agriculture land registration- ಜಮೀನಿನ ಮಾಲೀಕ ಮರಣವಾದ ಬಳಿಕ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು?

ಸಾಮಾನ್ಯವಾಗಿ ನಮ್ಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಜಮೀನು ಆ ಕುಟುಂಬದ ಹಿರಿಯ ವ್ಯಕ್ತಿಯ ಹೆಸರಿನಲ್ಲೇ ಇರುತ್ತದೆ ಇದನ್ನು ಪ್ರಸ್ತುತ ಇರುವ ಕುಟುಂಬ ಸದಸ್ಯರ ಹೆಸರಿಗೆ ವರ್ಗಾವಣೆ ಹೇಗೆ ಮಾಡಿಸಬೇಕು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಹಲವು ಕುಟುಂಬದಲ್ಲಿ ಹಿರಿಯರು ಮರಣ ಹೊಂದಿದ ಬಳಿಕ ನಂತರದ ಆ ಜಮೀನಿನ ವಾರಸುದಾರರಿಗೆ ಆಸ್ತಿಯನ್ನು ಭಾಗ ಮಾಡಿಕೊಳ್ಳಲು ಅನೇಕ ಅಡಚಣೆಗಳು ಬರುತ್ತವೆ ಆಸ್ತಿ ವಿಭಜನೆ/ವಿಭಾಗ/ವರ್ಗಾವಣೆಯ ಕುರಿತು ಕುಟುಂಬದಲ್ಲಿ ಒಡಕು, ಅಣ್ಣ-ತಮ್ಮಂದಿರ ಜಗಳ, ಮರಣ ಹೊಂದಿರುವ ವ್ಯಕ್ತಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಹೆಂಡತಿಯರು ಇರುವುದು ಇತ್ಯಾದಿ ಕಾರಣಗಳು.

ಎಲ್ಲಾ ಬಗ್ಗೆಯ ವ್ಯಾಜ್ಯಗಳಿಗೆ ಕಾನೂನಿನಲ್ಲಿ ಸೂಕ್ತ ನಿರ್ದೇಶನಗಳಿದ್ದು ಭೂ ವಿವಾಧ ಯಾವುದೇ ರೀತಿಯಲ್ಲಿದ್ದರು ಪರಿಹಾರ ಮಾರ್ಗವಿದೆ ಅದರೆ ಮಾಹಿತಿ/ತಿಳುವಳಿಕೆ ಕೊರತೆಯಿಂದಾಗಿ ತಮ್ಮ ತಮ್ಮ ಹೆಸರಿಗೆ ಜಮೀನನ್ನು ವರ್ಗಾವಣೆ/ಭಾಗ ಮಾಡಿಕೊಳ್ಳದೆ ಅನೇಕ ವರ್ಷಗಳು ಹಾಗೆಯೇ ಬಿಟ್ಟು ತೊಂದರೆಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: Bengalore Job fair- 26, 27 ಫೆಬ್ರವರಿ 2024 ರಂದು ಬೃಹತ್ ಉದ್ಯೋಗ ಮೇಳ!

agriculture land registration- ಜಮೀನಿನ ಮಾಲೀಕ ಮರಣವಾದ ಬಳಿಕ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ  ಮಾಡಿಕೊಳ್ಳಬೇಕು?

ಸರಕಾರದ ಮಾರ್ಗಸೂಚಿ/ನಿಯಮಗಳ ಪ್ರಕಾರದ ಒಂದು ಜಮೀನಿನ ಮಾಲೀಕ ಮರಣ ಹೊಂದಿದ ಬಳಿಕ ಅವರ ಕುಟುಂಬದ ವಾರಸುದಾರರು 6 ತಿಂಗಳ ಒಳಗಾಗಿ ಆ ಜಮೀನಿನ ಖಾತೆಯನ್ನು ಬದಲಾವಣೆ ಮಾಡಿಕೊಳ್ಳಲೇಬೇಕು ಎಂದು. ಒಂದೊಮ್ಮೆ ಜಮೀನು ವರ್ಗಾವಣೆ ಕುರಿತು ವಿವಾದವಿದ್ದಲ್ಲಿ ಅಗ ನೀವು ತಪ್ಪದೇ ಪೌತ ಖಾತೆಯ ಮೂಲಕ ಹಕ್ಕು ಬದಲಾವಣೆ ಮಾಡಿಕೊಳ್ಳುವುದು ಮೊದಲ ಹಂತವಾಗಿರುತ್ತದೆ.

