- Advertisment -
HomeAgricultureLand Purchase Records- ಆಸ್ತಿ ಮಾರಾಟ ಮತ್ತು ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೇ ಪರೀಶಿಲಿಸಿ!

Land Purchase Records- ಆಸ್ತಿ ಮಾರಾಟ ಮತ್ತು ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೇ ಪರೀಶಿಲಿಸಿ!

ಎಲ್ಲಾ ಕೃಷಿಕಮಿತ್ರ ಪುಟದ ಓದುಗ ಮಿತ್ರರಿಗೆ ನಮಸ್ಕಾರಗಳು ಇಂದು ಈ ಅಂಕಣದಲ್ಲಿ ಕೃಷಿ ಮತ್ತು ಕೃಷಿಯೇತರ ಜಮೀನಿನ ಮಾರಾಟ ಮತ್ತು ಖರೀದಿ(Required Documents for Land Purchase) ಮಾಡುವ ಸಮಯದಲ್ಲಿ ಸಾರ್ವಜನಿಕರು ಯಾವೆಲ್ಲ ದಾಖಲೆಗಳನ್ನು ತಪ್ಪದೇ ಚೆಕ್/ಪರೀಶಿಲನೆ ಮಾಡಬೇಕು ಎನ್ನುವ ಉಪಯುಕ್ತ ಮಾಹಿತಿಯನ್ನು ತಿಳಿಸಲಾಗಿದೆ.

ಇತ್ತಿಚೀನ ದಿನಗಳಲ್ಲಿ ದಿನೇ ದಿನೇ ಕೃಷಿ ಮತ್ತು ಕೃಷಿಯೇತರ ಜಮೀನಿನ ಬೆಲೆಯು ರಾಕೆಟ್ ವೇಗದಲ್ಲಿ ಏರುಗತಿಯಲ್ಲೇ ಸಾಗುತ್ತಿದ್ದು ಆಸ್ತಿ/ಜಾಗವನ್ನು ಮಾರಾಟ ಮತ್ತು ಖರೀದಿ ಮಾಡುವಾಗ(Land Records) ಸಾರ್ವಜನಿಕರು ಯಾವೆಲ್ಲ ಅಗತ್ಯ ದಾಖಲೆಗಳನ್ನು ತಪ್ಪದೇ ಪರೀಶಿಲನೆ ಮಾಡಬೇಕು ಎನ್ನುವುದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Free Hostel-ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಜಮೀನಿನ/ಜಾಗದ ಮೌಲ್ಯ ಏರಿಕೆಯಾದಂತೆ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಮೋಸ/ವಂಚನೆ ಮಾಡುವವರ ಸಂಖ್ಯೆಯು ಸಹ ಪ್ರಸ್ತುತ ದಿನಗಳಲ್ಲಿ ಹಲವು ಪ್ರಕರಣಗಳನ್ನು ನಾವು ಕಾಣಬಹುದು ಅದ್ದರಿಂದ ಯಾರೇ ಅಗಲಿ ಜಮೀನನ್ನು ಖರೀದಿ ಮಾಡುವಾಗ ಒಂದಲ್ಲ ಎರಡು ಬಾರಿ ಈ ಕೆಳಗೆ ತಿಳಿಸಿರುವ ದಾಖಲೆಗಳು ಇವೆಯೇ ಎಂದು ಚೆಕ್ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

ಇಲ್ಲಿ ಮೊದಲಿಗೆ ಕೃಷಿ ಭೂಮಿ(Agriculture Land) ಖರೀದಿ ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ತಿಳಿಸಲಾಗಿದ್ದು ನಂತರ ಕೃಷಿಯೇತರ ಜಮೀನು(Non-Agriculture Land) ಖರೀದಿ ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: Crop Insurance amount-ಈ ಜಿಲ್ಲೆಯ ರೈತರ ಖಾತೆಗೆ ₹2,333 ಲಕ್ಷ ಮುಂಗಾರು ಬೆಳೆ ವಿಮೆ ಜಮಾ!

