ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ದಿನೇ ದಿನೇ ಏರುಗತಿಯಲ್ಲಿ ಜಮೀನಿಗೆ(Agriculture land) ಸಂಬಂಧಿಸಿದ ದೂರುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದು ಈ ಸಂಬಂಧ ಪೊಲೀಸ್ ಇಲಾಖೆಯ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.
ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಸಿಗುತೋ ಬಿಡುತ್ತೋ ಗೊತ್ತಿಲ್ಲ ಅದರೆ ಪ್ರಸ್ತುತ ದಿನಗಳಲ್ಲಿ ಕೃಷಿ ಜಮೀನಿನ(Land Records) ಬೆಲೆ ದಿನದಿಂದ ದಿನಕ್ಕೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತಾ ಸಾಗುತ್ತಿರು ಪರಿಣಾಮ ಜಮೀನಿಗೆ ಸಂಬಂಧಪಟ್ಟ ವ್ಯಾಜ್ಯಗಳ ಸಂಖ್ಯೆಗೆ ಹೆಚ್ಚಳವಾಗುತ್ತಿದೆ.
ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಪೊಲೀಸ್(Police) ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಪೊಲೀಸರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾರ್ಗಸೂಚಿಯ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: Karnataka Dam Water Level-ಈ ಬಾರಿ ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ! ಡ್ಯಾಂ ವಾರು ನೀರಿನ ಸಂಗ್ರಹ ಎಷ್ಟಿದೆ?
Land Rights Act-ಕೃಷಿ ಭೂಮಿ ಮಾಲೀಕತ್ವ ಮತ್ತು ಸ್ವಾಧೀನತೆ:
ಕರ್ನಾಟಕ ಭೂ ಕಂದಾಯ(Karnataka Revenue Act) ಅಧಿನಿಯಮ 1964 ಮತ್ತು ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ರ ಅಡಿಯಲ್ಲಿ ನಮೂದಿಸಿರುವ ಕಲಂಗಳ ಪ್ರಕಾರ ಕೃಷಿ ಭೂಮಿಗೆ ಸಂಬಂಧಪಟ್ಟ ಮಾಲೀಕತ್ವ ಮತ್ತು ಸ್ವಾಧೀನತೆಯನ್ನು ಈ ಭೂಮಿಗೆ ಸಂಬಂಧಪಟ್ಟ ಭೂದಾಖಲೆ ಹಕ್ಕುಪತ್ರಗಳ (ರೆಕಾರ್ಡ್ ಆಫ್ ರೈಟ್ಸ್) ಪ್ರಕಾರವೇ ತೀರ್ಮಾನ ಮಾಡುವುದು ಉಚಿತವಾಗಿರುತ್ತದೆ.
ಆದ್ದರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳು ಕೃಷಿ ಅಥವಾ ಭೂಮಿಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಯ ಹೆಸರು ನಮೂನೆ 16ರಲ್ಲಿ ಇರುವ ಭೂ ದಾಖಲೆ ಹಕ್ಕುಪತ್ರದಲ್ಲಿ ಅಂಕಣ 10 ಮತ್ತು 12ರಲ್ಲಿ ಯಾರ ಹೆಸರು ಇರುತ್ತದೆಯೋ ಅವರಿಗೆ ಮಾತ್ರ ಆ ಕೃಷಿ ಜಮೀನಿಗೆ ಸಂಬಂಧಪಟ್ಟಂತೆ ರಕ್ಷಣೆ ನೀಡತಕ್ಕದ್ದು ಎಂದು ಅಧಿಕೃತ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: SIM Card-ಸಿಮ್ ಕಾರ್ಡ ಪಡೆಯಲು ಈ ನಿಯಮ ಪಾಲಿಸುವುದು ಕಡ್ದಾಯ!
