LPG E-KYC: ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕವಲ್ಲ!

ಗೃಹ ಬಳಕೆಯ ಸಿಲಿಂಡರ್ ಪಡೆಯಲು ಗ್ರಾಹಕರು ಇ-ಕೆವೈಸಿ ಮಾಡಿಸುವಂತೆ ಈ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ ಮಾಹಿತಿಗೆ ಉತ್ತರಕನ್ನಡ ಜಿಲ್ಲೆಯ ನೋಡೆಲ್ ಸೇಲ್ಸ ಆಫೀಸರ್ ಸ್ವಷ್ಟಿಕರಣ ನೀಡಿದ್ದಾರೆ.

ಗೃಹ ಬಳಕೆಯ ಸಿಲಿಂಡರ್ ಪಡೆಯಲು ಗ್ರಾಹಕರು ಇ-ಕೆವೈಸಿ ಮಾಡಿಸುವಂತೆ ಈ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ ಮಾಹಿತಿಗೆ ಉತ್ತರಕನ್ನಡ ಜಿಲ್ಲೆಯ ನೋಡೆಲ್ ಸೇಲ್ಸ ಆಫೀಸರ್ ಸ್ವಷ್ಟಿಕರಣ ನೀಡಿದ್ದಾರೆ.

ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಮುಂದೆ ಮನೆ ಬಳಕೆಯ ಸಿಲಿಂಡರ್ ಅನ್ನು ಸಬ್ಸಿಡಿಯಲ್ಲಿ ಪಡೆಯಲು ಎಲ್ಲಾ ಗ್ರಾಹಕರು 31 ಡಿಸೆಂಬರ್ 2023 ರ ಒಳಗಾಗಿ E-KYC ಮಾಡಿಸಿದರೆ ಮಾತ್ರ ಮುಂದಿನ ತಿಂಗಳುಗಲಿಂದ ಸಹಾಯಧನದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಸಾಧ್ಯ ಎಂದು ಹೇಳುವ ಸಂದೇಶವು ವೈರಲ್ ಅಗಿತ್ತು.

ಇದನ್ನು ನೋಡಿದ ಅನೇಕ ಗ್ರಾಹಕರು-ಕೆವೈಸಿ ಮಾಡಿಸಲು ರಾಜ್ಯದ ಎಲ್ಲಾ ಭಾಗಗಳಲ್ಲಿ ಗ್ಯಾಸ್ ಎಜೆಸ್ಸಿಯ ಮುಂದೆ ಸಾಲು ಗಟ್ಟಿ ನಿಂತಿರುವ ಪರಿಸ್ಥಿತಿ ಉಂಟಾಗಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆಯು ಸ್ವಷ್ಟಿಕರಣ ನೀಡಿದೆ.

ಇದನ್ನೂ ಓದಿ: Yuva nidhi application link-ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಬಿಡುಗಡೆ!

LPG ಗ್ಯಾಸ್ ಇ-ಕೆವೈಸಿ ಕುರಿತು ಸ್ವಷ್ಟಿಕರಣ ವಿವರ ಹೀಗಿದೆ:

ಮನೆ ಬಳಕೆ ಸಿಲಿಂಡರ್ ಪಡೆಯಲು ಗ್ರಾಹಕರು ಇ-ಕೆವೈಸಿ ಮಾಡಿಸುವುದರ ಕುರಿತು ಸ್ವಷ್ಟಿಕರಣದ ಸಾರ್ವಜನಿಕ ಪ್ರಕಟಣೆಯನ್ನು ಮಂಜುನಾಥ ರೇವಣಕರ ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉತ್ತರಕನ್ನಡ ಇವರು ನೀಡಿರುವ ವಿವರ ಈ ಕೆಳಗಿನಂತಿದೆ.

ಉತ್ತರಕನ್ನಡ ಜಿಲ್ಲೆಯ ಎಲ್ಲಾ ಗ್ಯಾಸ್ ಎಜೆನ್ಸಿಯ ಕಛೇರಿಗಳಲ್ಲಿ ಇ-ಕೆವೈಸಿ ಸಲುವಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಲು ಸಾಲು ನಿಂತಿರುವುದು ಕಂಡು ಬಂದಿರುತ್ತದೆ. ಹಾಗೂ 31 ನೇ ಡಿಸೆಂಬರ 2023ರ ಒಳಗಡೆ ಇ- ಕೆವೈಸಿ ಮಾಡಿಸಬೇಕುಎನ್ನುವುದರ ಬಗ್ಗೆ ಉತ್ತರಕನ್ನಡ ಜಿಲ್ಲೆಯ ನೋಡೆಲ್ ಸೇಲ್ಸ ಆಫೀಸರ್ ಅಭಿನವ ಕುಮಾರರಿಗೆ ಸ್ವಷ್ಟಿಕರಣ ಕೇಳಿದಾಗ,ಸರ್ಕಾರವು 31 ನೇ ಡಿಸೆಂಬರ 2023 ಕೊನೆಯ ದಿನಾಂಕ ಎಂದು ಹೇಳಿರುವುದಿಲ್ಲ.