Agriculture Land-ಕೃಷಿ ಭೂಮಿ ಖರೀದಿ ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳು:

1) ಆಕಾರ್ ಬಂದ್/Akar band  
2) ಪಹಣಿ/RTC
3) ಸಾಗುವಳಿ ಚೀಟಿ/Land Records
4) ಫಾರ್ಮ 10
5) ಸರ್ವೇ ಸ್ಕೆಚ್/Survey Sketch
6) 11 ಇ ಸ್ಕೇಚ್/11 E
7) ಖರೀದಿ ಪತ್ರ(sale deed)
8) ಮ್ಯುಟೇಶನ್ ರಿಪೋರ್ಟ್(MR)
9) ಇ.ಸಿ(EC)

ಆನ್ಲೈನ್ ನಲ್ಲಿ ಜಮೀನಿನ ದಾಖಲೆಗಳನ್ನು ಚೆಕ್ ಮಾಡಲು ಕಂದಾಯ ಇಲಾಖೆಯ ಅಧಿಕೃತ ಜಾಲತಾಣದ ವೆಬ್ಸೈಟ್ ಲಿಂಕ್- CLICK HERE ಸಾರ್ವಜನಿಕರು ಈ ಜಾಲತಾಣವನ್ನುಪ್ರವೇಶ ಮಾಡಿ ಉಚಿತವಾಗಿ ಜಮೀನಿನ ದಾಖಲೆಗಳನ್ನು ಪರೀಶಿಲನೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: PM-Kisan Beneficiary List-ಪಿಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಪ್ರಕಟ!

Online Land Records Check-ಆನ್ಲೈನ್ ನಲ್ಲಿ ದಾಖಲೆಗಳನ್ನು ಪಡೆಯುವ ವಿಧಾನ:

ಕಂದಾಯ ಇಲಾಖೆಯ ಅಧಿಕೃತ Land Records ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರೀಶಿಲನೆ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಇಲ್ಲಿ Land Records Checker ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

RTC

Step-2: ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ ಒಂದೊಂದು ದಾಖಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ ಆ ದಾಖಲೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಅಲ್ಲೇ ವಿಕ್ಷಣೆ ಮಾಡಬಹುದು.

ಇದನ್ನೂ ಓದಿ: Monthly Fellowship- ಹಿಂದುಳಿದ ವರ್ಗಗಳ ಇಲಾಖೆಯಿಂದ ಮಾಸಿಕ ₹10,000 ರೂ ಸ್ಕಾಲರ್ಶಿಪ್ ಪಡೆಯಲು ಅರ್ಜಿ!

Non-Agriculture Land-ಕೃಷಿಯೇತರ ಜಮೀನು ಖರೀದಿ ಮಾಡುವಾಗ ಪರಿಶೀಲಿಸಬೇಕಾದ ದಾಖಲೆಗಳು:

1) Khata certificate – ಖಾತಾ ಪ್ರಮಾಣಪತ್ರ
2) Property tax receipts – ಆಸ್ತಿ ತೆರಿಗೆ ರಸೀದಿಗಳು
3) Sale deed – ಮಾರಾಟ ಒಪ್ಪಂದ ಪತ್ರ.
4) Loan clearance certificate- ಸಾಲ ಮರುಪಾವತಿ ಪ್ರಮಾಣ ಪತ್ರ.
5) No Objection Certificate- ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (NOC)
6) Cash No. Receipt- ನಗದು ಸಂಖ್ಯೆ ರಸೀದಿ

ಇದನ್ನೂ ಓದಿ: Togari bembala bele-ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ! ದರ ಎಷ್ಟು?

Real estate

ಉಪಯುಕ್ತ ಸಲಹೆ:

ಸಾರ್ವಜನಿಕರು ಒಮ್ಮೆ ಜಮೀನ್ನು/ಜಾಗವನ್ನು ಖರೀದಿ ಮಾಡಲು ಇಚ್ಚಿಸಿದ ನಂತರ ಆ ಜಮೀನಿನ ಎಲ್ಲಾ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಉತ್ತಮ ಲಾಯರ್ ಅನ್ನು ನೇರವಾಗಿ ಭೇಟಿ ಮಾಡಿ ಎಲ್ಲಾ ದಾಖಲೆಗಲು ಅಧಿಕೃತವಾಗಿ ಸರಿಯಾಗಿವೆಯೇ ಎಂದು ಚೆಕ್ ಮಾಡಿಕೊಳ್ಳುವುದನ್ನು ಮರೆಯದಿರಿ.

- Advertisment -
LATEST ARTICLES

Related Articles

- Advertisment -

Most Popular

- Advertisment -