವನ್ನು ತಿಳಿಸಲಾಗಿದೆ.

ಇದನ್ನೂ ಓದಿ: PM-Kisan-ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಬಿಡುಗಡೆ ಕುರಿತು ಮಹತ್ವದ ಮಾಹಿತಿ ಪ್ರಕಟ!

ಹಿಂದೂ ಉತ್ತರಾಧಿಕಾರ ಕಾಯ್ದೆ 1965 ರ(Hindu Succession Act) ಪ್ರಕಾರ ಭಾರತೀಯ ಕಾನೂನಿನಲ್ಲಿ ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೆ ಸಮಾನ ಹಕ್ಕು ಹೊಂದಿದ್ದಾರೆ ಎಂದು ತಿಳಿಸಲಾಗಿದ್ದು ಈ ಕಾಯ್ದೆಯ ರೂಪುರೇಷಗಳ ಕುರಿತಾಗಿ ಈ ಕೆಳಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.

Hindu Succession Act Details-ಏನಿದು ಹಿಂದೂ ಉತ್ತರಾಧಿಕಾರ ಕಾಯ್ದೆ?

ಭಾರತೀಯ ಕಾನೂನಿನ್ವಯ “ಹಿಂದೂ ಉತ್ತರಾಧಿಕಾರ ಕಾಯ್ದೆ” ಯು ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೆ ಸಮಾನ ಹಕ್ಕು ಹೊಂದಿದ್ದಾರೆ ಎಂದು ಸೂಚಿಸುತ್ತದೆ 1965 ರ ನಂತರ ಅಗಿರುವ ಆಸ್ತಿ ವಿಭಜನೆ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಭಾಗದ ಆಸ್ತಿಯನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿರುತ್ತದೆ.

ಇದನ್ನೂ ಓದಿ: E-Khata Download-ಮೊಬೈಲ್ ನಲ್ಲೇ ಆಸ್ತಿ ಮತ್ತು ಸೈಟ್ ನ ಇ-ಖಾತಾ ಡೌನ್ಲೋಡ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Land Ownership Acts

Land ownership acts in india-ಈ ವರ್ಷದಲ್ಲಿ ಆಸ್ತಿ ವಿಭಜನೆ ಅಗಿದ್ದರೆ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ:

ಹಿಂದೂ ಉತ್ತರಾಧಿಕಾರ ಕಾಯ್ದೆ ಯು 1965 ರಲ್ಲಿ ತಿದ್ದುಪಡಿಯಾಗಿದ್ದು ಇದಕ್ಕೂ ಮೊದಲು ತಂದೆಯ ಆಸ್ತಿಯು ವಿಭಜನೆಯಾಗಿ ಗಂಡು ಮಕ್ಕಳಿಗೆ ಹಂಚಿಕೆಯಾಗಿದ್ದರೆ ಅಂತಹ ಮನೆಯ ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳಲು ಬರುವುದಿಲ್ಲ ಇದಲ್ಲದೇ 1965 ಮೊದಲೇ ತಂದೆಯು ನಿಧನ ಹೊಂದಿದ್ದರು ಸಹ ಆಸ್ತಿಯಲ್ಲಿ ಹಕ್ಕು ಚಲಾವಣೆ ಮಾಡಲು ಬರುವುದಿಲ್ಲ.

Hennu makkalige astiyalli palu-ಮದುವೆ ಬಳಿಕ ಹೆಣ್ಣು ಮಕ್ಕಳು ತಮ್ಮ ಆಸ್ತಿಯಲ್ಲಿ ಪಾಲು ಕೇಳಬಹುದೇ?

ಇನ್ನು ಬಹಳಷ್ಟು ಜನರಿಗೆ ಈ ಕುರಿತು ಗೊಂದಲ ಇರುತ್ತದೆ ಹೆಣ್ಣು ಮಕ್ಕಳು ಮದುವೆಯಾದ ಬಳಿಕವು ತಮ್ಮ ತವರು ಮನೆಯಲ್ಲಿ ತಂದೆಯ ಆಸ್ತಿಯಲ್ಲಿ ಹಕ್ಕು ಚಲಾಯಿಸಲು/ತಮ್ಮ ಭಾಗದ ಪಾಲನ್ನು ಪಡೆಯಲು ಸಾಧ್ಯವಿದೆಯೇ? ಇದಕ್ಕೆ ಕಾನೂನಿನಲ್ಲಿ ಈ ರೀತಿ ಸೂಚಿಸಲಾಗಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳಲ್ಲಿ ಮಾಡಲಾಗಿದ್ದು 1956 ರ ಮೊದಲು ಹೆಣ್ಣು ಮಕ್ಕಳಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕು ಹೊಂದಿರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ ಅದರೆ 1956 ರ ಬಳಿಕ ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಗೆ ಬಂದಿದ್ದು ಇದರ ಪ್ರಕಾರವಾಗಿ ಮದುವೆಯಾದ ಹೆಣ್ಣು ಮಕ್ಕಳು ಸಹ ಗಂಡು ಮಕ್ಕಳಷ್ಟೆ ಸಮಾನ ಹಕ್ಕನ್ನು ತಂದೆಯ ಆಸ್ತಿಯಲ್ಲಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