ಇದನ್ನೂ ಓದಿ: Gruhalakshmi Camp-ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಹಣ ಬರದವರು ತಪ್ಪದೇ ಈ ದಿನ ನಿಮ್ಮ ಗ್ರಾಮ ಪಂಚಾಯತ್ ಭೇಟಿ ಮಾಡಿ.

ಇದನ್ನೂ ಓದಿ: Adhar address-ಆಧಾರ್ ಕಾರ್ಡನಲ್ಲಿ ವಿಳಾಸ ಬದಲಾವಣೆಗೆ ನೂತನ ವ್ಯವಸ್ಥೆ ಜಾರಿ

ಹಾಗೂ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ ಏಜಸ್ಸಿಯ ಕಛೇರಿ ಎದುರುಗಡೆ ಸಾಲು ಮಾಡಿ ನಿಂತಿರುವುದನ್ನು ತಪ್ಪಿಸಲು ಗ್ರಾಹಕರ ಮನೆಗಳಲ್ಲಿ ಗ್ಯಾಸ ಹೊಮ ಡೆಲಿವರಿ ನೀಡುವ ಸಂದರ್ಭದಲ್ಲಿ ಇ-ಕೆವೈಸಿ ಮಾಡಿಸುವುದು ಹಾಗೂ ಕೇವಲ ತೊಂದರೆದಾಯಕ ಪ್ರಕರಣಗಳಲ್ಲಿ ಮಾತ್ರ ಕಚೇರಿಗಳಲ್ಲಿ ಮಾಡಲು ಅನಿಲ ವಿತರಕರಿಗೆ ತಿಳಿಸುತ್ತೆವೆ ಎಂದು ಹೇಳಿರುತ್ತಾರೆ.ಆದ್ದರಿಂದ ಸಾರ್ವಜನಿಕರು 31 ನೇ ಡಿಸೆಂಬರ 2023 ರೊಳಗಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ బగ్గి ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವತ್ತಿರುವ ವಂದತಿಗಳಿಗೆ ಗೊಂದಲಕ್ಕೊಳಗಾಗಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LPG E-KYC: LPG ಗ್ಯಾಸ್ ಇ-ಕೆವೈಸಿ  ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕವಲ್ಲ:

ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮಾಹಿತಿಯ ಪ್ರಕಾರ ಇ-ಕೆವೈಸಿ ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು ಅದರೆ ಈಗ ಆಹಾರ ಇಲಾಖೆಯು ಹೊರಡಿಸಿರುವ ನೂತನ ಪ್ರಕಟಣೆಯ ಪ್ರಕಾರ ಇ-ಕೆವೈಸಿ ಮಾಡಿಸಲು 31 ಡಿಸೆಂಬರ್ 2023 ಕೊನೆಯ ದಿನಾಂಕವಲ್ಲ ಎಂದು ಸ್ವಷ್ಟಿಕರಣ ನೀಡಿದೆ.

ಇದನ್ನೂ ಓದಿ: PM-Vishwakarma Yojana-ಸ್ವ-ಉದ್ಯೋಗ ಆರಂಭಿಸಲು ಈ ಯೋಜನೆಯಡಿ ಯಾವುದೇ ಗ್ಯಾರಂಟಿಯಿಲ್ಲದೇ 3 ಲಕ್ಷ ಸಾಲ ಸಿಗುತ್ತದೆ!

LPG Gas E-kyc last date-ಗ್ರಾಹಕರು ಅತಂಕ ಪಡುವ ಅಗತ್ಯವಿಲ್ಲ:

ಗ್ರಾಹಕರು ಇ-ಕೆವೈಸಿ ಮಾಡಿಸದಿದ್ದರೆ ನಮಗೆ ಗ್ಯಾಸ್ ಸಿಲಿಂಡರ್ ಸಿಗುವುದಿಲ್ಲ ಎಂದು ಅತಂಕ ಪಡಬಾರದು ಪಟ್ಟಣ ಪ್ರದೇಶದಲ್ಲಿರುವ ಗ್ಯಾಸ್ ಎಜೆನ್ಸಿ ಕಚೇರಿಗೆ ಹೋಗುವ ಬದಲು ನೀವು ಗ್ಯಾಸ್ ಬುಕ್ ಮಾಡಿದಾಗ ನಿಮಗೆ ಸಿಲಿಂಡರ್ ನೀಡುವ ಡಿಲೆವರಿ ಬಾಯ್ ಅವರು ನಿಮ್ಮ ಗ್ರಾಮಕ್ಕೆ ಬಂದಾಗ ಇ-ಕೆವೈಸಿ ಮಾಡಿಸಿಕೊಳ್ಳಿ ಇದಕ್ಕೆ ಯಾವುದೇ ಕೊನೆಯ ದಿನಾಂಕವಿಲ್ಲದ ಕಾರಣ ಅತಂಕ ಪಡದಿರಿ.