ರೈತರು ತಮ್ಮ ಜಮೀನಿನ ಅಳತೆ ಮಾಡಲು ಸರ್ವೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ನಂತರ ಭೂಮಾಪಕರು ಜಮೀನಿನ ಸರ್ವೆಗೆ(Land survey) ಸ್ಥಳ ಭೇಟಿ ಮಾಡಿದಾಗ ಆ ಸಂದರ್ಭದಲ್ಲಿ ಜಮೀನಿನ ಮಾಲೀಕರು/ರೈತರು ತಮ್ಮ ಬಳಿ ಯಾವೆಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಮತ್ತು ಜಮೀನಿನ ಸರ್ವೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಕಂದಾಯ ಇಲಾಖೆಯಡಿಯ(Revenue Department) ಭೂಮಾಪಕರು ಜಮೀನು ಅಳತೆ ಮಾಡುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತವೆ? ಸಧ್ಯದ ಸ್ಥಿತಿಯಲ್ಲಿ ಒಂದು ಜಮೀನು ಸರ್ವೆ ಮಾಡಿ ಜಮೀನಿಗೆ ಹೊಸ ನಕ್ಷೆ ರಚಿಸಿ ಅದರಂತೆ ಹಕ್ಕು ಬದಲಾವಣೆಯಾಗಲು ಕನಿಷ್ಠ 3 ತಿಂಗಳಾದರೂ ಬೇಕೇ ಬೇಕೂ. ಇದಕ್ಕೆ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಭೂಮಿ ಸರ್ವೆ ಮಾಡಲು ಅರ್ಜಿಗಳು ದಾಖಲಾಗುತ್ತವೆ. ಅಷ್ಟೇ ಅಲ್ಲದೇ ಸರ್ಕಾರಿ ಭೂ ಮಾಪಕರ ಕೊರತೆ ಕೂಡ ಕಾರಣವಾಗಿದೆ.
ರೈತರು ಜಮೀನಿಗೆ ಸರ್ವೆ ಮಾಡಲು ಅರ್ಜಿ ಹಾಕಿದ ನಂತರ ಅರ್ಜಿಯನ್ನು ಸರ್ವೆ ಸೂಪರ್ ವೈಸರ್ ಪರಿಶೀಲಿಸಿ ಅನುಮೋದಿಸಿದಾಗ ಅದು ಮುಂದಿನ ದಿನಗಳಲ್ಲಿ ತನ್ನಿಂದ ತಾನೇ ಹಂಚಿಕೆಯಾಗುತ್ತದೆ. ಸ್ವಲ್ಪ ದಿನಗಳ ನಂತರ ಗೊತ್ತುಪಡಿಸಿದ ಜಮೀನಿನ ಅಳತೆ ಮಾಡಲು ಬರುತ್ತೇನೆ ಹಾಗೂ ನಿಮ್ಮ ನಿಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ನೀವು ಜಮೀನಿಗೆ ಬರಬೇಕು ಎಂದು ಸರ್ವೇಯರ್ ಮುಂಚಿತವಾಗಿ ನಿಮಗೆ ತಿಳಿಸುತ್ತಾರೆ.
Required documents for land survey- ಜಮೀನು ಸರ್ವೆ ಮಾಡಲು ಬಂದಾಗ ಈ ಕೆಳಗಿನ ದಾಖಲೆಗಳನ್ನು ಇಟ್ಟಕೊಳ್ಳಬೇಕು:
1)ಜಮೀನಿನ ನಿಖರವಾದ ಅಳತೆ ತಿಳಿಸುವ ಆಕಾರಬಂದ(Akarabanda)
2)ಖರಾಬಿನ ತಪಶೀಲು (Kharab land extract).
3)ಪಹಣಿ(RTC)
4)ಜಮೀನಿನ ಅಳತೆ ಮತ್ತು ಗಡಿ ಗುರುತಿಸಲು ಮುಖ್ಯವಾಗಿರುವ ಟಿಪ್ಪಣಿ(Tipanni)
ಇದನ್ನೂ ಓದಿ: Gruhalakshmi status check: ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದ್ದರು, ಗೃಹಲಕ್ಷ್ಮಿ ಹಣ ಜಮಾ ಆಗದಿದ್ದರೆ ಏನು ಮಾಡಬೇಕು?
Agriculture land survey: ಜಮೀನಿನ ಸರ್ವೆ ಪ್ರಕ್ರಿಯೆ:
ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳನ್ನು ಸರ್ವೆ ಕಚೇರಿಯಿಂದ ಸರ್ವೆ ಮಾಡುವ ಮುಂಚಿತವಾಗಿಯೇ ಪಡೆದುಕೊಳ್ಳಬೇಕು. ಜಮೀನಿಗೆ ಹೋಗಿ ನಿಮ್ಮ ಕಬ್ಜೆಯನ್ನು ಭೂಮಾಪಕರಿಗೆ ತೋರಿಸಿ ನಂತರ ಎಲ್ಲಾ ದಾಖಲೆಗಳನ್ನು ಹಾಜರು ಪಡಿಸಬೇಕು. ನಂತರ ಭೂಮಾಪಕರು ನಿಮ್ಮ ಜಮೀನನ್ನು ಅಳತೆ ಮಾಡುವಾಗ ಅವರೊಂದಿಗೆ ಸಹಕರಿಸಬೇಕು.
