ಮನೆಯಲ್ಲಿ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಗ್ರಾಹಕರು ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ತಪ್ಪದೇ ತಿಳಿದುಕೊಳ್ಳುವುದು ಅತ್ಯಗತ್ಯ ಏಕೆಂದರೆ ನೀವು ಬಳಕೆ ಮಾಡುವ ಗ್ಯಾಸ್ ಸಿಲಿಂಡರ್(LPG cylinder safety tips) ಕುರಿತು ಈ ಉಪಯುಕ್ತ ಮಾಹಿತಿ ತಿಳಿದಿರುವುದು ಅತೀ ಮುಖ್ಯವಾಗಿದೆ.
ಪ್ರಸ್ತುತ ನಗರ ಮತ್ತು ಗ್ರಾಮೀಣ ಭಾಗದ ಎಲ್ಲಾ ಕಡೆ ಎಲ್ ಪಿ ಜಿ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಿದ್ದರೆ ಅದರೆ ಕೆಲವು ಸಂದರ್ಭದಲ್ಲಿ ಅಜಾಗೃಕತೆ ಸಿಲಿಂಡರ್ ಸ್ಪೋಟವಾಗುವಂತಹ ಪ್ರಕರಣಗಳನ್ನು ಕಾಣಬಹುದು.
ಮನೆಯಲ್ಲಿ ಎಲ್ ಪಿ ಜಿ ಸಿಲಿಂಡರ್ ಉಪಯೋಗ ಮಾಡುವವರು ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ವಿವರಿಸಲಾಗಿದೆ ಈ ಲೇಖನದಲ್ಲಿ ವಿವರಿಸಿರುವ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್!
LPG cylinder safety tips-ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಬಳಕೆ ಸುರಕ್ಷತಾ ಕ್ರಮಗಳು:
1) ಗ್ಯಾಸ್ ಸಿಲಿಂಡರ್ ನಿಂಡ ಗ್ಯಾಸ್ ಸ್ಟವ್ ಗೆ ಅನಿಲವನ್ನು ಸಂಪರ್ಕ ಮಾಡುವ ಪೈಪ್ ಮತ್ತು ಅದರ ಕವಾಡುಗಳನ್ನು ಅಧಿಕೃತ ಗ್ಯಾಸ್ ಸಿಲಿಂಡರ್ ಸರಬರಾಜು ಏಜೆನ್ಸಿಯಿಂದಲೇ ಖರೀದಿ ಮಾಡಬೇಕು ಇತರೆ ಹೊರಗಿನ ಅಂಗಡಿಗಳಿಂದ ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು.
2) ನಿಮ್ಮ ಮನೆಯಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಗ್ಯಾಸ್ ಸಿಲಿಂಡರ್ ಖಾಲಿ ಅದ ಬಳಿಕ ಹೊಸ ಸಿಲಿಂಡರ್ ಗೆ ಬುಕ್ ಮಾಡಿ ಮರುಪೂರ್ಣ ಮಾಡಿ ನಿಮ್ಮ ಮನೆಗೆ ತುಂಬಿದ ಸಿಲಿಂಡರ್ ಬಂದಾಗ ಅದರಲ್ಲಿ ಕಂಪನಿಯ ಸೀಲ್ ಮತ್ತು ಕ್ಯಾಪ್ ಸರಿಯಾಗಿ ಇದೆಯಾ ಎಂದು ಚೆಕ್ ಮಾಡಿ ತೆಗೆದುಕೊಳ್ಳಬೇಕು ಒಂದೊಮ್ಮೆ ಸೀಲ್ ಪ್ಯಾಕ್ ಇಲ್ಲದಿದ್ದರೆ ಅದನ್ನು ತೆಗೆದುಕೊಳ್ಳಬಾರದು.
3) ನಿಮ್ಮ ಮನೆಯಲ್ಲಿ ಸಿಲಿಂಡರ್ ಅನ್ನು ಇಡುವ ಕೋಣೆಯಲ್ಲಿ ಸಮರ್ಪಕವಾಗಿ ಗಾಳಿಯಾಡುವಂತಿರಬೇಕು.
ಇದನ್ನೂ ಓದಿ: Crop insurance-2024:ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು?ಸಂಪೂರ್ಣ ವಿವರ ಬಿಡುಗಡೆ!
4) ಗ್ಯಾಸ್ ಸಿಲಿಂಡರ್ ಅಕ್ಕ-ಪಕ್ಕದಲ್ಲಿ ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ಬೆಂಕಿ ಹತ್ತಿಕೊಳ್ಳುವಂತಹ ಸಾಮಗ್ರಿಗಳನ್ನು ಸಂಗ್ರಹಣೆ ಮಾಡಬಾರದು.
5) ನೀವೇನಾದು ಹೆಚ್ಚಿ ದಿನಗಳ ವರೆಗೆ ಮನೆಯಲ್ಲಿ ಇರದೇ ಹೊರಗೆ ತೆರಳುವ ಸಮಯದಲ್ಲಿ ತಪ್ಪದೇ ಗ್ಯಾಸ್ ಸಿಲಿಂಡರ್ ಅನ್ನು ಆಫ್ ಮಾಡಿ ತೆರಳಬೇಕು.
ಒಂದೊಮ್ಮೆ ಗ್ಯಾಸ್ ಸಿಲಿಂಡರ್ ಸೋರಿಕೆ ಕಂಡುಬಂದರೆ ಏನು ಮಾಡಬೇಕು?
ನಿಮ್ಮ ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ನಲ್ಲಿ ಸೋರಿಕೆ ಕಂಡು ಬಂದರೆ ಇದನ್ನು ತಡೆಗಟ್ಟಲು ಪ್ರಥಮ ಹಂತದಲ್ಲಿ ಸೋರಿಕೆಯನು ಖಚಿತಪಡಿಸಿಕೊಳ್ಳಲು ಸೋಪ್ ಮತ್ತು ನೀರನ್ನು ಮಿಶ್ರಣ ಮಾಡಿ ಸಿಲಿಂಡರ್ ಬಾಯಿಯ ಹತ್ತಿರ ಇಡಿ ಇಲ್ಲಿ ಗುಳ್ಳೆಗಳು ಬಂದರೆ ಗ್ಯಾಸ್ ಲೀಕ್ ಆಗುತ್ತಿದೆ ಎಂದು ಅರ್ಥ.
ಇಂತಹ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಮನೆಯ ವಿದ್ಯುತ್ ಸ್ವಿಚ್ ಮತ್ತು ಬೆಂಕಿ ಹಚ್ಚಬಾರದು ಕೂಡಲೇ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ತೆರೆಯಿರಿ ಹಾಗೆಯೇ ಸಿಲಿಂಡರ್ ಅನ್ನು ತೆಗೆದುಕೊಂಡು ತೆರೆದ ಜಾಗಕ್ಕೆ ತೆಗೆದುಕೊಂಡು ಹೋಗಿ.
ಇದನ್ನೂ ಓದಿ: Karnataka Apex Bank Recruitment-2024: ಕರ್ನಾಟಕ ಅಪೇಕ್ಸ್ ಬ್ಯಾಂಕ್ ನಲ್ಲಿ ನೇಮಕಾತಿ!