ಈ ಕಾಯ್ದೆ ಜಾರಿಗೊಳ್ಳುವ ಮುನ್ನ ತಂದೆ ಮರಣ ಹೊಂದಿದ್ದರೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕಿಲ್ಲ:

ಇತ್ತೀಚೇಗೆ ಬಾಂಬೆ ನ್ಯಾಯಲಯದ ಪ್ರಕರಣ ಒಂದರ ತೀರ್ಪಿನ ಅನ್ವಯ 1956 ರ ಕಾಯಿದೆ ಭಾರತದಲ್ಲಿ ಜಾರಿಗೆ ಬರುವ ಮೊದಲೇ ವ್ಯಕ್ತಿ/ತಂದೆ ಮರಣ ಹೊಂದಿದ್ದರೆ ಇಂತಹ ಪ್ರಕರಣಗಳಲ್ಲಿ ತಂದೆಯ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಯಾವುದೇ ಬಗ್ಗೆಯ ಹಕ್ಕು ಇರುವುದಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: RTC Crop Details-ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ಈ ವರ್ಷದ ಬೆಳೆ ಮಾಹಿತಿ ಬಿಡುಗಡೆ!

ಮದುವೆಯಾದ ಎಷ್ಟು ವರ್ಷದ ಒಳಗಾಗಿ ತಂದೆಯ ಆಸ್ತಿಯಲ್ಲಿ ಪಾಲು ಕೇಳಲು ಅವಕಾಶ:

ಹೆಣ್ಣು ಮಕ್ಕಳು ತಾವು ಮದುವೆಯಾಗಿ ಗಂಡನ ಮನೆಯನ್ನು ಸೇರಿದ ಬಳಿಕ ಎಷ್ಟು ವರ್ಷದ ಒಳಗಾಗಿ ತಂದೆಯ ಆಸ್ತಿಯಲ್ಲಿ ಪಾಲನ್ನು ಕೇಳಬೇಕು ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ ಹಿಂದೂ ಉತ್ತರಾಧಿಕಾರ ಕಾಯಿದೆ 2005 ರ ತಿದ್ದುಪಡಿಯ ಪ್ರಕಾರವಾಗಿ ಇದಕ್ಕೆ ಯಾವುದೇ ಬಗ್ಗೆಯ ಕಾಲಮಿತಿ ಇರುವುದಿಲ್ಲ,

ಮದುವೆಯಾಗಿ ಇಂತಿಷ್ಟು ವರ್ಷದಲ್ಲೇ ತಮ್ಮ ಭಾಗದ ಆಸ್ತಿಯನ್ನು ಪಡೆಯಬೇಕು ಎನ್ನುವ ನಿಯಮ/ಷರತ್ತು ಅನ್ನು ಈ ಕಾಯಿದೆಯಲ್ಲಿ ಹಾಕಿರುವುದಿಲ್ಲ ಮದುವೆಯಾದ ಬಳಿಕ ಯಾವಾಗ ಬೇಕಾದರು ತಂದೆಯ ಆಸ್ತಿಯಲ್ಲಿ ತಮ್ಮ ಹಕ್ಕನ್ನು ಹೆಣ್ಣು ಮಕ್ಕಳು ಚಲಾಯಿಸಬಹುದಾಗಿದೆ.

ಉಪಯುಕ್ತ ಲಿಂಕ್ ಗಳು:

Hindu Succession Act Pdf-ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಧಿಕೃತ ಪ್ರತಿಯ ಡೌನ್ಲೋಡ್ ಲಿಂಕ್- Download Now

- Advertisment -
LATEST ARTICLES

Related Articles

- Advertisment -

Most Popular

- Advertisment -