ಜಮೀನಿನ ಸರ್ವೆ ನಡೆಸಲು ಈ ಹಿಂದೆ ಇದ್ದ ಚೈನ್ ಪದ್ದತಿಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ, ಭೂಮಾಪನ ಇಲಾಖೆಯ ಮೂಲಕ ನಡೆಸುವ ಭೂ ಸರ್ವೆಗೆ(Land Survey) ರಾಜ್ಯ ಸರಕಾರವು ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿದೆ.
ರೈತರ ತಮ್ಮ ಜಮೀನಿನ ಸರ್ವೆಯನ್ನು ನಡೆಸುವ ಸಮಯದಲ್ಲಿ ಅನುಭವಿಸುವಂತಹ ಭ್ರಷ್ಟಾಚಾರ ತಡೆ ಮತ್ತು ಜಮೀನು ಸರ್ವೆ(Survey)ವೇಗವನ್ನು ಹೆಚ್ಚಳ ಮಾಡಲು ಹಾಗೂ ಸರ್ವೆ ಕುರಿತು ನಿಖರ ವರದಿಯನ್ನು ಸರ್ವೆಯರ್ ಗಳಿಗೆ ಒದಗಿಸಲು ಡಿಜಿಟಲ್ ಮಾದರಿಯನ್ನು ಅನುಸರಿಸಿ ತಂತ್ರಜ್ಞಾನ ಆಧಾರಿತ ರೋವರ್ ಉಪಕರಣವನ್ನು ಬಳಕೆ ಮಾಡಿ ಜಮೀನಿನ ಸರ್ವೆ ಮಾಡುವ ವಿಧಾನವನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ.
ಏನಿದು ತಂತ್ರಜ್ಞಾನ ಆಧಾರಿತ ರೋವರ್ ಉಪಕರಣವನ್ನು ಬಳಕೆ ಮಾಡಿ ಜಮೀನಿನ ಸರ್ವೆ ಮಾಡುವ ವಿಧಾನ? ಇದು ಹೇಗೆ ಕಾರ್ಯನಿರ್ವಹಿಸಲಿದೆ? ಪ್ರಸ್ತುತ ಸರ್ವೆ ವಿಧಾನ ಹೇಗಿದೆ? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: B-Khata Abiyana-ರಾಜ್ಯಾದ್ಯಂತ ಅಕ್ರಮ ಆಸ್ತಿಗಳಿಗೆ ಬಿ-ಖಾತಾ ವಿತರಣೆ ಅಭಿಯಾನ!
Land Survey by New Technology-ಕರ್ನಾಟಕ ರಾಜ್ಯದಲ್ಲಿ ರೈತರು ತಮ್ಮ ಜಮೀನಿನ ಸರ್ವೇ ಮಾಡಿಸಬೇಕೆಂದರೆ ಕನಿಷ್ಠ 3 ರಿಂದ 4 ತಾಸು ಬಿಸಿಲಿನಲ್ಲಿ ಹರಸಾಹಸ ಪಡಬೇಕಿತ್ತು. ಆದರೆ ಇನ್ನೂ ಮುಂದೆ ಇದು ಅತ್ಯಂತ ಸುಲಭವಾಗಲಿದೆ.
Modern Technology-based Rovers for Surveying-ಏಕೆಂದರೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯು ಹೊಸ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಅನ್ನು ಸರ್ವೇಯರ್ ಗಳಿಗೆ ನೀಡಿದ್ದು, ಇದು ಕಂದಾಯ ಇಲಾಖೆಯ ಐತಿಹಾಸಿಕ ಬದಲಾವಣೆ ಆಗಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: Annabhagya Amount-ಸರಕಾರದಿಂದ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ಕುರಿತು ನೂತನ ಪ್ರಕಟಣೆ!

ಇದನ್ನೂ ಓದಿ: PM-Kisan Amount-ಪಿ ಎಂ ಕಿಸಾನ್ 9.7 ಕೋಟಿ ರೈತರ ಖಾತೆಗೆ ₹ 21,000 ಸಾವಿರ ಕೋಟಿ ಹಣ!
ಚೈನು ಹಿಡಿದು ಸರ್ವೇ ಮಾಡಲು 4 ತಾಸು ಬೇಕಾಗುತ್ತಿತ್ತು ಆದರೆ ಈ ಹೊಸ ತಂತ್ರಜ್ಞಾನದ ಮುಖಾಂತರ ಕೇವಲ 10 ನಿಮಿಷದಲ್ಲಿ ಸರ್ವೆ ಮಾಡಬಹುದು:
ಹೌದು, ಈ ಮೊದಲು ಚೈನ್ ಮುಖಾಂತರ ಜಮೀನಿನ ಸರ್ವೆ ಮಾಡಲು ಕನಿಷ್ಠ 1 ತಾಸು ಹಾಗೂ ಅದರ ನಕ್ಷೆ ಹಾಕಲು ಕನಿಷ್ಠ 3 ತಾಸುಗಳ ಸಮಯ ವ್ಯರ್ಥವಾಗುತ್ತಿತ್ತು. ಅದೇ ರೀತಿ ಒಬ್ಬ ಭೂಮಾಪಕರ ಜೊತೆಗೆ ಇಬ್ಬರು ಸಹಾಯಕರ ಅವಶ್ಯಕತೆ ಕೂಡ ಚೈನ್ ಸರ್ವೇ ಪದ್ಧತಿಗೆ ಬೇಕಾಗುತ್ತಿತ್ತು. ಆದರೆ ಈ ಹೊಸ ತಂತ್ರಜ್ಞಾನದಲ್ಲಿ ಭೂಮಾಪಕರ ಕೇವಲ 10 ನಿಮಿಷದಲ್ಲಿ ಜಮೀನಿನ ಸರ್ವೆ ಮಾಡಿಕೊಡಬಹುದು.
ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯ(Revenue Department) ರಾಜ್ಯದ 465 ಭೂಮಾಪಕರಿಗೆ ಈ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಗಳನ್ನು ನಿನ್ನೆ ವಿತರಣೆ ಮಾಡಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ 1830 ರಿಂದ 1870 ರವರೆಗೆ ಸ್ವಲ್ಪ ಪ್ರಮಾಣದಲ್ಲಿ ಭೂ ಮಾಪನ ಕಾರ್ಯ ನಡೆದಿತ್ತು. ನಂತರದಲ್ಲಿ 1967 ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಗಿದ್ದನ್ನು ಬಿಟ್ಟರೆ ಮತ್ತೆ ಸರ್ವೇ ಕಾರ್ಯಯು ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ.
ಆದರೆ ಇತ್ತೀಚಿಗೆ ಹೆಚ್ಚುತ್ತಿರುವ ನಾನಾ ಸಮಸ್ಯೆಗಳಿಂದ ಸರ್ವೇ ಕಾರ್ಯಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಚೈನ್ ಸರ್ವೇ ಪದ್ದತಿಯನ್ನೇ ಈಗಲೂ ಬಳಸುತ್ತಿರುವುದು ಭೂಮಾಪಕರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯು ಈ ಹೊಸ ಅನುಕ್ರಮವನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: Karnataka Nigamagalu-ಕರ್ನಾಟಕ ಆರ್ಯ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅನುದಾನ ಬಿಡುಗಡೆ!

Survey New Technology-ರೋವರ್ ಸರ್ವೆ ವಿಶೇಷತೆಗಳೇನು?