ಪ್ರಕರಣ-1:
ಕೃಷಿ ಭೂಮಿ ಅಥವಾ ಕೃಷಿಯೇತರ ಭೂಮಿ ಅಥವಾ ಕಟ್ಟಡ/ನಿವೇಶನಕ್ಕೆ(NA Land) ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯು ಒಟ್ಟು ಮುಕ್ತಿಯಾರು ಪತ್ರವನ್ನು GPA-ಜನರಲ್ ಪವರ್ ಆಪ್ ಅಟಾರ್ನಿ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ರಕ್ಷಣೆಯನ್ನು ಕೋರಿದಾಗ
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ಜಿ ಪಿ ಎ ಮೂಲಕ ಭೂಮಿಯನ್ನು ಹೊಸದಾಗಿ ಸ್ವಾದೀನ ಪಡೆಯಲು ಬಯಸಿರುವ ವ್ಯಕ್ತಿಗೆ ಯಾವುದೇ ರಕ್ಷಣೆಯನ್ನು ಪೊಲೀಸರು ನೀಡಬಾರದು.
ಪ್ರಕರಣ-2:
ಅರ್ಜಿದಾರರು ಕೃಷಿ ಭೂಮಿ ಅಥವಾ ಕೃಷಿಯೇತರ ಭೂಮಿ ಅಥವಾ ಕಟ್ಟಡ/ನಿವೇಶನಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯು ಒಟ್ಟು ಮುಕ್ತಿಯಾರು ಪತ್ರವನ್ನು( GPA-ಜನರಲ್ ಪವರ್ ಆಪ್ ಅಟಾರ್ನಿ) ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸುತ್ತಾರೆ, ಅದರೆ ಕೃಷಿ ಭೂಮಿಗೆ ಸಂಬಂಧಿಸಿದಂತೆ ಸ್ಥಳೀಯ ಪ್ರಾಧಿಕಾರದ ಆಸ್ತಿ ಹಕ್ಕುಗಳ ರಿಜಿಸ್ಟರಿನಲ್ಲಿ ನಮೂದಾಗಿರುವ ಮಾಲೀಕತ್ವ ಮತ್ತು ಸ್ವಾಧೀನತೆಯಿರುವ ವ್ಯಕ್ತಿಗಳ ಬಗ್ಗೆ ಪ್ರತಿರೋಧ ವ್ಯಕ್ತಿಪಡಿಸಿ( GPA-ಜನರಲ್ ಪವರ್ ಆಪ್ ಅಟಾರ್ನಿ) ಹೊಂದಿರುವ ವ್ಯಕ್ತಿಗೆ ರಕ್ಷಣೆ ನೀಡಬಾರದೆಂದು ಕೋರಿದಾಗ.
ಇದನ್ನೂ ಓದಿ: Horticulture Training-10 ತಿಂಗಳ ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನ! ಪ್ರತಿ ತಿಂಗಳು 1,750 ರೂ ಶಿಷ್ಯವೇತನ!
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
1) ಒಟ್ಟು GPA-ಜನರಲ್ ಪವರ್ ಆಪ್ ಅಟಾರ್ನಿ ಹೊಂದಿರುವ ವ್ಯಕ್ತಿಗೆ ಯಾವುದೇ ರಕ್ಷಣೆಯನ್ನು ನೀಡಬಾರದು, ಒಟ್ಟು GPA-ಜನರಲ್ ಪವರ್ ಆಪ್ ಅಟಾರ್ನಿ ಹೊಂದಿರುವ ವ್ಯಕ್ತಿಗೆ ಸಿವಿಲ್ ಕೋರ್ಟ್ ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಹಿಂಬರಹ ನೀಡಬೇಕು.
2) ಕೃಷಿ ಭೂಮಿ ಅಥವಾ ಕೃಷಿಯೇತರ ಭೂಮಿ ಅಥವಾ ಕಟ್ಟಡ/ನಿವೇಶನಕ್ಕೆ ಸಂಬಂಧಿಸಿದಂತೆ ಒಟ್ಟು GPA-ಜನರಲ್ ಪವರ್ ಆಪ್ ಅಟಾರ್ನಿ ಪತ್ರವನ್ನು ಹೊಂದಿರುವ ವ್ಯಕ್ತಿಗೆ ಯಾವುದೇ ರಕ್ಷಣೆಯನ್ನು ನೀಡಬಾರದು ಅಂತಹ ವ್ಯಕ್ತಿಗೆ ಸಂಬಂಧಿಸಿದ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲು ಮಾಡಿ ತನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಹಿಂಬರಹ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಪ್ರಕರಣ-3:
ಒಬ್ಬ ವ್ಯಕ್ತಿಯು ಮಾರಾಟ ಒಪ್ಪಂದ ಪತ್ರವನ್ನು (ಸೇಲ್‌ಡೀಡ್) ಹಾಜರುಪಡಿಸಿ ಕೃಷಿಭೂಮಿ ಅಥವಾ ಕೃಷಿಯೇತರ ಭೂಮಿ ಅಥವಾ ನಿವೇಶನ/ಕಟ್ಟಡಗಳಿಗೆ ಸಂಬಂಧಿಸಿದಂತೆ ಪೊಲೀಸ್ ರಕ್ಷಣೆ ಕೇಳಿಕೊಂಡಾಗ.
ಇದನ್ನೂ ಓದಿ: Gruha Jyothi Scheme: ಮನೆ ಬದಲಾವಣೆ ಮಾಡಿದರೆ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ಅವರಿಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ಹೋಗಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳ ಬೇಕೆಂದು ಹಿಂಬರಹ ನೀಡುವುದು ಇಲ್ಲದಿದ್ದರೆ ಕೃಷಿ ಭೂಮಿಗೆ ಸಂಬಂಧಿಸಿದಂತೆ ಮಾರಾಟ ಒಪ್ಪಂದ ಪತ್ರದ ಆಧಾರದ ಮೇಲೆ ಕಂದಾಯ ಇಲಾಖೆಯ ಸಕ್ಷಮ ಪ್ರಾಧಿಕಾರದಿಂದ ಖಾತೆ ಬದಲಾವಣೆ ಮಾಡಿಸಿಕೊಂಡ ನಂತರ ಅವರಿಗೆ ರಕ್ಷಣೆ ನೀಡಬಹುದು. ಕೃಷಿಯೇತರ ಭೂಮಿ. ಕಟ್ಟಡ/ನಿವೇಶನಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯ ಅಥವಾ ದಿವಾನಿ ನ್ಯಾಯಾಲಯದ ಮೊರೆ ಹೋಗಲು ಹಿಂಬರಹ ನೀಡಬಹುದು. ಇಲ್ಲದಿದ್ದರೆ ಸ್ಥಳೀಯ ಪ್ರಾಧಿಕಾರಕ್ಕೆ ಹೋಗಿ ಆಸ್ತಿ ಹಕ್ಕುಪತ್ರದಲ್ಲಿ ಖಾತೆ ಬದಲಾವಣೆ ಮಾಡಿಸಿ ಆಸ್ತಿ ಹಕ್ಕುಪತ್ರದಲ್ಲಿ ಮಾಲೀಕತ್ವವನ್ನು “ಪ್ರಮಾಣೀಕರಿಸಿ ಅಂತಹ ತನ್ನ ಹಕ್ಕುಪತ್ರವನ್ನು ಹಾಜರುಪಡಿಸಿದಾಗ ವ್ಯಕ್ತಿಗೆ ರಕ್ಷಣೆ ನೀಡಲಾಗುವುದೆಂದು ತಿಳಿಸಬೇಕು.
ಪ್ರಕರಣ-4:
ಒಬ್ಬ ವ್ಯಕ್ತಿಯು ಠಾಣೆಗೆ ಹಾಜರಾಗಿ ಕೃಷಿಭೂಮಿ ಅಥವಾ ಕೃಷಿಯೇತರ ಭೂಮಿಗೆ ಅಥವಾ ಕಟ್ಟಡ/ನಿವೇಶನಕ್ಕೆ ಸಂಬಂಧಿಸಿದಂತೆ ಮುಂಗಡ ಹಣ ನೀಡಿದ ಹಾಜರುಪಡಿಸಿ ಕೋರಿದಾಗ ದಾಖಲೆಯನ್ನು ರಕ್ಷಣೆಯನ್ನು ಕೋರಿದಾಗ.
ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲವಾ? ಇಲ್ಲಿದೆ ಉಪಯುಕ್ತ ಸಲಹೆಗಳು!
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ಭೂಮಿಯನ್ನು ಹೊಸದಾಗಿ ಸ್ವಾಧೀನ ಪಡೆಯಲು ಬಯಸಿರುವ ಅಂತಹ ವ್ಯಕ್ತಿಗೆ ಯಾವುದೇ ರಕ್ಷಣೆ ನೀಡಬಾರದು. ಅವರು ಖರೀದಿಗೆ ಸಂಬಂಧಪಟ್ಟ ಎಲ್ಲಾ ಕ್ರಮಗಳನ್ನು ಪೂರ್ತಿಗೊಳಿಸಿ ಕೃಷಿಭೂಮಿ ಅಥವಾ ಕೃಷಿಯೇತರ ಭೂಮಿ ಅಥವಾ ಕಟ್ಟಡ/ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆಯನ್ನು ಬದಲು ಮಾಡಿಕೊಂಡು ಅದರ ಬಗ್ಗೆ ಪ್ರಾಮಾಣೀಕೃತ ಪ್ರತಿಯನ್ನು ಹಾಜರುಪಡಿಸಲು ಸೂಚಿಸಬಹುದು.

ಪ್ರಕರಣ-5:
ಒಬ್ಬ ವ್ಯಕ್ತಿಯು ಠಾಣೆಗೆ ಹಾಜರಾಗಿ ಕೃಷಿ ಭೂಮಿ ಅಥವಾ ಕೃಷಿಯೇತರ ಭೂಮಿಗೆ/ಕಟ್ಟಡ/ನಿವೇಶನ ಸಂಬಂಧಿಸಿದಂತೆ ನಿಖರವಾದ ನ್ಯಾಯಾಲಯದ ಆದೇಶ ಅಥವಾ ತಡೆಯಾಜ್ಞೆ ಹಾಜರುಪಡಿಸಿ ರಕ್ಷಣೆಯನ್ನು ಕೊಡಬೇಕೆಂದು ಕೋರಿದಾಗ.
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ನ್ಯಾಯಾಲಯ ಜಾರಿ ಮಾಡಿರುವ ಆಜ್ಞೆಯನ್ನು ತಮ್ಮ ಸ್ಥಳೀಯ ಕಂದಾಯ ಪ್ರಾಧಿಕಾರದ ಬಳಿ ಹಾಜರುಪಡಿಸಿ ಸದರಿ ಆಜ್ಞೆಯನ್ನು ಆಸ್ತಿಹಕ್ಕು ಪತ್ರದಲ್ಲಿ ನಮೂದಿಸಿರುವ ಬಗ್ಗೆ ಪ್ರಮಾಣೀಕೃತ ಪ್ರತಿಯನ್ನು ಹಾಜರು ಪಡಿಸಲು ಸೂಚಿಸಬಹುದು.
ಅವರು ನ್ಯಾಯಾಲಯದ ಆದೇಶವನ್ನು ಸ್ಥಳೀಯ ಪ್ರಾಧಿಕಾರದ ಮುಂದೆ ಕೈಗೊಳ್ಳಬೇಕಾದ ಹಾಜರುಪಡಿಸಿ ಅವರಿಂದ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಖರವಾದ ಸೂಚನೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಲು ಕೋರಿ ಈ ಸಂಬಂಧ ಸಕ್ಷಮ ಪ್ರಾಧಿಕಾರದಿಂದ ಬಂದ ಸೂಚನೆಯ ಪ್ರಕಾರ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ: Seed Kit- ರೂ 2,000 ಮೌಲ್ಯದ ಉಚಿತ ತರಕಾರಿ ಬೀಜದ ಕಿಟ್ ವಿತರಣೆಗೆ ಅರ್ಜಿ ಆಹ್ವಾನ!
ಪ್ರಕರಣ-6:
ಕೃಷಿ ಜಮೀನಿನ ಗಡಿಗಳ ವಿಚಾರದಲ್ಲಿ ವಿವಾದಕ್ಕೆ ಸಂಬಂಧಿಸಿದ ಅರ್ಜಿ ಬಂದ ಸಮಯದಲ್ಲಿ.
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ಯಾವುದೇ ಕೃಷಿ ಜಮೀನಿನ ಗಡಿಯನ್ನು ಗುರ್ತಿಸಲು ಸಾಧ್ಯವಾಗದೆ ಇದ್ದಲ್ಲಿ ಅಥವಾ ಕೃಷಿ ಜಮೀನಿನ ಗಡಿಯನ್ನು ನಿಗಧಿಪಡಿಸಲು ಸಾಧ್ಯವಾಗದೇ ಇದ್ದಲ್ಲಿ ಅಂತಹ ಪ್ರಕರಣಗಳನ್ನು ತಾಲ್ಲೂಕಿನ ತಹಶೀಲ್ದಾರರಿಗೆ ಸದರಿ ಕೃಷಿ ಜಮೀನಿನ ಮೋಜಣಿ ಮಾಡುವಂತೆ ವಿನಂತಿಸಬೇಕು. ಕೃಷಿ ಜಮೀನಿನ ಮೋಜಣಿಯ ನಂತರ ಗಡಿಗಳನ್ನು ಗುರ್ತಿಸಿ ಗಡಿ ಕಲ್ಲುಗಳನ್ನು ಹಾಕಿದ ನಂತರ ಹಾಗೂ ಮೋಜಣಿಯ ಬಗ್ಗೆ ದೃಢೀಕೃತ ನಕಲನ್ನು ಪಡೆದುಕೊಂಡು ಅವುಗಳನ್ನು ಸಲ್ಲಿಸಿದಲ್ಲಿ ಕೃಷಿ ಜಮೀನಿಗೆ ಪಹಣಿ ದಾಖಲೆ ಫಾರಂ 16ರ ಕಾಲಂ ನಂ:10 ಹಾಗೂ 12ಅನ್ನು ಪರಿಶೀಲಿಸಿ ಸಂಬಂಧಿಸಿದ ಕೃಷಿ ಜಮೀನಿನ ಸ್ವಾಧೀನತೆ ಹೊಂದಿದವರಿಗೆ ರಕ್ಷಣೆ ನೀಡುವುದು.
ಇದನ್ನೂ ಓದಿ: Labour Card Application-ಹೊಸದಾಗಿ ಕಾರ್ಮಿಕ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
ಪ್ರಕರಣ-7:
ಕೃಷಿಯೇತರ ಜಮೀನು, ನಿವೇಶನ ಹಾಗೂ ಕಟ್ಟಡಗಳ ವಿವಾದ ಇದ್ದಲ್ಲಿ. ವಿಚಾರದಲ್ಲಿ.