ವಾಸ್ತವ್ಯ ಸ್ಥಿತಿ ಮತ್ತು ದಾಖಲೆಗಳ ಆಧಾರದ ಮೇಲೆ ಜಮೀನನ್ನು ಸರ್ವೇ ಮಾಡಿ ಪ್ರಸ್ತಾವಿಕ ಹೊಸ ನಕ್ಷೆಯನ್ನು ತಯಾರಿಸುತ್ತಾರೆ. ತದನಂತರ ನಿಮ್ಮ ಸಹಿ ಮತ್ತು ಪಂಚನಾಮೆ ನಡೆಸಲು ಮುಖ್ಯಸ್ಥರ ಸಹಿ ಪಡೆದುಕೊಂಡು ಹೋಗುತ್ತಾರೆ. ಮುಂದಿನ ಕೆಲವೇ ದಿನಗಳಲ್ಲಿ ಜಮೀನಿನ ಹೊಸ ನಕ್ಷೆ ಲಭ್ಯವಾಗುತ್ತದೆ. ತದನಂತರ ಯಾವ ಉದ್ದೇಶಕ್ಕಾಗಿ ನಿಮ್ಮ ಜಮೀನು ಅಳತೆ ಮಾಡಲು ಹಾಕಿರುತ್ತೀರೂ ಆ ಕೆಲಸವನ್ನು ಸುಲಭವಾಗಿ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.
Agriculture land document Download- ಜಮೀನಿನ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದು:
1. Atlas (ಅಟ್ಲಾಸ್)
2. Survey Pakka Book (ಸರ್ವೆ ಪಕ್ಕಾ ಪುಸ್ತಕ)
3. Tippan (ಟಿಪ್ಪಣಿ)
4. Akarband (ಆಕಾರಬಂದು)
5. FMB (ಎಫ್.ಎಮ್.ಬಿ)
6. Survey Prati Book (ಸರ್ವೆ ಪ್ರತಿ ಪುಸ್ತಕ)
ಒಟ್ಟು 94 ದಾಖಲೆಗಳ ದರಪಟ್ಟಿ ಪಡೆಯಲು ಇಲ್ಲಿಕ್ಲಿಕ್ ಮಾಡಿ: https://bhoomojini.karnataka.gov.in/oscitizen
ರೈತರು ಜಮೀನಿನ ಸರ್ವೆ ಸಂಬಂದಪಟ್ಟ ಪ್ರಮುಖ ಈ ಆರು ದಾಖಲೆಗಳನ್ನು ಸೇರಿ ಒಟ್ಟು 94 ದಾಖಲೆಗಳನ್ನು ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು.
Step-1: ಪ್ರಥಮದಲ್ಲಿ ಈ ಲಿಂಕ್ https://bhoomojini.karnataka.gov.in/oscitizen ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಪಡೆಯಿರಿ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಬರುವ 4 ಅಂಕಿಯ ಒಟಿಪಿಯನ್ನು ನಮೂದಿಸಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚಾರ್ ಕೋಡ್ ಹಾಕಿ LOGIN ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.
ವಿಶೇಷ ಸೂಚನೆ: ಮೊಬೈಲ್ ನಲ್ಲಿ ನೋಡುವವರು “Desktop site” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಲಾಗಿನ್ ಅಗಬೇಕಾಗುತ್ತದೆ.
Step-2: ನಂತರದಲ್ಲಿ ಈ ಪುಟದಲ್ಲಿ ಎರಡು ಆಯ್ಕೆಗಳಿರುತ್ತದೆ ಕನ್ನಡ/ENGLISH ಇದನ್ನು ಆಯ್ಕೆ ಮಾಡಿಕೊಂಡು ತದನಂತರ “ಹೊಸ ಕೋರಿಕೆ” ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗ Do You Want To Opt for Digilocker Document Save and E-sign of the Acknowledgement Report? ಈ ರೀತಿ ಸಂದೇಶ ಗೋಚರಿಸುತ್ತದೆ ನಿಮಗೆ ಬೇಕಾದ ದಾಖಲಾತಿಯನ್ನು ಡಿಜಿಲಾಕರ್ ನಲ್ಲಿ ಸೇವ್ ಮಾಡಲು ಇಚ್ಚಿಸಿದಲ್ಲಿ YES ಎಂದು ಕೊಡಿ ಬೇಡವಾದಲ್ಲಿ NO ಎಂದು ಕ್ಲಿಕ್ ಮಾಡಬೇಕು.
Step-3: ಈ ಮೇಲಿನ ಹಂತಗಳನ್ನು ಮುಗಿಸಿದ ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಸರ್ನೋಕ್,ಹಿಸ್ಸಾ ಸಂಕ್ಯೆಯನ್ನು ಆಯ್ಕೆ ಮಾಡಿಕೊಂಡು “ಹುಡುಕು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-4: ಈ ಪ್ರಕ್ರಿಯೆ ಮುಗಿಸಿದ ಬಳಿಕ ಆ ಸರ್ವೆ ನಂಬರಿನ ಎಲ್ಲಾ ಸರ್ವೆ ದಾಖಲಾತಿಗಳು ಗೋಚರಿಸುತ್ತವೆ “View Document” ಸಿಂಬಲ್ ಮೇಲೆ ಕ್ಲಿಕ್ ಮಾಡಿ ನೀವು ಆ ದಾಖಲೆಗಳನ್ನು ಉಚಿತವಾಗಿ ನೋಡಬವುದು ಅದರೆ ಡೌನ್ಲೋಡ್ ಮಾಡಿಕೊಳ್ಳಲು “Pay and Print” ಬಟನ್ ಮೇಲೆ ಕ್ಲಿಕ್ ಮಾಡಿ ಶುಲ್ಕ ಪಾವತಿ ಮಾಡಿ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬವುದಾಗಿದೆ.