ಭಾರತೀಯ ತೈಲ ಮಾರಾಟ ಕಂಪನಿಗಳು ನಮ್ಮ ದೇಶದಲ್ಲಿ ವಾಣಿಜ್ಯ ಚಟುವಟಿಕೆ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಬೆಲೆಯನ್ನು(LPG Cylinder Price) ಕೊಂಚ ಏರಿಕೆ ಮಾಡಿ ಇದೆ ತಿಂಗಳಿನಿಂದ ಜಾರಿಗೆ ಬರುವಂತೆ ಮಾರುಕಟ್ಟೆಯಲ್ಲಿ ದರವನ್ನು ಹೆಚ್ಚಳ ಮಾಡಿರುತ್ತವೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಮನೆ ಬಳಕೆಯ ಸಿಲಿಂಡರ್ ಬೆಲೆ ಎಷ್ಟಿದೆ? ವಾಣಿಜ್ಯ ಸಿಲಿಂಡರ್ ಬೆಲೆಯನ್ನು(Today LPG Cylinder Price) ಎಷ್ಟು ಏರಿಕೆ ಮಾಡಲಾಗಿದೆ? ಕಳೆದ 5 ವರ್ಷದಲ್ಲಿ ಸಿಲಿಂಡರ್ ದರ ಎಷ್ಟಿತ್ತು? ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್ ಗೆ 300 ರೂ ಸಬ್ಸಿಡಿಯನ್ನು ಪಡೆಯಲು ಯಾವ ಕ್ರಮವನ್ನು ಅನುಸರಿಸಬೇಕು? ಇನ್ನಿತರೆ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
ಇದನ್ನೂ ಓದಿ: Trade License-ವ್ಯಾಪಾರ ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ!
Commercial Gas Cylinder Price-ವಾಣಿಜ್ಯ ಸಿಲಿಂಡರ್ ದರ ಏರಿಕೆ:
ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಗೆ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದ್ದು 01 ಮಾರ್ಚ2025 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ಮೇಲೆ 6 ರೂ ಹೆಚ್ಚಳ ಮಾಡಲಾಗಿದೆ.
ಇದರಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಡಿಯನ್ ಆಯಿನ್ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ₹ 1,803 ರೂ ಅಗಿರುತ್ತದೆ.
ಇದನ್ನೂ ಓದಿ: Property Documents-ಜಿಲ್ಲಾವಾರು ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ವಿವರ ಬಿಡುಗಡೆ!
Last 5 Years LPG Cylinder Price-ಕಳೆದ 5 ವರ್ಷದಲ್ಲಿ ವಾಣಿಜ್ಯ ಸಿಲಿಂಡರ್ ದರ:
01 March 2025- ₹1,803 ರೂ
01 Feb 2025- ₹1797 ರೂ
01 March 2024- ₹1,795 ರೂ
01 Feb 2023- ₹1,769 ರೂ
01 Feb 2022- ₹1,907 ರೂ
01 Feb 2021- ₹1,519 ರೂ
01 Feb 2020- ₹1,5466 ರೂ
ಇದನ್ನೂ ಓದಿ: Land Records-ರಾಜ್ಯ ಸರಕಾರದಿಂದ ರೈತರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿಡಲು “ಭೂ ಸುರಕ್ಷಾ” ಯೋಜನೆ!