ಹಂತ-1: ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಕುಟುಂಬದ ಸದಸ್ಯರು ತಮ್ಮ ತಮ್ಮಲೇ ಒಳಗೆ ಪಾಲು ಮಾಡಿಕೊಳ್ಳಲು ಯಾವ ಯಾವ ಹಂತ ಅನುಸರಿಸಬೇಕು ಎಂದು ಈ ಕೆಳಗೆ ವಿವರಿಸಲಾಗಿದೆ.

ಪ್ರಥಮ ಹಂತದಲ್ಲಿ ಜಮೀನಿನ ಮಾಲೀಕ ಮರಣ ಹೊಂದಿದಾಗ ಅವನ ಮನೆಯವರು ಪೌತಿ ಖಾತೆ ಮಾಡಿಸಿಕೊಳ್ಳಲು ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಪೌತಿ ಖಾತೆ ಎಂದರೆ ಮರಣ ಹೊಂದಿದ ಖಾತೆದಾರನ ಹೆಸರನ್ನು ಪಹಣಿಯಿಂದ ತೆಗೆದು ಆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಅಂದರೆ ನೇರ ವಾರಸುದಾರ ಹೆಸರಿಗೆ ಜಂಟಿಯಾಗಿ ಖಾತೆ ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯುತ್ತಾರೆ. ಗಮನಿಸಿ ಮರಣ ಹೊಂದಿದ ತಾಯಿ, ಹೆಂಡತಿ, ಮಕ್ಕಳು ಮಾತ್ರ ನೇರ ವಾರಸುದಾರರಾಗಿರುತ್ತಾರೆ.

ಇದನ್ನೂ ಓದಿ: Karnataka guarantee yojana- ಗ್ಯಾರಂಟಿ ಯೋಜನೆ ಸ್ಥಗಿತ ವದಂತಿ: ಸಿ ಎಂ ಸಿದ್ದರಾಮಯ್ಯ ಸ್ಪಷ್ಟನೆ!

ಗಮನಿಸಿ: ಪೌತಿ ಖಾತೆಯಾಗಿ ಬದಲಾವಣೆಯಾದ ಬಳಿಕ ಜಮೀನು ಸಂಪೂರ್ಣವಾಗಿ ಅವರ ಹೆಸರಿಗೆ ಆಗುವುದಿಲ್ಲ, ಕೇವಲ ಕಂದಾಯ ವಸೂಲಿಗಾಗಿ ಮತ್ತು ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾತ್ರ ಅವಕಾಶವಿರುತ್ತದೆ.

ಹಂತ-2: ಪೌತಿ ಖಾತೆಯನ್ನು ಮಾಡಿಕೊಂಡ ಬಳಿಕ ಜಮೀನಿಗೆ 11ಇ ಗೆ ಕಂದಾಯ ಇಲಾಖೆಯಲ್ಲಿ ಅರ್ಜಿ ಹಾಕಬೇಕಾಗುತ್ತದೆ ಪೌತಿ ಖಾತೆ ಮಾಡಿದ ಬಳಿಕ ಅದರಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ ಮತ್ತು ಜಮೀನಿನ ಸಂಬಂಧಪಟ್ಟ ಎಲ್ಲಾ ಜಮೀನಿನ ಪಹಣಿಗಳು ಅರ್ಜಿ ಸಲ್ಲಿಸಲು ಬೇಕಾಗುತ್ತದೆ ಈ ಎಲ್ಲಾ ದಾಖಲೆಗಳ ಸಮೇತ ನಿಮ್ಮ ಹತ್ತಿರ ನಾಡಕಚೇರಿ ಭೇಟಿ ಮಾಡಿ ಜಮೀನಿಗೆ 11ಇ ಸ್ಕೆಚ್ ಗೆ ಅರ್ಜಿ ಸಲ್ಲಿಸಬೇಕು.

ಈ 11 ಇ ಸ್ಕೆಚ್ ಎಂದರೆ ಆ ಪಹಣಿಯಲ್ಲಿರುವ ಎಲ್ಲಾ ಸದಸ್ಯರಿಗೆ ಪ್ರತೇಕವಾಗಿ ಎಷ್ಟು ಎಷ್ಟು ಜಮೀನು ಎಂದು ಗುರುತಿಸಲಾಗುತ್ತದೆ. ಯಾರಿಗೆ ಎಷ್ಟು ಜಮೀನು ಎಂದು ಪಹಣಿಯಲ್ಲಿ ನಮೂದಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಪಹಣಿಯಲ್ಲಿ ಪೌತಿ ಬದಲು ವಿಭಾಗ ಎಂದು ಹಕ್ಕು ಬದಲಾವಣೆ ಅಗಿತ್ತದೆ.