ಪ್ರಸ್ತುತ ಜಮೀನ ಸರ್ವೆಯನ್ನು ಮಾಡಲು ಭೂಮಾಪನ ಇಲಾಖೆಯಿಂದ ಸರ್ವೆಯರ್ ಗಳಿಗೆ 5 ಕೆಜಿ ತೂಕದ ಚೈನ್ ಹಿಡಿದು ಸರ್ವೆ ಮಾಡಬೇಕು ಗುಡ್ಡಗಾಡು, ಕೆರೆ, ಅರಣ್ಯ ಪ್ರದೇಶಗಳಲಿ ಸರ್ವೆ ಮಾಡುವುದು ದೊಡ್ಡ ಸವಾಲಿನ ಮತ್ತು ಕಷ್ಟಕರ ಕೆಲಸವಾಗಿತ್ತು, ಇದಕ್ಕೆ ಪರಿಹಾರವನ್ನು ಒದಗಿಸುವ ಕೆಲಸವನ್ನು ಈ ರೋವರ್ ಉಪಕರಣ ಮಾಡಲಿದೆ.
ಈ ಉಪಕರಣವು 800 ಗ್ರಾಂ ತೂಕ ಇರಲಿದ್ದು ರೋವರ್ ಉಪಕರಣದ ಸಹಾಯದಿಂದ ಸುಲಭವಾಗಿ ಜಮೀನಿನ ಸರ್ವೆಯನ್ನು ಮಾಡಬಹುದು. ಸರ್ವೆ ಆಫ್ ಇಂಡಿಯಾ ವತಿಯಿಂದ ರಾಜ್ಯದಲ್ಲಿ 49 ಕಂಟಿನ್ಯೂಸ್ಲಿ ಅಪರೇಟಿಂಗ್ ರೆಫರೆನ್ಸ್ ಸ್ಟೇಷನ್ ಗಳನ್ನು ಸ್ಥಾಪನೆ ಮಾಡಲಾಗಿದ್ದು. ಇದರೊಂದಿಗೆ ರೋವರ್ ಸಂಪರ್ಕವನ್ನು ಕಲ್ಪಿಸಿ ಜಮೀನು ಸರ್ವೇ ನಡೆಸಿದಾಗ ಸ್ವಯಂಚಾಲಿತವಾಗಿ ಗಡಿ ಗುರುತು ಮಾಡಿ ಟ್ಯಾಬ್ ಗೆ ಸಂಪರ್ಕ ನೀಡುತ್ತಿದೆ.
ಇದನ್ನೂ ಓದಿ: Karnataka Budget-2025: ಕರ್ನಾಟಕ ಬಜೆಟ್ ಮಂಡನೆ ದಿನಾಂಕ ಘೋಷಿಸಿದ ಸಿಎಂ ಸಿದ್ದರಾಮಯ್ಯ!
2 ಸೆಂಟಿ ಮೀಟರ್ ಮಾತ್ರ ವ್ಯತ್ಯಾಸ ಬರಲಿದೆ 6 ತಿಂಗಳಿಂದ ಪ್ರಯೋಗಿಕವಾಗಿ ಬಳಕೆ ಮಾಡಿದ್ದು ಸರ್ವೆಯರ್ ಗಳಿಗೆ ಈ ಕುರಿತು ತರಬೇತಿಯನ್ನು ನೀಡಲಾಗಿದೆ ಎಂದು ಭೂದಾಖಲೆಗಳ ಇಲಾಖೆ ಆಯುಕರಾದ ಜೆ ಮಂಜುನಾಥ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Survey New Technology Benefits–ಹೊಸ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಸರ್ವೇ ಪದ್ದತಿಯ ಲಾಭಗಳು:
ಈ ಹೊಸ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಸರ್ವೇ ಪದ್ದತಿಯಿಂದ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಅನಾವಶ್ಯಕವಾಗಿ ಭೂಮಾಪಕರ ಸಮಯ ಮತ್ತು ಶಕ್ತಿ ವ್ಯರ್ಥವಾಗುವುದಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚಿನ ರೈತರಿಗೆ ಸರ್ವೇ ಸೌಲಭ್ಯವನ್ನು ಒದಗಿಸಬಹುದು.