Home LPG Cylinder Price-ಮನೆ ಬಳಕೆ ಸಿಲಿಂಡರ್ ನ ದರ ಯಥಾಸ್ಥಿತಿ ಮುಂದುವರಿಕೆ:
ತೈಲ್ ಸರಬರಾಜು ಕಂಪನಿಗಳು ಪ್ರಸ್ತುತ ವಾಣಿಜ್ಯ ಬಳಕೆಗೆ ಉಪಯೋಗಿಸುವ ಸಿಲಿಂಡರ್ ದರವನ್ನು ಮಾತ್ರ ಏರಿಕೆ ಮಾಡಲಾಗಿದ್ದು ಮನೆಯಲ್ಲಿ ಬಳಕೆ ಮಾಡುವ 14.2 ಕೆಜಿಯ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿರುವುದಿಲ್ಲ ಪ್ರಸ್ತುತ ಮಾರುಕಟ್ಟೆಯಲ್ಲಿ ₹ 803/-ರೂ ಗೆ ಗ್ರಾಹಕರಿಗೆ ಸಿಲಿಂಡರ್ ಅನ್ನು ಗ್ಯಾಸ್ ಏಜೆನ್ಸ್ ಮೂಲಕ ನೀಡಲಾಗುತ್ತಿದೆ.
Ujjwala Yojana Gas Subsidy-ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್ ಗೆ ₹ 300 ರೂ ಸಬ್ಸಿಡಿ:
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ ಗ್ರಾಹಕರು ತಮ್ಮ ಮನೆಯಲ್ಲಿ ಬಳಕೆ ಮಾಡುವ 14.2 ಕೆಜಿಯ ತೂಕದ ಸಿಲಿಂಡರ್ ಗೆ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿ ₹ 300 ರೂ ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಗ್ರಾಹಕರು ತಾವು ಪ್ರತಿ ಬಾರಿ ಸಿಲಿಂಡರ್ ಅನ್ನು ಪಡೆಯುತ್ತಿರುವ ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!
How To Get Gas Subsidy-₹300 ರೂ ಸಹಾಯಧನವನ್ನು ಹೇಗೆ ವಿತರಣೆ ಮಾಡಲಾಗುತ್ತದೆ?
ಗ್ರಾಹಕರು ಮನೆ ಬಳಕೆಗೆ ಉಪಯೋಗಿಸುವ ಸಿಲಿಂಡರ್ ಖಾಲಿಯಾದ ಸಮಯದಲ್ಲಿ ಏಜೆನ್ಸಿ ಮೂಲಕ ಪೂರ್ಣ ಪ್ರಮಾಣದ ಹಣವನ್ನು ಪಾವತಿ ಮಾಡಿ ಸಿಲಿಂಡರ್ ಅನ್ನು ಪಡೆಯಬೇಕು ನಂತರ ಸಹಾಯಧನದ ₹ 300 ರೂ ಹಣ ಗ್ರಾಹಕರ ಆಧಾರ್ ಕಾರ್ಡ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಜಮಾ ಅಗುತ್ತದೆ.
Today LPG Cylinder Price-ಪ್ರಸ್ತುತ ದಿನದ ಸಿಲಿಂಡರ್ ದರವನ್ನು ತಿಳಿಯುವುದು ಹೇಗೆ?
ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಪ್ರಸ್ತುತ ಮನೆ ಬಳಕೆಗೆ ಉಪಯೋಗಿಸುವ 14.2 ಕೆಜಿಯ ಸಿಲಿಂಡರ್ ಬೆಲೆ ಎಷ್ಟಿದೆ? ಎನ್ನುವ ಮಾಹಿತಿಯನ್ನು ತಮ್ಮ ತಿಳಿಯಲು ಅವಕಾಶವಿದ್ದು ಈ ಕೆಳಗೆ ನೀಡಿರುವ ಅಧಿಕೃತ GoodReturns ಜಾಲತಾಣವನ್ನು ನೇರವಾಗಿ ಭೇಟಿ ಮಾಡಿ ದಿನನಿತ್ಯ ಸಿಲಿಂಡರ್ ದರ ವಿವರವನ್ನು ಮನೆಯಲ್ಲೇ ಕುಳಿತು ಚೆಕ್ ಮಾಡಿಕೊಳ್ಳಬಹುದು. ಇಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವು ಸಹ ನೋಡಬಹುದು.
ಇದನ್ನೂ ಓದಿ: Annabhagya status- ಫೆಬ್ರವರಿ-2025 ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!
Daily Cylinder Price check Website Link- Check Now