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ಕೃಷಿಯೇತರ ಜಮೀನು, ನಿವೇಶನ ಅಥವಾ ಕಟ್ಟಡಗಳ ಗಡಿಗಳನ್ನು ಗುರ್ತಿಸಲು ಸಾಧ್ಯವಾಗದೇ ಇದ್ದಲ್ಲಿ ಅಥವಾ ಗಡೆಯನ್ನು ನಿಗಧಿಪಡಿಸಲು ಸಾಧ್ಯವಾಗದೇ ಇದ್ದಲ್ಲಿ ಸದರಿ ನಿವೇಶನ/ಕೃಷಿಯೇರ ಜಮೀನು. ಕಟ್ಟಡದ ವಿಷಯದಲ್ಲಿ ಮೋಜಣಿಗಾಗಿ ಸಂಬಂಧಿಸಿದ ವ್ಯಕ್ತಿಯು ಮೋಜಣಿ ಇಲಾಖೆಗೆ ಅಥವಾ ನಗರಸಭೆಯ ಅಧಿಕಾರಿಗಳ ಬಳಿಗೆ ಹೋಗಿ ಮೋಜಣಿಗಾಗಿ ಅರ್ಜಿ ಸಲ್ಲಿಸಿ ಮೋಜಣಿ ಮಾಡಿ ನಿಗಧಿಪಡಿಸಿ ಗಡಿ ಕಲ್ಲುಗಳನ್ನು ಹಾಕಿ ಮೋಜಣಿ ವರದಿಯ ದೃಢೀಕೃತ ನಕಲನ್ನು ತರುವಂತೆ ತಿಳಿಸುವುದು. ಹಾಗೂ ಮೋಜಣಿ ವರದಿಯ ದೃಢೀಕೃತ ನಕಲನ್ನು ಹಾಜರಡಿಸಿದ ನಂತರ ಹಾಗೂ ಕೃಷಿಯೇತರ ಜಮೀನು/ಕಟ್ಟಡದ ನಕಾಶೆ ಹಾಗೂ ಖಾತಾ ನಕಲನ್ನು ಪರಿಶೀಲಿಸಿ ಕೃಷಿಯೇತರ ಜಮೀನು/ ನಿವೇಶನ/ಕಟ್ಟಡದ ಸ್ವಾಧೀನತೆ ಅಥವಾ ಅಧಿಕಾರ ಹೊಂದಿದ ವ್ಯಕ್ತಿಗೆ ರಕ್ಷಣೆ ನೀಡುವುದು.
ಪ್ರಕರಣ-8:
ಕೃಷಿ ಜಮೀನಿನ ಬಗ್ಗೆ ವಿವಾದಿತ 1 ಎರಡೂ ಪಕ್ಷದವರು ಪಹಣಿ ಪತ್ರಗಳನ್ನು ಹಾಜರಡಿಸಿದ ಪ್ರಕರಣಗಳಲ್ಲಿ
ಪೊಲೀಸರು ಅನುಸರಿಸಬೇಕಾದ ಕ್ರಮಗಳು:
ಕೃಷಿಯೇತರ ಜಮೀನು, ನಿವೇಶನ, ಕಟ್ಟಡಗಳ ವಿಚಾರದಲ್ಲಿ ವಿವಾದಿತ ಎರಡೂ ಪಕ್ಷದವರು ಸದರಿ ಕೃಷಿಯೇತರ ಜಮೀನು, ನಿವೇಶನ, ಕಟ್ಟಡಗಳ ಬಗ್ಗೆ ಪಹಣಿ ಪತ್ರಗಳನ್ನು ಠಾಣಾಧಿಕಾರಿಯ ಮುಂದೆ ಹಾಜರಡಿಸಿದಾಗ ಠಾಣಾಧಿಕಾರಿ ಪ್ರಾಥಮಿಕ ವಿಚಾರಣೆ ನಡೆಸಿ ಸುಳ್ಳು ದಾಖಲೆಗಳನ್ನು ಹಾಜರೂಡಿಸಿದವರ ಮೇಲೆ ಖುದ್ದಾಗಿ ಖೊಟ್ಟಿ ದಾಖಲೆಗಳನ್ನು ಹಾಜರಡಿಸಿದ ಹಾಗೂ ಮೋಸ ಮಾಡಿದ ಆರೋಪಕ್ಕಾಗಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸತಕ್ಕದ್ದು. ತನಿಖೆಯ ನಂತರ ಯಾವು ವ್ಯಕ್ತಿ ನಿಜವಾದ ಪಹಣಿ ಪತ್ರಗಳನ್ನು ಹಾಜರಡಿಸುತ್ತಾರೋ ಆ ಪಹಣಿ ಪತ್ರಕೆ ಹಾಗೂ ಖಾತಾ ಪತ್ರಗಳಲ್ಲಿನ ಅರ್ಹ ವ್ಯಕ್ತಿಗಳಿಗೆ ರಕ್ಷಣೆ ಒದಗಿಸತಕ್ಕದ್ದು.
ಸಂಪೂರ್ಣ ಮಾರ್ಗಸೂಚಿಯ PDF ಫೈಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ- Donwload Now