ಇದನ್ನೂ ಓದಿ: Subsidy for Digital Media- ಶೇ 70% ಸಬ್ಸಿಡಿಯಲ್ಲಿ 5 ಲಕ್ಷದವರೆಗೆ ಸಹಾಯಧನದಲ್ಲಿ ಡಿಜಿಟಲ್ ಮಾಧ್ಯಮ ಸ್ಥಾಪನೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಹಂತ-3: ಜಮೀನಿಗೆ 11ಇ ಮಾಡಿಸಿದ ಬಳಿಕ ಮುಂದಿನ ಹಂತ ಎಂದರೆ ಅದು ವಿಭಾಗದ ಪತ್ರದ ಮೂಲಕ ತಮ್ಮ ತಮ ಹೆಸರಿಗೆ ಜಮೀನನ್ನು ಪಾಲು ಮಾಡಿಕೊಳ್ಳಲು ಅರ್ಜಿ ಸಲ್ಲಿಸಬೇಕು ಇದ್ದಕ್ಕಾಗಿ ಸರ್ವೆ ಇಲಾಖೆಯಿಂದ ತಯಾರಿಸಲಾದ 11 ಇ ಸ್ಕೆಚ್ ಮತ್ತು ಪಾಲುದಾರರ ಆಧಾರ್ ಕಾರ್ಡ ಪ್ರತಿ , ಕುಟುಂಬದ ವಂಶಾವಳಿ ಪ್ರಮಾಣ ಪತ್ರ ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಉಪನೋಂದಣಿ ಕಚೇರಿ(Sub registrar office)ಯನ್ನು ಭೇಟಿ ಮಾಡಿ ವಿಭಾಗ ಪತ್ರದ ಮೂಲಕ ಅಂದರೆ ಪಾರ್ಟಿಶನ್ ಡೀಡ್ ಮೂಲಕ ನೋಂದಣಿ ಮಾಡಿದ್ದರೆ ಇಲ್ಲಿದೆ ನಿಮ್ಮ ಜಮೀನಿನ ಪಾಲು ವಿಭಾಗ ನೋಂದಣಿ ಅಧಿಕೃತವಾಗಿ ಮುಗಿಯುತ್ತದೆ.

RTC- ನಿಮ್ಮ ನಿಮ್ಮ ಹೆಸರು ಪಹಣಿಯಲ್ಲಿ ಬರುವ ಪ್ರಕ್ರಿಯೆ ಮಾಹಿತಿ:

ರೆಜೀಸ್ಟರ ಕಾರ್ಯ ಮುಗಿದ ನಂತರ 20 ದಿನಗಳೋಳಗಾಗಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಖಾರಿ/ವಿಲೇಜ್ ಅಕೌಂಟಂಟ್‌ ಅವರು ಮ್ಯುಟೇಶನ್‌ ಪ್ರಕ್ರೀಯೆ ಅಂದರೆ ಜೆ ಫಾರ್ಮ ಪ್ರೋಸೆಸ್‌ ಇರುತ್ತೆ ಅವರಿಗೆ ವಿಲೇಜ್ ಅಕೌಂಟಂಟ್‌ ಅವರಿಗೆ ಮ್ಯುಟೇಶನ್‌ ಸಮಯದಲ್ಲಿ ಜೆ ಫಾರ್ಮನ ಮೇಲೆ ಸಹಿ ಮಾಡಿದ್ದರೆ ಸ್ವಲ್ಪ ದಿನಗಳ ನಂತರ ನಿಮ್ಮ ಹೆಸರಿಗೆ ಭಾಗವಾಗಿರುವ ಪಹಣಿಯ ಹೆಸರು ಬರುತ್ತೆ ಪತೇಕವಾಗಿ ಜಮೀನಿನ ನಕ್ಷೆ ಸಹ ಬರುತ್ತೆ ಪಹಣಿ ನಿಮ್ಮ ಹೆಸರಿನಲ್ಲಿ ಬರುತ್ತದೆ. 

ಇದನ್ನೂ ಓದಿ: HSRP number plate-2024: HSRP ನಂಬರ್ ಪ್ಲೇಟ್ ಏಕೆ? ಹಾಕಿಸಬೇಕು, ನಂಬರ್ ಪ್ಲೇಟ್ ಹೇಗಿರುತ್ತದೆ? ಇಲ್ಲಿದೆ ಆನ್ಲೈನ್ ನಲ್ಲಿ ಬುಕ್ ಮಾಡಲು ವೆಬ್ಸೈಟ್ ಲಿಂಕ್